Vasant Panchami 2024: ಮಾಲ್ಪುವಾ, ರಾಜ್‌ಭೋಗ್ ಸೇರಿದಂತೆ ವಸಂತ ಪಂಚಮಿಗೆ ತಯಾರಿಸಬಹುದಾದ ನೈವೇದ್ಯಗಳಿವು
Feb 13, 2024 02:41 PM IST
ಮಾಲ್ಪುವಾ, ರಾಜ್‌ಭೋಗ್ ಸೇರಿದಂತೆ ವಸಂತ ಪಂಚಮಿಗೆ ತಯಾರಿಸಬಹುದಾದ ನೈವೇದ್ಯಗಳಿವು
Vasant Panchami 2024: ನಾಳೆ (ಫೆ 14) ದೇಶಾದ್ಯಂತ ವಸಂತ ಪಂಚಮಿ ಆಚರಿಸಲಾಗುತ್ತಿದೆ. ಸರಸ್ವತಿ ದೇವಿಯನ್ನು ಆರಾಧಿಸುವ ಈ ದಿನ ಮಾಲ್ಪುವಾ, ಪರಮಾನ್ನ ಸೇರಿದಂತೆ ದೇವಿಗೆ ಇಷ್ಟವಾದ ಇನ್ನಿತರ ನೈವೇದ್ಯಗಳನ್ನು ಅರ್ಪಿಸಿದರೆ ತಾಯಿ ಸಂತುಷ್ಟಳಾಗಿ ಆಶೀರ್ವದಿಸುತ್ತಾಳೆ.
ವಸಂತ ಪಂಚಮಿ 2024: ವಿದ್ಯೆಯ ಅಧಿದೇವತೆ ಸರಸ್ವತಿ. ಪ್ರತಿ ವರ್ಷ ಮಾಘ ಮಾಸದಲ್ಲಿ ಸರಸ್ವತಿ ಪೂಜೆಗೆ ಒಂದು ದಿನ ಮೀಸಲಿಡಲಾಗಿದೆ. ಆ ದಿನ ಶಾರದೆಯ ಪೂಜೆ ಮಾಡಿ ತಮಗೆ ವಿದ್ಯೆ ನೀಡುವಂತೆ ಪ್ರಾರ್ಥನೆ ಮಾಡುತ್ತಾರೆ. ಇದನ್ನು ಕರ್ನಾಟಕ, ಆಂಧ್ರ, ತೆಲಂಗಾಣದಲ್ಲಿ ವಸಂತ ಪಂಚಮಿ ಎಂದೂ ಕರೆಯಲಾಗುತ್ತದೆ.
ತಾಜಾ ಫೋಟೊಗಳು
ಫೆಬ್ರವರಿ 14ಕ್ಕೆ ವಸಂತ ಪಂಚಮಿ
ಫೆಬ್ರವರಿ 14 ರಂದು ವಸಂತ ಪಂಚಮಿಯನ್ನು ಆಚರಿಸಲಾಗುತ್ತಿದೆ. ಈ ದಿನ ಸರಸ್ವತಿ ದೇವಿಯ ಜೊತೆಗೆ ಶಿವ ಮತ್ತು ವಿಷ್ಣುವನ್ನು ಪೂಜಿಸುವುದು ವಿಶೇಷ ಆಚರಣೆಯಾಗಿದೆ. ಸರಸ್ವತಿ ದೇವಿಯನ್ನು ಮೆಚ್ಚಿಸಲು ಪೂಜೆಯ ಸಮಯದಲ್ಲಿ ಐದು ವಿಶೇಷ ನೈವೇದ್ಯಗಳನ್ನು ಅರ್ಪಿಸಬೇಕು. ಈ ರೀತಿ ಶಾರದೆಗೆ ಇಷ್ಟವಾದ ನೈವೇದ್ಯ ಇಟ್ಟರೆ ಆಕೆ ಎಲ್ಲರನ್ನೂ ಆಶೀರ್ವದಿಸುತ್ತಾಳೆ. ನಿಮ್ಮ ಜೀವನದಲ್ಲಿನ ದುಃಖಗಳು ದೂರವಾಗುತ್ತವೆ. ಸರಸ್ವತಿ ದೇವಿಯ ಅನುಗ್ರಹದಿಂದ ಜ್ಞಾನ ಮತ್ತು ಮಾತಿನ ದೋಷಗಳು ನಿವಾರಣೆಯಾಗುತ್ತವೆ. ಹಳದಿ ಬಟ್ಟೆ ಮತ್ತು ಹಳದಿ ಸಿಹಿ ತಿಂಡಿಗಳನ್ನು ಅರ್ಪಿಸುವ ಮೂಲಕ ಸರಸ್ವತಿ ದೇವಿಯು ವಿಶೇಷ ಅನುಗ್ರಹವನ್ನು ಪಡೆಯಬಹುದು. ವಸಂತ ಪಂಚಮಿಯ ದಿನ ಹಳದಿ ಬಣ್ಣಕ್ಕೆ ಹೆಚ್ಚಿನ ಮಹತ್ವವಿದೆ. ಅದಕ್ಕಾಗಿಯೇ ಹಳದಿ ಬಣ್ಣದ ಸಿಹಿ ತಿಂಡಿಗಳನ್ನು ಹೆಚ್ಚಾಗಿ ನೈವೇದ್ಯವಾಗಿ ನೀಡಲಾಗುತ್ತದೆ. ಈ ರೀತಿ ಮಾಡುವುದರಿಂದ ಸಂಪತ್ತು, ಸಂತೋಷ ಮತ್ತು ಸಮೃದ್ಧಿ ದೊರೆಯುತ್ತದೆ ಎಂದು ನಂಬಲಾಗಿದೆ.
ಕಡಲೆ ಹಿಟ್ಟಿನ ಲಾಡು
ವಸಂತ ಪಂಚಮಿಯಂದು ಸರಸ್ವತಿಗೆ ಕಡಲೆ ಹಿಟ್ಟಿನ ಲಾಡನ್ನು ಅರ್ಪಿಸುವುದರಿಂದ ಸರಸ್ವತಿ ದೇವಿಯ ಆಶೀರ್ವಾದ ದೊರೆಯುತ್ತದೆ. ಹೊರಗಿನಿಂದ ತರುವ ಬದಲಿಗೆ ಮನೆಯಲ್ಲೇ ತಯಾರಿಸಿರುವ ಶುದ್ಧ ತುಪ್ಪದಿಂದ ತಯಾರಿಸಿದರೆ ಉತ್ತಮ. ಸರಸ್ವತಿ ದೇವಿಯ ಜೊತೆಗೆ ಗುರು ಮತ್ತು ವಿಷ್ಣುವಿನ ಆಶೀರ್ವಾದವೂ ನಿಮಗೆ ದೊರೆಯುತ್ತದೆ.
ಸಿಹಿ ಬೂಂದಿ
ಸರಸ್ವತಿಯ ಮತ್ತೊಂದು ಮೆಚ್ಚಿನ ವಸ್ತು ಸಿಹಿ ಬೂಂದಿ. ಪೂಜೆಯ ಸಮಯದಲ್ಲಿ ಅಮ್ಮನಿಗೆ ಸಿಹಿ ಬೂಂದಿ ಅರ್ಪಿಸಿದರೆ ಎಲ್ಲಾ ಸಂಕಟಗಳು ದೂರವಾಗುತ್ತವೆ. ಜೀವನದಲ್ಲಿ ಸುಖ-ಸಂತೋಷ ದೊರೆಯುತ್ತದೆ ಎಂಬುದು ಭಕ್ತರ ನಂಬಿಕೆ. ಬೂಂದಿ ಲಡ್ಡುವನ್ನು ದೇವಿಗೆ ಅರ್ಪಿಸಿ ನಂತರ ಈ ಪ್ರಸಾದವನ್ನು ಎಲ್ಲರಿಗೂ ವಿತರಿಸುವುದರಿಂದ ಸರಸ್ವತಿ ದೇವಿಯ ಕೃಪೆ ನಿಮ್ಮ ಮೇಲಿರುತ್ತದೆ. ಅದೃಷ್ಟದ ಬಾಗಿಲು ತೆರೆಯುತ್ತದೆ.
ಮಾಲ್ಪುವಾ
ಮಕ್ಕಳಿಗೆ ಶಿಕ್ಷಣದಲ್ಲಿನ ಅಡೆತಡೆಗಳು ಮತ್ತು ವಯಸ್ಕರಿಗೆ ವೃತ್ತಿಜೀವನದಲ್ಲಿನ ಅಡೆತಡೆಗಳನ್ನು ನಿವಾರಿಸಲು ಸರಸ್ವತಿ ದೇವಿಗೆ ಮಾಲ್ಪುವನ್ನು ಅರ್ಪಿಸಿ. ಅದನ್ನು ಅರ್ಪಿಸುವುದರಿಂದ ಮಾನಸಿಕ ಬೆಳವಣಿಗೆಯಾಗುತ್ತದೆ. ಬುದ್ಧಿವಂತಿಕೆ ಸುಧಾರಿಸುತ್ತದೆ. ಸರಸ್ವತಿ ದೇವಿಯ ಆಶೀರ್ವಾದ ಪಡೆಯಲು, ನಿಮ್ಮ ಮಕ್ಕಳೊಂದಿಗೆ ಪೂಜೆ ಮಾಡಿ ಮಾಲ್ಪುವಾ ತಯಾರಿಸಿ.
ಪರಮಾನ್ನ
ಸರಸ್ವತಿ ದೇವಿಗೆ ಹಾಲು, ಬೆಣ್ಣೆ ಮತ್ತು ತುಪ್ಪ ಬಹಳ ಇಷ್ಟ. ಆದ್ದರಿಂದ ವಸಂತ ಪಂಚಮಿಯ ದಿನ ಬೆಲ್ಲ ಸೇರಿಸಿ ನೈವೇದ್ಯ ಮಾಡಬೇಕು. ದೇಸಿ ತುಪ್ಪ, ಸಕ್ಕರೆ ಅಥವಾ ಬೆಲ್ಲ, ಕೇಸರಿ, ಒಣ ಹಣ್ಣುಗಳನ್ನು ಸೇರಿಸಿ ಪರಮಾನ್ನ ತಯಾರಿಸಿ ತಾಯಿಗೆ ಅರ್ಪಿಸಿ. ದೇವಿಗೆ ಕೇಸರಿ ಹೂವಿನಿಂದ ತಯಾರಿಸಿದ ಖೀರ್ ಕೂಡಾ ಅರ್ಪಿಸಲಾಗುತ್ತದೆ.
ರಾಜ್ ಭೋಗ್
ರಾಜ್ ಭೋಗ್ ಸರಸ್ವತಿ ದೇವಿಯ ಮತ್ತೊಂದು ನೆಚ್ಚಿನ ಪ್ರಸಾದವಾಗಿದೆ. ಹಾಲಿನಿಂದ ಮಾಡಿದ ಈ ವಸ್ತು ಅಮ್ಮನಿಗೆ ತುಂಬಾ ಪ್ರಿಯ. ರಾಜ್ ಭೋಗ್ ಅರ್ಪಿಸುವುದು ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ. ಇದರೊಂದಿಗೆ ಹಳದಿ ಬಟ್ಟೆ ಮತ್ತು ಹಳದಿ ಸಿಹಿತಿಂಡಿಗಳನ್ನು ಸರಸ್ವತಿ ದೇವಿಗೆ ನೀಡಬಹುದು. ಸರಸ್ವತಿ ದೇವಿಯ ಪೂಜೆಯ ಸಮಯದಲ್ಲಿ ರಾಜ್ ಭೋಗ್ ಅರ್ಪಿಸುವುದು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಇದರೊಂದಿಗೆ ಕಡ್ಲೆ ಹಿಟ್ಟಿನಿಂದ ತಯಾರಿಸಿದ ಜಿಲೇಬಿಯನ್ನು ಸೇರಿಸಬಹುದು.