ವೃಷಭ ರಾಶಿ ಭವಿಷ್ಯ ಆಗಸ್ಟ್ 3: ಕೆಲಸದಲ್ಲಿ ಒತ್ತಡ ಇರುತ್ತೆ, ಹಣಕಾಸಿನ ವಿಚಾರದಲ್ಲಿ ಬದಲಾವಣೆಯನ್ನು ಕಾಣುತ್ತೀರಿ
Aug 03, 2024 05:52 AM IST
ವೃಷಭ ರಾಶಿಯವರ ದಿನ ಭವಿಷ್ಯ ಆಗಸ್ಟ್ 3
- Taurus Daily Horoscope August 3, 2024: ರಾಶಿಚಕ್ರಗಳಪೈಕಿ ಎರಡನೇಯದು ವೃಷಭ ರಾಶಿಚಕ್ರದ ಚಿಹ್ನೆ. ಜನನದ ಸಮಯದಲ್ಲಿ ಚಂದ್ರನು ವೃಷಭ ರಾಶಿಯಲ್ಲಿ ಸಾಗುತ್ತಿರುವ ಜನರ ರಾಶಿಯೇ ವೃಷಭ ರಾಶಿ. ಆಗಸ್ಟ್ 3ರ ವೃಷಭ ರಾಶಿ ಭವಿಷ್ಯದ ಪ್ರಕಾರ, ಕೆಲಸದಲ್ಲಿ ಒತ್ತಡ ಇರುತ್ತೆ, ಹಣಕಾಸಿನ ವಿಚಾರದಲ್ಲಿ ಬದಲಾವಣೆಯನ್ನು ಕಾಣುತ್ತೀರಿ.
ವೃಷಭ ರಾಶಿಯವರ ಇಂದಿನ (ಆಗಸ್ಟ್ 3) ದಿನ ಭವಿಷ್ಯದಲ್ಲಿ ಸವಾಲಿನ ದಿನ ಮತ್ತು ಈ ಸವಾಲನ್ನು ನೀವು ಹೇಗೆ ಎದುರಿಸುತ್ತೀರಿ ಎಂಬುದು ನಿಮಗೆ ಬಿಟ್ಟಿದ್ದು. ಈ ಸವಾಲಿನ ನಂತರ ನೀವು ಬಹುಮಾನವನ್ನು ಸಹ ಪಡೆಯಬಹುದು ಎಂಬುದನ್ನು ನೆನಪಿನಲ್ಲಿಡಿ. ಪ್ರೀತಿ, ವೃತ್ತಿ ಜೀವನ, ಹಣಕಾಸು ವಿಷಯಗಳಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ನೀವು ಅವಕಾಶಗಳನ್ನು ಪಡೆಯುತ್ತೀರಿ. ಅಂದ ಹಾಗೆ, ಎಲ್ಲ ರಾಶಿಗಳದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣದಲ್ಲಿದೆ. ನೀವು ಅದನ್ನೂ ಓದಬಹುದು.
ತಾಜಾ ಫೋಟೊಗಳು
ವೃಷಭ ರಾಶಿ ಪ್ರೇಮ ಜೀವನ (Taurus Love Horoscope): ಹೃದಯದ ದೃಷ್ಟಿಯಿಂದ, ವೃಷಭ ರಾಶಿಯವರಿಗೆ ಇವತ್ತು ತುಂಬಾ ಒತ್ತಡದಿಂದ ಕೂಡಿರುತ್ತದೆ. ಅವಿವಾಹಿತರಾಗಿರಲಿ ಅಥವಾ ವಿವಾಹಿತರಾಗಿರಲಿ ಈ ಸಮಯದಲ್ಲಿ ನಿಮ್ಮ ಪ್ರಣಯ ಜೀವನವು ಹದಗೆಡುತ್ತದೆ. ನೀವು ವಿಷಯಗಳನ್ನು ಮತ್ತೆ ಪರಿಶೀಲಿಸುವ ಸಮಯ ಇದು. ಸಂಗಾತಿಯೊಂದಿಗೆ ಪ್ರಾಮಾಣಿಕವಾಗಿ ಮಾತನಾಡಿ. ನಿಮ್ಮ ನಿಜವಾದ ಭಾವನೆಗಳನ್ನು ಅವರೊಂದಿಗೆ ಹಂಚಿಕೊಳ್ಳಿ ಮತ್ತು ಅವುಗಳನ್ನು ಕೋಪದಿಂದ ನಿಭಾಯಿಸಬೇಡಿ.
ವೃಷಭ ರಾಶಿ ದಿನ ಭವಿಷ್ಯ ಆಗಸ್ಟ್ 3; ಉದ್ಯೋಗ, ಆದಾಯ, ಆರೋಗ್ಯ
ವೃಷಭ ರಾಶಿ ವೃತ್ತಿ ಭವಿಷ್ಯ (Taurus Professional Horoscope): ಕೆಲಸದ ವಿಷಯದಲ್ಲಿ ಒತ್ತಡ ಇರುತ್ತೆ. ಬಹಳಷ್ಟು ಕೆಲಸವು ನಿಮ್ಮನ್ನು ಒತ್ತಡಕ್ಕೆ ಸಿಲುಕಿಸುತ್ತಿದೆ. ಆದ್ದರಿಂದ ನಿರ್ವಹಿಸಲು ಕೂಲ್ ಆಗಿ ಯೋಚಿಸಿ. ನೆನಪಿಡಿ, ಯಾವುದೇ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳಬೇಡಿ. ಸವಾಲಿನ ಯೋಜನೆಗಳನ್ನು ನಿಮ್ಮದೇ ಆದ ರೀತಿಯಲ್ಲಿ ವರ್ಕೌಟ್ ಮಾಡಿ.
ವೃಷಭ ರಾಶಿ ಆರ್ಥಿಕ ಜೀವನ (Taurus Money Horoscope): ನಿಮ್ಮ ಆರ್ಥಿಕ ಚಿತ್ರಣದಲ್ಲಿ ಬದಲಾವಣೆ ಕಂಡುಬರಲಿದೆ. ಆದ್ದರಿಂದ ನೀವು ಕಷ್ಟಪಟ್ಟು ಕೆಲಸ ಮಾಡಬೇಕು. ಖರ್ಚುಗಳನ್ನು ಕಡಿಮೆ ಮಾಡಲು ಪ್ರಯತ್ನಿಸಬೇಕು. ನೀವು ಹಣದ ವಿಚಾರದಲ್ಲಿ ಆಶ್ಚರ್ಯಗಳನ್ನು ಪಡೆಯುತ್ತೀರಿ, ಅವುಗಳ ಬಗ್ಗೆ ಜಾಗರೂಕರಾಗಿರಿ, ಅದು ಆರ್ಥಿಕ ಲಾಭವಾಗಿರಬಹುದು, ಅದು ಹಠಾತ್ ಬಡ್ತಿಯಾಗಿರಬಹುದು, ಬೆಟ್ಟಿಂಗ್ ಗೆಲ್ಲಬಹುದು ಅಥವಾ ಆಶ್ಚರ್ಯಕರ ಉಡುಗೊರೆಯನ್ನು ಪಡೆಯಬಹುದು. ನಿಮ್ಮ ಹಣ ನಿರ್ವಹಣಾ ಅಭ್ಯಾಸವನ್ನು ಸಹ ಮುಂದುವರಿಸಿ.
ವೃಷಭ ರಾಶಿ ಆರೋಗ್ಯ ಭವಿಷ್ಯ (Taurus Health Horoscope): ನಿಮ್ಮ ಆಹಾರ ಮತ್ತು ವ್ಯಾಯಾಮದ ದಿನಚರಿಯಲ್ಲಿ ಅಜಾಗರೂಕರಾಗಬೇಡಿ. ಹಠಾತ್ ಆರೋಗ್ಯ ಸಮಸ್ಯೆಗಳು ಉದ್ಭವಿಸಬಹುದು. ನಿಮ್ಮ ಜೀವನದಲ್ಲಿ ಹೊಸ, ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುತ್ತದೆ. ನೀವು ಒತ್ತಡಕ್ಕೆ ಒಳಗಾಗದಿರಲು ಪ್ರಯತ್ನಿಸಬೇಕು.
ವೃಷಭ ರಾಶಿಯವರಿಗೆ ತಿಳಿದಿರಲೇಬೇಕಾದ ಮಾಹಿತಿಯಿದು
ವೃಷಭ ರಾಶಿಗೆ ಅಧಿಪತಿ: ಶುಕ್ರ, ವೃಷಭ ರಾಶಿಯವರಿಗೆ ಶುಭ ದಿನಾಂಕಗಳು: 5, 6, 15, 18, 19, 20, 25, 29. ವೃಷಭ ರಾಶಿಯವರಿಗೆ ಶುಭ ದಿನಗಳು: ಸೋಮವಾರ, ಬುಧವಾರ, ಗುರುವಾರ, ಶುಕ್ರವಾರ ಮತ್ತು ಶನಿವಾರ. ವೃಷಭ ರಾಶಿಯವರಿಗೆ ಶುಭ ಸಂಖ್ಯೆಗಳು: 5, 6, 8. ವೃಷಭ ರಾಶಿಯವರಿಗೆ ಶುಭ ವರ್ಣ: ಪಿಂಕ್, ಹಸಿರು ಮತ್ತು ಬಿಳಿ. ವೃಷಭ ರಾಶಿಯವರಿಗೆ ಅಶುಭ ವರ್ಣ: ಕೆಂಪು ಮತ್ತು ಹಳದಿ. ವೃಷಭ ರಾಶಿಯವರಿಗೆ ಶುಭ ದಿಕ್ಕು: ದಕ್ಷಿಣ ಮತ್ತು ನೈರುತ್ಯ. ವೃಷಭ ರಾಶಿಯವರಿಗೆ ಶುಭ ತಿಂಗಳು: ಜನವರಿ 15 ರಿಂದ ಏಪ್ರಿಲ್15. ವೃಷಭ ರಾಶಿಯವರಿಗೆ ಶುಭ ಹರಳು: ಹಸಿರು ಪಚ್ಚೆ ಮತ್ತು ನೀಲಮಣಿ. ವೃಷಭ ರಾಶಿಯವರಿಗೆ ಶುಭ ರಾಶಿ: ಮಿಥುನ, ಕನ್ಯಾ ಮತ್ತು ಮಕರ. ವೃಷಭ ರಾಶಿಯವರಿಗೆ ಅಶುಭ ರಾಶಿ: ಕಟಕ, ಧನುಸ್ಸು ಮತ್ತು ಮೇಷ.
ವೃಷಭ ರಾಶಿಯವರಿಗೆ ಶುಭಫಲಕ್ಕಾಗಿ ಸರಳ ಪರಿಹಾರಗಳು
1)ಇಂದ್ರಾಕ್ಷಿ ಸ್ತೋತ್ರ: ಪ್ರತಿದಿನ ಶ್ರೀ ಇಂದ್ರಾಕ್ಷಿ ಸ್ತೋತ್ರ ಪಠಿಸುವುದರಿಂದ ಅಥವಾ ಕೇಳಿಸಿಕೊಳ್ಳುವುದರಿಂದ ಆತ್ಮಶಕ್ತಿಯು ಹೆಚ್ಚುತ್ತದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ.
2)ಈ ದಾನಗಳಿಂದ ಶುಭ ಫಲ: ಬಿಳಿಬಣ್ಣದ ಬಟ್ಟೆ ಮತ್ತು ಗೋಧಿ ಅಥವಾ ರವೆಯನ್ನು ದಾನ ನೀಡುವುದರಿಂದ ಖರ್ಚುವೆಚ್ಚಗಳು ಕಡಿಮೆ ಆಗಲಿವೆ.
3)ದೇವಸ್ಥಾನ ಮತ್ತು ದೇವರ ಪೂಜೆ:ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಗೆ ಪಂಚಾಮೃತ ಅಭಿಷೇಕ ಮಾಡಿಸುವುದು ಕ್ಷೇಮಕರ. ಮನೆಯಲ್ಲಿಯೂ ಶ್ರೀ ಸತ್ಯನಾರಾಯಣ ಪೂಜೆ ಮಾಡಬಹುದು. ಹೂ ಬಿಡುವ ಗಿಡಗಳನ್ನು ಪೋಷಿಸಿದಲ್ಲಿ ಎಲ್ಲಾರೀತಿಯ ಸಮಸ್ಯೆಗಳು ದೂರವಾಗುತ್ತವೆ.
4)ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ನೀಲಿ ಮತ್ತು ಹಸಿರು ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.
ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ದೇವಾಲಯಗಳು, ಅಧ್ಯಾತ್ಮ,ದಿನ ಭವಿಷ್ಯ, ಗ್ರಹಗಳ ಸಂಚಾರ,ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ,ಹಬ್ಬ,ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯವಿಭಾಗ ನೋಡಿ.