Tomorrow Horoscope: ಬೇರೆಯವರಿಗೆ ಸಹಾಯ ಮಾಡಲು ಹೋಗಿ ಕಷ್ಟದಲ್ಲಿ ಸಿಲುಕುವಿರಿ, ಆರೋಗ್ಯದಲ್ಲಿ ಚೇತರಿಕೆ; ಸೋಮವಾರದ ರಾಶಿಭವಿಷ್ಯ
Jan 14, 2024 05:30 PM IST
ಸೋಮವಾರದ ರಾಶಿಭವಿಷ್ಯ
- 15 January 2024 Horoscope: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತವೆ. ಇಂದು ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..? ಎಂಬುದನ್ನು ನೋಡೋಣ, ಸೋಮವಾರದ ದಿನಭವಿಷ್ಯ ಹೀಗಿದೆ..
ನಾಳೆಯ ರಾಶಿ ಭವಿಷ್ಯ: ʼನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (Tomorrow Horoscope In Kannada, 15 January 2024)
ತಾಜಾ ಫೋಟೊಗಳು
ನಾಳಿನ ಪಂಚಾಂಗ
ಶ್ರೀ ಶೋಭಕೃತುನಾಮ ಸಂವತ್ಸರ, ಉತ್ತರಾಯನ, ಹೇಮಂತ ಋತು, ಪುಷ್ಯ ಮಾಸ, ಶುಕ್ಲಪಕ್ಷ, ಸೋಮವಾರ
ತಿಥಿ : ಚೌತಿ ಬೆ.09.46 ರವರೆಗು ಇರುತ್ತದೆ. ಆನಂತರ ಪಂಚಮಿ ಆರಂಭವಾಗುತ್ತದೆ.
ನಕ್ಷತ್ರ : ಶತಭಿಷ ನಕ್ಷತ್ರವು ಬೆ.01.02 ರವೆರೆಗು ಇರುತ್ತದೆ. ಆನಂತರ ಪೂರ್ವಾಭಾದ್ರ ನಕ್ಷತ್ರವು ಆರಂಭವಾಗುತ್ತದೆ.
ಸೂರ್ಯೋದಯ: ಬೆ.06.45
ಸೂರ್ಯಾಸ್ತ: ಸ.06.12
ರಾಹುಕಾಲ : ಬೆ.07.30 ರಿಂದ ಬೆ.10.30
ರಾಶಿ ಫಲಗಳು
ಮೇಷ
ಕುಟುಂಬದಲ್ಲಿ ಹೆಚ್ಚಾದ ಕೆಲಸದ ಕಾರಣ ಒತ್ತಡವಿರುತ್ತದೆ. ಹೊರಗಿನ ಪ್ರಪಂಚವನ್ನು ಮರೆತು ಕುಟುಂಬದ ಸದಸ್ಯರ ಜೊತೆ ಸಂತಸದಿಂದ ಬಾಳುವಿರಿ. ಉದ್ಯೋಗದಲ್ಲಿ ಉಂಟಾಗುವ ಅನಿರೀಕ್ಷಿತ ಬೆಳವಣಿಗೆ ಅನುಕೂಲವಾಗಿರುತ್ತದೆ. ಬುದ್ದಿವಂತಿಕೆಯ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಒಳ್ಳೆಯ ಕೆಲಸ ಕಾರ್ಯಗಳಿಗೆ ಹಣವನ್ನು ಖರ್ಚು ಮಾಡುವಿರಿ. ಕ್ರಮೇಣವಾಗಿ ಆದಾಯದಲ್ಲಿ ಏರಿಕೆ ಕಂಡು ಬರುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ದೊರೆಯಲಿದೆ. ವಿದ್ಯಾರ್ಥಿಗಳು ಮಾನಸಿಕ ಒತ್ತಡದಿಂದ ಹೊರಬರಬೇಕು. ಪ್ರತಿಯೊಂದು ವಿಚಾರದಲ್ಲೂ ಆತ್ಮೀಯರ ಸಹಾಯ ಸಹಕಾರ ದೊರೆಯಲಿದೆ. ಅಪೂರ್ವವಾದ ಹಾಸ್ಯಪ್ರಜ್ಞೆ ಉತ್ತಮ ಸಂಬಂಧಗಳನ್ನು ಬೆಸಯುತ್ತವೆ.
ಪರಿಹಾರ: ಮನೆಯಲ್ಲಿರುವ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳಿಗೆ ಹಾಲನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 3
ಅದೃಷ್ಟದ ದಿಕ್ಕು : ಉತ್ತರ
ಅದೃಷ್ಟದ ಬಣ್ಣ: ನೇರಳೆ
ವೃಷಭ
ಕುಟುಂಬದಲ್ಲಿ ಯಾವುದೇ ಬಗೆಯ ಬದಲಾವಣೆಗಳು ಉಂಟಾಗುವುದಿಲ್ಲ. ಪ್ರತಿಯೊಂದು ವಿಚಾರವು ಕುಟುಂಬದ ಹಿರಿಯರನ್ನು ಅವಲಂಬಿಸುತ್ತದೆ. ಸಾಧ್ಯವಾದಷ್ಟು ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸಿ. ಉದ್ಯೋಗದಲ್ಲಿ ನಿರ್ಲಿತ್ತ ಭಾವನೆ ಉಂಟಾದರೂ ಪರಿಸರಕ್ಕೆ ಹೊಂದಿಕೊಳ್ಳುವಿರಿ. ವಿದ್ಯಾರ್ಥಿಗಳು ಮನಸ್ಸನ್ನು ಬದಲಿಸದೆ ಜ್ಞಾನಾರ್ಜನೆಯಲ್ಲಿ ತೊಡಗುತ್ತಾರೆ. ಅನಿರೀಕ್ಷಿತ ಖರ್ಚು ವೆಚ್ಚಗಳು ಎದುರಾಗಲಿವೆ. ಸರಳವಾದ ಜೀವನವನ್ನು ನಡೆಸುವಿರಿ. ಆತ್ಮೀಯ ಸ್ನೇಹಿತರ ಜೊತೆಗೂಡಿ ಸಣ್ಣ ಪ್ರಮಾಣದ ವ್ಯಾಪಾರ ಆರಂಭಿಸಬಹುದು. ನಿಮ್ಮಲ್ಲಿ ಹುದುಗಿರುವ ಪ್ರತಿಭೆಯನ್ನು ಹಲವರು ಗುರುತಿಸುತ್ತಾರೆ. ಯಾರೊಂದಿಗೂ ವಾದ ವಿವಾದದಲ್ಲಿ ತೊಡಗದಿರಿ. ಮನದಲ್ಲಿ ಹೊಸ ಯೋಜನೆಗಳು ರೂಪಿತಗೊಳ್ಳುವಿರಿ.
ಪರಿಹಾರ : ಮಕ್ಕಳಿಗೆ ಗೋಧಿ ಮತ್ತು ಬೆಲ್ಲದಿಂದ ಮಾಡಿದ ಸಿಹಿ ತಿಂಡಿಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ :7
ಅದೃಷ್ಟದ ದಿಕ್ಕು : ಉತ್ತರ
ಅದೃಷ್ಟದ ಬಣ್ಣ : ಗುಲಾಬಿ
ಮಿಥುನ
ದಯೆ ಮತ್ತು ಅನುಕಂಪ ಇರುವ ಕಾರಣ ಕುಟುಂಬದಲ್ಲಿ ಉತ್ತಮ ಬಾಂಧವ್ಯ ಬೆಸೆದಿರುತ್ತದೆ. ಉದ್ಯೋಗದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಿ ಮುಂದುವರೆಯಬೇಕು. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಆದಾಯವಿದ್ದರೂ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಕುಟುಂಬದ ಸದಸ್ಯರಿಂದ ಹಣದ ಸಹಾಯ ದೊರೆಯಲಿದೆ. ಬೇರೆಯವರಿಗೆ ಸಹಾಯ ಮಾಡಲು ಹೋಗಿ ಕಷ್ಟದಲ್ಲಿ ಸಿಲುಕುವ ಸಾಧ್ಯತೆಗಳಿವೆ. ಅನಾವಶ್ಯಕವಾಗಿ ಯಾರ ಮೇಲೂ ಅನಾವಶ್ಯಕವಾಗಿ ಒತ್ತಡ ಹೇರುವುದಿಲ್ಲ. ಬಂದಷ್ಟೇ ವೇಗವಾಗಿ ಕೋಪವು ಮರೆಯಾಗುತ್ತದೆ. ಏಕಾಂಗಿತನವನ್ನು ಬಯಸಿ ದೂರದ ಊರಿಗೆ ಪ್ರಯಾಣ ಬೆಳೆಸುವಿರಿ. ಸರಳವಾದ ಜೀವನವನ್ನು ಬಯಸುವಿರಿ.
ಪರಿಹಾರ : ಎಡಗೈಯಲ್ಲಿ ಬೆಳ್ಳಿ ಉಂಗುರವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 11
ಅದೃಷ್ಟದ ದಿಕ್ಕು : ಈಶಾನ್ಯ
ಅದೃಷ್ಟದ ಬಣ್ಣ: ಬಿಳಿ
ಕಟಕ
ಕುಟುಂಬಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳನ್ನು ಆತುರದಲ್ಲಿ ಪೂರೈಸುವಿರಿ. ಇದರಿಂದಾಗಿ ಜಯ ಅಪಜಯಗಳು ಸಮಾನ ಗತಿಯಲ್ಲಿ ದೊರೆಯಲಿವೆ. ವ್ಯಾಪಾರ ವ್ಯವಹಾರಗಳಲ್ಲಿ ಅನಿರೀಕ್ಷಿತವಾಗಿ ಅನ್ಯರ ಪ್ರಭಾವಕ್ಕೆ ಮಣಿಯ ಬೇಕಾಗುತ್ತದೆ. ಆದರೂ ಸೋಲುವ ಮನಸ್ಸಿರುವುದಿಲ್ಲ. ಗೆಲ್ಲಲು ಹೋರಾಡುವಿರಿ. ವಿದ್ಯಾರ್ಥಿಗಳು ಸ್ವಂತ ನಿರ್ಧಾರಗಳಿಗೆ ಬದ್ಧವಾದರೆ ಯಾವುದೇ ತೊಂದರೆ ಎದುರಾಗದು. ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಆತ್ಮೀಯರೊಬ್ಬರು ತಪ್ಪು ತಿಳುವಳಿಕೆಯಿಂದ ದೂರ ಉಳಿಯುತ್ತಾರೆ. ಆತ್ಮೀಯರಿಗೆ ನೀಡಿದ ಸಹಾಯಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ನಿರಾಸೆಗೆ ಸೊರಗುವುದಿಲ್ಲ. ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಕಾಣುವಿರಿ. ಲೇವಾದೇವಿ ವ್ಯವಹಾರದಲ್ಲಿ ಎಚ್ಚರಿಕೆ ಇರಬೇಕು.
ಪರಿಹಾರ : ಸಾಧು ಸಂತರ ಆಶೀರ್ವಾದವನ್ನು ಪಡೆದು ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 3
ಅದೃಷ್ಟದ ದಿಕ್ಕು : ದಕ್ಷಿಣ
ಅದೃಷ್ಟದ ಬಣ್ಣ: ಬೂದು
ಸಿಂಹ
ಹೆಚ್ಚಿನ ಆತ್ಮಾಭಿಮಾನದ ಕಾರಣ ಮನದ ಭಾವನೆಗಳಿಗೆ ಬೆಲೆ ದೊರೆಯುವುದಿಲ್ಲ. ಸಾಧ್ಯವಾದಷ್ಟು ಧೈರ್ಯ ಸಾಹಸದ ಗುಣವನ್ನು ಬೆಳೆಸಿಕೊಳ್ಳಿರಿ. ಆರೋಗ್ಯದ ಸಮಸ್ಯೆ ಕಂಡು ಬರುತ್ತದೆ. ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಕಾಣುವಿರಿ. ಉದ್ಯೋಗದಲ್ಲಿ ನೀವು ತೆಗೆದುಕೊಳ್ಳುವ ತೀರ್ಮಾನಗಳೇ ಅಂತಿಮವಾಗುತ್ತದೆ. ಯಾವುದೇ ಬದಲಾವಣೆಗಳನ್ನು ಸುಲಭವಾಗಿ ಅರಗಿಸಿಕೊಳ್ಳುವುದಿಲ್ಲ. ವ್ಯಾಪಾರ ವ್ಯವಹಾರಗಳು ತಟಸ್ಥವಾಗಲಿವೆ. ಚಿಕ್ಕ ಪುಟ್ಟ ಕೆಲಸಗಳಿಗೂ ಹೆಚ್ಚಿನ ಪ್ರಯತ್ನ ಬೇಕಾಗಬಹುದು. ವಿದ್ಯಾರ್ಥಿಗಳು ಪದೇಪದೇ ತಮ್ಮ ನಿಲುವನ್ನು ಬದಲಾಯಿಸುತ್ತಾರೆ. ದೈನಂದಿನ ಜೀವನದಲ್ಲಿ ಭವ್ಯ ಅವಕಾಶವೊಂದು ದೊರೆಯುತ್ತದೆ. ಆಹಾರ ಸೇವನೆಯಲ್ಲಿ ಶಿಸ್ತಿನ ಅವಶ್ಯಕತೆ ಇರುತ್ತದೆ.
ಪರಿಹಾರ : ಬೇವಿನ ಮರಕ್ಕೆ ನೀರನ್ನು ಹಾಕಿ ದಿನದ ಕೆಲಸವನ್ನು ಆರಂಭಿಸುವುದು.
ಅದೃಷ್ಟದ ಸಂಖ್ಯೆ : 1
ಅದೃಷ್ಟದ ದಿಕ್ಕು : ಪೂರ್ವ
ಅದೃಷ್ಟದ ಬಣ್ಣ: ಕಂದು ಬಣ್ಣ
ಕನ್ಯಾ
ಕುಟುಂಬದ ಶಾಂತಿ ನೆಮ್ಮದಿ ಕಡಿಮೆಯಾಗಬಹುದು. ಕೊಂಚವು ಯೋಚಿಸದೆ ಮನಬಂದಂತೆ ಮಾತನಾಡುವ ಕಾರಣ ವಿವಾದ ಒಂದನ್ನು ಎದುರಿಸಬೇಕಾಗುತ್ತದೆ. ವ್ಯಾಪಾರದಲ್ಲಿ ಸಾಲದ ವ್ಯವಹಾರ ಒಳ್ಳೆಯದಲ್ಲ. ವಿದ್ಯಾರ್ಥಿಗಳು ಸಹಪಾಠಿಗಳ ಸಹಯೋಗದಲ್ಲಿ ಕಲಿಕೆಯನ್ನು ಮುಂದುವರೆಸುತ್ತಾರೆ. ಹಣಕಾಸಿನ ಕೊರತೆ ಕಂಡು ಬರುತ್ತದೆ. ಎದುರಾಗುವ ಕಷ್ಟ ನಷ್ಟಗಳನ್ನು ಎದುರಿಸುವಿರಿ. ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಬಹುದಿನದ ಹಿಂದೆ ರೂಪಿತವಾದ ಯೋಜನೆಯಂದನ್ನು ಕೈ ಬಿಡುವಿರಿ. ಸ್ವಂತ ಖರ್ಚು ವೆಚ್ಚಕ್ಕಿಂತ ಬೇರೆಯವರಿಗೆ ಖರ್ಚು ಮಾಡುವುದೇ ಹೆಚ್ಚು. ಸಾರಿಗೆ ವ್ಯವಸ್ಥೆ ಕಲ್ಪಿಸುವ ಸಂಸ್ಥೆ ಆರಂಭಿಸುವ ಅಭಿಪ್ರಾಯ ಇರುತ್ತದೆ. ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ.
ಪರಿಹಾರ: ಒಣಗಿದ ಗಿಡಗಳನ್ನು ವಿಲೇವಾರಿ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 5
ಅದೃಷ್ಟದ ದಿಕ್ಕು : ನೈರುತ್ಯ
ಅದೃಷ್ಟದ ಬಣ್ಣ: ಕಪ್ಪು
ತುಲಾ
ನಿಧಾನಗತಿಯ ಕೆಲಸ ಕಾರ್ಯಗಳು ಲಾಭದಾಯಕವಾಗಿರುತ್ತದೆ. ಕುಟುಂಬದಲ್ಲಿ ಹೊಸ ಕೆಲಸ ಕಾರ್ಯಗಳು ಆರಂಭವಾಗಲಿವೆ. ಕೌಟುಂಬಿಕ ಜೀವನದ ಸಮಸ್ಯೆಯೊಂದು ದೂರವಾಗಲಿದೆ. ಮಾನಸಿಕ ಒತ್ತಡವಿರುತ್ತದೆ. ಹೊಸ ಹಣಕಾಸಿನ ಯೋಜನೆಗಳಲ್ಲಿ ಹಣವನ್ನು ಹೂಡುವಿರಿ. ವ್ಯಾಪಾರ ವ್ಯವಹಾರಗಳು ಯಾವುದೇ ಅಡ್ಡಿ ಆತಂಕವಿಲ್ಲದೆ ಸಾಗುತ್ತವೆ. ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ವಿವಿಧ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಆತ್ಮೀಯರ ಕೆಲಸ ಕಾರ್ಯಗಳಿಗೆ ಸಹಾಯ ಮಾಡುವಿರಿ. ಯಾವುದೇ ಬೇಧಭಾವವಿಲ್ಲದೆ ಎಲ್ಲರನ್ನೂ ಗೌರವಿಸುವ ಕಾರಣವಿಶೇಷ ಬದಲಾವಣೆಗಳನ್ನು ಎದುರುನೋಡಬಹುದು. ಸುಲಭವಾಗಿ ಯಾರನ್ನು ನಂಬದೇ ಸ್ವಂತ ನಿರ್ಧಾರಗಳ ಮೇಲೆ ಅವಲಂಬಿತವಾಗುವಿರಿ.
ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ಅಕ್ಕಿ ಬೆಳೆಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 11
ಅದೃಷ್ಟದ ದಿಕ್ಕು : ಪೂರ್ವ
ಅದೃಷ್ಟದ ಬಣ್ಣ: ತಿಳಿ ಹಸಿರು
ವೃಶ್ಚಿಕ
ಉದರ ಶೂಲೆ (ಹೊಟ್ಟೆ ನೋವು) ಬಹುವಾಗಿ ಕಾಡುತ್ತದೆ. ಕುಟುಂಬದಲ್ಲಿ ಅನಾವಶ್ಯಕ ವಾದ ವಿವಾದಗಳು ತಲೆದೋರುತ್ತವೆ. ಉದ್ಯೋಗದಲ್ಲಿ ಯಾವುದೇ ಬದಲಾವಣೆಗಳು ಕಾಣಸಿಗದು. ಅವಶ್ಯಕತೆ ಇದ್ದಲ್ಲಿ ಸಹೋದ್ಯೋಗಿಗಳ ಸಹಾಯದಿಂದ ಉದ್ಯೋಗವನ್ನು ಬದಲಾಯಿಸುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಆದಾಯಕ್ಕೆ ಕೊರತೆ ಇರುವುದಿಲ್ಲ. ವಿದ್ಯಾರ್ಥಿಗಳು ಅವಶ್ಯಕತೆ ಇದ್ದಲ್ಲಿ ಬೇರೆಯವರ ಅಭಿಪ್ರಾಯವನ್ನು ಒಪ್ಪಬೇಕು. ವಿದೇಶಿ ಭಾಷೆಯನ್ನು ಅಭ್ಯಾಸ ಮಾಡುತ್ತಿರುವವರಿಗೆ ಉತ್ತಮ ಅವಕಾಶ ದೊರೆಯಲಿದೆ. ಮಕ್ಕಳೊಂದಿಗೆ ಸಂತಸದಿಂದ ಇರುವಿರಿ. ಸಂಗಾತಿಯೊಂದಿಗೆ ಅನಾವಶ್ಯಕ ವಾದ ವಿವಾದ ಇರುತ್ತದೆ. ಜೀವನದಲ್ಲಿ ನಡೆಯುವ ಸವಿಯಾದ ನೆನಪುಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವಿರಿ. ಹಣದ ಕೊರತೆ ಕಂಡು ಬರುತ್ತದೆ.
ಪರಿಹಾರ : ಪಕ್ಷಿಗಳಿಗೆ ಆಹಾರ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 5
ಅದೃಷ್ಟದ ದಿಕ್ಕು : ದಕ್ಷಿಣ
ಅದೃಷ್ಟದ ಬಣ್ಣ: ನಸುಗೆಂಪು
ಧನಸ್ಸು
ಬಿಡುವಿಲ್ಲದ ಕೆಲಸ ಬೇಸರವನ್ನು ಉಂಟು ಮಾಡುತ್ತದೆ. ಸಾಧ್ಯವಾದಷ್ಟು ವಿಶ್ರಾಂತಿಯನ್ನು ತೆಗೆದುಕೊಳ್ಳಿರಿ. ಅನಾವಶ್ಯಕವಾಗಿ ತೆಗೆದುಕೊಂಡ ತೀರ್ಮಾನಗಳನ್ನು ಬದಲಾಯಿಸುವಿರಿ. ಎದುರಾಗುವ ಸವಾಲುಗಳನ್ನು ಎದುರಿಸಿ ಗೆಲ್ಲಲ್ಲು ಪ್ರಯತ್ನಿಸುವಿರಿ. ಕುಟುಂಬದಲ್ಲಿ ಒಗ್ಗಟ್ಟಿನ ಕೊರತೆ ಇರುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ ಉಂಟಾಗದು. ವಿದ್ಯಾರ್ಥಿಗಳು ಸಭೆ ಸಮಾರಂಭಗಳಿಂದ ದೂರವಿದ್ದು ಕಲಿಕೆಯಲ್ಲಿ ಮುಂದುವರೆಯುತ್ತಾರೆ. ಕುಟುಂಬದ ವಿಚಾರಗಳು ಯಶಸ್ವಿಯಾಗಲು ಎಲ್ಲರ ವಿಶ್ವಾಸವನ್ನು ಗಳಿಸಿ. ಅಪೂರ್ಣಗೊಂಡ ಹಲವು ಕಾರ್ಯಗಳು ಯಶಸ್ಸನ್ನು ಗಳಿಸುತ್ತದೆ. ಆರೋಗ್ಯದ ಬಗ್ಗೆ ಗಮನವಿರಲಿ. ಆತ್ಮೀಯರ ಸಂಪರ್ಕದಿಂದ ಮನಸ್ಸಿನಲ್ಲಿ ಶಾಂತಿ ನೆಮ್ಮದಿ ದೊರೆಯುತ್ತದೆ. ತೆಗೆದುಕೊಂಡ ತೀರ್ಮಾನಗಳನ್ನು ಅನಗತ್ಯವಾಗಿ ಬದಲಾಯಿಸದಿರಿ.
ಪರಿಹಾರ : ಕೊರಳಿನಲ್ಲಿ ತಾಮ್ರದ ನಾಣ್ಯವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ : 9
ಅದೃಷ್ಟದ ದಿಕ್ಕು : ನೈರುತ್ಯ
ಅದೃಷ್ಟದ ಬಣ್ಣ: ನೀಲಿ ಮಿಶ್ರಿತ ಬಿಳಿ
ಮಕರ
ಒಳ್ಳೆಯ ಮನೋಭಾವನೆಯಿಂದ ಕೆಲಸವನ್ನು ಆರಂಭಿಸಿದರೆ ಯಶಸ್ಸು ದೊರೆಯುತ್ತದೆ. ಅನಾವಶ್ಯಕ ಮಾತುಕತೆ ಕುಟುಂಬದಲ್ಲಿ ಬೇಸರವನ್ನು ಉಂಟುಮಾಡುತ್ತದೆ. ಮೌನದಿಂದ ಎಲ್ಲವನ್ನು ಸಹಿಸಿಕೊಳ್ಳಲೇ ಬೇಕಾಗುತ್ತದೆ. ಕುಟುಂಬದ ಹಿರಿಯರ ಸಹಕಾರ ದೊರೆಯುತ್ತದೆ. ದೈಹಿಕ ವ್ಯಾಯಾಮದಿಂದ ಉತ್ತಮ ಆರೋಗ್ಯ ಗಳಿಸುವಿರಿ.ವಿದ್ಯಾರ್ಥಿಗಳು ಹೆಚ್ಚಿನ ಕಲಿಕೆಗಾಗಿ ವಿದೇಶಕ್ಕೆ ತೆರಳಬಹುದು. ಉದ್ಯೋಗದಲ್ಲಿ ಯಾವುದೇ ಬದಲಾವಣೆಗಳು ಉಂಟಾಗುವುದಿಲ್ಲ .ಹೊಸ ನಿರೀಕ್ಷೆಯೊಂದಿಗೆ ಉದ್ಯೋಗ ಬದಲಿಸ ಬಹುದು. ಅತಿಯಾದ ಆಸೆ ಇರುವುದಿಲ್ಲ. ಹಣಕಾಸಿನ ವ್ಯವಹಾರದಲ್ಲಿ ಅನಿರೀಕ್ಷಿತ ದಿನಾ ಲಾಭವಿರುತ್ತದೆ. ಕೈಕಾಲುಗಳಿಗೆ ಪೆಟ್ಟಾಗುವ ಸಾಧ್ಯತೆಗಳು ಕಂಡುಬರುತ್ತವೆ.
ಪರಿಹಾರ : ಅರಳಿ ಮರಕ್ಕೆ ನೀರನ್ನು ಹಾಕಿ ದಿನದ ಕೆಲಸವನ್ನು ಆರಂಭಿಸಿ.
ಅದೃಷ್ಟದ ಸಂಖ್ಯೆ : 1
ಅದೃಷ್ಟದ ದಿಕ್ಕು : ಪಶ್ಚಿಮ
ಅದೃಷ್ಟದ ಬಣ್ಣ: ಹಾಲಿನ ಬಣ್ಣ
ಕುಂಭ
ಕುಟುಂಬದಲ್ಲಿ ಆಂತರಿಕ ಕಲಹ ಉಂಟಾಗಬಹುದು. ಕೇವಲ ಕ್ಷಮಾ ಗುಣದಿಂದ ಮಾತ್ರ ನೆಮ್ಮದಿ ಕಾಣಲು ಸಾಧ್ಯ. ಉದ್ಯೋಗದಲ್ಲಿ ಸ್ವಂತ ಕೆಲಸ ಕಾರ್ಯಗಳಿಗೆ ಮೊದಲ ಆದ್ಯತೆ ನೀಡುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಆದಾಯಕ್ಕೆ ಕೊರತೆ ಇರುವುದಿಲ್ಲ. ಹಣಕಾಸಿನ ಪರಿಸ್ಥಿತಿಯನ್ನು ಯಾರಿಗೂ ಹೇಳುವುದಿಲ್ಲ .ವಿದ್ಯಾರ್ಥಿಗಳ ಜೀವನದಲ್ಲಿ ಯಾವುದೇ ಬದಲಾವಣೆಗಳು ಕಂಡು ಬರುವುದಿಲ್ಲ. ದಾಂಪತ್ಯದಲ್ಲಿ ವಿವಾದವೊಂದು ಎದುರಾಗಬಹುದು. ಆರೋಗ್ಯವನ್ನು ಸೂಕ್ಷ್ಮವಾಗಿ ಗಮನಿಸಿ. ಅವಿವಾಹಿತರಿಗೆ ಹಿರಿಯ ಸೋದರನ ಸಹಾಯದಿಂದ ವಿವಾಹ ನಿಶ್ಚಯವಾಗುತ್ತದೆ. ಪ್ರಯಾಣ ಮಾಡುವ ವೇಳೆ ಅಮೂಲ್ಯ ವಸ್ತುವನ್ನು ಕಳೆದು ಹೋಗಬಹುದು ಎಚ್ಚರಿಕೆ ಇರಲಿ.
ಪರಿಹಾರ : ಮನೆಯಲ್ಲಿರುವ ಪೂಜಾ ಸ್ಥಳವನ್ನು ಶುಚಿಗೊಳಿಸಿ ದಿನದ ಕೆಲಸವನ್ನು ಆರಂಭಿಸಿ.
ಅದೃಷ್ಟದ ಸಂಖ್ಯೆ :5
ಅದೃಷ್ಟದ ದಿಕ್ಕು : ಈಶಾನ್ಯ
ಅದೃಷ್ಟದ ಬಣ್ಣ: ಆಕಾಶ ನೀಲಿ
ಮೀನ
ಕುಟುಂಬದಲ್ಲಿ ಆನಂದದ ವಾತಾವರಣ ನೆಲೆಸಿರುತ್ತದೆ. ಉದ್ಯೋಗದಲ್ಲಿ ಗಡಿಬಿಡಿಯ ವಾತಾವರಣ ಉಂಟಾಗಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ಹಣದ ಕೊರತೆ ಕಾಣದು. ಸಾಧ್ಯವಾದಷ್ಟು ದೃಢ ಚಿತ್ತದಿಂದ ತೀರ್ಮಾನಗಳನ್ನು ಕೈಗೊಳ್ಳಿರಿ. ವಿದ್ಯಾರ್ಥಿಗಳು ಒತ್ತಡದ ನಡುವೆಯೂ ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆ ಮಾಡುತ್ತಾರೆ. ದುಡುಕಿನಿಂದ ಮಾತಾಡಬೇಡಿ. ವೈವಾಹಿಕ ಜೀವನದಲ್ಲಿ ಧನಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಮನದಲ್ಲಿರುವ ವಿಚಾರವನ್ನು ಮುಚ್ಚಿಟ್ಟು ಸಮಯಕ್ಕೆ ತಕ್ಕಂತೆ ವರ್ತಿಸುವಿರಿ. ಗರ್ಭಿಣಿಯರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳಬೇಕು. ನೀರಿರುವ ಪ್ರದೇಶದಲ್ಲಿ ತೊಂದರೆಯನ್ನು ಎದುರಿಸಬೇಕು. ಮನಸ್ಸಿಲ್ಲದೆ ಹೋದರೂ ಆತ್ಮೀಯರಿಂದ ಸಾಲವಾಗಿ ಹಣವನ್ನು ಪಡೆಯುವಿರಿ.
ಪರಿಹಾರ : ಮನೆಯ ಮುಂದಿರುವ ಹಳ್ಳಗಳನ್ನು ಮುಚ್ಚಿ ದಿನದ ಕೆಲಸವನ್ನು ಆರಂಭಿಸಿ.
ಅದೃಷ್ಟದ ಸಂಖ್ಯೆ : 9
ಅದೃಷ್ಟದ ದಿಕ್ಕು : ಪೂರ್ವ
ಅದೃಷ್ಟದ ಬಣ್ಣ: ಹಸಿರು ಬಣ್ಣ
--------------
ಜ್ಯೋತಿಷಿ: ಎಚ್. ಸತೀಶ್, ಬೆಂಗಳೂರು
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).