ಬಿದಿರು, ನಾಣ್ಯ ಸೇರಿದಂತೆ ಈ ಫೆಂಗ್‌ಶುಯಿ ವಸ್ತುಗಳು ಮನೆಯಲ್ಲಿ ಇದ್ದರೆ ನಿಮ್ಮ ಸಂಸಾರ ಆನಂದ ಸಾಗರ
May 13, 2024 11:36 AM IST
ಬಿದಿರು, ನಾಣ್ಯ ಸೇರಿದಂತೆ ಈ ಫೆಂಗ್‌ಶುಯಿ ವಸ್ತುಗಳು ಮನೆಯಲ್ಲಿ ಇದ್ದರೆ ನಿಮ್ಮ ಸಂಸಾರ ಆನಂದ ಸಾಗರ
Vastu Tips: ಭಾರತದಲ್ಲಿ ವಾಸ್ತುಶಾಸ್ತ್ರವನ್ನು ನಂಬುವಂತೆ ಚೀನಿಯರು ಫೆಂಗ್ ಶುಯಿಯನ್ನು ನಂಬುತ್ತಾರೆ. ಅದರ ಪ್ರಕಾರ ಮನೆಯಲ್ಲಿ ಫಿಶ್ ಅಕ್ವೇರಿಯಂ, ಲಾಫಿಂಗ್ ಬುದ್ಧ ಬಿದಿರು ಸೇರಿದಂತೆ ಈ ಫೆಂಗ್‌ಶುಯಿ ವಸ್ತುಗಳು ಮನೆಯಲ್ಲಿ ಇದ್ದರೆ ನಿಮ್ಮ ಸಂಸಾರ ಆನಂದ ಸಾಗರ ಎನಿಸುತ್ತದೆ.
ವಾಸ್ತು ಶಾಸ್ತ್ರ, ಭಾರತದಲ್ಲಿ ಮಾತ್ರವಲ್ಲ ಚೀನಾದಲ್ಲಿ ಕೂಡಾ ಬಹಳ ಫೇಮಸ್ ಆಗಿದೆ. ಅಲ್ಲಿ ಇದನ್ನು ಫೆಂಗ್ ಶುಯಿ ಎಂದು ಕರೆಯುತ್ತಾರೆ. ಫೆಂಗ್ ಹಾಗೂ ಶುಯಿ ಎಂದರೆ ಗಾಳಿ ಮತ್ತು ನೀರು ಎಂದು ಅರ್ಥ. ಅದರ ಪ್ರಕಾರ ವಿಂಡ್ ಚೈಮ್, ಲಾಫಿಂಗ್ ಬುದ್ಧ, ಪ್ಲಾಸ್ಟಿಕ್ ಹೂಗಳು, ಆಮೆ, ನಾಣ್ಯಗಳು, ಹಡಗು ಹಾಗೂ ಇನ್ನಿತರ ವಸ್ತುಗಳಿಗೆ ಫೆಂಗ್ ಶುಯಿಯಲ್ಲಿ ವಿಶೇಷ ಪ್ರಾಮುಖ್ಯತೆ ಇದೆ.
ತಾಜಾ ಫೋಟೊಗಳು
ಫೆಂಗ್ ಶೂಯಿಯಲ್ಲಿ ಉಲ್ಲೇಖಿಸಲಾದ ವಸ್ತುಳಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ ವಾಸ್ತು ದೋಷಗಳನ್ನು ಪರಿಹಾರ ಮಾಡುತ್ತದೆ. ಫೆಂಗ್ ಶೂಯಿ ವಸ್ತುಗಳನ್ನು ಮನೆ ಅಥವಾ ಕಚೇರಿಯಲ್ಲಿ ನಿಗದಿತ ದಿಕ್ಕಿನಲ್ಲಿ ಇಡುವುದರಿಂದ ಜೀವನದಲ್ಲಿ ಸಂತೋಷ ಮತ್ತು ಸಂಪತ್ತು ಬರುತ್ತದೆ ಎಂದು ನಂಬಲಾಗಿದೆ. ಯಾವೆಲ್ಲಾ ಫೆಂಗ್ ಶುಯಿ ವಸ್ತುಗಳನ್ನು ಮನೆಗೆ ತಂದರೆ ಶುಭ ನೋಡೋಣ.
ಲಾಫಿಂಗ್ ಬುದ್ಧ: ಫೆಂಗ್ ಶೂಯಿಯಲ್ಲಿ ಲಾಫಿಂಗ್ ಬುದ್ಧನನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ವಿಗ್ರಹವನ್ನು ಡ್ರಾಯಿಂಗ್ ರೂಮ್ ಮುಂಭಾಗದಲ್ಲಿ ಇಟ್ಟರೆ ಧನಾತ್ಮಕ ಶಕ್ತಿಯನ್ನು ತರುತ್ತದೆ, ಅದೃಷ್ಟ ನಿಮ್ಮ ಪಾಲಿಗೆ ಒಲಿಯಲಿದೆ. ಭಾರತದಲ್ಲಿ ಕುಬೇರನನ್ನು ಪೂಜಿಸುವಂತೆ ಚೀನಾದಲ್ಲಿ ಲಾಫಿಂಗ್ ಬುದ್ಧನನ್ನು ಪೂಜಿಸಲಾಗುತ್ತದೆ. ಲಾಫಿಂಗ್ ಬುದ್ಧನ ಮೊದಲ ಹೆಸರು ಹೋಟೆ, ಈಗ ಗೌತಮ ಬುದ್ಧನ ಶಿಷ್ಯರಲ್ಲಿ ಒಬ್ಬ. ಈತನಿಗೆ ಜ್ಞಾನೋದಯವಾದ ನಂತರ ಒಮ್ಮೆಲೆ ಜೋರಾಗಿ ನಗಲು ಆರಂಭಿಸುತ್ತಾನೆ. ಅಂದಿನಿಂದ ಜನರನ್ನು ನಗಿಸುವುದು, ಅವರ ಜೀವನದಲ್ಲಿ ಸಂತೋಷವನ್ನು ತರುವುದು ಹೋಟೆಯ ಗುರಿಯಾಗಿದೆ, ಆದ್ದರಿಂದ ಲಾಫಿಂಗ್ ಬುದ್ಧ ಇದ್ದ ಕಡೆಯೆಲ್ಲಾ ಸಂತೋಷ ನೆಲೆಸಿರುತ್ತದೆ ಎಂಬ ನಂಬಿಕೆ ಇದೆ.
ಫಿಶ್ ಅಕ್ವೇರಿಯಂ: ಫೆಂಗ್ ಶೂಯಿ ಪ್ರಕಾರ, ಫಿಶ್ ಅಕ್ವೇರಿಯಂ ಪ್ರಗತಿಯ ಸಂಕೇತವಾಗಿದೆ. ಮನೆಯಲ್ಲಿ ಮೀನಿನ ಅಕ್ವೇರಿಯಂ ಇಟ್ಟುಕೊಳ್ಳುವುದು ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ವಾಸ್ತು ಪ್ರಕಾರ ಅಕ್ವೇರಿಯಂನಲ್ಲಿ 9 ಮೀನುಗಳನ್ನು ಇದ್ದರೆ ಶುಭ ಎಂದು ಪರಿಗಣಿಸಲಾಗಿದೆ.
ಬಿದಿರು ಗಿಡ: ಫೆಂಗ್ ಶೂಯಿ ಪ್ರಕಾರ ಮನೆಯಲ್ಲಿ ಬಿದಿರು ಗಿಡವನ್ನು ಇಡುವುದರಿಂದ ನಕಾರಾತ್ಮಕ ಶಕ್ತಿಯ ಪರಿಣಾಮವನ್ನು ಕಡಿಮೆ ಮಾಡುತ್ತದೆ ಮತ್ತು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಡೈನಿಂಗ್ ಟೇಬಲ್: ಫೆಂಗ್ ಶೂಯಿ ಪ್ರಕಾರ, ವೃತ್ತಾಕಾರದ ಡೈನಿಂಗ್ ಟೇಬಲನ್ನು ಫೆಂಗ್ ಶೂಯಿಯಲ್ಲಿ ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಮನೆಯಲ್ಲಿ ಕಡಿಮೆ ಸದಸ್ಯರು ಇದ್ದರೆ ನೀವು 4 ಕುರ್ಚಿಗಳು ಇರುವ ಡೈನಿಂಗ್ ಟೇಬಲನ್ನು ಮನೆಗೆ ತರಬಹುದು.
ಫೆಂಗ್ ಶೂಯಿ ನಾಣ್ಯ: ಫೆಂಗ್ ಶೂಯಿ ಪ್ರಕಾರ, ಮನೆಯ ಬಾಗಿಲಿನ ಹಿಡಿಕೆಯಲ್ಲಿ ನಾಣ್ಯಗಳನ್ನು ನೇತು ಹಾಕುವುದು ಸಂಪತ್ತು ಮತ್ತು ಅದೃಷ್ಟವನ್ನು ತರುತ್ತದೆ. 3 ಹಳೆಯ ಫೆಂಗ್ ಶೂಯಿ ನಾಣ್ಯಗಳನ್ನು ಕೆಂಪು ದಾರ ಅಥವಾ ರಿಬ್ಬನ್‌ನಲ್ಲಿ ಕಟ್ಟಬೇಕು ಮತ್ತು ಬಾಗಿಲಿನ ಹಿಡಿಕೆಯ ಮೇಲೆ ನೇತು ಹಾಕಬೇಕು. ಹೀಗೆ ಮಾಡುವುದರಿಂದ ಆರ್ಥಿಕ ಲಾಭವಾಗುತ್ತದೆ ಎಂದು ನಂಬಲಾಗಿದೆ.
ಉಪ್ಪು ಅಥವಾ ಹರಳೆಣ್ಣೆ: ಫೆಂಗ್ ಶೂಯಿ ಪ್ರಕಾರ, ಬಾತ್ ರೂಮ್‌ನಲ್ಲಿ ಸಂಪೂರ್ಣ ಉಪ್ಪು ಅಥವಾ ಹರಳೆಣ್ಣೆ ತುಂಬಿದ ಬೌಲ್ ಅನ್ನು ಇರಿಸಿ. ಪ್ರತಿ ತಿಂಗಳು ಈ ಬಟ್ಟಲಿನಲ್ಲಿ ಉಪ್ಪು ಅಥವಾ ಹರಳೆಣ್ಣೆಯನ್ನು ಬದಲಾಯಿಸುತ್ತಿರಿ. ಹೀಗೆ ಮಾಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ ಎಂದು ನಂಬಲಾಗಿದೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.