logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮನೆಯಲ್ಲಿ ಲಕ್ಷ್ಮೀ ವಿಗ್ರಹ ಇದ್ಯಾ? ದೇವರ ಕೋಣೆಯಲ್ಲಿ ಈ ವಾಸ್ತುಗಳನ್ನು ಅನುಸರಿಸಿದರೆ ಲಕ್ಷೀ ಶಾಶ್ವತವಾಗಿ ನೆಲೆಸುತ್ತಾಳೆ

ಮನೆಯಲ್ಲಿ ಲಕ್ಷ್ಮೀ ವಿಗ್ರಹ ಇದ್ಯಾ? ದೇವರ ಕೋಣೆಯಲ್ಲಿ ಈ ವಾಸ್ತುಗಳನ್ನು ಅನುಸರಿಸಿದರೆ ಲಕ್ಷೀ ಶಾಶ್ವತವಾಗಿ ನೆಲೆಸುತ್ತಾಳೆ

Rakshitha Sowmya HT Kannada

Jun 11, 2024 01:43 PM IST

google News

ಮನೆಯಲ್ಲಿ ಲಕ್ಷ್ಮೀ ವಿಗ್ರಹ ಇದ್ಯಾ? ದೇವರ ಕೋಣೆಯಲ್ಲಿ ಈ ವಾಸ್ತುಗಳನ್ನು ಅನುಸರಿಸಿದರೆ ಲಕ್ಷೀ ಶಾಶ್ವತವಾಗಿ ನೆಲೆಸುತ್ತಾಳೆ

  • ಎಲ್ಲ ಹಿಂದೂಗಳ ದೇವರ ಕೋಣೆಯನ್ನು ಲಕ್ಷ್ಮೀ ವಿಗ್ರಹವಿರುತ್ತದೆ. ಲಕ್ಷ್ಮೀಯು ಮನೆಯಲ್ಲಿ ಶಾಶ್ವತವಾಗಿ ನೆಲೆಸಿರಬೇಕೆಂದರೆ ದೇವರ ಕೋಣೆಗೆ ಸಂಬಂಧಿಸಿದ ಈ ವಾಸ್ತು ಟಿಪ್ಸ್‌ ಅನುಸರಿಸಿ. ಹೀಗೆ ಮಾಡಿದರೆ ಆ ಕುಟುಂಬದಲ್ಲಿ ಆರ್ಥಿಕ ಸಮಸ್ಯೆ ಎಂಬುದೇ ಇರುವುದಿಲ್ಲ. 

ಮನೆಯಲ್ಲಿ ಲಕ್ಷ್ಮೀ ವಿಗ್ರಹ ಇದ್ಯಾ? ದೇವರ ಕೋಣೆಯಲ್ಲಿ ಈ ವಾಸ್ತುಗಳನ್ನು ಅನುಸರಿಸಿದರೆ ಲಕ್ಷೀ ಶಾಶ್ವತವಾಗಿ ನೆಲೆಸುತ್ತಾಳೆ
ಮನೆಯಲ್ಲಿ ಲಕ್ಷ್ಮೀ ವಿಗ್ರಹ ಇದ್ಯಾ? ದೇವರ ಕೋಣೆಯಲ್ಲಿ ಈ ವಾಸ್ತುಗಳನ್ನು ಅನುಸರಿಸಿದರೆ ಲಕ್ಷೀ ಶಾಶ್ವತವಾಗಿ ನೆಲೆಸುತ್ತಾಳೆ

ಮನೆಯಲ್ಲಿ ನಕಾರಾತ್ಮಕತೆಯನ್ನು ದೂರ ಮಾಡಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಲು ವಾಸ್ತು ಶಾಸ್ತ್ರದಲ್ಲಿ ಹಲವು ಮಾರ್ಗಗಳಿವೆ. ಇದು ದೇವರ ಕೋಣೆಗೂ ಅನ್ವಯಿಸುತ್ತದೆ. ಬಹಳಷ್ಟು ಜನರು ದೇವರ ಕೋಣೆಗೆ ಸಂಬಂಧಿಸಿದಂತೆ ಬಹಳ ತಪ್ಪು ಮಾಡುತ್ತಾರೆ. ಈ ತಪ್ಪುಗಳಿಂದ ಅವರು ಜೀವನದಲ್ಲಿ ಬಹಳ ಸಮಸ್ಯೆ ಅನುಭವಿಸುತ್ತಾರೆ. ಸರಿಯಾದ ದೇವರ ವಿಗ್ರಹವನ್ನು ತರದೇ ಇರುವುದು, ಅದನ್ನು ಸೂಕ್ತ ದಿಕ್ಕಿನಲ್ಲಿ ಇರಿಸದೆ ಇರುವುದು ಮಾಡಿದರೆ ಬಹಳ ಸಮಸ್ಯೆಗಳು ಉಂಟಾಗಬಹುದು.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ದೇವರ ಮನೆಗೆ ಸಂಬಂಧಿಸಿದಂತೆ ಸರಿಯಾದ ವಾಸ್ತು ನಿಯಮಗಳನ್ನು ಪಾಲಿಸದಿದ್ದರೆ ಮನೆಯಲ್ಲಿ ನೆಗೆಟಿವ್‌ ಎನರ್ಜಿ ಹೆಚ್ಚಾಗುತ್ತದೆ. ಈ ವಾಸ್ತು ಸಲಹೆ ಲಕ್ಷ್ಮೀ ದೇವಿಯ ವಿಗ್ರಹಕ್ಕೂ ಅನ್ವಯಿಸುತ್ತದೆ. ಲಕ್ಷ್ಮೀಯನ್ನು ಸಂಪತ್ತಿನ ದೇವತೆ ಎಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿ ದೇವಿ ನೆಲೆಸಿರುವ ಮನೆಯಲ್ಲಿ ಸಂತೋಷಕ್ಕೆ ಕೊರತೆಯಿಲ್ಲ ಎಂಬ ನಂಬಿಕೆ ಇದೆ. ವಾಸ್ತು ಶಾಸ್ತ್ರದ ಪ್ರಕಾರ ಲಕ್ಷ್ಮಿಯ ವಿಗ್ರಹವನ್ನು ದೇವರ ಕೋಣೆಯಲ್ಲಿ ಯಾವ ದಿಕ್ಕಿನಲ್ಲಿ ಇಡುವುದು ಉತ್ತಮ ಎಂಬುದನ್ನು ನೋಡೋಣ.

ಮನೆಯಲ್ಲಿ ಎಷ್ಟು ಲಕ್ಷ್ಮೀ ವಿಗ್ರಹಗಳನ್ನು ಇಡಬಹುದು?

ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಲಕ್ಷ್ಮೀ ವಿಗ್ರಹಗಳನ್ನು ಇಡಬಾರದು. ಈ ನಿಯಮ ತಪ್ಪಿದರೆ ನಕಾರಾತ್ಮಕ ಶಕ್ತಿ ಹರಡುತ್ತದೆ. ಸಾಮಾನ್ಯವಾಗಿ ಅನೇಕ ಮನೆಗಳಲ್ಲಿ ಲಕ್ಷ್ಮಿ ದೇವಿಯ ವಿಗ್ರಹವನ್ನು ಗಣೇಶನ ಪಕ್ಕದಲ್ಲಿ ಇರಿಸಲಾಗುತ್ತದೆ. ಲಕ್ಷ್ಮೀಯನ್ನು ಗಣೇಶನ ಪಕ್ಕವೇ ಇಡಲೇಬೇಕೆಂಬ ನಿಯಮವಿಲ್ಲ. ವಿಷ್ಣು ಮತ್ತು ಕುಬೇರನ ಪಕ್ಕದಲ್ಲಿ ಕೂಡಾ ಲಕ್ಷ್ಮೀ ವಿಗ್ರಹವನ್ನು ಇಡಬಹುದು. ಗಣೇಶನ ಬಲಭಾಗದಲ್ಲಿ ಲಕ್ಷ್ಮೀಯನ್ನು ಇಡಬಹುದು. ಅಲ್ಲದೆ, ವಿಷ್ಣುಮೂರ್ತಿಯ ಎಡಭಾಗದಲ್ಲಿ ಕೂಡಾ ಲಕ್ಷ್ಮಿ ದೇವಿಯ ವಿಗ್ರಹವನ್ನು ಇಡಬಹುದು.

ಯಾವ ದಿಕ್ಕಿನಲ್ಲಿ ಲಕ್ಷ್ಮೀ ವಿಗ್ರಹ ಇಡಬೇಕು?

ಮನೆಯ ಪೂಜಾ ಕೋಣೆಯಲ್ಲಿ ಲಕ್ಷ್ಮಿ ದೇವಿಯ ವಿಗ್ರಹವನ್ನು ಯಾವಾಗಲೂ ಇಡಬೇಕು. ವಿಗ್ರಹವನ್ನು ಎಂದಿಗೂ ನೆಲದ ಮೇಲೆ ಇಡಬಾರದು. ಮನೆಯಲ್ಲಿ ಪೂಜಾ ಕೊಠಡಿ ಇಲ್ಲದಿದ್ದರೆ ಮೇಜು ಹಾಕಿ ಅದರ ಮೇಲೆ ದೇವಿಯ ಮೂರ್ತಿ ಇಡಬಹುದು. ವಾಸ್ತು ಪ್ರಕಾರ ಲಕ್ಷ್ಮಿ ದೇವಿಯ ವಿಗ್ರಹವನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಇರಿಸುವುದರಿಂದ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಇದನ್ನು ವಾಯುವ್ಯ ದಿಕ್ಕಿನಲ್ಲಿಯೂ ಇಡಬಹುದು. ಹಾಗೇ ಕಮಲದ ಮೇಲೆ ಕುಳಿತಿರುವ ಲಕ್ಷ್ಮಿ ದೇವಿಯ ವಿಗ್ರಹವನ್ನು ಮಾತ್ರ ಮನೆಯಲ್ಲಿ ಪ್ರತಿಷ್ಠಾಪಿಸಬೇಕು. ನಿಂತಿರುವ ಭಂಗಿಯಲ್ಲಿರುವ ಲಕ್ಷ್ಮೀ ವಿಗ್ರಹವನ್ನು ಖರೀದಿಸಬಾರದು. ಹಾಗೆಯೇ ಮುರಿದ ವಿಗ್ರಹವನ್ನು ಮನೆಯಲ್ಲಿ ಇಡಬಾರದು.

ಇನ್ನಷ್ಟು ಸಲಹೆಗಳು

  • ಲಕ್ಷ್ಮೀಯನ್ನು ಚಂಚಲೆ ಎಂದು ಹೇಳಲಾಗುತ್ತದೆ. ಆದ್ದರಿಂದಲೇ ಮನೆಯಲ್ಲಿ ಲಕ್ಷ್ಮಿ ದೇವಿಯನ್ನು ಇರಿಸಿಕೊಳ್ಳಲು ಕೆಲವು ವಸ್ತುಗಳನ್ನು ಮನೆಗೆ ತಂದು ಪೂಜಿಸುವುದು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಇವುಗಳಲ್ಲಿ ಮೊದಲನೆಯದು ಕಮಲ. ಲಕ್ಷ್ಮಿ ದೇವಿಯು ಕಮಲದಲ್ಲಿ ನೆಲೆಸಿದ್ದಾಳೆ ಎಂದು ಎಲ್ಲರಿಗೂ ತಿಳಿದಿದೆ. ಅದಕ್ಕಾಗಿಯೇ ಪೂಜೆಗೆ ಕಮಲದ ಹೂವುಗಳನ್ನು ಇಡಲಾಗುತ್ತದೆ. ಲಕ್ಷ್ಮಿ ದೇವಿಗೆ ಪದ್ಮಿನಿ ಪದ್ಮಪ್ರಿಯ ಎಂಬ ಹೆಸರುಗಳಿವೆ. ಆದ್ದರಿಂದ ಅವಳನ್ನು ಮೆಚ್ಚಿಸಲು ಕಮಲದ ಹೂವುಗಳನ್ನು ಪೂಜೆಯಲ್ಲಿ ಇಡಬೇಕು.
  • ಲಕ್ಷ್ಮಿ ದೇವಿಯು ಹಸುವಿನ ಹಿಂಭಾಗದಲ್ಲಿ ನೆಲೆಸಿದ್ದಾಳೆ ಎಂದು ಹೇಳಲಾಗುತ್ತದೆ. ಹಿಂದೂ ಧರ್ಮದಲ್ಲಿ ಹಸುವನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಗೋವುಗಳಿಗೆ ಆಹಾರ ನೀಡಿ ಪೂಜಿಸುವವರು ಲಕ್ಷ್ಮೀ ಅನುಗ್ರಹವನ್ನು ಪಡೆಯುತ್ತಾರೆ ಎಂದು ಹೇಳಲಾಗುತ್ತದೆ.
  • ಆನೆಯನ್ನು ಲಕ್ಷ್ಮಿ ದೇವಿಯ ವಾಹನ ಎಂದೂ ಹೇಳಲಾಗುತ್ತದೆ. ಆದ್ದರಿಂದ ಲಕ್ಷ್ಮೀ ಸ್ವರೂಪವಾದ. ಆನೆಯನ್ನು ನೋಡುವುದು ಕೂಡ ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಗಜಲಕ್ಷ್ಮಿ ಕೂಡ ಲಕ್ಷ್ಮಿ ದೇವಿಯ ಒಂದು ರೂಪ.
  • ಬೆಳಗ್ಗೆ ಎದ್ದು ಅಂಗೈಯನ್ನು ನೋಡಿ ಕರಾಗ್ರೇ ವಸತೇ ಲಕ್ಷ್ಮೀ | ಕರಮಧ್ಯೇ ಸರಸ್ವತೀ ಕರಮೂಲೇ ಸ್ಥಿತೇ ಗೌರಿ | ಪ್ರಭಾತೇ ಕರದರ್ಶನಂ || ಎಂಬ ಮಂತ್ರವನ್ನು ಹೇಳಿ ಕೈ ಮುಗಿದರೆ, ಕೈಗಳನ್ನು ಕಣ್ಣಿಗೆ ಒತ್ತಿಕೊಂಡರೆ ಕೂಡಾ ಲಕ್ಷ್ಮೀ ಕೃಪೆ ದೊರೆಯುತ್ತದೆ ಎಂಬ ನಂಬಿಕೆ ಇದೆ.

ಇದನ್ನೂ ಓದಿ: ಮಹಾಭಾರತದ ಖಳನಾಯಕನಿಗೂ ಇದೆ ದೇವಸ್ಥಾನ, ಕಲ್ಲುಗಳೇ ಇಲ್ಲಿ ನೈವೇದ್ಯ; ದುರ್ಯೋಧನ ದೇವಸ್ಥಾನದ ಇತಿಹಾಸ ಹೀಗಿದೆ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ