2024ರಲ್ಲಿ ಚಾತುರ್ಮಾಸ ಯಾವಾಗ ಆರಂಭವಾಗುತ್ತೆ? ಕೊನೆಗೊಳ್ಳುವ ದಿನಾಂಕ, ಮಹತ್ವ ತಿಳಿಯಿರಿ -Chaturmasa
Jul 14, 2024 03:28 PM IST
2024ರಲ್ಲಿ ಚಾತುರ್ಮಾಸ ಯಾವಾಗ ಆರಂಭವಾಗುತ್ತೆ? ಕೊನೆಗೊಳ್ಳುವ ದಿನಾಂಕ, ಮಹತ್ವ ತಿಳಿಯಿರಿ
- 2024ರಲ್ಲಿ ಚಾತುರ್ಮಾಸ ಯಾವಾಗ ಪ್ರಾರಂಭವಾಗುತ್ತೆ, ಯಾವಾಗ ಕೊನೆಗೊಳ್ಳುತ್ತೆ, ಚಾತುರ್ಮಾಸದಲ್ಲಿ ಏನು ಮಾಡಬೇಕು, ಏನು ಮಾಡಬಾರದು, ಯಾರೆಲ್ಲಾ ಚಾತುರ್ಮಾಸವನ್ನು ಆಚರಿಸಬಹುದು? ಇದರ ಮಹತ್ವವನ್ನು ತಿಳಿಯಿರಿ.
ಸನಾತನ ಧರ್ಮದಲ್ಲಿ ಎಲ್ಲಾ ರೀತಿಯ ಶುಭ ಕಾರ್ಯಗಳನ್ನು ನಿಲ್ಲಿಸುವ ಅತ್ಯಂತ ಪ್ರಮುಖ ಅವಧಿಯನ್ನು ಚಾತುರ್ಮಾಸ ಎಂದು ಕರೆಯಲಾಗುತ್ತದೆ. ಜಗತ್ತಿನ ಸೃಷ್ಟಿಕರ್ತನಾದ ವಿಷ್ಣುವು ಯೋಗ ನಿದ್ರಾ ಅಥವಾ 4 ತಿಂಗಳು ಕಾಲ ವಿಶ್ರಾಂತಿ ಪಡೆಯುವುದರಿಂದ ಇದನ್ನು ಹೀಗೆ ಕರೆಯಲಾಗುತ್ತೆ. 2024ರಲ್ಲಿ ಚಾತುರ್ಮಾಸ (Chaturmas 2024) ಯಾವಾಗ ಪ್ರಾರಂಭಾಗುತ್ತೆ, ಯಾವಾಗ ಕೊನೆಗೊಳ್ಳುತ್ತೆ ಎಂಬುದರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿ ದಿನಾಂಕವನ್ನು ದೇವಶಯಾನಿ ಏಕಾದಶಿ ಎಂದು ಕರೆಯಲಾಗುತ್ತದೆ. ಈ ದಿನದಂದು ಭಗವಾನ್ ವಿಷ್ಣು ಕ್ಷೀರಸಾಗರಕ್ಕೆ ವಿಶ್ರಾಂತಿ ಪಡೆಯಲು ಹೋಗುತ್ತಾನೆ ಎಂಬ ನಂಬಿಕೆ ಇದೆ. ಹೀಗೆ ಹೋದರೆ ನಾಲ್ಕು ತಿಂಗಳ ಕಾಲ ಯೋಗ ನಿದ್ರೆಗೆ ಜಾರುತ್ತಾನೆ. ಕಾರ್ತಿಕ ಮಾಸದ ಶುಕ್ಲ ಪಕ್ಷದ ದೇವುತನಿ ಏಕಾದಶಿಯಂದು ಎಚ್ಚರಗೊಳ್ಳುತ್ತಾನೆ. ಯೋಗ ಮುದ್ರೆಯ ಅವಧಿಯಲ್ಲಿ ಅಂದ್ರೆ ನಾಲ್ಕು ತಿಂಗಳ ಕಾಲ ಯಾವುದೇ ರೀತಿಯ ಶುಭ ಕಾರ್ಯಗಳನ್ನು ಮಾಡುವುದಿಲ್ಲ.
ತಾಜಾ ಫೋಟೊಗಳು
ಚಾತುರ್ಮಾಸ ಎಂದರೆ ಸಂಸ್ಕೃತದಲ್ಲಿ ನಾಲ್ಕು ತಿಂಗಳು ಎಂಬ ಅರ್ಥವಿದೆ. ಆಷಾಢ, ಶ್ರಾವಣ, ಭಾದ್ರಪದ ಹಾಗೂ ಕಾರ್ತಿಕ ಮಾಸ. ಚಾತುರ್ಮಾಸವು ಸಾಮಾನ್ಯವಾಗಿ ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿಯಿಂದ ಆರಂಭವಾಗುತ್ತದೆ. ಅದೇ ರೀತಿಯಾಗಿ ಕಾರ್ತಿಕ ಮಾಸದ ಶುಕ್ಲ ಪಕ್ಷದ ದಶಮಿಯಂದು ಕೊನೆಗೊಳ್ಳುತ್ತದೆ. ಚತು್ ಎಂದರೆ ನಾಲ್ಕು, ಮಾಸ ಎಂದರೆ ತಿಂಗಳು ಹಾಗೂ ವ್ರತ ಎಂದರೆ ತಪಸ್ಸು. ಚಾತುರ್ಮಾಸ ವ್ರತವನ್ನು 4 ಪವಿತ್ರ ಮಾಸಗಳಲ್ಲಿ ಆಚರಿಸಲಾಗುತ್ತದೆ. 2024ರಲ್ಲಿ ಚಾತುರ್ಮಾಸ ಯಾವಾಗ ಆರಂಭವಾಗುತ್ತದೆ ಎಂಬುದನ್ನು ನೋಡಿದಾಗ ಜುಲೈ 17 ರಂದು ದೇವಪೋಧಿ ಏಕಾದಶಿಯೊಂದಿಗೆ ಪ್ರಾರಂಭವಾಗುತ್ತದೆ. ಅದೇ ರೀತಿಯಾಗಿ 2024ರ ನವೆಂಬರ್ 12 ರಂದು ದೇವುತಿ ಏಕಾದಶಿಯೊಂದಿಗೆ ಅಂತ್ಯಗೊಳ್ಳುತ್ತದೆ.
ವ್ರತವನ್ನು ಯಾರೆಲ್ಲಾ ಆಚರಿಸಬಹುದು?
ಈ ವ್ರತವನ್ನು ಬ್ರಹ್ಮಚಾರಿ ಆಶ್ರಮ, ಗೃಹಸ್ಥ ಆಶ್ರಮ, ವಾನಪ್ರಸ್ಥ ಆಶ್ರಮ ಹಾಗೂ ಸನ್ಯಾಸಿ ಆಶ್ರಮಕ್ಕೆ ಸೇರಿದವರು ಯಾರು ಬೇಕಾದರೂ ಆಚರಿಸಬಹುದು. ಅಲ್ಲದೆ, ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಯಾವುದೇ ವರ್ಣಕ್ಕೆ ಸೇರಿದ ಬೇಕಾದರೂ ಇದನ್ನು ಆಚರಿಸಬಹುುದು. ವಯಸ್ಸು ಹಾಗೂ ಜಾತಿಯ ಮಿತಿಗಳು ಈ ವ್ರತಕ್ಕಿಲ್ಲ.
ಚಾತುರ್ಮಾಸದಲ್ಲಿ ಏನು ಮಾಡಬೇಕು
- ಸೂರ್ಯೋದಯಕ್ಕೆ ಮುಂಚೆ ಎದ್ದು ಸ್ನಾನ ಮಾಡಿ
- ಸೂರ್ಯೋದಯಕ್ಕೆ ಮುಂಚಿತವಾಗಿ ದೇವರ ಜಪ ಮಾಡಬೇಕು
- ಸಾಮಾನ್ಯ ದಿನಗಳಿಗಿಂತ ಹೆಚ್ಚು ಮಂತ್ರಗಳನ್ನು ಪಠಿಸಬೇಕು
- ನಾಲ್ಕು ತಿಂಗಳು ಬ್ರಹ್ಮಚಾರ್ಯ ಅನುಸರಿಸಬೇಕು
- ನಿಮ್ಮ ಶಕ್ತಿಗೆ ತಕ್ಕಂತೆ ದೇವಸ್ಥಾನಗಳಿಗೆ ದೇಣಿಗೆ ನೀಡಿ (ಕಡ್ಡಾಯವಲ್ಲ)
- ಕೃಷ್ಣ ಪುಸ್ತಕ, ಭಗವದ್ಗೀತೆ ಹಾಗೂ ಶ್ರೀಮದ್ ಭಾಗವತದಿಂದ ಬಾಲ ಲೀಲಾವನ್ನು ಓದಿ ಮತ್ತು ಧ್ಯಾನಿಸಿ
ಇದನ್ನೂ ಓದಿ: ಗಂಗಾ ದಸರಾ, ನಿರ್ಜಲ ಏಕಾದಶಿ ಸೇರಿದಂತೆ ಜ್ಯೇಷ್ಠ ಮಾಸದಲ್ಲಿ ಆಚರಿಸುವ ಪ್ರಮುಖ ವ್ರತ, ಹಬ್ಬಗಳಿವು
- ತುಳಸಿಯನ್ನು ಪೂಜಿಸಬೇಕು ತುಳಸಿ ಕಟ್ಟೆಗೆ ಪ್ರದಕ್ಷಿಣೆ ಹಾಕಬೇಕು
- ತುಳಸಿ ಎಲೆಗಳನ್ನು ಭಗವಂತನಿಗೆ ಅರ್ಪಿಸಬೇಕು
- ತೀರ್ಥ ಯಾತ್ರೆಗೆ ಭೇಟಿ ನೀಡಬೇಕು
- ವೈಷ್ಣವ ಭಜನೆಯನ್ನು ಅರ್ಥದೊಂದಿಗೆ ಓದಬೇಕು
- ಪ್ರತಿನಿತ್ಯ ಮಲಗುವ ಮುನ್ನ ಕೃಷ್ಣನಿಗೆ ಕೃತಜ್ಞತೆ ಸಲ್ಲಿಸಿ
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)