Hug Day: ಜನ್ಮ ರಾಶಿ ಪ್ರಕಾರ ನೀವು ಯಾವ ರೀತಿ ಅಪ್ಪಿಕೊಂಡ್ರೆ ನಿಮ್ಮ ಸಂಗಾತಿಗೆ ಇಷ್ಟ ಆಗುತ್ತೆ ನೋಡಿ; ಆಲಿಂಗನದ ಆಲಾಪ
Feb 12, 2024 03:16 PM IST
ಜನ್ಮ ರಾಶಿ ಪ್ರಕಾರ ನೀವು ಯಾವ ರೀತಿ ಅಪ್ಪಿಕೊಂಡ್ರೆ ನಿಮ್ಮ ಸಂಗಾತಿಗೆ ಇಷ್ಟ ಆಗುತ್ತೆ ನೋಡಿ
- ನಮ್ಮ ಆತ್ಮೀಯರ ಒಂದು ಬೆಚ್ಚನೆಯ ಅಪ್ಪುಗೆಯು ನಮ್ಮೊಳಗಿನ ಅದೆಷ್ಟೋ ನೋವುಗಳಿಗೆ ಸಾಂತ್ವನ ಹೇಳುವ ಶಕ್ತಿ ಹೊಂದಿರುತ್ತದೆ. ಇದು ಪ್ರೀತಿ ವ್ಯಕ್ತಪಡಿಸುವ ಸಂಕೇತವೂ ಹೌದು. ಹಗ್ ಡೇಯಂದು ರಾಶಿಗೆ ಅನುಗುಣವಾಗಿ ನಿಮ್ಮ ಸಂಗಾತಿಯನ್ನು ನೀವು ಯಾವ ರೀತಿ ಅಪ್ಪಿಕೊಂಡ್ರೆ ಅವರಿಗೆ ಇಷ್ಟ ಆಗುತ್ತೆ ಎಂಬುದನ್ನು ತಿಳಿಯಿರಿ.
ಪ್ರೀತಿಯನ್ನು ಅಭಿವ್ಯಕ್ತಿಸುವ ಭಾವದಲ್ಲಿ ಅಪ್ಪುಗೆ ಕೂಡ ಒಂದು. ಅಪ್ಪುಗೆ ಎನ್ನುವುದು ತಾಯಿಯ ಮಡಿಲಿನಲ್ಲಿ ಇರುವ ಕ್ಷಣದಿಂದಲೇ ನಮ್ಮನ್ನು ಆವರಿಸಿರುತ್ತದೆ. ಬೆಚ್ಚನೆಯ ಅಪ್ಪುಗೆಯಲ್ಲಿ ನೋವು ಮರೆಸುವ ಶಕ್ತಿ ಇದೆ. ಇದು ಪ್ರೀತಿಯ ಭಾವವನ್ನು ವ್ಯಕ್ತಪಡಿಸುವ ಮಾರ್ಗವೂ ಹೌದು. ಇಂದು ಹಗ್ ಡೇ. ಪ್ರತಿವರ್ಷ ಫೆ. 12 ರಂದು ಹಗ್ ಡೇ ಆಚರಿಸಲಾಗುತ್ತದೆ. ಈ ವರ್ಷದ ಹಗ್ ಡೇಯಂದು ರಾಶಿಗೆ ಅನುಗುಣವಾಗಿ ಯಾರು ಯಾವ ರೀತಿಯ ಅಪ್ಪುಗೆ ಬಯಸುತ್ತಾರೆ ಎಂಬುದನ್ನು ನೋಡೋಣ.
ತಾಜಾ ಫೋಟೊಗಳು
ಒಂದು ಅಪ್ಪುಗೆಯು ಸಂಬಂಧವನ್ನು ಬಿಗಿಗೊಳಿಸಬಹುದು, ಅದೇ ಒಂದು ಅಪ್ಪುಗೆಯು ಸಂಬಂಧವನ್ನು ಹಾಳು ಕೂಡ ಮಾಡಬಹುದು. ಈ ಅಪ್ಪುಗೆ ಎನ್ನುವುದು ದೇಹಕ್ಕೆ ಮಾತ್ರವಲ್ಲ, ಮನಸ್ಸಿಗೂ ಸಂಬಂಧಿಸಿದ್ದು ಎನ್ನುವುದು ಮರೆಯುವಂತಿಲ್ಲ.
ಮೇಷ
ಮೇಷ ರಾಶಿಯವರು ಸದಾ ಉತ್ಸಾಹದಿಂದ ಇರುವ ಗುಣದವರು. ಇವರು ಪ್ರೀತಿಯಲ್ಲಿ ಸಾಕಷ್ಟು ನಿರೀಕ್ಷೆ ಮಾಡುತ್ತಾರೆ. ಈ ರಾಶಿಯವರು ತಮ್ಮ ಸಂಗಾತಿಯ ಬೆಚ್ಚಗಿನ, ಗಟ್ಟಿಯಾದ ಅಪ್ಪುಗೆಯನ್ನು ಬಯಸುತ್ತಾರೆ. ಅನಿರೀಕ್ಷಿತ ಅಪ್ಪುಗೆ ಈ ರಾಶಿಯವರಿಗೆ ಖುಷಿ ನೀಡುತ್ತದೆ.
ವೃಷಭ
ತಂಪಾದ ರಾತ್ರಿಯಲ್ಲಿ ಬೆಚ್ಚನೆಯ ಅಪ್ಪುಗೆ ನೀಡುವ ಅನುಭೂತಿಯಂತಹ ಅನುಭವ ಈ ರಾಶಿಯವರಿಗೆ ಇಷ್ಟವಾಗುತ್ತದೆ. ಆದರೆ ಇವರು ಯಾವಾಗಲೂ ಅಪ್ಪುಗೆಯನ್ನು ಇಷ್ಟಪಡುವವರಲ್ಲ. ಸಂಬಂಧದಲ್ಲಿ ಆಳವಾಗಿ ಇಳಿದ ನಂತರವಷ್ಟೇ ಇವರನ್ನು ಹಗ್ ಮಾಡಿದರೆ ಇವರಿಗೆ ಇಷ್ಟವಾಗುತ್ತದೆ. ನಿಧಾನಕ್ಕೆ ಅವರ ಜೊತೆ ಸಂಪೂರ್ಣ ಆತ್ಮೀಯ ಭಾವ ಬೆಳೆದ ಮೇಲಷ್ಟೇ ಇವರು ಅಪ್ಪುಗೆಯನ್ನು ಆನಂದಿಸುತ್ತಾರೆ.
ಮಿಥುನ ರಾಶಿ
ಮಿಥುನ ರಾಶಿಯವರು ಸದಾ ನಗುತ್ತಿರುವ ಹಾಗೂ ಕ್ವಾಲಿಟಿ ಟೈಮ್ ಕಳೆಯಲು ಇಷ್ಟಪಡುವಂತವರು. ಇವರು ಚಿಕ್ಕ ಅಪ್ಪುಗೆ ನೀಡಿದರೂ ಅದು ಮಹತ್ವದ್ದಾಗಿರುತ್ತದೆ. ಇವರು ಅಪ್ಪುಗೆಯನ್ನು ಅಷ್ಟೊಂದು ಮಹತ್ವದ್ದು ಎಂದು ಸ್ವೀಕರಿಸುವುದಿಲ್ಲ.
ಕಟಕ
ಇವರು ಪ್ರೇಮವನ್ನು ಭಾವನಾತ್ಮಕ ಸಂಬಂಧದಲ್ಲಿ ತೂಗುವವರು. ಇವರಿಗೆ ಕಾಳಜಿ ಮಾಡುವವರೆಂದರೆ ಇಷ್ಟ. ಕಾಳಜಿಯಿಂದ ಕೂಡಿರುವ ಭಾವಾನಾತ್ಮಕ ಭದ್ರತೆಯ ಅಪ್ಪುಗೆಯು ಇವರಿಗೆ ಬಹಳ ಇಷ್ಟವಾಗುತ್ತದೆ. ಇವರಿಗೆ ಆತ್ಮೀಯರನ್ನು ಅಪ್ಪಿಕೊಳ್ಳುವುದು ಹಾಗೂ ಬೇರೆಯವರು ಇವರನ್ನು ಅಪ್ಪಿಕೊಳ್ಳುವುದು ಎರಡೂ ಇಷ್ಟವಾಗುತ್ತದೆ. ಆಲಿಂಗನದ ಅನುಭವನವನ್ನು ಎಂಜಾಯ್ ಮಾಡುವ ರಾಶಿಯವರಿವರು.
ಸಿಂಹ
ಈ ರಾಶಿಯವರು ನಾಟಕೀಯ ಮನೋಭಾವದವರು. ಆದರೂ ಇವರಲ್ಲಿ ಉದ್ದೇಶ ಚೆನ್ನಾಗಿರುತ್ತದೆ. ಕೆಲವೊಮ್ಮೆ ಇವರು ಅಪ್ಪಿಕೊಳ್ಳುವ ರೀತಿ ಅತಿ ರಂಜಿತ ಎನ್ನಿಸುತ್ತದೆ. ಆದರೆ ಅದರಲ್ಲಿ ಪ್ರೀತಿ ತುಂಬಿರುವುದು ಮಾತ್ರ ಸುಳ್ಳಲ್ಲ. ಸಿಂಹ ರಾಶಿಯವರು ಪ್ರೀತಿ ಪಾತ್ರರಾಗಬೇಕು ಅಂದ್ರೆ ನಾಟಕೀಯ ಹಾಗೂ ಭಾವನತ್ಮಕ ಎರಡೂ ರೀತಿ ಆಲಿಂಗನವನ್ನು ನೀಡಬೇಕು.
ಕನ್ಯಾ
ಕನ್ಯಾ ರಾಶಿಯವರು ಮೃದುವಾದ, ಪ್ರೀತಿ ತುಂಬಿದ ಅಪ್ಪುಗೆಯನ್ನು ಇಷ್ಟಪಡುತ್ತಾರೆ. ಆದರೆ ಇವರನ್ನು ಅಪ್ಪಿಕೊಳ್ಳುವ ಮುನ್ನ ಕೆಲವು ಸೂಕ್ಷ್ಮಗಳನ್ನು ಗಮನಿಸಬೇಕು. ಹಿತವಾದ ಪ್ರೀತಿಯ ಅಪ್ಪುಗೆಯು ಈ ರಾಶಿಯವರಿಗೆ ನಿಮ್ಮ ಮೇಲೆ ಪ್ರೀತಿ ಹೆಚ್ಚುವಂತೆ ಮಾಡುತ್ತದೆ.
ತುಲಾ ರಾಶಿ
ಈ ರಾಶಿಯವರು ಸಮತೋಲನ ಹಾಗೂ ಸಾಮರಸ್ಯಕ್ಕೆ ಆದ್ಯತೆ ನೀಡುತ್ತಾರೆ. ತಮ್ಮ ಆದ್ಯತೆಗಳಿಗೆ ಅನುಗುಣವಾದ ಅಪ್ಪುಗೆಯನ್ನು ಇವರು ಬಯಸುತ್ತಾರೆ. ಪ್ರೀತಿಯೊಂದಿಗೆ ಒಪ್ಪಿಗೆಯ ಅಪ್ಪುಗೆ ಇವರಿಗೆ ಇಷ್ಟ.
ವೃಶ್ಚಿಕ ರಾಶಿ
ಇವರು ಪ್ರೀತಿಯನ್ನು ಮೊಗೆದು ಕೊಡುವವರು. ಇವರ ಅಪ್ಪುಗೆಯಲ್ಲಿ ಆತ್ಮೀಯ ಭಾವ ಉಕ್ಕಿ ಹರಿಯುತ್ತದೆ. ಇದು ವ್ಯಕ್ತಿಗಳಿಬ್ಬರ ನಡುವಿನ ಭಾವನಾತ್ಮಕ ಸಂಬಂಧ ವೃದ್ಧಿಗೆ ಕೊಂಡಿಯಾಗುತ್ತದೆ. ಪದಗಳಲ್ಲಿ ವಿವರಿಸಲಾಗದ್ದನ್ನೂ ಅಪ್ಪಿಕೊಂಡು ತಿಳಿಸಿದರೆ ಈ ರಾಶಿಯವರಿಗೆ ಇಷ್ಟವಾಗುತ್ತದೆ.
ಧನು ರಾಶಿ
ಈ ರಾಶಿಯವರು ಸರ್ಪ್ರೈಸ್ ಅನ್ನು ಇಷ್ಟಪಡುತ್ತಾರೆ. ಇದ್ದಕ್ಕಿದ್ದಂತೆ ಇವರಿಷ್ಟದ ವ್ಯಕ್ತಿ ಇವರನ್ನು ತಬ್ಬಿಕೊಂಡರೆ ಇವರಿಗೆ ಇಷ್ಟವಾಗುತ್ತದೆ. ದೀರ್ಘ ಆಲಿಂಗನ ಈ ರಾಶಿಯವರಿಗೆ ಇಷ್ಟ.
ಮಕರ
ಮಕರ ರಾಶಿಯವರಿಗೆ ದೃಢತೆ ಹಾಗೂ ವಿಶ್ವಾಸಾರ್ಹತೆ ಮುಖ್ಯ. ಇವರು ನಂಬಿಕೆಗೆ ಪ್ರಾಮುಖ್ಯ ಕೊಡುವ ಕಾರಣ, ಭದ್ರತೆಯ ಬಗ್ಗೆಯೂ ಯೋಚಿಸುತ್ತಾರೆ. ಈ ರಾಶಿಯವರನ್ನು ಅಪ್ಪಿಕೊಳ್ಳುವ ಮುನ್ನ ವಿಶ್ವಾಸಾರ್ಹವಾಗಿ ಇರುವುದು ಮುಖ್ಯವಾಗುತ್ತದೆ.
ಕುಂಭ
ಅವರಿಗೆ ಕಲ್ಪನಾತೀತ ಅಪ್ಪುಗೆಯು ಹೆಚ್ಚು ಇಷ್ಟವಾಗುತ್ತದೆ. ಪ್ರಶಂಸಿಸುವ ರೀತಿಯ ಅಪ್ಪುಗೆ ನೀಡಿದರೆ ಇವರು ಖುಷಿಯಿಂದ ಉಬ್ಬಿ ಹೋಗುತ್ತಾರೆ.
ಮೀನ
ಇವರು ಮೃದು ಮನಸ್ಸಿಗೆ ಸ್ವಪ್ನಜೀವಿಗಳು. ಇವರು ಯಾರನ್ನೇ ಅಪ್ಪಿಕೊಂಡರೂ ಅಲ್ಲಿ ದಯೆ ಹಾಗೂ ಸಹಾನುಭೂತಿ ವ್ಯಕ್ತಪಡಿಸುತ್ತಾರೆ. ಇವರ ಆಲಿಂಗನದ ಅನುಭೂತಿ ಬಹಳ ದಿನಗಳವರೆಗೆ ಇರುತ್ತದೆ. ದೀರ್ಘ ಅಪ್ಪುಗೆಯನ್ನು ಈ ರಾಶಿಯವರು ಇಷ್ಟಪಡುತ್ತಾರೆ. ಅಪ್ಪುಗೆಯ ಮೂಲಕ ನಿಮ್ಮ ಭಾವನೆಗಳನ್ನು ಅವರೊಂದಿಗೆ ಹಂಚಿಕೊಳ್ಳಿ.
ವಿಭಾಗ