logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Spiritual News: ಸ್ವಸ್ತಿಕ್,ಶುಭ-ಲಾಭ ಚಿಹ್ನೆಗಳ ಬಗ್ಗೆ ಹಿಂದೂ ಧರ್ಮ ಅಷ್ಟೇಕೆ ಮಹತ್ವ ಕೊಡುತ್ತೆ? ಇಲ್ಲಿದೆ ಉತ್ತರ

Spiritual News: ಸ್ವಸ್ತಿಕ್,ಶುಭ-ಲಾಭ ಚಿಹ್ನೆಗಳ ಬಗ್ಗೆ ಹಿಂದೂ ಧರ್ಮ ಅಷ್ಟೇಕೆ ಮಹತ್ವ ಕೊಡುತ್ತೆ? ಇಲ್ಲಿದೆ ಉತ್ತರ

HT Kannada Desk HT Kannada

Dec 26, 2023 11:43 AM IST

google News

ಹಿಂದೂ ಧರ್ಮದಲ್ಲಿ ಸ್ವಸ್ತಿಕ್‌ ಚಿಹ್ನೆಗೆ ಇದೆ ಬಹಳ ಮಹತ್ವ

  • ಬಹುತೇಕ ಶುಭ ಸಮಾರಂಭಗಳಲ್ಲಿ ಸ್ವಸ್ತಿಕ್‌ ಹಾಗೂ  ಶುಭ ಲಾಭ ಚಿಹ್ನೆಗಳನ್ನು ಬಳಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಈ ಎರಡೂ ಚಿಹ್ನೆಗಳು ಸಮೃದ್ಧಿ, ಸಂತೋಷದ ಪ್ರತೀಕ. 

ಹಿಂದೂ ಧರ್ಮದಲ್ಲಿ ಸ್ವಸ್ತಿಕ್‌ ಚಿಹ್ನೆಗೆ ಇದೆ ಬಹಳ ಮಹತ್ವ
ಹಿಂದೂ ಧರ್ಮದಲ್ಲಿ ಸ್ವಸ್ತಿಕ್‌ ಚಿಹ್ನೆಗೆ ಇದೆ ಬಹಳ ಮಹತ್ವ (PC: Freepik)

Spiritual News: ಬಹುತೇಕ ಹಿಂದೂಗಳ ಮನೆ ಬಾಗಿಲುಗಳ ಮೇಲೆ ನಾವು ಸ್ವಸ್ತಿಕ್‌ ಹಾಗೂ ಶುಭ್‌ ಲಾಭ್‌ ಚಿಹ್ನೆಗಳನ್ನು ನೋಡಬಹುದು. ಈ ಎರಡೂ ಚಿಹ್ನೆಗಳಿಗೆ ಹಿಂದೂ ಸಂಪ್ರದಾಯದಲ್ಲಿ ಬಹಳ ಪ್ರಾಮುಖ್ಯತೆ ಇದೆ. ಈ ಚಿಹ್ನೆ, ಸಾಂಸ್ಕೃತಿಕ ಮತ್ತು ಧಾರ್ಮಿಕ ಮಹತ್ವ ಎರಡನ್ನೂ ಪ್ರತಿನಿಧಿಸುತ್ತದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಸಮೃದ್ಧಿ, ಅದೃಷ್ಟದ ಪ್ರತೀಕ

ಸ್ವಸ್ತಿಕ್‌, ಪವಿತ್ರ ಚಿಹ್ನೆಯು ಸಮೃದ್ಧಿ, ಅದೃಷ್ಟ ಮತ್ತು ಒಟ್ಟಾರೆ ಯೋಗಕ್ಷೇಮದ ಸಂಕೇತವನ್ನು ಪ್ರತಿನಿಧಿಸುತ್ತದೆ. ಇದನ್ನು ಧಾರ್ಮಿಕ ಸಮಾರಂಭಗಳಲ್ಲಿ ಅಲಂಕಾರ ಮತ್ತು ಸಕಾರಾತ್ಮಕತೆಯ ಸಂಕೇತವಾಗಿ ಬಳಸಲಾಗುತ್ತದೆ. ಏಕೆಂದರೆ ಇದು ಅತ್ಯಂತ ಮಂಗಳಕರವಾಗಿದೆ. ಸ್ವಸ್ತಿಕ್‌ನ ನಾಲ್ಕು ರೇಖೆಗಳು ಮಾನವನ ಅಸ್ತಿತ್ವದ ಮೋಕ್ಷ (ವಿಮೋಚನೆ), ಕಾಮ (ಬಯಕೆ), ಅರ್ಥ (ಸಂಪತ್ತು) ಮತ್ತು ಧರ್ಮ (ಸದಾಚಾರ) ನಾಲ್ಕು ಸ್ತಂಭಗಳನ್ನು ಪ್ರತಿನಿಧಿಸುತ್ತವೆ ಎಂದು ನಂಬಲಾಗಿದೆ. ಹಾಗೂ 2 ಅದೃಷ್ಟ ಪದಗಳನ್ನು ಸಂಯೋಜಿಸುವ ಫಲಿತಾಂಶವಾದ ಶುಭ್‌ ಲಾಭ್, ಸಂಪತ್ತು ಮತ್ತು ಯಶಸ್ಸನ್ನು ಸೂಚಿಸುತ್ತದೆ. ಹಿಂದೂ ಸಂಸ್ಕೃತಿಯಲ್ಲಿ, ಈ ಲಾಂಛನವು ಮನೆಗಳು ಮತ್ತು ವಾಣಿಜ್ಯ ಸ್ಥಳಗಳ ಮುಂಭಾಗದಲ್ಲಿ ಕಂಡುಬರುತ್ತದೆ. ಇದು ಸಮೃದ್ಧಿ ಮತ್ತು ಅದೃಷ್ಟವನ್ನು ಪ್ರತಿನಿಧಿಸುತ್ತದೆ.

ಗಣೇಶನನ್ನು ಪ್ರತಿನಿಧಿಸುವ ಶುಭ್‌ ಲಾಭ್‌

ಸ್ವಸ್ತಿಕ್‌, ಪವಿತ್ರ ಲಾಂಛನವು ಸಮೃದ್ಧಿ, ಅದೃಷ್ಟ ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಪ್ರತಿನಿಧಿಸುತ್ತದೆ. ಒಟ್ಟಾರೆಯಾಗಿ ಈ ಎರಡೂ ಚಿಹ್ನೆಗಳು ಹಿಂದೂ ಸಂಪ್ರದಾಯದಲ್ಲಿ ಪ್ರಮುಖವಾದವು. ಸವಿಸ್ತಾರವಾಗಿ ಹೇಳೇಕೆಂದರೆ ಶುಭ್‌ ಎಂದರೆ ಭಗವಾನ್ ಗಣೇಶನಿಗೆ ಸಂಬಂಧಿಸಿದ ಚಿಹ್ನೆಗಳಾಗಿವೆ. ಗಣಪತಿಯು ಪ್ರಜಾಪತಿ ವಿಶ್ವಕರ್ಮನ ಪುತ್ರಿಯರಾದ ಸಿದ್ಧಿ ಮತ್ತು ರಿದ್ಧಿಯನ್ನು ವಿವಾಹವಾದನೆಂದು ಧರ್ಮಗ್ರಂಥಗಳು ಹೇಳುತ್ತವೆ. ಅದರಂತೆ ಸಿದ್ಧಿಯ ಮಗ ಶುಭ್ ಮತ್ತು ರಿದ್ಧಿಯ ಮಗನಾದ ಲಭ್‌ಗಳನ್ನು ಅದೃಷ್ಟದ ಚಿಹ್ನೆಗಳು ಎಂದು ಕರೆಯಲಾಗುತ್ತದೆ. ಸ್ವಸ್ತಿಕ್‌, ಗಣೇಶನನ್ನು ಪ್ರತಿನಿಧಿಸುತ್ತದೆ ಎಂದು ನಂಬಲಾಗಿದೆ. ಆದ್ದರಿಂದಲೇ ಶುಭ ಸಮಾರಂಭಗಳಲ್ಲಿ ಈ ಚಿಹ್ನೆಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ.

ಈಶಾನ್ಯ, ಉತ್ತರಕ್ಕೆ ಬರೆದರೆ ಶುಭ

ನಿಮ್ಮ ಮನೆ ಅಥವಾ ವ್ಯಾಪಾರದ ಸ್ಥಳಕ್ಕೆ ಅದೃಷ್ಟದ ಚಿಹ್ನೆಗಳನ್ನು ಸೇರಿಸುವುದು ಸಂಪತ್ತು, ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಇದನ್ನು ಬಳಸುವವರು ಗಣೇಶನ ಆಶೀರ್ವಾದವನ್ನು ಪಡೆಯುತ್ತಾನೆ. ಸ್ವಸ್ತಿಕ್‌ನತಹ ಯಾವುದೇ ಮಂಗಳಕರ ಚಿಹ್ನೆಯನ್ನು ಈಶಾನ್ಯ ಅಥವಾ ಉತ್ತರಕ್ಕೆ ಮುಖ ಮಾಡುವಂತೆ ಬರೆಯುವುದು ಮಂಗಳಕರ ಎಂದು ನಂಬಲಾಗಿದೆ. ಧಾರ್ಮಿಕ ನಂಬಿಕೆಯ ಪ್ರಕಾರ ಸ್ವಸ್ತಿಕ್‌ ಚಿಹ್ನೆ ಬಳಸುವ ಮೂಲಕ ವಾಸ್ತು ದೋಷವನ್ನೂ ಸರಿಪಡಿಸಬಹುದು. ಮನೆಯಲ್ಲಿ ತಾಮ್ರ ಅಥವಾ ಅಷ್ಟಧಾತುಗಳಿಂದ ಮಾಡಿದ ಸ್ವಸ್ತಿಕ್ ಚಿಹ್ನೆಗಳನ್ನು ಸಹ ಬಳಸಬಹುದು.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ