Valmiki Jayanti 2024: ಮಹರ್ಷಿ ವಾಲ್ಮೀಕಿ ಜಯಂತಿ ಯಾವಾಗ? ವಾಲ್ಮೀಕಿ ಜೀವನ ಚರಿತ್ರೆಯ ಕಥೆ ತಿಳಿಯಿರಿ
Oct 14, 2024 09:30 AM IST
ಮಹರ್ಷಿ ವಾಲ್ಮೀಕಿ ಅವರ ಜೀವನ ಚರಿತ್ರೆಯ ಕಥೆಗಳನ್ನು ತಿಳಿಯಿರಿ
- ವಾಲ್ಮೀಕಿ ಜಯಂತಿಯನ್ನು ಪ್ರತಿ ವರ್ಷ ಅಶ್ವಿನಿ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಈ ವರ್ಷ ವಾಲ್ಮೀಕಿ ಜಯಂತಿಯನ್ನು ಅಕ್ಟೋಬರ್ 17 ರ ಗುರುವಾರ ಆಚರಿಸಲಾಗುತ್ತದೆ. ಮಹರ್ಷಿ ವಾಲ್ಮೀಕಿ ರಾಮಾಯಣ ಮಹಾಕಾವ್ಯವನ್ನು ರಚಿಸಿದವರು. ಸಾಮಾನ್ಯವಾಗಿ ವಾಲ್ಮೀಕಿ ಜಯಂತಿಯ ಶುಭ ಸಂದರ್ಭದಲ್ಲಿ ಸ್ತಬ್ಧಚಿತ್ರಗಳ ಮೆರವಣಿಗೆ ನಡೆಯುತ್ತದೆ.
ಹಿಂದೂ ಧರ್ಮದ ಪವಿತ್ರ ಗ್ರಂಥಗಳಲ್ಲಿ ಒಂದಾಗಿರುವ ಮಹಾಕಾವ್ಯ ರಾಮಾಯಣದ ಕರ್ತೃ, ರಸಕವಿ ಋಷಿಕವಿ ಮಹರ್ಷಿ ವಾಲ್ಮೀಕಿಯ ಜಯಂತಿ ಬಂದೇ ಬಿಡ್ತು. ಪ್ರತಿ ವರ್ಷದಂತೆ ಈ ಬಾರಿಯು ಸಡಗರ ಸಂಭ್ರಮದಿಂದ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಗುತ್ತದೆ. ವಾಲ್ಮೀಕಿ ಜಯಂತಿಯನ್ನು ಪ್ರತಿ ವರ್ಷ ಅಶ್ವಿನಿ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಈ ವರ್ಷ ವಾಲ್ಮೀಕಿ ಜಯಂತಿಯನ್ನು ಅಕ್ಟೋಬರ್ 17 ರಂದು ಆಚರಿಸಲಾಗುವುದು. ವಾಲ್ಮೀಕಿ ಜಯಂತಿಯ ಶುಭ ಸಂದರ್ಭದಲ್ಲಿ, ಸ್ತಬ್ಧಚಿತ್ರಗಳ ಮೆರವಣಿಗೆ ನಡೆಯುತ್ತದೆ.
ತಾಜಾ ಫೋಟೊಗಳು
ಧಾರ್ಮಿಕ ನಂಬಿಕೆಗಳ ಪ್ರಕಾರ, ವಾಲ್ಮೀಕಿಯಾಗುವ ಮೊದಲು ಈತ ಬೇಡನಾಗಿದ್ದ. ಕಾಡಿಗೆ ಬರುವ ಜನರನ್ನು ಲೂಟಿ ಮಾಡುವ ಮೂಲಕ ತನ್ನನ್ನು ಮತ್ತು ತನ್ನ ಕುಟುಂಬವನ್ನು ಪೋಷಿಸುತ್ತಿದ್ದನು. ನಂತರ ಮಹರ್ಷಿ ವಾಲ್ಮೀಕಿ ಬ್ರಹ್ಮನನ್ನು ಮೆಚ್ಚಿಸಲು ಮತ್ತು ತನ್ನ ಪಾಪಗಳ ಕ್ಷಮೆಯನ್ನು ಕೇಳಲು ಕಠಿಣ ತಪಸ್ಸು ಮಾಡಿದರು. ವಾಲ್ಮೀಕಿ ತನ್ನಲ್ಲಿ ಎಷ್ಟು ಮಗ್ನನಾಗಿದ್ದನೆಂದರೆ ತನ್ನ ಸುತ್ತಲೂ ಗೆದ್ದಲು ಹುಳುಗಳು ಹುತ್ತ ಕಟ್ಟಿದರೂ ವಾಲ್ಮೀಕಿಗೆ ಗೊತ್ತಿರುವುದಿಲ್ಲ. ಇದನ್ನು ನೋಡಿದ ಬ್ರಹ್ಮನು ಇವರನ್ನ ರತ್ನಾಕರ ವಾಲ್ಮೀಕಿ ಎಂದು ಕರೆಯುತ್ತಾನೆ. ಇದು ಬೇಡನಿಂದ ರತ್ನಾಕರವಾದ ಕಥೆಯಾಗಿದೆ.
ಮಹರ್ಷಿ ಕಶ್ಯಪ್ ಮತ್ತು ಅದಿತಿ ದೇವಿಯ 9 ನೇ ಮಗನಾದ ವರುಣ್ ಮತ್ತು ಅವರ ಪತ್ನಿ ಚಾರ್ಶಿನಿ ಅವರಿಗೆ ಜನಿಸಿದ ಮಹರ್ಷಿ ವಾಲ್ಮೀಕಿಯ ಜನನದ ಬಗ್ಗೆ ಅನೇಕ ದಂತಕಥೆಗಳಿವೆ. ಮೊದಲ ಶ್ಲೋಕವನ್ನು ಬರೆದ ಕೀರ್ತಿಯೂ ಮಹರ್ಷಿ ವಾಲ್ಮೀಕಿಗೆ ಸಲ್ಲುತ್ತದೆ.
ವಾಲ್ಮೀಕಿಯ ಅರ್ಥವೇನು?
ಮತ್ತೊಂದು ದಂತಕಥೆಯ ಪ್ರಕಾರ, ಪ್ರಚೇತ ಎಂಬ ಬ್ರಾಹ್ಮಣನ ಮಗನಾದ ವಾಲ್ಮೀಕಿ ರತ್ನಾಕರನಾಗಿ ಜನಿಸಿದನು, ಆತ ಒಂದು ಕಾಲದಲ್ಲಿ ಡಕಾಯಿತನಾಗಿದ್ದನು. ನಾರದ ಮುನಿಯನ್ನು ಭೇಟಿಯಾಗುವ ಮೊದಲು ಅವನು ಅನೇಕ ಮುಗ್ಧ ಜನರನ್ನು ಕೊಂದು ಲೂಟಿ ಮಾಡಿದನು, ಈತನನ್ನು ಉತ್ತಮ ಮನುಷ್ಯನಾಗಿ ಮತ್ತು ರಾಮನ ಭಕ್ತನಾಗಿ ಪರಿವರ್ತಿಸಿದನು. ವರ್ಷಗಳ ಧ್ಯಾನಾಭ್ಯಾಸದ ನಂತರ ಅವನು ಎಷ್ಟು ಶಾಂತನಾದನೆಂದರೆ ಗೆದ್ದಲು ಹುಳುಗಳು ಆತನ ಸುತ್ತಲೂ ಹುತ್ತವನ್ನು ರಚಿಸಿದವು. ಇದರ ಬಗ್ಗೆ ಆತನಿಗೆ ಅರಿವು ಇರಲಿಲ್ಲ, ಅಷ್ಟರ ಮಟ್ಟಿಗೆ ಧ್ಯಾನದಲ್ಲಿ ಮಗ್ನನಾಗಿದ್ದನು. ಇದರ ಪರಿಣಾಮವಾಗಿ ವಾಲ್ಮೀಕಿ ಎಂಬ ಬಿರುದನ್ನು ನೀಡಲಾಯಿತು, ಇದರರ್ಥ "ಗೆದ್ದಲು ಹುಳುಗಳ ದಿಬ್ಬದಿಂದ ಜನಿಸಿದವನು.
ರಾಮಾಯಣ ಬರೆಯಲು ಪ್ರೇರಣೆಯಾದ ಘಟನೆ
ಒಮ್ಮೆ ವಾಲ್ಮೀಕಿ ಮಹರ್ಷಿಗಳು ತಮಸಾ ನದಿ ತೀರದಲ್ಲಿ ಸಂತೋಷವಾಗಿ ಹಾರಾಡುತ್ತಿದ್ದ ಕ್ರೌಂಚಪಕ್ಷಿ ಜೋಡಿಯನ್ನು ನೋಡುತ್ತಾ ಕುಳಿತಿರುತ್ತಾರೆ. ಆರೆ ಬೇಡನೊಬ್ಬ ಕ್ರೌಂಚಪಕ್ಷಿ ಜೋಡಿ ಪೈಕಿ ಗಂಡು ಪಕ್ಷಿಯನ್ನು ಬಾಣದಿಂದ ಹೊಡೆದು ಕೊಲ್ಲುತ್ತಾನೆ. ಆಗ ಹೆಣ್ಣು ಪಕ್ಷಿ ಸಂಕಟದಿಂದ ಕೂಗಲಾರಂಭಿಸುತ್ತದೆ. ಈ ಹೃದಯ ವಿದ್ರಾವಕ ಘಟನೆಯನ್ನು ನೋಡಿದ ಮಹರ್ಷಿ ವಾಲ್ಮೀಕಿ ಕರುಣೆ, ದುಃಖ ಹಾಗೂ ಕೋಪದಿಂದ ಬೇಡನನ್ನು ಶಪಿಸುತ್ತಾನೆ.
ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ ಯತ್ಕ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್ |
ಈ ಶ್ಲೋಕದ ಅರ್ಥವನ್ನು ನೋಡುವುದಾದರೆ
ಅಕಾರಣವಾಗಿ ಹಕ್ಕಿಯನ್ನು ಕೊಂದ ಹೇ ಅನ್ಯಾಯಿ
ನಿನ್ನ ಪಾಪದ ಫಲವಾಗಿ ನೀ ಈ ಕೂಡಲೇ ಸಾಯಿ
ಇದು ರಾಮಾಯಣ ರಚನೆಗೆ ಪ್ರೇರಣೆಯಾದ ಘಟನೆ ಎಂದು ಹೇಳಲಾಗಿದೆ. ಅದೇ ಸಮಯಲ್ಲಿ ಮಹರ್ಷಿ ವಾಲ್ಮೀಕಿ ಅವರ ಆಶ್ರಮಕ್ಕೆ ಬಂದ ಬ್ರಹ್ಮದೇವ ಇದನ್ನು ಶ್ಲೋಕರೂಪದಲ್ಲಿ ರಾಮಾಯಣ ಕಾವ್ಯವನ್ನು ರಚಿಸಲು ಹೇಳುತ್ತಾರೆ. ನಾರದರು ತಮಗೆ ಸಂಗ್ರಹವಾಗಿ ಹೇಳಿದ್ದ ರಾಮನ ಕಥೆಯನ್ನು ವಾಲ್ಮೀಕಿ ಮಹರ್ಷಿಗಳು 24,000 ಶ್ಲೋಕಗಳನ್ನೊಳಗೊಂಡ ಮಹಾಕಾವ್ಯವನ್ನು ರಚಿಸಿದರು ಎಂಬುದಾಗಿ ಕೆಲವು ಗ್ರಂಥಗಳಲ್ಲಿ ವಾಲ್ಮೀಕಿ ರಾಮಾಯಣವನ್ನು ಬರೆದ ಹಿಂದಿನ ಕಥೆಯನ್ನು ವಿವರಿಸಿದ್ದಾರೆ.