Pitru Paksha: ಸೆ. 18 ರಿಂದ ಪಿತೃಪಕ್ಷ ಆರಂಭ; ಪಿತೃಪಕ್ಷದಲ್ಲಿ ಪಿಂಡ ಪ್ರದಾನ ಮಾಡುವ ಮಹತ್ವ, ಶ್ರಾದ್ಧ ದಿನಾಂಕಗಳ ವಿವರ ಇಲ್ಲಿದೆ
Sep 10, 2024 01:13 PM IST
ಪಿತೃಪಕ್ಷ 2024
- Pitru Paksha 2024: ಪಿತೃ ಪಕ್ಷದಲ್ಲಿ ಪೂರ್ವಜರಿಗೆ ದಾನ, ತರ್ಪಣ, ಶ್ರಾದ್ಧ ಆಚರಣೆಗಳನ್ನು ಮಾಡುವುದು ವಿಶೇಷ. ಈ ಅವಧಿಯಲ್ಲಿ ಶ್ರಾದ್ಧವನ್ನು ಮಾಡುವುದರಿಂದ ಪೂರ್ವಜರು ಸಂತುಷ್ಟರಾಗಿ, ಅನುಗ್ರಹಿಸುತ್ತಾರೆ ಎಂಬ ನಂಬಿಕೆ ಹಿಂದೂ ಧರ್ಮದಲ್ಲಿದೆ. ಈ ವರ್ಷ ಪಿತೃಪಕ್ಷ ಆರಂಭವಾಗಿ, ಮುಕ್ತಾಯವಾಗುವುದು ಯಾವಾಗ, ಶ್ರಾದ್ಧದ ದಿನಾಂಕಗಳ ವಿವರ ಇಲ್ಲಿದೆ.
Pitru Paksha 2024: ಹಿಂದೂ ಧರ್ಮದಲ್ಲಿ ಪಿತೃಪಕ್ಷಕ್ಕೆ ವಿಶೇಷ ಮಹತ್ವವಿದೆ. ಪ್ರತಿ ವರ್ಷ ಭಾದ್ರಪದ ಮಾಸದ ಹುಣ್ಣಿಮೆಯ ಮರುದಿನದಿಂದ ಆಶ್ವಯುಜ ಮಾಸ ಆರಂಭವಾಗುತ್ತದೆ. ಆಶ್ವಯುಜದಲ್ಲಿ 15 ದಿನಗಳನ್ನು ಪೂರ್ವಜರಿಗಾಗಿ ಮೀಸಲಿಡಲಾಗುತ್ತದೆ. ಪಿತೃಪಕ್ಷದ ಸಮಯದಲ್ಲಿ, ಪೂರ್ವಜರು ಭೂಮಿಗೆ ಬಂದು ತಮ್ಮ ವಂಶಸ್ಥರನ್ನು ಆಶೀರ್ವದಿಸುತ್ತಾರೆ ಎಂದು ನಂಬಲಾಗಿದೆ.
ತಾಜಾ ಫೋಟೊಗಳು
ಈ ವರ್ಷ ಭಾದ್ರಪದ ಮಾಸದ ಹುಣ್ಣಿಮೆಯನ್ನು ಸೆಪ್ಟೆಂಬರ್ 17ರಂದು ಆಚರಿಸಲಾಗುತ್ತದೆ. ಪಿತೃ ಪಕ್ಷವು ಮರುದಿನ ಅಂದರೆ ಸೆಪ್ಟೆಂಬರ್ 18 ರಿಂದ ಪ್ರಾರಂಭವಾಗುತ್ತದೆ, ಇದು ಅಕ್ಟೋಬರ್ 2 ರವರೆಗೆ ಇರುತ್ತದೆ. ಈ ವರ್ಷ ಪಿತೃ ಪಕ್ಷದಲ್ಲಿ ಶ್ರಾದ್ಧದ ದಿನಾಂಕಗಳು ಮತ್ತು ಅದರ ಮಹತ್ವವನ್ನು ತಿಳಿಯಿರಿ.
ಪಿತೃಪಕ್ಷ 2024: ಶ್ರಾದ್ಧ ದಿನಾಂಕಗಳು
17 ಸೆಪ್ಟೆಂಬರ್ 2024, ಮಂಗಳವಾರ- ಪೂರ್ಣಿಮಾ ಶ್ರಾದ್ಧ
18 ಸೆಪ್ಟೆಂಬರ್ 2024, ಬುಧವಾರ- ಪ್ರತಿಪದ ಶ್ರಾದ್ಧ
19 ಸೆಪ್ಟೆಂಬರ್ 2024, ಗುರುವಾರ- ದ್ವಿತೀಯ ಶ್ರಾದ್ಧ
20 ಸೆಪ್ಟೆಂಬರ್ 2024, ಶುಕ್ರವಾರ ತೃತೀಯಾ ಶ್ರಾದ್ಧ
21 ಸೆಪ್ಟೆಂಬರ್ 2024, ಶನಿವಾರ- ಚತುರ್ಥಿ ಶ್ರಾದ್ಧ
21 ಸೆಪ್ಟೆಂಬರ್ 2024, ಶನಿವಾರ ಮಹಾ ಭರಣಿ ಶ್ರಾದ್ಧ
22 ಸೆಪ್ಟೆಂಬರ್ 2014, ಭಾನುವಾರ- ಪಂಚಮಿ ಶ್ರಾದ್ಧ
23 ಸೆಪ್ಟೆಂಬರ್ 2024, ಸೋಮವಾರ - ಷಷ್ಠಿ ಶ್ರಾದ್ಧ
23 ಸೆಪ್ಟೆಂಬರ್ 2024, ಸೋಮವಾರ- ಸಪ್ತಮಿ ಶ್ರಾದ್ಧ
24 ಸೆಪ್ಟೆಂಬರ್ 2024, ಮಂಗಳವಾರ- ಅಷ್ಟಮಿ ಶ್ರಾದ್ಧ
25 ಸೆಪ್ಟೆಂಬರ್ 2024, ಬುಧವಾರ- ನವಮಿ ಶ್ರಾದ್ಧ
26 ಸೆಪ್ಟೆಂಬರ್ 2024, ಗುರುವಾರ- ದಶಮಿ ಶ್ರಾದ್ಧ
27 ಸೆಪ್ಟೆಂಬರ್ 2024, ಶುಕ್ರವಾರ- ಏಕಾದಶಿ ಶ್ರಾದ್ಧ
29 ಸೆಪ್ಟೆಂಬರ್ 2024, ಭಾನುವಾರ- ದ್ವಾದಶಿ ಶ್ರಾದ್ಧ
29 ಸೆಪ್ಟೆಂಬರ್ 2024, ಭಾನುವಾರ- ಮಾಘ ಶ್ರಾದ್ಧ
30 ಸೆಪ್ಟೆಂಬರ್ 2024, ಸೋಮವಾರ- ತ್ರಯೋದಶಿ ಶ್ರಾದ್ಧ
1 ಅಕ್ಟೋಬರ್ 2024, ಮಂಗಳವಾರ- ಚತುರ್ದಶಿ ಶ್ರಾದ್ಧ
2 ಅಕ್ಟೋಬರ್ 2024, ಬುಧವಾರ- ಸರ್ವಪಿತೃ ಅಮಾವಾಸ್ಯೆ (ಮಹಾಲಯ ಅಮಾವಾಸ್ಯೆ)
ಪ್ರತಿಪದ ತಿಥಿಯ ಮಹತ್ವ
ಪ್ರತಿಪದ ತಿಥಿಯಂದು ಮರಣ ಹೊಂದಿದ ಕುಟುಂಬದ ಸದಸ್ಯರಿಗೆ ಪ್ರತಿಪದ ಶ್ರಾದ್ಧವನ್ನು ಮಾಡಲಾಗುತ್ತದೆ. ಪಿತೃ ಪಕ್ಷದಲ್ಲಿನ ಪ್ರತಿಪದ ದಿನಾಂಕವನ್ನು ತಾಯಿಯ ಅಜ್ಜಿಯರ ಶ್ರಾದ್ಧ ಮಾಡಲು ಸೂಕ್ತವೆಂದು ಪರಿಗಣಿಸಲಾಗಿದೆ. ಪ್ರತಿಪದ ದಿನಾಂಕವನ್ನು ಪಾಡ್ವಾ ಶ್ರಾದ್ಧ ಎಂದೂ ಕರೆಯುತ್ತಾರೆ. ಈ ಶ್ರಾದ್ಧವನ್ನು ಮಾಡುವುದರಿಂದ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ ಎಂದು ನಂಬಲಾಗಿದೆ.
ಪಿತೃ ಪಕ್ಷದ ಪ್ರಾಮುಖ್ಯತೆ
ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ, ಪಿತೃಪಕ್ಷದ ಸಮಯದಲ್ಲಿ ಪೂರ್ವಜರಿಗೆ ಸಂಬಂಧಿಸಿದ ಕೆಲಸವನ್ನು ಮಾಡುವುದು ಜೀವನದಲ್ಲಿ ಸಂತೋಷವನ್ನು ತರುತ್ತದೆ. ಪೂರ್ವಜರ ಆಶೀರ್ವಾದವು ಜೀವನದಲ್ಲಿ ಸಮೃದ್ಧಿಯನ್ನು ತರುತ್ತದೆ. ಪಿತೃಪಕ್ಷದಲ್ಲಿ ಮರಣ ಹೊಂದಿದ ಕುಟುಂಬಸ್ಥರಿಗೆ ಶ್ರಾದ್ಧ ಮಾಡುವುದರಿಂದ ಪಿತೃ ದೋಷದಿಂದ ಪರಿಹಾರ ಪಡೆಯಬಹುದು ಎಂದು ಹೇಳಲಾಗುತ್ತದೆ. ಪಿತೃಪಕ್ಷದ 15 ದಿನಗಳ ಅವಧಿಯಲ್ಲಿ ತರ್ಪಣ ಮತ್ತು ಶ್ರಾದ್ಧ ಆಚರಣೆಗಳನ್ನು ಮಾಡುವುದರಿಂದ, ಪೂರ್ವಜರು ಸಂತುಷ್ಟರಾಗುತ್ತಾರೆ ಮತ್ತು ಅವರ ವಂಶಸ್ಥರಿಗೆ ಅನುಗ್ರಹವನ್ನು ನೀಡುತ್ತಾರೆ ಎಂಬ ನಂಬಿಕೆ ಹಿಂದೂ ಧರ್ಮದಲ್ಲಿದೆ.