ವಾಸ್ತು ಟಿಪ್ಸ್: ಈ ಗಿಡಗಳು ಮನೆಯಲ್ಲಿದ್ದರೆ ಹಣ ಉಳಿಯಲ್ಲ; ಖರೀದಿಸುವ ಮುನ್ನ ವಾಸ್ತುತಜ್ಞರ ಸಲಹೆ ಪಡೆಯಿರಿ
Jul 31, 2024 12:34 PM IST
ಈ ಗಿಡಗಳು ಮನೆಯಲ್ಲಿದ್ದರೆ ಹಣ ಉಳಿಯಲ್ಲ; ಖರೀದಿಸುವ ಮುನ್ನ ವಾಸ್ತುತಜ್ಞರ ಸಲಹೆ ಪಡೆಯಿರಿ
ವಾಸ್ತು , ಚೀನೀ ವಾಸ್ತುಶಿಲ್ಪದ ಪ್ರಕಾರ ಕೆಲವೊಂದು ಸಸ್ಯಗಳು ಮನೆಯಲ್ಲಿ ಸಕಾರಾತ್ಮಕ ಅಂಶಗಳನ್ನು ಉತ್ಪತ್ತಿ ಮಾಡುತ್ತವೆ. ಆದರೆ ಪಾಪಾಸು ಕಳ್ಳಿ, ಬೋನ್ಸಾಯ್ ಸೇರಿದಂತೆ ಇನ್ನಿತರ ಸಸ್ಯಗಳು ಮನೆಯಲ್ಲಿ ನಕಾರಾತ್ಮಕತೆ ಉಂಟು ಮಾಡುತ್ತವೆ. ಇವುಗಳಿಂದ ಮನೆಯಲ್ಲಿ ಅಶಾಂತಿ ತುಂಬಿರುತ್ತದೆ. ಹಣಕಾಸಿನ ಸಮಸ್ಯೆ ಉಂಟಾಗುತ್ತದೆ.
ಮನುಷ್ಯನ ಜೀವನದಲ್ಲಿ ಆರ್ಥಿಕ ಸಮೃದ್ಧಿ, ವೈಯಕ್ತಿಕ, ವೃತ್ತಿ ಬದುಕಿಗೆ ವಾಸ್ತು ಬಹಳ ಕೊಡುಗೆ ನೀಡಿದೆ. ವಾಸ್ತುವಿನಂತೆ ಚೀನೀಯರ ಫೆಂಗ್‌ಶೂಯಿ ಕೂಡಾ ಮನುಷ್ಯನ ಜೀವನದದಲ್ಲಿ ಧನಾತ್ಮಕ ಅಂಶಗಳನ್ನು ಉಂಟು ಮಾಡುತ್ತದೆ. ವಾಸ್ತು ಪ್ರಕಾರ ಮನೆಯಲ್ಲಿ ಕೆಲವೊಂದು ಗಿಡಗಳನ್ನು ಬೆಳೆಸುವುದರಿಂದ ಮನೆಯಲ್ಲಿ ಸಮೃದ್ಧಿ ಉಂಟಾಗುತ್ತದೆ. ಹಾಗೇ ಕೆಲವೊಂದು ಗಿಡಗಳು ಮನೆಯಲ್ಲಿ ಅಶಾಂತಿ ಉಂಟು ಮಾಡುತ್ತದೆ. ಈ ಗಿಡಗಳಿಂದ ನೀವು ಸಂಪಾದಿಸಿದ ಹಣ ಒಂದಲ್ಲಾ ಒಂದು ಕಾರಣಕ್ಕೆ ನಿಮ್ಮ ಬಳಿ ಉಳಿಯುವುದೇ ಇಲ್ಲ. ಹಾಗಾದರೆ ಆ ಗಿಡಗಳು ಯಾವುವು ನೋಡೋಣ.
ತಾಜಾ ಫೋಟೊಗಳು
1. ಪಾಪಾಸು ಕಳ್ಳಿ
ಪಾಪಾಸು ಕಳ್ಳಿ ಗಿಡ ವಿಶಿಷ್ಟವಾದ ಸೌಂದರ್ಯಕ್ಕಾಗಿ ಗಮನ ಸೆಳೆಯುತ್ತದೆ. ಇದು ನೋಡಲು ವಿಭಿನ್ನವಾಗಿದೆ, ಆಕರ್ಷಕವಾಗಿದೆ ಎಂಬ ಕಾರಣಕ್ಕೆ ಕೆಲವರು ಇದನ್ನು ಮನೆಗೆ ತಂದು ಇಡುತ್ತಾರೆ. ಆದರೆ ಫೆಂಗ್ ಶೂಯಿ ಪ್ರಕಾರ ಇದರಲ್ಲಿನ ಮುಳ್ಳುಗಳು ನಕಾರಾತ್ಮಕತೆಯನ್ನು ಹೊರ ಸೂಸುತ್ತದೆ. ಮನೆಗೆ ಎಷ್ಟೇ ಸಂಪತ್ತಿನ ಹರಿವಿನ ಅವಕಾಶವಿದ್ದರೂ ಈ ಪಾಪಾಸು ಕಳ್ಳಿ ಅದಕ್ಕೆ ಅವಕಾಶ ನೀಡುವುದಿಲ್ಲ. ಆದ್ದರಿಂದ ಫೆಂಗ್ ಶೂಯಿ ತಜ್ಞರು, ಯಾವ ಕಾರಣಕ್ಕೂ ಪಾಪಾಸುಕಳ್ಳಿಯನ್ನು ಮನೆಯೊಳಗೆ ತರಬೇಡಿ ಎಂದು ಸಲಹೆ ನೀಡುತ್ತಾರೆ.
2. ಬೋನ್ಸಾಯ್
ಬೋನ್ಸಾಯ್ ಸಸ್ಯಗಳು ಮನೆಯಲ್ಲಿದ್ದರೆ ಅದರಿಂದ ಶುಭವಾಗುತ್ತದೆ ಎಂದು ನಂಬಲಾಗಿದೆ. ಆದರೆ ಚೀನೀ ವಾಸ್ತುಶಾಸ್ತ್ರದ ಪ್ರಕಾರ, ಬೋನ್ಸಾಯ್ ಸಸ್ಯಗಳು ಕೂಡಾ ಹಣದ ಹರಿವನ್ನು ತಡೆಯುತ್ತದೆ. ನಿಮ್ಮ ಬೆಳವಣಿಗೆಗೆ ಅಡ್ಡಿಯುಂಟು ಮಾಡುತ್ತದೆ. ಮನೆ ಒಳಗೆ ಎಂದಿಗೂ ಬೋನ್ಸಾಯ್ ಸಸ್ಯಗಳನ್ನು ಇಡಲೇಬೇಡಿ. ಒಂದು ವೇಳೆ ನೀವು ಬೋನ್ಸಾಯ್ ಗಿಡಗಳನ್ನು ಮನೆಗೆ ತರುವಂತಿದ್ದರೆ, ಸೂಕ್ತ ವಾಸ್ತುತಜ್ಞರನ್ನು ಸಂಪರ್ಕಿಸಿ.
3. ಒಣಗಿದ ಹೂವುಗಳು
ಕೆಲವು ಒಣಗಿದ ಹೂವುಗಳು ನೋಡಲು ಆಕರ್ಷಕವಾಗಿದ್ದರೂ, ಅವು ನಿಶ್ಚಲತೆಯ ಸ್ಥಿತಿಯನ್ನು ಪ್ರತಿನಿಧಿಸುತ್ತವೆ. ಸಾಂಪ್ರದಾಯಿಕ ನಂಬಿಕೆಗಳ ಪ್ರಕಾರ, ಒಣಗಿದ ಹೂವುಗಳ ನಿರ್ಜೀವ ಸ್ವಭಾವವು ನಿಶ್ಚಲವಾದ ಶಕ್ತಿಯನ್ನು ತರುತ್ತದೆ, ಸಂಪತ್ತು ಮತ್ತು ಸಮೃದ್ಧಿಯ ಕ್ರಿಯಾತ್ಮಕ ಹರಿವಿನ ಮೇಲೆ ಪರಿಣಾಮ ಬೀರುತ್ತದೆ. ಈ ಹೂವುಗಳಿಂದ ಹೊರಸೂಸಲ್ಪಟ್ಟ ನಕಾರಾತ್ಮಕ ಕಂಪನಗಳು ಬೆಳವಣಿಗೆ ಮತ್ತು ಸಮೃದ್ಧಿಯ ವಾತಾವರಣವನ್ನು ಬೆಳೆಸುವ ಬದಲು ನಷ್ಟ ಮತ್ತು ಅವನತಿಯ ಭಾವನೆಯನ್ನು ಉಂಟುಮಾಡಬಹುದು.
4. ಯುಫೋರ್ಬಿಯಾ
ಯುಫೋರ್ಬಿಯಾ, ಸಸ್ಯಗಳು ವೈವಿಧ್ಯತೆಗೆ ಹೆಸರುವಾಸಿಯಾಗಿದೆ. ನೋಡಲು ಆಕರ್ಷಕವಾಗಿದೆ, ವಿಭಿನ್ನವಾಗಿದೆ ಎಂಬ ಕಾರಣಕ್ಕೆ ಅನೇಕರು ಇದನ್ನು ಮನೆಗೆ ತಂದಿಡುತ್ತಾರೆ. ಈ ಸಸ್ಯಗಳು ಆರ್ಥಿಕ ಪರಿಸ್ಥಿತಿಗೆ ವಿಷದ ರೂಪಕವಾಗಿ ಸಂಕೇತಿಸಬಹುದು. ನಿಮ್ಮ ಮನೆಯಲ್ಲಿ ಯುಫೋರ್ಬಿಯಾ ಗಿಡವಿದ್ದರೆ ಹಣಕಾಸಿನ ಸಮಸ್ಯೆ ಉಂಟಾಗುವುದು ಖಚಿತ. ಜೊತೆಗೆ ಇದು ಮನೆಯ ಸದಸ್ಯರಲ್ಲಿ ಅನಾರೋಗ್ಯ ಉಂಟು ಮಾಡುತ್ತದೆ.
5. ನಕಲಿ ಸಸ್ಯಗಳು
ನಕಲಿ ಸಸ್ಯಗಳು, ಅಸಲಿಗಿಂತ ನೋಡಲು ಆಕರ್ಷಕವಾಗಿರುತ್ತದೆ. ನಿರ್ವಹಿಸಲು ಸುಲಭ ಎಂಬ ಕಾರಣಕ್ಕೆ ಬಹಳಷ್ಟು ಜನರು ಇದನ್ನು ಮನೆಗೆ ತರುತ್ತಾರೆ. ದೇವರ ಪೋಟೋಗೂ ಅಲಂಕಾರಿಕವಾಗಿ ಬಳಸಲುತ್ತಾರೆ. ಇಷ್ಟಾದರೂ ನೈಜ ಸಸ್ಯಗಳ ಜಾಗಕ್ಕೆ ತರುವ ಜೀವಶಕ್ತಿಯನ್ನು ಇವು ಹೊಂದಿರುವುದಿಲ್ಲ. ಫೆಂಗ್ ಶೂಯಿ ಮತ್ತು ವಾಸ್ತು ಶಾಸ್ತ್ರದಲ್ಲಿ ಈ ಹೂಗಳನ್ನು ನಿಶ್ಚಲತೆಯ ಸಂಕೇತಗಳಾಗಿ ನೋಡಲಾಗುತ್ತದೆ. ಅಸಲಿ ಸಸ್ಯಗಳು ಬೆಳವಣಿಗೆ ಮತ್ತು ಚೈತನ್ಯ ಉಂಟು ಮಾಡುವಂತೆ ನಕಲಿ ಸಸ್ಯಗಳು ಅದಕ್ಕೆ ತದ್ವಿರುದ್ಧವಾಗಿ ಕೆಲಸ ಮಾಡುತ್ತವೆ.
ನಿಮ್ಮ ಮನೆಯಲ್ಲಿ ಸದಾ ಸಕಾರಾತ್ಮಕತೆ ತುಂಬಿರಬೇಕಾದರೆ ಜೇಡ್ ಸಸ್ಯಗಳು, ಮನಿ ಪ್ಲಾಂಟ್ , ಅದೃಷ್ಟ ತರುವ ಬಿದಿರಿನ ಸಸ್ಯಗಳನ್ನು ತರಬಹುದು. ಇದು ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳನ್ನು ತೊಲಗಿಸಿ, ಸಕಾರಾತ್ಮಕತೆ ಉಂಟು ಮಾಡುತ್ತದೆ. ಹಣಕಾಸು, ವೈಯಕ್ತಿಕ, ವೃತ್ತಿ ಜೀವನ ಎಲ್ಲದರಲ್ಲೂ ನಿಮಗೆ ಯಶಸ್ಸು ದೊರೆಯುತ್ತದೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.