Vastu Tips: ಪುರುಷರು ಯಾವ ಬಣ್ಣದ ವ್ಯಾಲೆಟ್ ಬಳಸಿದರೆ ಲಕ್ಷ್ಮೀ ಕಟಾಕ್ಷ ದೊರೆಯಲಿದೆ, ವಾಸ್ತುಶಾಸ್ತ್ರದಲ್ಲಿ ಹೇಳಿರುವುದೇನು?
Jun 06, 2024 10:09 AM IST
ಪುರುಷರು ಯಾವ ಬಣ್ಣದ ವ್ಯಾಲೆಟ್ ಬಳಸಿದರೆ ಲಕ್ಷ್ಮೀ ಕಟಾಕ್ಷ ದೊರೆಯಲಿದೆ?
ಪುರುಷರು ಜೇಬಿನಲ್ಲಿ ವ್ಯಾಲೆಟ್ ಇಲ್ಲದೆ ಹೊರಗೆ ಹೋಗುವುದಿಲ್ಲ. ಫೋನ್ ಪೇ, ಗೂಗಲ್ ಪೇ ಬಳಸಿದರೂ ವ್ಯಾಲೆಟ್‌ನಲ್ಲಿ ಒಂದಿಷ್ಟು ಹಣ ಇರಲೇಬೇಕು. ಪುರುಷರಾಗಲೀ, ಮಹಿಳೆಯರರಾಗಲೀ ವಾಸ್ತು ಶಾಸ್ತ್ರದ ಪ್ರಕಾರ ಯಾವ ಬಣ್ಣದ ವ್ಯಾಲೆಟ್ ಬಳಸುವುದರಿಂದ ಅದೃಷ್ಟ, ಹಣದ ಬಲ ಹೆಚ್ಚಲಿದೆ? ಇಲ್ಲಿದೆ ಮಾಹಿತಿ
ನಾವೀಗ ಡಿಜಿಟಲ್ ಯುಗದಲ್ಲಿದ್ದೇವೆ. ಗೂಗಲ್ ಪೇ, ಫೋನ್ ಪೇ, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಎಂದೆಲ್ಲಾ ಬಳಸುತ್ತೇವೆ. ಆದರೂ ಮನೆಯಿಂದ ಹೊರಗೆ ಹೊರಟರೆ ಸಾಕು ಒಂದು ವ್ಯಾಲೆಟ್ ಅದರಲ್ಲೊಂದಿಷ್ಟು ಹಣ ಇರಲೇಬೇಕು. ಸಾಮಾನ್ಯವಾಗಿ ಪುರುಷರಂತೂ ವ್ಯಾಲೆಟ್ ಇಲ್ಲದೇ ಹೊರಗೆ ಹೋಗುವುದೇ ಇಲ್ಲ. ಪ್ಯಾಂಟ್‌ನ ಪಾಕೆಟ್‌ನಲ್ಲಿ ಇಟ್ಟುಕೊಳ್ಳಬಹುದಾದ ಪಾಕೆಟ್ ಪರ್ಸ್‌ನ್ನೇ ಹೆಚ್ಚಾಗಿ ಬಳಸುತ್ತಾರೆ.
ತಾಜಾ ಫೋಟೊಗಳು
ಮಹಿಳೆಯರು ವ್ಯಾನಿಟಿ ಬ್ಯಾಗ್, ಪಾಕೆಟ್ ಪರ್ಸ್, ಲಾರ್ಜ್ ಪರ್ಸ್, ಹ್ಯಾಂಡ್ ಬ್ಯಾಗ್ ಎಂದೆಲ್ಲಾ ಬಳಸುತ್ತಾರೆ. ಹೆಸರು ಏನೇ ಇರಲಿ ಅವೆಲ್ಲನ್ನು ಬಳಸುವುದು ಹಣ ಇರಿಸಿಕೊಳ್ಳಲು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಪರ್ಸ್‌ಗಳ ಬಣ್ಣವು ಅದೃಷ್ಟ, ಯಶಸ್ಸು ಮತ್ತು ಹಣವನ್ನು ತರುತ್ತದೆ. ನಿಮ್ಮ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ವಾಸ್ತು ಶಾಸ್ತ್ರಜ್ಞರ ಪ್ರಕಾರ ಯಾವ ಬಣ್ಣದ ಪರ್ಸ್‌ಗಳನ್ನು ಬಳಸಬೇಕು ಮತ್ತು ಯಾವ ಬಣ್ಣದ ಪರ್ಸ್‌ಗಳಿಂದ ದೂರವಿರಬೇಕು ಎಂಬುದನ್ನು ತಿಳಿದುಕೊಳ್ಳಿ.
ಕೇಸರಿ ಬಣ್ಣ
ವ್ಯಾಲೆಟ್‌ಗಳು ಕೇಸರಿ ಬಣ್ಣದಲ್ಲೂ ಸಿಗುತ್ತವೆ . ಕೇಸರಿ ಬಣ್ಣದ ವ್ಯಾಲೆಟ್ ಪುರುಷ ಮತ್ತು ಮಹಿಳೆ ಇಬ್ಬರಿಗೂ ಉತ್ತಮವಾಗಿದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಎಲ್ಲಾ ಬಣ್ಣಗಳಲ್ಲಿ ಕೇಸರಿಯು ಅತ್ಯಂತ ಶಕ್ತಿಶಾಲಿ ಬಣ್ಣ ಎಂದು ಹೇಳಲಾಗುತ್ತದೆ. ಈ ಬಣ್ಣದ ಪರ್ಸ್ ಬಳಸುವುದರಿಂದ ಕೈ ಹಾಕಿದ ಕೆಲಸ ಕಾರ್ಯಗಳೆಲ್ಲವು ಸಕಾರಾತ್ಮಕವಾಗಿರುತ್ತದೆ. ಅದೃಷ್ಟ ಕೂಡಿ ಬರುತ್ತದೆ.
ಹಸಿರು ಬಣ್ಣ
ಹಸಿರು ಬಣ್ಣದ ವ್ಯಾಲೆಟ್ ಅಥವಾ ಹ್ಯಾಂಡ್ ಪರ್ಸ್‌ಗಳನ್ನು ಬಳಸುವುದರಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಹಸಿರು ಬಣ್ಣದ ಪರ್ಸ್ ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಆರ್ಥಿಕ ಪ್ರಗತಿಯನ್ನೂ ಕಾಣಬಹುದಾಗಿದೆ. ಹಸಿರು ಬಣ್ಣವು ಅಭಿವೃದ್ಧಿಯನ್ನು ಸಂಕೇತಿಸುವ ಬಣ್ಣವಾಗಿರುವುದರಿಂದ ಸಾಧ್ಯವಾದಷ್ಟು ಹಸಿರು ಬಣ್ಣದ ವ್ಯಾಲೆಟ್‌ಗಳನ್ನು ಬಳಸುವುದು ಉತ್ತಮ.
ನೀಲಿ ಬಣ್ಣ
ನೀಲಿ ಬಣ್ಣದ ವ್ಯಾಲೆಟ್ ಕೂಡ ತುಂಬಾ ಒಳ್ಳೆಯದು. ವಾಸ್ತವವಾಗಿ, ನೀಲಿ ಶಾಂತತೆಯನ್ನು ಪ್ರತಿನಿಧಿಸುತ್ತದೆ. ಈ ಬಣ್ಣದ ವ್ಯಾಲೆಟ್ ಬಳಸುವುದರಿಂದ ಆರ್ಥಿಕ ಬಿಕ್ಕಟ್ಟುಗಳನ್ನು ದೂರ ಮಾಡಿಕೊಳ್ಳಬಹುದು. ನೀಲಿ ಬಣ್ಣದಲ್ಲಿ ಸಕಾರಾತ್ಮಕತೆ ಇರುವುದರ ಜೊತೆಗೆ ಆರ್ಥಿಕ ಪ್ರಗತಿಯನ್ನು ಕಾಣಬಹುದಾಗಿದೆ.
ಕಂದು ಬಣ್ಣ
ಕಂದು ಬಣ್ಣವನ್ನು ಶಕ್ತಿಯುತವಾದ ಬಣ್ಣ ಎಂದು ಕರೆಯುತ್ತಾರೆ. ಇದಕ್ಕೆ ಯಶಸ್ಸನ್ನು ಆಕರ್ಷಿಸತ್ತದೆ ಎಂದು ವಾಸ್ತು ಶಾಸ್ತ್ರವು ಹೇಳುತ್ತದೆ. ಈ ಬಣ್ಣದ ವ್ಯಾಲೆಟ್ ಬಳಸುವುದರಿಂದ ಖರ್ಚು–ವೆಚ್ಚಗಳು ಕೆಡಿಮೆಯಾಗಬಹುದು. ಈ ಬಣ್ಣದ ಪರ್ಸ್ ಅನ್ನು ಇಟ್ಟುಕೊಳ್ಳುವುದರಿಂದ ಅನಗತ್ಯ ವೆಚ್ಚ ಕಡಿಮೆಯಾಗುತ್ತದೆ.
ಕೆಂಪು ಬಣ್ಣ
ಆದರೆ ಪುರುಷರಾಗಲೀ, ಮಹಿಳೆಯರಾಗಲೀ ಕೆಂಪು ಬಣ್ಣದ ವ್ಯಾಲೆಟ್ ಬಳಸದಿರುವುದು ಉತ್ತಮ. ಕೆಂಪು ಬಣ್ಣ ವೆಚ್ಚವನ್ನು ಹೆಚ್ಚಿಸುತ್ತದೆ. ಕೆಂಪು ಬಣ್ಣದ ಪರ್ಸ್ ಬಳಸಿದರೆ, ಹಣ ನೀರಿನಂತೆ ವ್ಯರ್ಥವಾಗುತ್ತದೆ ಎಂಬ ನಂಬಿಕೆ ಇದೆ. ಇದು ಖರ್ಚು ವೆಚ್ಚವನ್ನು ನಿಯಂತ್ರಣದಲ್ಲಿ ಇಡುವುದಿಲ್ಲ. ಆದರೆ ಈ ಬಣ್ಣವು ಅದೃಷ್ಟವನ್ನು ಹೆಚ್ಚಿಸುತ್ತದೆ ಮತ್ತು ಭದ್ರತೆಯನ್ನು ನೀಡುತ್ತದೆ ಎಂದು ನಂಬಲಾಗಿದೆ. ಆದ್ದರಿಂದ ನೀವು ಇಷ್ಟಪಡುವ ಯಾವುದೇ ಬಣ್ಣದ ವ್ಯಾಲೆಟ್ ಅನ್ನು ಬಳಸುವ ಮೊದಲು ನಿಮಗೆ ಸರಿಹೊಂದುವ ಬಣ್ಣದ ವ್ಯಾಲೆಟ್ ಅನ್ನು ಆಯ್ಕೆ ಮಾಡಿಕೊಳ್ಳಿ ಅನಗತ್ಯ ವೆಚ್ಚದಿಂದ ದೂರವಿರಿ.
ಬರಹ: ಅರ್ಚನಾ ಹೆಗ್ಡೆ
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.