logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Magha Snana: ಮಾಘ ಸ್ನಾನದ ಮಹತ್ವವೇನು; ಮಾಘಮಾಸದಲ್ಲಿ ಪವಿತ್ರ ಸ್ನಾನ ಮಾಡುವುದರಿಂದ ಸಿಗುವ ಫಲಾಫಲಗಳ ಬಗ್ಗೆ ತಿಳಿಯಿರಿ

Magha Snana: ಮಾಘ ಸ್ನಾನದ ಮಹತ್ವವೇನು; ಮಾಘಮಾಸದಲ್ಲಿ ಪವಿತ್ರ ಸ್ನಾನ ಮಾಡುವುದರಿಂದ ಸಿಗುವ ಫಲಾಫಲಗಳ ಬಗ್ಗೆ ತಿಳಿಯಿರಿ

Reshma HT Kannada

Feb 18, 2024 04:06 PM IST

google News

ಮಾಘ ಸ್ನಾನದ ಮಹತ್ವವೇನು

    • ಹಿಂದೂ ಧರ್ಮದಲ್ಲಿ ಮಾಘ ಮಾಸಕ್ಕೆ ವಿಶೇಷ ಮಹತ್ವವಿದೆ. ಮಾಘ ಮಾಸದಲ್ಲಿ ಮಾಘ ಸ್ನಾನಕ್ಕೆ ಬಹಳ ಪ್ರಾಮುಖ್ಯವಿದೆ. ಈ ವರ್ಷ ಜನವರಿ 26 ರಿಂದ ಫೆಬ್ರುವರಿ 24ರವರೆಗೆ ಮಾಘ ಮಾಸವಿರುತ್ತದೆ. ಮಾಘಸ್ನಾನ ಮಾಡುವುದರ ಮಹತ್ವ, ಇದರಿಂದ ಸಿಗುವ ಫಲಗಳ ಬಗ್ಗೆ ತಿಳಿಯಿರಿ.
ಮಾಘ ಸ್ನಾನದ ಮಹತ್ವವೇನು
ಮಾಘ ಸ್ನಾನದ ಮಹತ್ವವೇನು

ಹಿಂದೂ ಧರ್ಮದಲ್ಲಿ ಕೆಲವು ಆಚರಣೆಗಳು ವಿಶೇಷ ಮಹತ್ವವನ್ನು ಹೊಂದಿರುತ್ತವೆ. ಅವುಗಳಲ್ಲಿ ಮಾಘ ಮಾಸದಲ್ಲಿ ಬರುವ ಮಾಘಸ್ನಾನ ಕೂಡ ಒಂದು. ಮಾಘ ಮಾಸವು ಪುಷ್ಯ ಶುಕ್ಲ ಹುಣ್ಣಿಮೆಯಿಂದ ಆರಂಭವಾಗಿ, ಮಾಘ ಶುಕ್ಲ ಹುಣ್ಣಿಮೆಯಂದು ಕೊನೆಯಾಗುತ್ತದೆ. ಚಂದ್ರಾಮಾನ ಕ್ಯಾಲೆಂಡರ್‌ ಅನುಸರಿಸುವವರ ಪ್ರಕಾರ ಇದು ಪುಷ್ಯ ಬಹುಳ ಅಮಾಮಾಸ್ಯೆಯೊಂದಿಗೆ ಆರಂಭವಾಗಿ, ಮಾಘ ಬಹುಳ ಅಮಾವಾಸ್ಯೆಯೊಂದಿಗೆ ಮುಕ್ತಾಯವಾಗುತ್ತದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಈ ಮಾಸದಲ್ಲಿ ಸುರ್ಯೋದಯಕ್ಕೂ ಮೊದಲು ಸ್ನಾನ ಮಾಡುವುದರಿಂದ ವಿಶೇಷ ಫಲಗಳು ದೊರೆಯುತ್ತವೆ ಎಂದು ಹೇಳಲಾಗುತ್ತದೆ. ಮಾಘ ಮಾಸದಲ್ಲಿ ನದಿ, ಸರೋವರ ಅಥವಾ ಪುಣ್ಯಕ್ಷೇತ್ರದಲ್ಲಿ ಸ್ನಾನ ಮಾಡುವುದಕ್ಕೆ ವಿಶೇಷ ಪ್ರಾಧಾನ್ಯವಿದೆ. ಸ್ನಾನದ ನಂತರ ಮಾಧವ ಹಾಗೂ ಸೂರ್ಯದೇವರಿಗೆ ವಿಶೇಷ ಅರ್ಘ್ಯವನ್ನು ನೀಡಬೇಕು. ಮಾಘ ಮಾಸದಲ್ಲಿ ಮೂವತ್ತು ದಿನವೂ ನಿತ್ಯ ಸ್ನಾನ ಮಾಡಿ ಉಪವಾಸ ಮಾಡುವ ಕ್ರಮ ಹಲವೆಡೆ ರೂಢಿಯಲ್ಲಿದೆ.

ಮಾಘಸ್ನಾನದಿಂದ ಸಿಗುವ ಪ್ರಯೋಜನಗಳು

ಹಿಂದೂ ಧರ್ಮಶಾಸ್ತ್ರಗಳು ಅರುಣೋದಯ ಕಾಲಕ್ಕೂ ಮುನ್ನ ಸ್ನಾನ ಮಾಡುವುದರ ಮಹತ್ವವನ್ನು ತಿಳಿಸುತ್ತವೆ. ಸುರ್ಯೋದಯಕ್ಕೂ ಮುನ್ನ ನದಿ, ಸಮುದ್ರ, ಸರೋವರ ಅಥವಾ ಯಾವುದೇ ತೀರ್ಥಸ್ಥಳದಲ್ಲಿ ಸ್ನಾನ ಮಾಡುವುದಕ್ಕೆ ವಿಶೇಷ ಆಧ್ಯತೆ ನೀಡಲಾಗಿದೆ. ಆದರೆ ಪ್ರತಿದಿನ ಹೊರಗಡೆ ಹೋಗಿ ಸ್ನಾನ ಮಾಡುವುದು ಸಾಧ್ಯವಾಗದ ಕಾರಣ ಮನೆಯಲ್ಲಿಯೇ ಸೂರ್ಯ ಹುಟ್ಟುವ ಮುನ್ನ ಸ್ನಾನ ಮಾಡಬಹುದು. ಸ್ನಾನ ಮಾಡುವುದರಿಂದ ದೇಹ ಉಲ್ಲಾಸದಿಂದ ಕೂಡಿರುತ್ತದೆ. ಸ್ನಾನ ಮಾಡುವುದರಿಂದ ಕೇವಲ ದೈಹಿಕ ಶುದ್ಧೀಕರಣ ಮಾತ್ರವಲ್ಲ, ಇದಕ್ಕೆ ಧಾರ್ಮಿಕ ಹಾಗೂ ಆಧಾತ್ಮದ ದೃಷ್ಟಿಕೋನವು ಇದೆ.

ಮಾಘಸ್ನಾನ ಮಾಡುವುದರ ಫಲಾಫಲಗಳು

ಹಿಂದೂ ಧರ್ಮಶಾಸ್ತ್ರಗಳ ಪ್ರಕಾರ ಮಾಘ ಸ್ನಾನ ಮಾಡುವುದರಿಂದ ನಮ್ಮ ಜನ್ಮ ಜನ್ಮಾಂತರ ಘೋರ ಪಾಪಗಳಿಂದಲೂ ಮುಕ್ತಿ ಪಡೆಯಬಹುದು. ಮಾಘ ಮಾಸದಲ್ಲಿ ಮುಂಜಾನೆ ಸ್ನಾನ ಮಾಡುವುದರಿಂದ ಪುಣ್ಯ ಲಭಿಸುತ್ತದೆ ಎಂದು ನಂಬಿಕೆಯೂ ಇದೆ. ವಾಯು ಪುರಾಣ, ಬ್ರಹ್ಮಾಂಡ ಪುರಾಣಗಳಂತಹ ಪವಿತ್ರ ಗ್ರಂಥಗಳಲ್ಲೂ ಮಾಘ ಸ್ನಾನದ ಮಹತ್ವವು ಉಲ್ಲೇಖವಾಗಿದೆ.

ಧರ್ಮಶಾಸ್ತ್ರಗಳ ಪ್ರಕಾರ ಮಾಘಸ್ನಾನದ ಮಹತ್ವವು ಈ ಕೆಳಗೆ ನೀಡಿದ ಫಲಾಫಲಗಳನ್ನು ಹೊಂದಿರುತ್ತದೆ.

* ಮನೆಯಲ್ಲಿ ಬಿಸಿನೀರಿನಲ್ಲಿ ಮಾಡಿಸ ಸ್ನಾನ - ಈ ಸ್ನಾನದ ಫಲವು ಆರು ವರ್ಷಗಳಿಗೆ ಸಮನಾಗಿರುತ್ತದೆ.

* ಬಾವಿಯಿಂದ ನೀರು ಸೇದಿ ಮಾಡಿದ ಸ್ನಾನ - ಈ ಸ್ನಾನದ ಪುಣ್ಯವು 12 ವರ್ಷಗಳಿಗೆ ಸಮನಾಗಿರುತ್ತದೆ.

* ಸರೋವರದಲ್ಲಿ ಸ್ನಾನ- ಇದು 24 ವರ್ಷಗಳಿಗೆ ಸಮನಾಗಿರುತ್ತದೆ.

* ನದಿಯಲ್ಲಿ ಸ್ನಾನ - 96 ವರ್ಷಗಳಿಗೆ ಸಮನಾದ ಫಲ ಲಭಿಸುತ್ತದೆ.

* ಪವಿತ್ರ ನದಿಯಲ್ಲಿ ಸ್ನಾನ - 9600 ವರ್ಷಗಳಿಗೆ ಸಮ

* ಗಂಗಾ ನದಿ - 38400000 ಎಷ್ಟು ವರ್ಷಗಳ ಫಲಕ್ಕೆ ಸಮ.

* ರಿವೇಣಿ ಸಂಗಮದಲ್ಲಿ (ಪ್ರಯಾಗ) - 100 ಬಾರಿ ಗಂಗಾ ಸ್ನಾನ ಫಲಕ್ಕೆ ಸಮ ಎಂದು ಹೇಳಲಾಗುತ್ತದೆ.

ಮಾಘ ಮಾಸದಲ್ಲಿ ಸಮುದ್ರ ಅಥವಾ ಸಾಗರದಲ್ಲಿ ಸ್ನಾನ ಮಾಡಿದರೆ, ಈ ಮೇಲಿನ ಎಲ್ಲಕ್ಕಿಂತಲೂ ಹೆಚ್ಚು ಪುಣ್ಯ ಸಿಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಮಾಘ ಮಾಸದಲ್ಲಿ ಒಮ್ಮೆಯಾದರೂ ಸಮುದ್ರ ಸ್ನಾನ ಮಾಡಬೇಕು. ಸ್ನಾನ ಎಲ್ಲೇ ಮಾಡಲಿ ಸ್ನಾನ ಮಾಡುವಾಗ ವಿಷ್ಣು ಸಹಸ್ರನಾಮ ಅಥವಾ ವಿಷ್ಣು ಸ್ತೋತ್ರ ಪಠಿಸುವುದನ್ನು ಮರೆಯಬಾರದು.

ಇಡೀ ಮಾಘ ಮಾಸ ಪವಿತ್ರ ಸ್ನಾನ ಮಾಡಲು ಸಾಧ್ಯವಾಗದೇ ಇದ್ದವರು, ಕೊನೆಯ ಮೂರು ದಿನಗಳ ಕಾಲವಾದರೂ ಪವಿತ್ರ ಸ್ನಾನ ಮಾಡಬೇಕು. ಇದನ್ನು ಅಂತ್ಯ ಪುಷ್ಕರಿಣಿ ಎಂದು ಕರೆಯಲಾಗುತ್ತದೆ. ಮಾಘ ಸ್ನಾನವನ್ನ ಎಲ್ಲಾ ವಯಸ್ಸಿನವರೂ ಮಾಡಬಹುದು, ಅಲ್ಲದೆ ಹೀಗೆ ಮಾಡುವುದು ಶ್ರೇಷ್ಠ ಕೂಡ.

(This copy first appeared in Hindustan Times Kannada website. To read more like this please logon to kannada.hindustantimes.com )

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ