logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Spiritual News: ರಾಮಾಯಣ, ರಾಮನ ಸಂಚಾರಕ್ಕೆ ಸಂಬಂಧಿಸಿದ 13 ಸ್ಥಳಗಳಿವು, ಇದರಲ್ಲಿ ಕರ್ನಾಟಕದ ಊರುಗಳೂ ಇವೆ

Spiritual News: ರಾಮಾಯಣ, ರಾಮನ ಸಂಚಾರಕ್ಕೆ ಸಂಬಂಧಿಸಿದ 13 ಸ್ಥಳಗಳಿವು, ಇದರಲ್ಲಿ ಕರ್ನಾಟಕದ ಊರುಗಳೂ ಇವೆ

HT Kannada Desk HT Kannada

Dec 30, 2023 02:58 PM IST

google News

ರಾಮನ ಸಂಚಾರಕ್ಕೆ ಸಂಬಂಧಿಸಿದ ಸ್ಥಳಗಳು

  • Spiritual News: ರಾಮನು ಜನಿಸಿದ್ದು ಅಯೋಧ್ಯೆಯಲ್ಲಾದರೂ ಶ್ರೀರಾಮ, ಸೀತೆ, ರಾವಣನಿಗೆ ಸಂಬಂಧಿಸಿದ ಸ್ಥಳಗಳು ದೇಶಾದ್ಯಂತ ಇವೆ. ಅದರಲ್ಲಿ ಕರ್ನಾಟಕದ ಕಿಷ್ಕಿಂದೆ, ಆನೆಗುಂದಿ ಕೂಡಾ ಇದೆ. 

ರಾಮನ ಸಂಚಾರಕ್ಕೆ ಸಂಬಂಧಿಸಿದ ಸ್ಥಳಗಳು
ರಾಮನ ಸಂಚಾರಕ್ಕೆ ಸಂಬಂಧಿಸಿದ ಸ್ಥಳಗಳು (PC: Unsplash)

ವಾಲ್ಮೀಕಿ ರಾಮಾಯಣವನ್ನು ಭಾರತದ ಸಾಹಿತ್ಯದ ಶ್ರೇಷ್ಠ ಮಹಾಕಾವ್ಯಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಇದು ರಾಮನ ಜೀವನ ಚರಿತ್ರೆಯನ್ನು ಚಿತ್ರಿಸುತ್ತದೆ. ರಾಮಾಯಣ ಹಾಗೂ ಮಹಾಭಾರತವನ್ನು ಕೆಲವರು ನಿಜವೆಂದು ನಂಬಿದರೆ ಇನ್ನೂ ಕೆಲವರು ಇದು ಪೌರಾಣಿಕ ಕಥೆಗಳಷ್ಟೇ ಎನ್ನುತ್ತಾರೆ. ಆದರೆ ದೇಶದ ಕೆಲವೊಂದು ಸ್ಥಳಗಳಲ್ಲಿ ಶ್ರೀರಾಮ ಸಂಚರಿಸಿದ್ದನೆಂಬ ಸ್ಥಳಗಳು ಬಹಳ ಹೆಸರುವಾಸಿಯಾಗಿವೆ. ಈ ಸ್ಥಳಗಳ ಬಗ್ಗೆ ಒಂದಿಷ್ಟು ಮಾಹಿತಿ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಅಯೋಧ್ಯೆ

ರಾಮಾಯಣಕ್ಕೆ ಸಂಬಂಧಿಸಿದ ಪ್ರಮುಖ ಸ್ಥಳವಾಗಿದೆ. ಇದು ಶ್ರೀರಾಮನ ಜನ್ಮಸ್ಥಳ. ಇತ್ತೀಚಿನ ವರ್ಷಗಳಲ್ಲಿ ರಾಮ ಜನ್ಮಭೂಮಿ ಹಾಗೂ ಬಾಬರಿ ಮಸೀದಿ ಘಟನೆಯಿಂದಾಗಿ ಜನಗಳಿಗೆ ಈ ಸ್ಥಳ ಹೆಚ್ಚು ಪರಿಚಯ. ಇದನ್ನು ಸಾಕೇತ್ ಎಂದೂ ಕರೆಯುತ್ತಾರೆ ಮತ್ತು ಉತ್ತರ ಪ್ರದೇಶದಲ್ಲಿ ಫೈಜಾಬಾದ್ ನಗರದ ಪಕ್ಕದಲ್ಲಿದೆ. ಅಯೋಧ್ಯೆಯಲ್ಲಿ ಸದ್ಯಕ್ಕೆ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು 2024 ಜನವರಿ 22 ರಂದು ಉದ್ಘಾಟನೆ ನಡೆಯಲಿದೆ.

ಪ್ರಯಾಗ್‌ರಾಜ್

ಸೀತೆ ಜನಿಸಿದ ಜನಕಪುರ ಈಗ ನೇಪಾಳದಲ್ಲಿದೆ. ರಾಮ ಸೀತೆಯರ ವಿವಾಹವೂ ಅಲ್ಲೇ ನಡೆದಿತ್ತು ಎನ್ನಲಾಗುತ್ತದೆ. ಮದುವೆಯ ನಂತರ ರಾಮ, ಸೀತೆ ಮತ್ತು ಲಕ್ಷ್ಮಣರು ಅಯೋಧ್ಯೆಯನ್ನು ತೊರೆದು ಹಿಂದೆ ಅಲಹಾಬಾದ್ ಎಂದು ಕರೆಯಲ್ಪಡುವ ಪ್ರಯಾಗ್ರಾಜ್‌ಗೆ ಹೋಗಿ ನೆಲೆಸುತ್ತಾರೆ.

ಚಿತ್ರಕೂಟ

ಚಿತ್ರ ಎಂದರೆ ಸುಂದರ ಮತ್ತು ಕೂಟ ಎಂದರೆ ಪರ್ವತಗಳು ಎಂದು ಅರ್ಥ. ರಾಮ, ಸೀತೆ ಮತ್ತು ಲಕ್ಷ್ಮಣರು ತಮ್ಮ ವನವಾಸದ ಸಮಯದಲ್ಲಿ ಚಿತ್ರಕೂಟದ ಕಾಡುಗಳಲ್ಲಿ ತಂಗಿದ್ದರು ಎಂದು ನಂಬಲಾಗಿದೆ. ಈಗ ಇದು ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ನಡುವೆ ಇರುವ ಸ್ಥಳವಾಗಿದೆ.

ಬಿಸ್ರಖ್

ಇದು ಉತ್ತರ ಪ್ರದೇಶದ ಒಂದು ಸಣ್ಣ ಹಳ್ಳಿ. ಇದು ರಾವಣನ ಜನ್ಮಸ್ಥಳ ಎಂದು ಹೇಳಲಾಗುತ್ತದೆ. ಈ ಸ್ಥಳದ ಜನರು ದೀಪಾವಳಿ ಅಥವಾ ದಸರಾ ಹಬ್ಬಗಳಲ್ಲಿ ರಾವಣನ ಪ್ರತಿಕೃತಿಗಳನ್ನು ಸುಡುವುದಿಲ್ಲ. ಇದು ರಾವಣನ ಜನ್ಮ ಸ್ಥಳ ಆಗಿರುವುದರಿಂದ ಜನರು ಅವನ ಸಾವಿಗೆ ಶೋಕಿಸುತ್ತಾರೆ. ಬಿಸ್ರಾಖ್ ಭಾರತದಲ್ಲಿ ರಾವಣನ ದೇವಾಲಯಗಳಲ್ಲಿ ಒಂದಾಗಿದೆ.

ದಂಡಕಾರಣ್ಯ

ಪುರಾಣಗಳ ಪ್ರಕಾರ ದಂಡಕಾರಣ್ಯ ಒಂದು ದೊಡ್ಡ ಅರಣ್ಯವಾಗಿತ್ತು. ರಾಮ, ಸೀತೆ ಮತ್ತು ಲಕ್ಷ್ಮಣ ಈ ಕಾಡಿನಲ್ಲಿ ಬಹಳ ಕಾಲ ಇದ್ದರು. ಇಂದು, ಈ ಪೌರಾಣಿಕ ಕಾಡಿನ ಪ್ರದೇಶಗಳು ಛತ್ತೀಸ್‌ಗಢ, ಒಡಿಶಾ, ತೆಲಂಗಾಣ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ಕೆಲವು ಭಾಗಗಳೊಂದಿಗೆ ಸಂಬಂಧ ಹೊಂದಿವೆ.

ಮಂದಸೌರ್

ಇದು ಈಗಿನ ಮಧ್ಯಪ್ರದೇಶದಲ್ಲಿದೆ. ಇದನ್ನು ದಶಾಪುರ ಎಂದೂ ಕರೆಯುತ್ತಾರೆ. ಪುರಾಣಗಳ ಪ್ರಕಾರ, ಮಂದಸೌರ್, ರಾವಣನ ಹೆಂಡತಿ ಮಂಡೋದರಿಯ ಜನ್ಮಸ್ಥಳವಾಗಿದೆ. ರಾವಣ ಮತ್ತು ಮಂಡೋದರಿಯ ವಿವಾಹವೂ ಇಲ್ಲಿಯೇ ನಡೆದಿದೆ ಎಂದು ನಂಬಲಾಗಿದೆ. ಇಂದಿಗೂ ಮಂದಸೌರ್‌ನ ಕೆಲವು ಭಾಗಗಳಲ್ಲಿ ರಾವಣನನ್ನು ಪೂಜಿಸುತ್ತಾರೆ.

ಪಂಚವಟಿ

ನಾಸಿಕ್‌ನ ಪಂಚವಟಿ ದಂಡಕಾರಣ್ಯದ ಭಾಗವಾಗಿತ್ತು. ಇದೇ ಸ್ಥಳದಲ್ಲಿ ಲಕ್ಷ್ಮಣನು ರಾವಣನ ಸಹೋದರಿ ಶೂರ್ಪನಖಿಯ ಮೂಗನ್ನು ಕತ್ತರಿಸಿದ್ದರಿಂದ ಈ ಸ್ಥಳಕ್ಕೆ ಆ ಹೆಸರು ಬಂದಿದೆ. ಲಕ್ಷ್ಮಣನು ಶೂರ್ಪನಖಿಯ ಮೂಗು ಕತ್ತರಿಸಿದ ನಂತರ ರಾಮಾಯಣದಲ್ಲಿ ಅನೇಕ ಘಟನೆಗಳು ಜರುಗಿದವು.

ಭದ್ರಾಚಲಂ

ಭಾರತದ ಅನೇಕ ಸ್ಥಳಗಳಲ್ಲಿ ರಾಮಾಯಣದಲ್ಲಿ ಉಲ್ಲೇಖಿಸಲಾದ ಸ್ಥಳಗಳೆಂದು ಊಹಿಸಲಾಗಿದೆ. ಹೀಗಾಗಿ ಪಂಚವಟಿ ವಿಚಾರದಲ್ಲಿ ಗೊಂದಲ ಉಂಟಾಗಿದೆ. ಪಂಚವಟಿಯು ಮಹಾರಾಷ್ಟ್ರದಲ್ಲಿದೆ ಎಂದು ಕೆಲವರು ನಂಬುತ್ತಾರೆ ಮತ್ತು ಕೆಲವರು ಇದು ತೆಲಂಗಾಣದ ಇಂದಿನ ಭದ್ರಾಚಲಂಗೆ ಸೇರಿದೆ ಎನ್ನುತ್ತಾರೆ. ಆದರೂ ಭದ್ರಾಚಲಂ ಕೂಡಾ ಖ್ಯಾತ ಧಾರ್ಮಿಕ ಕ್ಷೇತ್ರವಾಗಿ ಖ್ಯಾತಿ ಪಡೆದಿದೆ.

ಲೇಪಾಕ್ಷಿ

ಇದು ಆಂಧ್ರಪ್ರದೇಶದ ಪ್ರಸಿದ್ಧ ಪುರಾತತ್ವ ಸ್ಥಳ. ರಾಮಾಯಣದಲ್ಲಿ, ಜಟಾಯು, ರಾವಣನ ವಿರುದ್ಧ ಹೋರಾಡಲು ಪ್ರಯತ್ನಿಸುತ್ತಾನೆ. ರಾಮ ಬರುವಷ್ಟರಲ್ಲಿ ಜಟಾಯು ಗಾಯಗೊಂಡು ಕೆಳಗೆ ಬೀಳುತ್ತಾನೆ. ಜಟಾಯುವಿಗೆ ರಾಮನಿಂದ ಮೋಕ್ಷ ದೊರೆಯುತ್ತದೆ. ಈ ಘಟನೆ ನಡೆದಿದ್ದೇ ಲೇಪಾಕ್ಷಿಯಲ್ಲಿ ಎನ್ನಲಾಗಿದೆ.

ಕಿಷ್ಕಿಂದಾ

ಹಂಪಿಯಲ್ಲಿರುವ ಕಿಷ್ಕಿಂದೆ ಕರ್ನಾಟಕದ ಪುರಾತನ ಸ್ಥಳಗಳಲ್ಲಿ ಒಂದು. ರಾಮಾಯಣದಲ್ಲಿ ವಾನರರ ನಾಡು ಕರ್ನಾಟಕದ ಪ್ರಸಿದ್ಧ ಪರಂಪರೆಯ ತಾಣ ಹಂಪಿ ಕಿಷ್ಕಿಂದೆಗೆ ಸಂಬಂಧಿಸಿದೆ.

ಆನೆಗುಂದಿ

ಇದು ಹಂಪಿಗಿಂತ ಹಳೆಯದಾಗಿದೆ ಮತ್ತು ಇದು ಹೆಚ್ಚಿನ ಪೌರಾಣಿಕ ಮಹತ್ವವನ್ನು ಹೊಂದಿದೆ. ಆನೆಗುಂದಿ ಬಳಿ ಇರುವ ಅಂಜನಾದ್ರಿ ಬೆಟ್ಟ ಹನುಮಂತನ ಜನ್ಮಸ್ಥಳ ಎಂದು ನಂಬಲಾಗಿದೆ. ವಾನರ ರಾಜ ವಾಲಿಯ ಅವಶೇಷಗಳನ್ನು ಆನೆಗುಂದಿಯಲ್ಲಿ ದಹನ ಮಾಡಲಾಗುತ್ತದೆ. ಇಲ್ಲಿನ ಋಷಿಮುಖ ಪರ್ವತಗಳು ಕೂಡಾ ಬಹಳ ಮುಖ್ಯ ಏಕೆಂದರೆ ಇಲ್ಲಿ ರಾಮನು ಹನುಮಂತನನ್ನು ಭೇಟಿಯಾದನು ಎಂಬ ನಂಬಿಕೆ ಇದೆ.

ರಾಮೇಶ್ವರಂ

ಇದು ತಮಿಳುನಾಡಿನ ಅತ್ಯಂತ ಜನಪ್ರಿಯ ಸ್ಥಳವಾಗಿದೆ. ಪಂಬನ್ ದ್ವೀಪದಲ್ಲಿರುವ ರಾಮೇಶ್ವರಂ, ಶ್ರೀಲಂಕಾದ ಕಡೆಗೆ ರಾಮ ತನ್ನ ಪ್ರಯಾಣವನ್ನು ಪ್ರಾರಂಭಿಸಿದ ಆರಂಭಿಕ ಸ್ಥಳವಾಗಿದೆ. ಶ್ರೀಲಂಕಾದ ಮನ್ನಾರ್ ದ್ವೀಪವು ಪಂಬನ್ ದ್ವೀಪದಿಂದ ಕೇವಲ 50 ಕಿಮೀ ದೂರದಲ್ಲಿದೆ. ಶಿವನಿಗೆ ಅರ್ಪಿತವಾದ ರಾಮನಾಥಸ್ವಾಮಿ ದೇವಾಲಯವು ರಾಮಾಯಣದೊಂದಿಗೆ ಬಲವಾದ ಸಂಪರ್ಕವನ್ನು ಹೊಂದಿದೆ.

ಧನುಷ್ಕೋಟಿ

ಇದು ಪಂಬನ್ ದ್ವೀಪದ ತುದಿಯಲ್ಲಿದೆ. ರಾಮ ಸೇತುವು ಇಲ್ಲಿನ ಆಕರ್ಷಕ ಸ್ಥಳವಾಗಿದೆ. ಲಂಕೆಗೆ ಹೋಗಲು ರಾಮನು ವಾನ ಸೇನೆಯ ಸಹಾಯದಿಂದ ಈ ಸೇತುವೆಯನ್ನು ನಿರ್ಮಿಸಿದನು ಎಂದು ನಂಬಲಾಗಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ