logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Sabarimala: ಪಂದಳಕಂದ ಶಬರಿಮಲೆಯಲ್ಲಿ ನೆಲೆಸಲು ಕಾರಣವೇನು, ಅಯ್ಯಪ್ಪಸ್ವಾಮಿ ಜನನದ ಉದ್ದೇಶವೇನು; ಇಲ್ಲಿದೆ ಮಣಿಕಂಠನ ಕಥೆ

Sabarimala: ಪಂದಳಕಂದ ಶಬರಿಮಲೆಯಲ್ಲಿ ನೆಲೆಸಲು ಕಾರಣವೇನು, ಅಯ್ಯಪ್ಪಸ್ವಾಮಿ ಜನನದ ಉದ್ದೇಶವೇನು; ಇಲ್ಲಿದೆ ಮಣಿಕಂಠನ ಕಥೆ

Reshma HT Kannada

Dec 17, 2023 05:30 AM IST

google News

ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲ

    • ನವೆಂಬರ್‌ನಿಂದ ಜನವರಿಯ ಮಕರ ಸಂಕ್ರಾಂತಿವರೆಗೆ ಎಲ್ಲಿ ನೋಡಿದರೂ ಅಯ್ಯಪ್ಪ ಮಾಲಾಧಾರಿಗಳನ್ನೇ ನೋಡುತ್ತೇವೆ. ಮಾಲೆ ಧರಿಸಿ ಪೂಜೆ, ವ್ರತ, ಕಠಿಣ ನಿಯಮಗಳನ್ನು ಪಾಲಿಸಿ ಶಬರಿಮಲೆಯಲ್ಲಿರುವ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಲು ತೆರಳುವುದು ಭಕ್ತರ ವಾಡಿಕೆ. ಪ್ರತಿ ವರ್ಷವೂ ತಪ್ಪದೇ ಮಾಲಾಧಾರಣೆ ಮಾಡಿ ಅಯ್ಯಪ್ಪ ದರ್ಶನ ಪಡೆಯುವವರು ಇದ್ದಾರೆ.
ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲ
ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲ

ಶಬರಿಮಲೆ... ಕೇರಳದಲ್ಲಿರುವ ಒಂದು ಪವಿತ್ರ ದೇವಾಲಯ. ಇಲ್ಲಿಗೆ ಪ್ರತಿವರ್ಷ ಲಕ್ಷಾಂತರ ಮಂದಿ ದರ್ಶನಕ್ಕೆ ಬರುತ್ತಾರೆ. ಅಯ್ಯಪ್ಪ ಮಾಲಾಧಾರಿಗಳು ಮಾತ್ರ ಈ ದೇಗುಲ ಪ್ರವೇಶಿಸಲು ಅವಕಾಶವಿರುತ್ತದೆ. ಸಾಮಾನ್ಯವಾಗಿ 41 ದಿನಗಳ ಕಠಿಣ ವ್ರತ ಆಚರಿಸಿ ನಂತರ ಎಲ್ಲಾ ರೀತಿ ಭೋಗ ಬಯಕೆಗಳಿಂದ ದೂರವಿದ್ದು ನಂತರ ಇರುಮುಡಿ ಹೊತ್ತು ಅಯ್ಯಪ್ಪ ಸನ್ನಿಧಾನಕ್ಕೆ ತೆರಳಿ ದರ್ಶನ ಪಡೆದು ಮಾಲೆ ತೆಗೆಯುವುದು ವಾಡಿಕೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ಈ ವರ್ಷ ಅಯ್ಯಪ್ಪ ಸನ್ನಿಧಾನದಲ್ಲಿ ಭಕ್ತದ ಸಂಖ್ಯೆ ಹೆಚ್ಚಾಗಿದ್ದು, ದೇವಾಲಯದ ಆಡಳಿತ ಮಂದಿ ಸೂಕ್ತ ಕ್ರಮ ತೆಗೆದುಕೊಂಡಿಲ್ಲ, ದೂರದ ರಾಜ್ಯಗಳಿಂದ ಬಂದ ಅಯ್ಯಪ್ಪ ಭಕ್ತರು ದರ್ಶನ ಸಿಗದೆ ಮರಳುವಂತಾಗಿತ್ತು. ಅಲ್ಲದೆ ಹಲವರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರೂ ಕೂಡ. ಅದೇನೇ ಇದ್ದರೂ ಪಂದಳಕಂದನ ದರ್ಶನಕ್ಕೆ ತೆರಳುವವರು ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ ಹೊರತು ಕಡಿಮೆಯಾಗುತ್ತಿಲ್ಲ.

ಶಬರಿಮಲೆಯ ಬಗ್ಗೆ

ಕೇರಳದ ಶಬರಿಮಲೆಯಲ್ಲಿರುವ ವಿಶ್ವಪ್ರಸಿದ್ಧ ದೇವಾಲಯವು ಮಣಿಕಂಠ ಎಂದೂ ಕರೆಯಲ್ಲಡುವ ಅಯ್ಯಪ್ಪನ ಆರಾಧನೆಗೆ ಅರ್ಪಿತವಾಗಿದೆ.

ಅಯ್ಯಪ್ಪನ ಜನನದ ಹಿಂದಿನ ಉದ್ದೇಶವೇನು?

ದುರ್ಗಾಮಾತೆಯನ್ನು ಸೃಷ್ಟಿಸುವ ಸಲುವಾಗಿ ದೇವತೆಗಳು ತಮ್ಮೆಲ್ಲಾ ಶಕ್ತಿಯನ್ನು ಒಟ್ಟುಗೂಡಿಸುತ್ತಾರೆ. ದುರ್ಗಾದೇವಿಯು ಲೋಕವಿನಾಶಕ್ಕೆಹೊರಟಿದ್ದ ಮಹಿಷಾಸುರನನ್ನು ಕೊಲ್ಲುತ್ತಾಳೆ. ಮಹಿಷಾಸುರ ಸಾವಿನ ನಂತರ ಆತನ ಸಹೋದರಿ ಮಹಿಷಿ ತನ್ನ ಸಹೋದರನ ಸಾವಿನ ಸೇಡು ತೀರಿಸಿಕೊಳ್ಳಲು ರಕ್ಕಸರನ್ನು ಸೃಷ್ಟಿಸುತ್ತಾಳೆ. ಅವಳು ಘೋರ ತಪಸ್ಸು ಮಾಡಿ ಬ್ರಹ್ಮನ ದೇವನ ಮೆಚ್ಚುಗೆ ಗಳಿಸುತ್ತಾಳೆ, ಮಾತ್ರವಲ್ಲ ಬ್ರಹ್ಮದೇವರಲ್ಲಿ ಶಿವ ಹಾಗೂ ವಿಷ್ಣುವಿಗೆ ಜನಿಸಿದ ಮಗುವಿನಿಂದ ಮಾತ್ರ ತನ್ನನ್ನು ಕೊಲ್ಲಲು ಸಾಧ್ಯ ಎಂದು ಅವಳು ವರವನ್ನು ಬೇಡುತ್ತಾಳೆ. ಬ್ರಹ್ಮ ಆ ವರವನ್ನು ಕರುಣಿಸುತ್ತಾನೆ. ಇದರಿಂದ ಮಹಿಷಿ ತನಗೆ ಸಾವೇ ಇಲ್ಲ ಎಂದು ಮೆರೆಯುತ್ತಾಳೆ. ಅವಳ ಅಟ್ಟಹಾಸ ಇನ್ನಷ್ಟು ಹೆಚ್ಚುತ್ತದೆ. ಬ್ರಹ್ಮ ದೇವ ನೀಡಿದ ವರವನ್ನು ಆಕೆ ದುರ್ಬಳಕೆ ಮಾಡಿಕೊಳ್ಳುತ್ತಾಳೆ. ಆದರೆ ದೇವರು ತನ್ನನ್ನು ಮೀರಿಸುತ್ತಾನೆ ಎಂಬುದು ಅವಳಿಗೆ ಅರಿವಿರುವುದಿಲ್ಲ. ಮಹಿಷಿ ಅಟ್ಟಹಾಸ ನಿಲ್ಲಿಸಲು ವಿಷ್ಣುದೇವನು ಮೋಹಿನಿಯ ರೂಪ ತಾಳುತ್ತಾನೆ ಹಾಗೂ ಮೋಹಿನಿಯು ಮಹಾಶಿವನೊಂದಿಗೆ ಐಕ್ಯವಾಗಿ ಮಗುವನ್ನು ಪಡೆಯುತ್ತಾಳೆ. ಶಿವ ಹಾಗೂ ವಿಷ್ಣುವಿಗೆ ಹುಟ್ಟಿದ ಮಗುವಿಗೆ ಹರಿಹರ ಪುತ್ರ ಎಂದು ಹೆಸರಿಡಲಾಯಿತು. ಆ ಕಾರಣಕ್ಕೆ ಅಯ್ಯಪ್ಪನ ಜನ್ಮದ ಉದ್ದೇಶ ಮಹಿಷಿಯನ್ನು ಕೊಲ್ಲುವುದು ಹಾಗೂ ಮೋಕ್ಷ ಪಡೆಯಲು ಸಹಾಯ ಮಾಡುವುದಾಗಿದೆ.

ಅಯ್ಯಪ್ಪನ ಪುರಾಣ

ಇನ್ನೊಂದು ನಂಬಿಕೆಯ ಪ್ರಕಾರ ಪಂದಳ ರಾಜವಂಶದ ರಾಜ ಹಾಗೂ ರಾಣಿಗೆ ಮಕ್ಕಳಿರುವುದಿಲ್ಲ. ಒಮ್ಮೆ ರಾಜನು ಕಾಡಿಗೆ ಭೇಟೆಯಾಡಲು ಹೋದಾಗ ನದಿಯ ಪಕ್ಕ ಅಳುತ್ತಿರುವ ಮಗುವನ್ನು ಕಾಣುತ್ತಾನೆ. ಆ ಮಗುವನ್ನು ಎತ್ತಿಕೊಂಡು ಬಂದು ಋಷಿಯೊಬ್ಬರ ಬಳಿ ಕರೆ ತರುತ್ತಾನೆ. ಆ ಋಷಿ ಈ ಮಗುವನ್ನು ನಿನ್ನ ಸ್ವಂತ ಮಗನಂತೆ ಸಾಕು ಎಂದು ಆಶೀರ್ವಾದ ಮಾಡುತ್ತಾನೆ. ಆ ಮಗುವಿಗೆ ಮಣಿಕಂಠ ಎಂದು ಹೆಸರು ಇಡಲಾಗುತ್ತದೆ ಹಾಗೂ ಅವನನ್ನು ಪಂದಳ ರಾಜ್ಯದ ರಾಜಕುಮಾರನನ್ನಾಗಿ ಮಾಡಲಾಗುತ್ತದೆ. ಅಂದಿನಿಂದ ಅವನು ಪಂದಳಕಂದನೂ ಆಗುತ್ತಾನೆ ಎಂಬ ಕಥೆಯನ್ನೂ ಹೇಳುತ್ತಾರೆ.

ಅಯ್ಯಪ್ಪ ಕಾಡಿಗೆ ಹೋದ ಕಥೆ...

ಒಂದು ಪುರಾಣದ ಪ್ರಕಾರ ಮಕ್ಕಳಿಲ್ಲದೇ ಅಯ್ಯಪ್ಪನನ್ನೇ ತಮ್ಮ ಮಗು ಸಾಕುತ್ತಿದ್ದ ಪಂದಳ ರಾಜ್ಯದ ರಾಜಕುಮಾರ ಹಾಗೂ ರಾಜಕುಮಾರಿಗೆ ಮಕ್ಕಳಾಗುತ್ತದೆ. ತಮ್ಮ ಸ್ವಂತ ಮಗು ಬಂದು ರಾಜಕುಮಾರಿ ಅಯ್ಯಪ್ಪನನ್ನು ದೂರ ಮಾಡಲು ಆರಂಭಿಸುತ್ತಾಳೆ. ಅಯ್ಯಪ್ಪನನ್ನು ತಮ್ಮ ರಾಜ್ಯದ ವಾರಸುದಾರರನ್ನಾಗಿ ಮಾಡುವ ರಾಜನ ನಿರ್ಧಾರವನ್ನು ಆಕೆ ವಿರೋಧಿಸುತ್ತಾಳೆ. ಹೇಗಾದರೂ ಅಯ್ಯಪ್ಪನನ್ನು ದೂರ ಮಾಡಬೇಕು ಎಂದುಕೊಂಡು ನಾನು ನಿಗೂಢ ಕಾಯಿಲೆಯೊಂದರಿಂದ ಬಳಲುತ್ತಿದ್ದು, ತನ್ನ ಕಾಯಿಲೆ ಗುಣವಾಗಲು ಹುಲಿಯ ಹಾಲನ್ನು ಸೇವಿಸಲು ವೈದ್ಯರು ಹೇಳಿದ್ದಾಗಿ ಹೇಳುವ ನೆಪದಲ್ಲಿ ಹುಲಿಯ ಹಾಲು ತರಲು ಅಯ್ಯಪ್ಪನನ್ನು ಕಾಡಿಗೆ ಕಳುಹಿಸುತ್ತಾಳೆ. ಹೀಗೆ ತಾಯಿಯ ಆಜ್ಞೆಯಂತೆ ಮಣಿಕಂಠ ಕಾಡಿಗೆ ಹೋಗುತ್ತಾನೆ. ಕಾಡಿನ ದಾರಿಯಲ್ಲಿ ಅವನಿಗೆ ಮಹಿಷಿ ಅಡ್ಡಿಯಾಗುತ್ತಾಳೆ. ಅವಳನ್ನು ಕೊಂದು ತಮ್ಮ ಜನನದ ಮುಖ್ಯ ಉದ್ದೇಶವನ್ನು ಪೂರೈಸುತ್ತಾನೆ.

ಅಯ್ಯಪ್ಪ ಅರಮನೆ, ಸಿಂಹಾಸನ ತ್ಯಜಿಸಲು ಕಾರಣ?

ರಾಣಿಯು ಸುಳ್ಳು ಕಾಯಿಲೆಯ ನೆಪ ಹೇಳಿ ಅಯ್ಯಪ್ಪನನ್ನು ಕಾಡಿಗೆ ಹುಲಿಯ ಹಾಲು ತರಲು ಕಳುಹಿಸಿದರೆ ಅವನನ್ನು ಹುಲಿಗಳು ಕೊಂದು ಹಾಕುತ್ತವೆ ಎಂದುಕೊಂಡಿದ್ದಳು. ಆದರೆ ಅಯ್ಯಪ್ಪನು ಹುಲಿಯ ಹಾಲಿನೊಂದಿಗೆ ರಾಜ್ಯಕ್ಕೆ ಮರಳುವಾಗ ಹುಲಿಯ ಮೇಲೆ ಕೂತು ಒಂದಿಷ್ಟು ಹುಲಿಗಳ ಗುಂಪಿನೊಂದಿಗೆ ಬರುತ್ತಾನೆ. ಅದನ್ನು ನೋಡಿದ ರಾಜ ರಾಣಿಗೆ ತಮಗೆ ನದಿಯ ದಡದಲ್ಲಿ ಸಿಕ್ಕಿದ ಈ ಮಗು ಸಾಮಾನ್ಯವಲ್ಲ ಎಂಬುದು ಅರಿವಾಗುತ್ತದೆ. ರಾಜ ರಾಣಿಗೆ ಮಣಿಕಂಠನಿಗೆ ಪಟ್ಟ ಕಟ್ಟಲು ನಿರ್ಧಾರ ಮಾಡಿದರೂ ಕೂಡ ಅಯ್ಯಪ್ಪ ಅದನ್ನು ನಿರಾಕರಿಸುತ್ತಾನೆ. ಬದಲಾಗಿ ತಾನು ಒಂದು ಬಾಣ ಬಿಡುತ್ತೇನೆ, ಆ ಬಾಣ ಎಲ್ಲಿಗೆ ತಲುಪುತ್ತದೋ ಅಲ್ಲಿ ಹೋಗಿ ನೆಲೆಯಾಗುತ್ತೇನೆ ಎಂದು ಶಬರಿಮಲೆಯತ್ತ ಬಾಣ ಬಿಡುತ್ತಾರೆ. ಆ ಬಾಣ ಎಲ್ಲಿ ಬೀಳುವ ಜಾಗವೇ ಶಬರಿಮಲೆಯಾಗಿದೆ. ಈ ಕಾರಣದಿಂದ ಮಣಿಕಂಠ ಶಬರಿಮಲೆಯಲ್ಲಿ ನೆಲೆಯಾಗುತ್ತಾರೆ.

ಶಬರಿಮಲೆ ಇರುವುದೆಲ್ಲಿ?

ಕೇರಳದ ಪಥನಂತಿಟ್ಟ ಜಿಲ್ಲೆಯಲ್ಲಿ ಶಬರಿಮಲೆ ಅಯ್ಯಪ್ಪ ದೇಗುಲವಿದೆ. ಸಮುದ್ರ ಮಟ್ಟದಿಂ 3000 ಅಡಿ ಎತ್ತರದ ಬೆಟ್ಟದಲ್ಲಿ ಅಯ್ಯಪ್ಪ ಸ್ವಾಮಿ ಗುಡಿ ಇದೆ. ದೇವಸ್ಥಾನ ತಲುಪಲು ಬೆಟ್ಟದ ಕಳೆಭಾಗವಾದ ಪಂಬಾದಿಂದ ಚಾರಣ ಮಾಡಬೇಕು.

ತೀರ್ಥಯಾತ್ರೆಯ ಮಹತ್ವ

ರಾಜ್ಯದ ಇತರ ಹಿಂದೂ ದೇವಾಲಯಗಳಂತೆ ಶಬರಿಮಲೆ ಶ್ರೀ ಧರ್ಮ ಶಾಸ್ತಾ ದೇವಾಲಯವು ವರ್ಷಪೂರ್ತಿ ತೆರೆದಿರುವುದಿಲ್ಲ. ಮಲಯಾಳಂ ಕ್ಯಾಲೆಂಡರ್‌ನ ಪ್ರತಿ ತಿಂಗಳ ಮೊದಲ ಐದು ದಿನಗಳು ಹಾಗೂ ನವೆಂಬರ್‌ ತಿಂಗಳ ಮಧ್ಯ ಭಾಗದಿಂದ ಜನವರಿ 14ರ ಮಕರ ಸಂಕ್ರಾಂತಿವರೆಗೆ ವಾರ್ಷಿಕ ‘ಮಂಡಲಂ’ ಮತ್ತು ‘ಮಕರವಿಳಕ್ಕು’ ಹಬ್ಬಗಳ ಸಮಯದಲ್ಲಿ ಭಕ್ತರಿಗೆ ಪ್ರಾರ್ಥನೆ ಸಲ್ಲಿಸಲು ಇದು ತೆರೆಯುತ್ತದೆ.

ಇದು ವಿಶ್ವದಲ್ಲೇ ಅತಿ ಹೆಚ್ಚು ಜನ ತೀರ್ಥಯಾತ್ರೆ ಕೈಗೊಳ್ಳುವ ಸ್ಥಳವಾಗಿದೆ. ಮುಖ್ಯವಾಗಿ ದಕ್ಷಿಣ ಭಾರತದ 5 ರಾಜ್ಯಗಳಿಂದ ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಹೆಚ್ಚಿನ ಭಕ್ತರು 41 ದಿನಗಳ ಕಠಿಣವ್ರತ ಹಾಗೂ ಇಂದ್ರಿಯ ನಿಗ್ರಹದ ಪ್ರತಿಜ್ಞೆ ಮಾಡಿ ದೇವಾಲಯಕ್ಕೆ ತೆರಳುತ್ತಾರೆ. ಈ 41 ದಿನಗಳ ಅವಧಿ ಅಥವಾ ಮಾಲಾಧಾರಣೆಯ ಸಮಯದಲ್ಲಿ ಕಪ್ಪು ಅಥವಾ ಕಡುನೀಲಿ ಬಣ್ಣದ ಬಟ್ಟೆಯನ್ನು ಮಾತ್ರ ಧರಿಸಬೇಕು. ಇವರು ಸ್ವಾಮಿ ಎಂದೇ ಎಲ್ಲರನ್ನೂ ಸಂಬೋಧಿಸಬೇಕು. ಪ್ರತಿನಿತ್ಯ ಮುಂಜಾನೆ 4 ಗಂಟೆಗೆ ಎದ್ದು ತಣ್ಣೀರಿನ ಸ್ನಾನ ಮಾಡಿ, ಶರಣು ಕರೆದು ಪೂಜೆ ಮಾಡಬೇಕು. ಮಾಲೆ ಧರಿಸಿದ ಸಮಯದಲ್ಲಿ ದೈನಂದಿನ ಪೂಜೆ ಕಡ್ಡಾಯ. ಮಾಂಸಾಹಾರ, ಮಧ್ಯ, ಲೈಂಗಿಕತೆ ತ್ಯಜಿಸಬೇಕು. ಪಾದರಕ್ಷೆ ಧರಿಸುವಂತಿಲ್ಲ. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳು ಹಾಗೂ 50 ವರ್ಷ ವಯಸ್ಸಿನ ಮೇಲಿನ ಮಹಿಳೆಯರು ಮಾಲೆ ಧರಿಸಬಹುದು.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ