logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Shani Dev: ದೇವಾನು ದೇವತೆಗಳಲ್ಲಿ ಗಣೇಶ, ಆಂಜನೇಯನಿಗೆ ಎಂದೂ ಶನಿಯ ದೃಷ್ಟಿ ಬೀಳಲಿಲ್ಲ; ಇಲ್ಲಿದೆ ಕಾರಣ

Shani Dev: ದೇವಾನು ದೇವತೆಗಳಲ್ಲಿ ಗಣೇಶ, ಆಂಜನೇಯನಿಗೆ ಎಂದೂ ಶನಿಯ ದೃಷ್ಟಿ ಬೀಳಲಿಲ್ಲ; ಇಲ್ಲಿದೆ ಕಾರಣ

Raghavendra M Y HT Kannada

Feb 01, 2024 06:23 PM IST

google News

ಭಗವಾನ್ ಶನಿಯ ದೃಷ್ಟಿ ಗಣೇಶ ಮತ್ತು ಆಂಜನೇಯನ ಮೇಲೆ ಒಮ್ಮೆಯೂ ಬೀಳದಿರುವುದಕ್ಕೆ ಕಾರಣ ತಿಳಿಯಿರಿ

  • ಶಿವನಿಂದ ಹಿಡಿದು ಎಲ್ಲಾ ದೇವರುಗಳು ಶನಿಯ ಪ್ರಭಾವಕ್ಕೆ ಒಳಗಾಗಿದ್ದಾರೆ ಎಂದು ಪುರಾಣಗಳು ಹೇಳುತ್ತವೆ. ಆದರೆ ಈ ಇಬ್ಬರು ದೇವರುಗಳ ಮೇಲೆ ಶನಿಯ ದೃಷ್ಟಿ ಬಿದ್ದಿಲ್ಲ. ಕಾರಣಗಳು ಇಲ್ಲಿವೆ.

ಭಗವಾನ್ ಶನಿಯ ದೃಷ್ಟಿ ಗಣೇಶ ಮತ್ತು ಆಂಜನೇಯನ ಮೇಲೆ ಒಮ್ಮೆಯೂ ಬೀಳದಿರುವುದಕ್ಕೆ ಕಾರಣ ತಿಳಿಯಿರಿ
ಭಗವಾನ್ ಶನಿಯ ದೃಷ್ಟಿ ಗಣೇಶ ಮತ್ತು ಆಂಜನೇಯನ ಮೇಲೆ ಒಮ್ಮೆಯೂ ಬೀಳದಿರುವುದಕ್ಕೆ ಕಾರಣ ತಿಳಿಯಿರಿ

ಪ್ರತಿಯೊಬ್ಬ ಮನುಷ್ಯನು ಒಂದಿಲ್ಲೊಂದು ಸಮಯದಲ್ಲಿ ಶನಿಯ ದೃಷ್ಟಿಗೆ ಒಳಗಾಗುತ್ತಾನೆ. ಜೀವನದಲ್ಲಿ ಒಮ್ಮೆಯಾದರೂ ಶನಿದೋಷ ಬರುತ್ತದೆ. ಅದು ದೇವರಾದರೂ ಸರಿ ಮನುಷ್ಯನಾದರೂ ಇಂಥ ಕಠಿಣ ಸಮಯವನ್ನು ಎದುರಿಸಬೇಕಾಗುತ್ತದೆ ಎಂಬ ನಂಬಿಕೆ ಇದೆ. ಶನಿ ಎಲ್ಲರಿಗೂ ಸಮಸ್ಯೆಗಳನ್ನು ಉಂಟುಮಾಡುತ್ತಾನೆ. ಆದರೆ ಇಲ್ಲಿಯವರಿಗೆ ಎರಡು ದೇವರುಗಳಿಗೆ ಮಾತ್ರ ಶನಿಯ ಪ್ರಭಾವವಾಗಿಲ್ಲ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಶಿವನಿಂದ ಹಿಡಿದ ಎಲ್ಲಾ ದೇವಾನು ದೇವತೆಗಳು, ಖುಷಿಗಳು ಕೂಡ ಒಮ್ಮೆಯಾದರೂ ಶನಿಯಿಂದ ತೊಂದರೆಗೊಳಗಾಗಿದ್ದಾರೆ. ಶನಿಯ ಪ್ರಭಾವಕ್ಕೊಳಗಾಗಿ ಕಷ್ಟಗಳು, ಸಮಸ್ಯೆಗಳನ್ನು ಎದುರಿಸಿದ್ದಾರೆ. ಅದೇ ಶನಿಯ ಕೃಪೆಯೊಂದಿದ್ದರೆ ಕಡು ಬಡವನೂ ಕೂಡ ರಾಜನಾಗಬಹುದು. ಭೂಮಂಡಲದಲ್ಲಿರುವ, ನಂಬಲಾಗಿರುವ ದೇವರುಗಳ ಪೈಕಿ ಶನೇಶ್ವರ ಪ್ರಭಾವ ಎರಡು ದೇವರುಗಳ ಮೇಲೆ ಬೀಳಲಿಲ್ಲ ಎಂದು ಪುರಾಣಗಳು ಹೇಳುತ್ತವೆ. ಶ್ರೀರಾಮನ ಪರಮ ಭಕ್ತ ಮತ್ತು ದುಷ್ಟರನ್ನು ಹೋಗಲಾಡಿಸುವ ಹನುಮಂತನ ಮೇಲೆ ಎಂದೂ ಕೂಡ ಶನಿಯ ದೃಷ್ಟಿ ಬಿದ್ದಿಲ್ಲ ಎನ್ನುತ್ತವೆ ಪುರಾಣಗಳು.

ಹನುಮಂತನ ಮೇಲೆ ಶನಿಯ ದೃಷ್ಟಿ ಬೀಳದಿರಲು ಕಾರಣ

ರಾಮಾಯಣದ ಕಥೆಯೊಂದನ್ನು ನೋಡಿದಾಗ ಆಂಜನೇಯನು ಎಂದೂ ಶನೇಶ್ವರ ದೃಷ್ಟಿಗೆ ಒಳಗಾಗಲಿಲ್ಲ ಎಂದು ಹೇಳಲಾಗುತ್ತದೆ. ಶನಿಯು ಹನುಮಂತನನ್ನು ಎಷ್ಟೇ ಪ್ರಯತ್ನಿಸಿದರೂ ಏನೂ ಮಾಡಲಾಗಲಿಲ್ಲ. ರಾವಣನಿಂದ ಲಂಕೆಯಲ್ಲಿಲ ಬಂಧಿಯಾಗಿದ್ದ ಸೀತೆಯನ್ನು ರಕ್ಷಿಸಲು ಹಮಮಂತನು ಸಮುದ್ರದಲ್ಲಿ ಸೇತುವೆ ಮಾರ್ಗವನ್ನು ನಿರ್ಮಿಸಿದ ಎಂಬುದು ಕಥೆ. ಈ ಸೇತುವೆಯನ್ನು ಕಟ್ಟುವಾಗ ಶನೇಶ್ವರು ಹನುಮಂತನ ಬಳಿಗೆ ಬಂದಿದ್ದಾನೆ. ಶನಿ ಸಹಾಯಕ್ಕೆ ಬಂದಿದ್ದಾನೆಂದು ಎಲ್ಲರೂ ಭಾವಿಸಿದ್ದರು. ಆದರೆ ಶನಿಯು ಹನುಮಂತನ ಮೇಲೆ ತನ್ನ ಪ್ರಭಾವವನ್ನು ತೋರಿಸಲು ಬಂದಿದ್ದಾನೆ.

ಹನುಮಂತನ ತಲೆಯ ಮೇಲೆ ಕುಳಿತ ಶನಿಯು ಕೆಲಸಕ್ಕೆ ಅಡ್ಡಿಪಡಿಸಲು ಮುಂದಾಗುತ್ತಾನೆ. ಆಗ ಹನುಮಂತನು ನನ್ನ ತಲೆಯನ್ನಲ್ಲ ಕಾಲವನ್ನು ಹಿಡಿದುಕೊಳ್ಳುವಂತೆ ಶನಿಗೆ ಹೇಳುತ್ತಾನೆ. ಅದೇ ರೀತಿಯಾಗಿ ಶನಿ ಹನುಮಂತನ ಕಾಲನನ್ನು ಹಿಡಿಯಲಪು ಯತ್ನಿಸುತ್ತಾನೆ. ಆಕಾರವನ್ನು ಬದಲಾಯಿಸುವ ಶಕ್ತಿ ಹೊಂದಿದ್ದ ಹನುಮಮಂತನು ತನ್ನೆಲ್ಲಾ ಶಕ್ತಿಯನ್ನು ಬಳಿಸಿ ಇದ್ದಕ್ಕಿದ್ದಂತೆ ಬೃಹತ್ ಆಕಾರಕ್ಕೆ ಬದಲಾಗುತ್ತಾನೆ. ಆ ಶನೇಶ್ವೇರನು ಹನುಮಂತನ ಪಾದದಡಿಯಯಲ್ಲಿ ನಜ್ಜುಗುಜ್ಜಾದನು. ಇದರಿಂದ ಶನೇಶ್ವರನು ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಬಿದ್ದನಂತೆ. ಈ ಕಥೆಗೆ ಸಂಬಂಧಿಸಿದ ಚಿತ್ರಗಳು ತಮಿಳುನಾಡಿನ ಚಂಗಲ್ಪಟ್ಟುವಿನ ಕೋದಂಡರಾಮನ ದೇವಾಲಯದ ಮೇಲೆ ಶಿಲ್ಪಗಳ ರೂಪದಲ್ಲಿವೆ ಎಂದು ವಿದ್ವಾಂಸರು ಹೇಳುತ್ತಾರೆ. ಹೀಗಾಗಿ ಹನುಮಂತ ಶನಿಯ ಪ್ರಭಾವದಿಂದ ಪಾರಾದ. ಆದದರಿಂದಲೇ ಹನುಮಂತನನ್ನು ಪೂಜಿಸಿದರೆ ಶನಿಯ ಪ್ರಭಾವವೂ ದೂರವಾಗುತ್ತದೆ ಎಂದು ಹೇಳಲಾಗುತ್ತದೆ.

ಗಣೇಶನ ಮೇಲೂ ಶನಿಯ ದೃಷ್ಟಿ ಬೀಳಲಿಲ್ಲ

ಸಂಕಷ್ಟಹರ ಗಣಪತಿಯನ್ನು ಶನಿಯಿಂದ ಪ್ರಭಾವಿಸದ ಅತ್ಯಂತ ಪವರ್‌ಫುಲ್ ದೇವರೆಂದು ನಂಬಲಾಗಿದೆ. ಆದರೆ ಪುರಾಣಗಳಲ್ಲಿ ಇದಕ್ಕೆ ಸಂಬಂಧಿಸಿದ ಇನ್ನೊಂದು ಕಥೆಯಿದೆ. ಒಂದು ದಿನ ಪಾರ್ವತಿ ದೇವಿಯು ಮಾಡಿದ ಗಣೇಶನನ್ನು ನೋಡಲು ದೇವತೆಗಳೆಲ್ಲರೂ ಬರುತ್ತಾರೆ. ಗಣೇಶನ ಮುಗ್ಧ ಮನೋಹರ ಮುಖವನ್ನು ನೋಡಿ ಎಲ್ಲರೂ ಮೆಚ್ಚುತ್ತಾರೆ. ಆದರೆ ಶನಿಯು ಗಣೇಶನನ್ನೂ ನೋಡುವದಿಲ್ಲ. ಅದಕ್ಕೆ ಕಾರಣ ಶನಿದೇವರಿಗೆ ಇರುವ ಶಾಪ. ಯಾರ ಮೇಲೆ ಶನಿಯ ದೃಷ್ಟಿ ಬೀಳುತ್ತದೆಯೋ ಅವರಿಗೆ ಕಷ್ಟಗಳು ಬರಲಿ ಎಂಬ ಇರುತ್ತದೆ. ಆದ್ದರಿಂದ ಶನಿಯು ಗಣಪತಿಯನ್ನು ನೋಡದಿದ್ದಾಗ ಪಾರ್ವತಿ ದೇವಿಯು ಕೋಪಗೊಂಡು ತನ್ನ ಮಗನನ್ನು ನೋಡಬೇಕೆಂದು ಒತ್ತಾಯಿಸಿದ್ದಾಳೆ. ಇದರಿಂದ ಶನಿಯು ಗಣೇಶನನ್ನು ನೋಡುತ್ತಾನೆ. ಶನಿಯ ದರ್ಶನದ ಫಲವಾಗಿ ಗಣೇಶ ತನ್ನ ತಲೆಯನ್ನು ಕಳೆದುಕೊಂಡನು ಎಂದು ಪುರಾಣಗಳು ಹೇಳುತ್ತವೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ. (This copy first appeared in Hindustan Times Kannada website. To read more like this please logon to kannada.hindustantime.com).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ