ಮನೆ ಹೆಸರು ಹಾಕುವಾಗ ಅಪ್ಪಿತಪ್ಪಿಯೂ ಈ ತಪ್ಪು ಮಾಡಬೇಡಿ: ನೇಮ್ ಪ್ಲೇಟ್ ವಿಚಾರದಲ್ಲಿ ಈ ವಾಸ್ತು ಅನುಸರಿಸಿ
Jul 20, 2024 12:44 PM IST
ಮನೆ ಹೆಸರು ಹಾಕುವಾಗ ಅಪ್ಪಿತಪ್ಪಿಯೂ ಈ ತಪ್ಪು ಮಾಡಬೇಡಿ: ನೇಮ್ ಪ್ಲೇಟ್ ವಿಚಾರದಲ್ಲಿ ಈ ವಾಸ್ತು ಅನುಸರಿಸಿ
Vastu Tips for Home Name Plate: ವಾಸ್ತು ಪ್ರಕಾರ ಮನೆಯಲ್ಲಿ ಧನಾತ್ಮಕ ಶಕ್ತಿ ತುಂಬಿರಲು ಮನೆಯ ಹೊರೆಗೆ ನೇಮ್ ಪ್ಲೇಟ್ ಹಾಕಬೇಕು ಎಂದು ಹೇಳಲಾಗುತ್ತದೆ. ಆದರೆ ಹಾಗೆ ನೇಮ್ ಪ್ಲೇಟ್ ಅಳವಡಿಸುವಾಗ ಕೆಲವು ನಿಯಮಗಳನ್ನು ಪಾಲಿಸಬೇಕು. ಮನೆಯಲ್ಲಿ ಸಂತೋಷ, ಸಮೃದ್ಧಿ ನೆಲೆಸಲು ಯಾವ ರೀತಿ ನೇಮ್ ಪ್ಲೇಟ್ ಅಳವಡಿಸಬೇಕು ಇಲ್ಲಿದೆ ಓದಿ. (ಬರಹ: ಅರ್ಚನಾ ವಿ ಭಟ್)
ಸನಾತನ ಧರ್ಮದಲ್ಲಿ ಜೀವನ ಸಂತೋಷದಿಂದ ಕೂಡಿರಬೇಕಾದರೆ ಮೊದಲು ಮನೆಯಲ್ಲಿ ಧನಾತ್ಮಕ ಶಕ್ತಿ ತುಂಬಿರಬೇಕು ಎಂದು ಹಿರಿಯರು ಹೇಳುತ್ತಾರೆ. ಅದಕ್ಕಾಗಿ ಜೀವನದಲ್ಲಿ ಸುಖ, ಸಂತೋಷ, ಸಮೃದ್ಧಿ ತರಲು ಕೆಲವು ವಾಸ್ತು ನಿಯಮಗಳನ್ನು ಪಾಲಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಮನೆಯನ್ನು ವ್ಯವಸ್ಥಿತವಾಗಿ ವಾಸ್ತು ಪ್ರಕಾರ ಜೋಡಿಸುವುದರಿಂದ ಮನೆಯಲ್ಲಿ ಸಕಾರಾತ್ಮಕತೆ ಹೆಚ್ಚುತ್ತದೆ. ಅದರಿಂದ ಕುಟುಂಬದಲ್ಲಿ ಪ್ರೀತಿ, ಸಂತೋಷ, ಸಮೃದ್ಧಿ ನೆಲೆಸುತ್ತದೆ.
ತಾಜಾ ಫೋಟೊಗಳು
ಮನೆಯ ಒಳಗಡೆ ಸಕಾರಾತ್ಮಕ ಶಕ್ತಿ ಪ್ರವೇಶಿಸಲು ಮನೆಯ ಹೊರಗೆ ಕೆಲವು ವಸ್ತುಗಳನ್ನು ಅಳವಡಿಸುವುದು ಮುಖ್ಯ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಮನೆಯ ಹೊರಗೆ ಅಳವಡಿಸಲಾಗುವ ನೇಮ್ ಪ್ಲೇಟ್, ಮನೆಗೆ ಒಳಿತನ್ನು ತರುತ್ತದೆ. ಅದು ಪ್ರೀತಿ, ವೃತ್ತಿ, ಹಣಕಾಸು, ಆರೋಗ್ಯ ಸೇರಿದಂತೆ ಜೀವನದ ಎಲ್ಲಾ ಬಗೆಯ ತೊಂದರೆಗಳನ್ನು ನಿವಾರಿಸುತ್ತದೆ. ಜೊತೆಗೆ ಕುಟುಂಬದ ಸದಸ್ಯರ ಮೇಲೂ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಆದರೆ ನಾಮಫಲಕವನ್ನು ವಾಸ್ತುವಿನ ವಿರುದ್ಧ ಅಳವಡಿಸಿದಾಗಲೂ ಅನೇಕ ತೊಂದರೆಗಳನ್ನು ಎದುರಿಸಬೇಕಾಗಬಹುದು. ಹಾಗಾಗಿ ಮನೆಗೆ ನೇಮ್ ಪ್ಲೇಟ್ ಅಳವಡಿಸುವಾಗ ಯಾವ ರೀತಿಯ ನೇಮ್ ಪ್ಲೇಟ್ ಉತ್ತಮವಾದದ್ದು? ವಾಸ್ತುಗೆ ಸಂಬಂಧಿಸಿದ ನಿಯಮಗಳೇನು? ಅದರ ಬಗ್ಗೆ ತಿಳಿಯೋಣ.
ಮನೆ ಹೆಸರು ಹಾಕುವಾಗ ಪಾಲಿಸಬೇಕಾದ ನಿಯಮಗಳಿವು
* ವಾಸ್ತು ಪ್ರಕಾರ ಮನೆಯ ಹೊರಗೆ ಆಯತಾಕಾರದ ನೇಮ್ ಪ್ಲೇಟ್ ಹಾಕಬೇಕು.
* ವೃತ್ತಾಕಾರದ ಅಥವಾ ತ್ರಿಕೋನಾಕಾರದ ನೇಮ್ ಪ್ಲೇಟ್ ಅನ್ನು ಎಂದಿಗೂ ಹಾಕಬೇಡಿ.
* ನೇಮ್ ಪ್ಲೇಟ್‌ನಲ್ಲಿ ಬರೆದಿರುವ ಅಕ್ಷರಗಳು ಮಸುಕಾಗಿರಬಾರದು. ಎಲ್ಲಾ ಅಕ್ಷರಗಳು ಸ್ಪಷ್ಟವಾಗಿ ಕಾಣಿಸುವಂತಿರಬೇಕು.
* ಉತ್ತರ ಅಥವಾ ಪೂರ್ವ ದಿಕ್ಕು ನೇಮ್ ಪ್ಲೇಟ್ ಅಳವಡಿಸಲು ಉತ್ತಮ ದಿಕ್ಕು ಎಂದು ವಾಸ್ತು ಶಾಸ್ತ್ರದಲ್ಲಿ ಪರಿಗಣಿಸಲಾಗಿದೆ. ಈಶಾನ್ಯ ಮೂಲೆಯಲ್ಲೂ ಸಹ ಹಾಕಬಹುದು.
* ಮನೆಯ ಮುಖ್ಯ ದ್ವಾರದ ಬಲಭಾಗದಲ್ಲಿ ನೇಮ್ ಪ್ಲೇಟ್ ಹಾಕುವುದು ಮಂಗಳಕರವೆಂದು ಪರಿಗಣಿಸಲಾಗಿದೆ.
* ನಿಮ್ಮ ಮನೆಯ ಮುಂದೆ ಹಾಕಿರುವ ನೇಮ್ ಪ್ಲೇಟ್ ಒಡೆದು ಹೋಗದಂತೆ ವಿಶೇಷ ಕಾಳಜಿ ವಹಿಸಿ. ಜೊತೆಗೆ ರಂಧ್ರಗಳಾಗದಂತೆಯೂ ನೋಡಿಕೊಳ್ಳಿ.
* ನೇಮ್ ಪ್ಲೇಟ್‌ನಲ್ಲಿ ಗಣಪತಿ ಅಥವಾ ಸ್ವಸ್ತಿಕ್ ಚಿಹ್ನೆ ಇರುವುದು ಮನೆಗೆ ಶುಭವನ್ನು ತರುತ್ತದೆ ಎಂದು ಹೇಳಲಾಗಿದೆ.
* ನೇಮ್ ಪ್ಲೇಟ್ ಸೀಳು ಬಿಟ್ಟಿದ್ದರೆ ಅಥವಾ ಅದರ ಪಾಲಿಶ್ ಹೋಗಿದ್ದರೆ ತಕ್ಷಣ ತೆಗೆಯಿರಿ. ಹೊಸ ನೇಮ್ ಪ್ಲೇಟ್ ಅಳವಡಿಸಿ.
* ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಂಡಂತೆ, ನೇಮ್ ಪ್ಲೇಟನ್ನು ಕೂಡಾಹ ಸ್ವಚ್ಛವಾಗಿ ಇಟ್ಟುಕೊಳ್ಳಿ.
* ತಾಮ್ರ, ಸ್ಟೀಲ್ ಅಥವಾ ಹಿತ್ತಾಳೆಯ ನೇಮ್ ಪ್ಲೇಟ್ ಆರಿಸಿಕೊಳ್ಳಬಹುದು.
* ಮನೆಯ ಮುಖ್ಯ ದ್ವಾರದ ಬಳಿ ಪ್ಲಾಸ್ಟಿಕ್ ಅಥವಾ ಕಲ್ಲಿನಿಂದ ಮಾಡಿದ ನೇಮ್ ಪ್ಲೇಟ್ ಹಾಕಬಾರದು ಎಂದು ಹೇಳಲಾಗತ್ತದೆ.
* ಬಿಳಿ, ಹಳದಿ ಮತ್ತು ಕೇಸರಿ ಬಣ್ಣಗಳ ಮಿಶ್ರಣದ ನೇಮ್ ಪ್ಲೇಟ್ ಹಾಕುವುದು ಮನೆಗೆ ಶುಭ ತರುತ್ತದೆ ಎಂಬ ನಂಬಿಕೆಯಿದೆ.
* ನೇಮ್ ಪ್ಲೇಟ್ ಹಿಂಬದಿಯಲ್ಲಿ ಜೇಡರ ಬಲೆ, ಹಲ್ಲಿ ಅಥವಾ ಹಕ್ಕಿಯ ಗೂಡು ಕಟ್ಟದಂತೆ ನೋಡಿಕೊಳ್ಳಿ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ಬರಹ: ಅರ್ಚನಾ ವಿ ಭಟ್