logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Vastu Tips: ಮನೆ‌ ಕಟ್ಟುವಾಗ ಅಡಿಪಾಯಕ್ಕೆ ಬೆಳ್ಳಿ ನಾಗರ, ಕಲಶವಿಡಲು ಕಾರಣವೇನು? ವಾಸ್ತುಶಾಸ್ತ್ರ ಹೇಳೋದೇನು ನೋಡಿ

Vastu Tips: ಮನೆ‌ ಕಟ್ಟುವಾಗ ಅಡಿಪಾಯಕ್ಕೆ ಬೆಳ್ಳಿ ನಾಗರ, ಕಲಶವಿಡಲು ಕಾರಣವೇನು? ವಾಸ್ತುಶಾಸ್ತ್ರ ಹೇಳೋದೇನು ನೋಡಿ

Rakshitha Sowmya HT Kannada

May 31, 2024 06:30 AM IST

google News

ಮನೆ‌ ಕಟ್ಟುವಾಗ ಅಡಿಪಾಯಕ್ಕೆ ಬೆಳ್ಳಿ ನಾಗರ, ಕಲಶವಿಡಲು ಕಾರಣವೇನು? ವಾಸ್ತುಶಾಸ್ತ್ರ ಹೇಳೋದೇನು ನೋಡಿ

  • ಮನೆಗೆ ತಳಪಾಯ ಹಾಕುವಾಗ ಬೆಳ್ಳಿಯ ನಾಗರ, ಕಲಶವನ್ನು ಇಡಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಶೇಷನಾಗನು ಕ್ಷೀರಸಾಗರದಲ್ಲಿ ವಾಸಿಸುತ್ತಾನೆ. ಆದ್ದರಿಂದ ಮನೆ ಕಟ್ಟುವಾಗ ತಳಪಾಯದಲ್ಲಿ ನಾಗರ ಪ್ರತಿಮೆ, ಕಲಶದಲ್ಲಿ ಹಾಲು, ತುಪ್ಪ ಮತ್ತು ಮೊಸರು ಇತ್ಯಾದಿಗಳನ್ನು ಅರ್ಪಿಸಿ ಮನೆಯನ್ನು ರಕ್ಷಿಸು ಎಂದು ಬೇಡಿಕೊಳ್ಳುತ್ತಾರೆ. ಇದು ವಾಸ್ತು ದೋಷಗಳಿಗೂ ಪರಿಹಾರ ನೀಡುತ್ತದೆ.

 ಮನೆ‌ ಕಟ್ಟುವಾಗ ಅಡಿಪಾಯಕ್ಕೆ ಬೆಳ್ಳಿ ನಾಗರ, ಕಲಶವಿಡಲು ಕಾರಣವೇನು? ವಾಸ್ತುಶಾಸ್ತ್ರ ಹೇಳೋದೇನು ನೋಡಿ
ಮನೆ‌ ಕಟ್ಟುವಾಗ ಅಡಿಪಾಯಕ್ಕೆ ಬೆಳ್ಳಿ ನಾಗರ, ಕಲಶವಿಡಲು ಕಾರಣವೇನು? ವಾಸ್ತುಶಾಸ್ತ್ರ ಹೇಳೋದೇನು ನೋಡಿ

ಮನೆಯೆಂಬುದು ಬರೀ ಕಲ್ಲು, ಸಿಮೆಂಟ್, ಕಬ್ಬಿಣ ಬಳಸಿ ಕಟ್ಟುವ ಕಟ್ಟಡವಲ್ಲ. ಅದು ಮನೆಯಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ ಒಳ್ಳೆಯದನ್ನು ಮಾಡುವ, ನೆಮ್ಮದಿ ತರುವ ಆಲಯವಾಗಿದೆ. ಮನೆ ಕಟ್ಟುವುದೆಂದರೆ ಸುಲಭದ ಕೆಲಸವಲ್ಲ. ಅದಕ್ಕೆ ಹಿರಿಯರು ಮನೆ ಕಟ್ಟಿ ನೋಡಿ, ಮದುವೆ ಮಾಡಿ ನೋಡಿ ಎಂದು ಗಾದೆ ಮಾತು ಹೇಳಿರುವುದು.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಮನೆ ಕಟ್ಟುವಾಗ ಪೂಜೆ, ವಾಸ್ತು ನಿಯಮಗಳನ್ನು ಪಾಲಿಸುವುದು ಮುಖ್ಯವಾಗಿರುತ್ತದೆ. ವಾಸ್ತುಪ್ರಕಾರ ಮನೆಯ ಅಡಿಪಾಯ ಹಾಕುವಾಗ ವಾಸ್ತು ಶಾಸ್ತ್ರಗಳನ್ನು ಪಾಲಿಸುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು ಎಂದು ನಂಬಲಾಗಿದೆ. ಮನೆಯ ತಳಪಾಯದಲ್ಲಿ ನಾಗ ಮತ್ತು ನಾಗಿಣಿಯ ಬೆಳ್ಳಿಯ ಮೂರ್ತಿ ಮತ್ತು ಕಲಶವನ್ನು ಇಡಲಾಗುತ್ತದೆ. ಆ ಕಲಶದಲ್ಲಿ ಹಾಲು, ತುಪ್ಪ ಮತ್ತು ಮೊಸರು ಇತ್ಯಾದಿಗಳನ್ನು ಹಾಕಲಾಗುತ್ತದೆ. ಈ ಪದ್ಧತಿಗಳನ್ನು ಏಕೆ ಪಾಲಿಸಲಾಗುತ್ತದೆ? ಇದರ ಹಿಂದಿರುವ ಕಾರಣವೇನು? ಇವುಗಳ ಬಗ್ಗೆ ತಿಳಿಯಲು ಮುಂದೆ ಓದಿ.

ನಾಗದೇವತೆಗಳಿಗೆ ಪ್ರಾರ್ಥನೆ

ಶ್ರೀಮದ್‌ ಭಾಗವತ ಪುರಾಣದ ಐದನೇ ಸ್ಕಂದದಲ್ಲಿ ಭೂಮಿಯ ಕೆಳಗೆ ಪಾತಾಳ ಲೋಕವಿದೆ. ಅದರ ಅಧಿಪತಿ ಶೇಷನಾಗ ಎಂದು ಉಲ್ಲೇಖಿಸಲಾಗಿದೆ. ಆದ್ದರಿಂದ ಮನೆಯ ಅಡಿಪಾಯದಲ್ಲಿ ಪುಟ್ಟ ಬೆಳ್ಳಿಯ ನಾಗರ ಪ್ರತಿಮೆಯನ್ನು ಇರಿಸಲಾಗುತ್ತದೆ. ನಾಗದೇವತೆಗಳು ಯಾವಾಗಲೂ ಆಸ್ತಿ ಮತ್ತು ಮನೆಯನ್ನು ರಕ್ಷಿಸುತ್ತವೆ ಎಂದು ನಂಬಲಾಗಿದೆ. ಈ ಕಾರಣದಿಂದಲೇ ಮನೆಯನ್ನು ಕಟ್ಟುವ ಮೊದಲು ತಳಪಾಯದಲ್ಲಿ ನಾಗರ ಪ್ರತಿಮೆ, ಕಲಶದಲ್ಲಿ ಹಾಲು, ತುಪ್ಪ ಮತ್ತು ಮೊಸರು ಇತ್ಯಾದಿಗಳನ್ನು ಅರ್ಪಿಸಿ ಮನೆಯನ್ನು ರಕ್ಷಿಸು ಎಂದು ಬೇಡಿಕೊಳ್ಳಲಾಗುತ್ತದೆ. ಇದು ವಾಸ್ತು ದೋಷಗಳಿಗೂ ಪರಿಹಾರ ನೀಡುತ್ತದೆ ಎಂದು ನಂಬಲಾಗಿದೆ.

* ಮನೆಯ ತಳಪಾಯದಲ್ಲಿ ಬೆಳ್ಳಿಯ ನಾಗ ಮತ್ತು ನಾಗಿಣಿಯ ಪ್ರತಿಮೆ ಇರಿಸುವ ಮೂಲಕ ಮಹಾದೇವನ ಆಶೀರ್ವಾದ ಸಿಗುತ್ತದೆ. ಮನೆಯಲ್ಲಿ ಸುಖ ಸಮೃದ್ಧಿಯ ಆಗಮನವಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ನಾಗ–ನಾಗಿಣಿಯ ಜೋಡಿ ಪ್ರತಿಮೆಗಳು ವಾಸ್ತು ದೋಷಗಳಿಂದ ಪರಿಹಾರವನ್ನು ನೀಡುತ್ತದೆ.

* ಈ ರೀತಿ ಮಾಡಿದರೆ ದುಷ್ಟಶಕ್ತಿಗಳ ಪರಿಣಾಮ ಮನೆಯ ಮೇಲೆ ಬೀಳುವುದಿಲ್ಲ ಎನ್ನಲಾಗುತ್ತದೆ. ಇದು ದೃಷ್ಟಿ ದೋಷಗಳ ವಿರುದ್ಧವೂ ರಕ್ಷಣೆ ನೀಡುತ್ತದೆ.

* ಮನೆಯಲ್ಲಿ ಯಾವಾಗಲೂ ಸಕಾರಾತ್ಮಕ ಶಕ್ತಿ ತುಂಬಿರುತ್ತದೆ.

* ಬೆಳ್ಳಿಯ ನಾಗರ ಪ್ರತಿಮೆಯನ್ನು ಇಡಲು ಸಾಧ್ಯವಾಗದಿದ್ದರೆ ಹಿತ್ತಾಳೆಯ ಪ್ರತಿಮೆಯನ್ನೂ ಸಹ ಇಡಬಹುದು.

ಮನೆಯ ಅಡಿಪಾಯದಲ್ಲಿ ಕಲಶವನ್ನು ಇಡಲು ಪ್ರಮುಖ ಕಾರಣ

* ಕಲಶದಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರು ನೆಲೆಸಿದ್ದಾರೆ ಎಂದು ನಂಬಲಾಗಿದೆ. ಕಲಶದಲ್ಲಿ ನಾಣ್ಯ, ಹೂವು ಮತ್ತು ಹಾಲನ್ನು ಹಾಕಲಾಗುತ್ತದೆ. ಇದು ನಾಗ ದೇವರಿಗೆ ಪ್ರಿಯವಾಗಿದೆ.

* ಧಾರ್ಮಿಕ ನಂಬಿಕೆಗಳ ಪ್ರಕಾರ ಶೇಷನಾಗನು ಕ್ಷೀರಸಾಗರದಲ್ಲಿ ವಾಸಿಸುತ್ತಾನೆ. ಈ ಕಾರಣಕ್ಕಾಗಿಯೇ ಮನೆಯ ಅಡಿಪಾಯದ ಪೂಜೆಯ ಸಮಯದಲ್ಲಿ ಕಲಶದಲ್ಲಿ ಶೇಷನಾಗನಿಗೆ ಪ್ರಿಯವಾದ ವಸ್ತುಗಳಾದ ಹಾಲು, ತುಪ್ಪ ಮತ್ತು ಮೊಸರು ಸೇರಿದಂತೆ ಮುಂತಾದ ವಸ್ತುಗಳನ್ನು ಅರ್ಪಿಸಿ ಶೇಷನಾಗನನ್ನು ಆವಾಹನೆ ಮಾಡಲಾಗುತ್ತದೆ. ಹೀಗೆ ಮಾಡುವುದರಿಂದ ಶೇಷನಾಗನು ಮನೆಯನ್ನು ರಕ್ಷಿಸುತ್ತಾನೆ ಎಂದು ನಂಬಲಾಗಿದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ