logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ವೃಶ್ಚಿಕ ರಾಶಿಯ ಶ್ರೀ ಕ್ರೋಧಿನಾಮ ಸಂವತ್ಸರದ ವರ್ಷ ಭವಿಷ್ಯ: ಅಂದುಕೊಂಡ ಕೆಲಸಗಳಲ್ಲಿ ನಿಶ್ಚಿತ ಯಶಸ್ಸು, ವಿವಾಹ ಯೋಗವಿದೆ

ವೃಶ್ಚಿಕ ರಾಶಿಯ ಶ್ರೀ ಕ್ರೋಧಿನಾಮ ಸಂವತ್ಸರದ ವರ್ಷ ಭವಿಷ್ಯ: ಅಂದುಕೊಂಡ ಕೆಲಸಗಳಲ್ಲಿ ನಿಶ್ಚಿತ ಯಶಸ್ಸು, ವಿವಾಹ ಯೋಗವಿದೆ

Reshma HT Kannada

Mar 30, 2024 06:00 AM IST

google News

ವೃಶ್ಚಿಕ ರಾಶಿ ಯುಗಾದಿ ಭವಿಷ್ಯ

    • ಯುಗಾದಿ ರಾಶಿ ಭವಿಷ್ಯ: ಹಾಸ್ಯಗುಣವುಳ್ಳ ವೃಶ್ಚಿಕ ರಾಶಿಯವರು ಸ್ವಾರ್ಥಿಗಳಾದರೂ ಬೇರೆಯವರಿಗೆ ನೋವು ಕೊಡಲು ಬಯಸುವುದಿಲ್ಲ. ಜೀವನದಲ್ಲಿ ಏನಾದ್ರೂ ಸಾಧಿಸಬೇಕು ಎಂಬ ಛಲ ಹೊಂದಿರುವವರು. ವೃಶ್ಚಿಕ ರಾಶಿಗೆ ಈ ವರ್ಷ ಯಾವುದರಲ್ಲಿ ಬೇವು, ಯಾವುದರಲ್ಲಿ ಬೆಲ್ಲ; ಜ್ಯೋತಿಷಿ ಎಚ್.ಸತೀಶ್ ಈ ಬರಹದಲ್ಲಿ ವಿವರ ನೀಡಿದ್ದಾರೆ.
ವೃಶ್ಚಿಕ ರಾಶಿ ಯುಗಾದಿ ಭವಿಷ್ಯ
ವೃಶ್ಚಿಕ ರಾಶಿ ಯುಗಾದಿ ಭವಿಷ್ಯ

ವೃಶ್ಚಿಕ ರಾಶಿಯ ಯುಗಾದಿ ವರ್ಷ ಭವಿಷ್ಯ: ನೀವು ವಿಶಾಖ ನಕ್ಷತ್ರದ 4ನೇ ಪಾದ, ಅನುರಾಧ ನಕ್ಷತ್ರದ 1,2,3 ಮತ್ತು 4ನೇ ಪಾದಗಳು, ಜ್ಯೇಷ್ಠ ನಕ್ಷತ್ರದ 1,2,3 ಮತ್ತು 4ನೇ ಪಾದದಲ್ಲಿ ಜನಿಸಿದ್ದಲ್ಲಿ ನಿಮ್ಮದು ವೃಶ್ಚಿಕ ರಾಶಿ ಆಗುತ್ತದೆ. ನಿಮ್ಮ ಹೆಸರಿನ ಮೊದಲ ಅಕ್ಷರವು ತೊ ಆದಲ್ಲಿ ವಿಶಾಖ ನಕ್ಷತ್ರ, ನ, ನಿ, ನು ಮತ್ತು ನೆ ಆದಲ್ಲಿ ಅನುರಾಧಾ ನಕ್ಷತ್ರ ಹಾಗೂ ನೊ, ಯ, ಯಿ ಮತ್ತು ಯು ಆದಲ್ಲಿ ಜ್ಯೇಷ್ಠ ನಕ್ಷತ್ರ ಹಾಗೂ ವೃಶ್ಚಿಕ ರಾಶಿ ಆಗುತ್ತದೆ. ಸ್ನೇಹ ಗುಣದ ವೃಶ್ಚಿಕ ರಾಶಿಯವರು ನೋವನ್ನು ನುಂಗಿ ನಗುವಿನ ಮುಖವಾಡ ಧರಿಸಿರುತ್ತಾರೆ. ಏಕಾಂತವನ್ನು ಇಷ್ಟಪಡುವ ಇವರಲ್ಲಿ ಹಾಸ್ಯಮನೋಭಾವ ತುಂಬಿರುತ್ತದೆ. ಜಗಳವಾಡಿದಷ್ಟೇ ಬೇಗ ಪ್ರೀತಿಯನ್ನೂ ಮಾಡುತ್ತಾರೆ. ಸಾಧಿಸುವ ಛಲವೇ ಇವರ ಯಶಸ್ಸಿನ ಅಸ್ತ್ರ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ವೃಶ್ಚಿಕ ರಾಶಿಯ ಗುಣಲಕ್ಷಣಗಳು (Scorpio characteristics in Kannada)

ವೃಶ್ಚಿಕ ರಾಶಿಯಲ್ಲಿ ಜನಿಸಿದ ಮಹಿಳೆಯರಿಗೆ ಸ್ನೇಹಮಯ ವ್ಯಕ್ತಿತ್ವವಿರುತ್ತದೆ. ಕೇವಲ ಕುಟುಂಬದವರನ್ನು ಮಾತ್ರವಲ್ಲದೆ ಹೊರಗಿನವರನ್ನು ಸಹ ಪ್ರೀತಿ, ವಿಶ್ವಾಸದಿಂದ ಕಾಣುತ್ತಾರೆ. ಸಮಾಜದಲ್ಲಿ ಜನಪ್ರಿಯತೆ ಮತ್ತು ಉನ್ನತ ಸ್ಥಾನಮಾನ ಲಭಿಸುತ್ತದೆ. ಮನದ ನೋವನ್ನು ನುಂಗಿ ಸದಾ ಕಾಲ ನಗುತ್ತಾ ಬಾಳುವುದು ಇವರ ವಿಶೇಷ ಗುಣ. ಏಕಾಂತವನ್ನು ಇಷ್ಟಪಡುತ್ತಾರೆ. ಯಾರ ಮೇಲೂ ಅವಲಂಬಿತರಾಗಿ ಬಾಳುವುದು ಇಷ್ಟವಾಗುವುದಿಲ್ಲ. ಯಾರಿಂದಲೂ ಟೀಕೆ ಮಾತುಗಳನ್ನು ಕೇಳುವುದಿಲ್ಲ. ಉತ್ತಮ ಹಾಸ್ಯದ ಪರಿಜ್ಞಾನವಿರುತ್ತದೆ. ದೀರ್ಘಕಾಲದ ಪ್ರವಾಸ ಮಾಡುವುದೆಂದರೆ ಬಲು ಇಷ್ಟ. ಈಗಿನ ಕಾಲದ ಮೊಬೈಲ್ ಫೋನ್ ಇವರ ನಿಜವಾದ ಸ್ನೇಹಿತ ಅಥವಾ ಸ್ನೇಹಿತೆ. ಪತಿಯ ಮೇಲೆ ವಿಶೇಷವಾದ ಒಲವು ಇರುತ್ತದೆ. ಸ್ವಾರ್ಥಿಗಳೂ ಹೌದು. ತಾವು ಪಾಲಿಸದೇ ಹೋದರು ಬೇರೆಯವರಿಗೆ ಬುದ್ಧಿವಾದ ಹೇಳುವುದರಲ್ಲಿ ನಿಸ್ಸೀಮರು.

ವೃಶ್ಚಿಕ ರಾಶಿಯಲ್ಲಿ ಜನಿಸಿರುವ ಪುರುಷರು ಸದಾ ಕಾಲ ಉತ್ಸಾಹದಿಂದ ಕೂಡಿರುತ್ತಾರೆ. ಬೇರೆಯವರ ಮಾತನ್ನು ಕೇಳದೆ ಸದಾಕಾಲ ಏನಾದರೂ ಒಂದು ಕೆಲಸವನ್ನು ನಿರ್ವಹಿಸುತ್ತಾರೆ. ಇವರಿಗೆ ಸಹ ಏಕಾಂತವೆಂದರೆ ಇಷ್ಟ. ಮುಖದಲ್ಲಿ ಸದಾಕಾಲ ನಗುವು ತುಂಬಿರುತ್ತದೆ. ಮನಸ್ಸಿನಲ್ಲಿ ಕೆಟ್ಟ ಉದ್ದೇಶ ಇರುವುದಿಲ್ಲ. ಸಮಯಕ್ಕೆ ತಕ್ಕಂತೆ ನಗೆಹನಿಗಳನ್ನು ಹೇಳಬಲ್ಲರು. ಪ್ರೇಮ ವಿವಾಹದಲ್ಲಿ ಇವರಿಗೆ ನಂಬಿಕೆ ಇರುವುದಿಲ್ಲ. ತಂದೆ ತಾಯಿ ಎಂದರೆ ವಿಶೇಷ ಭಕ್ತಿ ಮತ್ತು ಗೌರವ. ತಪ್ಪು ಮಾಡಿ ನೊಂದು ಬಂದ ಜನರನ್ನು ದೂರ ಮಾಡುವುದಿಲ್ಲ. ಯಾವುದೇ ಜವಾಬ್ದಾರಿಯನ್ನು ಸುಲಭವಾಗಿ ನಿರ್ವಹಿಸಬಲ್ಲರು.

ಸಾಮಾನ್ಯವಾಗಿ ಈ ರಾಶಿಯಲ್ಲಿ ಜನಿಸಿದ ಜನರು ಶೀಘ್ರ ಕೋಪಿಗಳು. ಆದರೆ ಯಾರಿಗೂ ತೊಂದರೆ ನೀಡುವುದಿಲ್ಲ. ಕೋಪ ಬಂದಾಗ ಆ ಸ್ಥಳವನ್ನು ಬಿಟ್ಟು ಬೇರೆಡೆಗೆ ಸಾಗುತ್ತಾರೆ. ಸಹಜವಾಗಿ ಕೆಲ ದಿನಗಳ ನಂತರ ಜಗಳವಾಡಿದವರ ಪ್ರೀತಿ, ವಿಶ್ವಾಸವನ್ನು ಮತ್ತೊಮ್ಮೆ ಬಯಸುತ್ತಾರೆ. ಜೀವನದಲ್ಲಿ ಏನಾದರೂ ವಿಶೇಷತೆ ಇರಬೇಕೆಂದು ಬಯಸುವವರು. ಸಾಧನೆಯೇ ಇವರ ಪರಮ ಗುರಿ.

ವೃಶ್ಚಿಕ ರಾಶಿಗೆ ಶುಭ ದಿನಾಂಕ, ವಾರ, ಬಣ್ಣ

ವೃಶ್ಚಿಕ ರಾಶಿಗೆ ಸೇರಿದವರು ಈ ವಿಚಾರಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ಶುಭ ದಿನಾಂಕಗಳು: 1, 2, 3, 4, 7, 9. ಶುಭ ದಿನಗಳು: ಭಾನುವಾರ, ಸೋಮವಾರ, ಮಂಗಳವಾರ ಮತ್ತು ಗುರುವಾರ, ಶುಭ ವರ್ಣ: ಹಳದಿ, ಕೆಂಪು, ಕಿತ್ತಳೆ ಮತ್ತು ಕ್ರೀಂ, ಅಶುಭ ವರ್ಣ: ಹಳದಿ ಮಿಶ್ರಿತ ಹಸಿರು, ಶುಭ ದಿಕ್ಕು: ಪೂರ್ವ ಮತ್ತು ಉತ್ತರ, ಶುಭ ತಿಂಗಳು: ಏಪ್ರಿಲ್ 15 ರಿಂದ ಮೇ 14 ಮತ್ತು ಆಗಸ್ಟ್ 15 ರಿಂದ ಅಕ್ಟೋಬರ್ 14, ಶುಭ ಹರಳು: ಮಾಣಿಕ್ಯ, ಹವಳ, ಮುತ್ತು ಮತ್ತು ಕನಕ ಪುಷ್ಯರಾಗ, ಶುಭ ರಾಶಿ: ಧನಸ್ಸು, ಮೀನ, ಕಟಕ ಮತ್ತು ಸಿಂಹ, ಅಶುಭ ರಾಶಿ: ಮಕರ, ಮೇಷ, ವೃಷಭ ಮತ್ತು ತುಲಾ

ಶ್ರೀ ಕ್ರೋಧಿನಾಮ ಸಂವತ್ಸರದ ವೃಶ್ಚಿಕ ರಾಶಿಯ ಗೋಚಾರ ಫಲ

ಶ್ರೀ ಕ್ರೋಧಿನಾಮ ಸಂವತ್ಸರದಲ್ಲಿ ವೃಶ್ಚಿಕ ರಾಶಿಗೆ ಸೇರಿದವರಿಗೆ ಆರಂಭದಲ್ಲಿ ಹೆಚ್ಚಿನ ಶುಭಫಲಗಳು ದೊರೆಯಲಿವೆ. ಅನಂತರವೂ ಜೀವನದಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ. ಗುರುವು ಮೇ ತಿಂಗಳಲ್ಲಿ ಸಪ್ತಮ ಭಾವಕ್ಕೆ ಬರಲಿದ್ದಾನೆ. ಅನಂತರ ಬಹುತೇಕ ಕೆಲಸ-ಕಾರ್ಯಗಳು ಸುಗಮವಾಗಿ ನಡೆಯಲಿವೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಕೋಪವನ್ನು ಕಡಿಮೆ ಮಾಡಿಕೊಂಡು ಪ್ರೀತಿಯಿಂದ ನಡೆದುಕೊಂಡಲ್ಲಿ ನಿಮ್ಮ ಸಹಾಯಕ್ಕೆ ಬಹಳಷ್ಟು ಮಂದಿ ಬರುತ್ತಾರೆ. ಸಮಾಜದಲ್ಲಿ ಉನ್ನತ ಮಟ್ಟದ ಗೌರವ ಮತ್ತು ಸ್ಥಾನಮಾನ ಲಭಿಸುತ್ತದೆ. ಕೈ ಹಿಡಿದ ಕೆಲಸ ಕಾರ್ಯಗಳಲ್ಲಿ ನಿರೀಕ್ಷಿಸಿದ ಯಶಸ್ಸು ದೊರೆಯುತ್ತದೆ.

ಪ್ರೀತಿಪಾತ್ರರಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧ

ವೃಶ್ಚಿಕ ರಾಶಿಗೆ ಸೇರಿದವರು ಪ್ರೀತಿ, ವಿಶ್ವಾಸವನ್ನು ಉಳಿಸಿಕೊಳ್ಳಲು ಯಾವುದೇ ಆಪತ್ತನ್ನು ಎದುರಿಸಲು ಸಿದ್ಧರಾಗುವಿರಿ. ನಿಮ್ಮ ಪ್ರೀತಿಪಾತ್ರರಿಗಾಗಿ ಯಾವುದೇ ತ್ಯಾಗವನ್ನು ಮಾಡಬಲ್ಲಿರಿ. ಒಮ್ಮೆ ಕೊಟ್ಟ ಮಾತನ್ನು ಬದಲಿಸದೆ ಅವರ ಪ್ರೀತಿ, ವಿಶ್ವಾಸವನ್ನು ಉಳಿಸಿಕೊಳ್ಳುವಿರಿ. ಸತತವಾಗಿ ಜಗಳ ಕದನ ನಡೆದರು ಹೆಚ್ಚಿನ ಬೆಲೆ ನೀಡುವುದಿಲ್ಲ. ಕೋಪ ಮರೆಯಾದಾಗ ಮತ್ತೊಮ್ಮೆ ಅವರ ಸ್ನೇಹ ಸಂಪಾದಿಸುವಿರಿ. ದಾಂಪತ್ಯ ಜೀವನದಲ್ಲಿಯೂ ಇದೇ ರೀತಿಯ ಸನ್ನಿವೇಶಗಳು ಎದುರಾಗಲಿವೆ. ಆದರೆ ಮಕ್ಕಳ ಮೇಲೆ ಇಲ್ಲಸಲ್ಲದ ನಿಬಂಧನೆಗಳನ್ನು ಹೇರುವಿರಿ. ಆದರೆ ಮಕ್ಕಳಿಗೆ ಹೆಚ್ಚಿನ ಪ್ರೀತಿಯನ್ನು ನೀಡುವಿರಿ. ನಿಮ್ಮೊಡನೆ ಇರುವ ಎಲ್ಲರಿಗೂ ಇದು ಮರೆಯಲಾಗದ ದಿನಗಳಾಗುತ್ತವೆ.

ಉದ್ಯೋಗ; ಜೂನ್‌ ತಿಂಗಳ ನಂತರ ಉದ್ಯೋಗಕ್ಷೇತ್ರದಲ್ಲಿ ಅನುಕೂಲ

ವೃಶ್ಚಿಕ ರಾಶಿಯವರಿಗೆ ಕೆಲಸ-ಕಾರ್ಯಗಳಲ್ಲಿ ಯಾವುದೇ ತೊಂದರೆ ಕಂಡುಬರುವುದಿಲ್ಲ. ಆದರೆ ಹೆಚ್ಚಿನ ಪರಿಶ್ರಮದಿಂದ ಕೆಲಸ ಸಾಧಿಸಬೇಕಾಗುತ್ತದೆ. ಆದರೆ ಪ್ರತಿಯೊಂದು ಕೆಲಸ-ಕಾರ್ಯಗಳು ನಿಮ್ಮ ಇಚ್ಛೆಯಂತೆ ನಡೆಯಲಿವೆ. ಬೇರೆಯವರ ಜವಾಬ್ದಾರಿಯು ಕೆಲವೊಮ್ಮೆ ನಿಮ್ಮದಾಗಲಿದೆ. ಇದರಿಂದಾಗಿ ವಿಶ್ರಾಂತಿಯನ್ನು ಮರೆಯಬೇಕಾಗುತ್ತದೆ. ಕೆಲವೊಮ್ಮೆ ಒಂದೇ ರೀತಿಯ ಕೆಲಸ-ಕಾರ್ಯಗಳು ಬೇಸರವನ್ನು ಉಂಟು ಮಾಡುತ್ತವೆ. ಉಪಯೋಗವಿಲ್ಲದ ಕೆಲಸಗಳಿಂದ ದೂರ ಉಳಿಯುವಿರಿ. ಉದ್ಯೋಗವನ್ನು ಬದಲಾಯಿಸುವ ಮನಸ್ಸು ಉಂಟಾದರೂ ಸಾಧ್ಯವಾಗುವುದಿಲ್ಲ. ಸಹೋದ್ಯೋಗಿಗಳಿಗೆ ಒಳ್ಳೆಯ ಪ್ರೇರಣಾ ಶಕ್ತಿಯಾಗಿ ಮುಂದುವರೆಯುವಿರಿ. ನೀವಾಯ್ತು ನಿಮ್ಮ ಕೆಲಸವಾಯಿತು ಎಂಬ ನೀತಿಯನ್ನು ಅನುಸರಿಸುವಿರಿ. ಜೂನ್ ತಿಂಗಳ ನಂತರ ವಿಶೇಷವಾದ ಅನುಕೂಲಗಳು ದೊರೆಯಲಿವೆ. ನಿಮ್ಮ ಮುಂದೆ ವಿರೋಧಿಗಳ ಆಟ ಸಾಗುವುದಿಲ್ಲ. ಹೆಚ್ಚಿನ ಪ್ರಯತ್ನ ಪಟ್ಟಲ್ಲಿ ನಿರುದ್ಯೋಗಿಗಳಿಗೆ ಸಹಕಾರದ ಅಥವಾ ಸರ್ಕಾರದ ಅನುದಾನದಲ್ಲಿ ನಡೆಯುವ ಸಂಸ್ಥೆಗಳಲ್ಲಿ ಉದ್ಯೋಗ ದೊರೆಯುತ್ತದೆ.

ವಿದ್ಯಾಭ್ಯಾಸ; ಆತ್ಮವಿಶ್ವಾಸ ಬೆಳೆಸಿಕೊಂಡರೆ ವಿದ್ಯಾರ್ಥಿಗಳು ಓದಿನಲ್ಲಿ ಹಿಂದೆ ಬೀಳುವ ಮಾತೇ ಇಲ್ಲ

ವೃಶ್ಚಿಕ ರಾಶಿಯ ವಿದ್ಯಾರ್ಥಿಗಳು ಉನ್ನತ ಮಟ್ಟದಲ್ಲಿ ಅಧ್ಯಯನ ಮಾಡಿದರು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಆತ್ಮವಿಶ್ವಾಸವನ್ನು ಬೆಳೆಸಿಕೊಂಡರೆ ಯಾವುದೇ ತೊಂದರೆ ಎದುರಾಗುವುದಿಲ್ಲ. ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಏಪ್ರಿಲ್ ತಿಂಗಳ ನಂತರ ಅನಿರೀಕ್ಷಿತ ಯಶಸ್ಸು ದೊರೆಯಲಿದೆ. ಇದರಿಂದ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ ಉಂಟಾಗುತ್ತದೆ. ಕೋಪವನ್ನು ಕಡಿಮೆ ಮಾಡಿಕೊಳ್ಳಬೇಕು. ಶಿಸ್ತುಬದ್ಧ ಜೀವನ ಮತ್ತು ಗುರುಗಳ ಸಹಾಯ ಅತಿಮುಖ್ಯ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಸಹ ಯಶಸ್ಸು ದೊರೆಯುತ್ತದೆ. ಆದ್ದರಿಂದ ಯಾವುದೇ ಆತಂಕವಿಲ್ಲದೆ ವಿದ್ಯಾರ್ಥಿಗಳು ಮುಂದುವರೆಯುವುದು ಮುಖ್ಯ.

ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ

ವೃಶ್ಚಿಕ ರಾಶಿಯವರದು ಮೂಲತಃ ಪರಿಶ್ರಮಿ ಸ್ವಭಾವ. ಕಷ್ಟಪಟ್ಟು ಮಾಡುವ ಕೆಲಸ-ಕಾರ್ಯಗಳಿಗೆ ತಕ್ಕಂತೆ ಆದಾಯವು ದೊರೆಯುತ್ತದೆ. ಕೇವಲ ಆರ್ಥಿಕ ಪ್ರಗತಿ ಮಾತ್ರವಲ್ಲದೇ ಸ್ಥಿರತೆಯೂ ಕಂಡುಬರುತ್ತದೆ. ಬುದ್ಧಿವಂತಿಕೆಯಿಂದ ದೊರೆಯುವ ಹಣದ ಅಲ್ಪಭಾಗವನ್ನು ಉಳಿಸುವ ಅಭ್ಯಾಸ ಮಾಡಿಕೊಳ್ಳಬೇಕು. ರಾಹುವಿನ ದೃಷ್ಟಿ 11 ನೇ ಮನೆಗೆ ಇರುವ ಕಾರಣ ಅನಿರೀಕ್ಷಿತ ಆದಾಯ ದೊರೆಯುತ್ತದೆ. ನಿಮ್ಮ ಯೋಜನೆಯಂತೆ ನಿರ್ದಿಷ್ಟ ಮಟ್ಟದ ಹಣವನ್ನು ಗಳಿಸುವವರೆಗೂ ಬಿಡುವುದಿಲ್ಲ. ವಿದೇಶಿ ಕಂಪನಿಗಳಲ್ಲಿ ಉದ್ಯೋಗ ದೊರೆತು ಹಣ ಗಳಿಕೆ ಹೆಚ್ಚಾಗುತ್ತದೆ. ಹಣದ ಕೊರತೆ ಉಂಟಾದಲ್ಲಿ ತಂದೆಯಿಂದ ಹಣದ ಸಹಾಯ ದೊರೆಯುತ್ತದೆ. ಹಣಕಾಸಿನ ವಿಚಾರದಲ್ಲಿ ಆತ್ಮೀಯರ ಸಲಹೆಯನ್ನು ಕೇಳುವುದು ಒಳ್ಳೆಯದು.

ಕುಟುಂಬದ ವಿಚಾರ; ಜೂನ್‌ ನಂತರ ಮನೆಯಲ್ಲಿ ಶುಭಕಾರ್ಯ ನಡೆಯಲಿವೆ

ವೃಶ್ಚಿಕ ರಾಶಿಗೆ ಸೇರಿದವರು ಮನೆಯ ಯಜಮಾನರಾಗಿರುವ ಕುಟುಂಬಗಳಲ್ಲಿ ಅನವಶ್ಯಕ ವಾದ ವಿವಾದಗಳು ಎದುರಾದರೂ ಬಹುಕಾಲ ಉಳಿಯುವುದಿಲ್ಲ. ಸದಾಕಾಲ ಕೆಲಸ ಕಾರ್ಯಗಳಲ್ಲಿ ನಿರತರಾದರೂ ಕುಟುಂಬದವರಿಗಾಗಿ ಸಮಯವನ್ನು ಮೀಸಲಿಡುವಿರಿ. ಶನಿಯು ಕುಂಭದಲ್ಲಿ ಇರುವ ಕಾರಣ ಕುಟುಂಬಕ್ಕೆ ಸೇರಿದ ಕೆಲಸ-ಕಾರ್ಯಗಳು ಸಾಗುತ್ತವೆ. ತಾಯಿಯ ತೀರ್ಮಾನವೇ ಅಂತಿಮವಾಗುತ್ತದೆ. ಪರಸ್ಪರ ಹೊಂದಾಣಿಕೆಯ ಗುಣ ಕಂಡು ಬರಲಿದೆ. ತಂದೆ ಅಥವಾ ತಾಯಿಯ ಆರೋಗ್ಯದ ಬಗ್ಗೆ ಚಿಂತೆ ಇರುತ್ತದೆ. ಜೂನ್ ತಿಂಗಳ ನಂತರ ಕುಟುಂಬದಲ್ಲಿ ಅನೇಕ ಮಂಗಳಕಾರ್ಯಗಳು ನಡೆಯಲಿದೆ. ಹಣಕಾಸಿನ ಕಾರಣದಿಂದ ದೂರವಾಗಿದ್ದ ಸಹೋದರ ಅಥವಾ ಸಹೋದರಿ ಮತ್ತೊಮ್ಮೆ ಮರಳಿ ಕುಟುಂಬವನ್ನು ಸೇರುತ್ತಾರೆ.

ಮಕ್ಕಳ ವಿಚಾರ; ಉತ್ತಮ ಮಾರ್ಗದರ್ಶನ ದೊರೆತರೆ ವಿಶೇಷ ಸಾಧನೆ ಮಾಡಲಿದ್ದಾರೆ

ವೃಶ್ಚಿಕ ರಾಶಿಗೆ ಸೇರಿದವರ ಮಕ್ಕಳು ಕೆಲವೊಮ್ಮೆ ಹಠದಿಂದ ನಡೆದುಕೊಳ್ಳುತ್ತಾರೆ. ಅವರನ್ನು ಶಿಕ್ಷಿಸದೆ ಪ್ರೀತಿಯಿಂದ ನೋಡಿಕೊಂಡಲ್ಲಿ ವಿಶೇಷವಾದಂತಹ ಬದಲಾವಣೆಗಳು ಕಂಡುಬರುತ್ತವೆ. ಆರಂಭದಲ್ಲಿ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಆಸೆ ಇರುವುದಿಲ್ಲ. ಆದರೆ ಮೇ ತಿಂಗಳ ನಂತರ ಕುಟುಂಬದ ಹಿರಿಯರ ಮಾರ್ಗದರ್ಶನದಲ್ಲಿ ಜೀವನದಲ್ಲಿ ಮುಂದುವರೆಯುತ್ತಾರೆ. ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿಯು ಉಂಟಾಗಲಿದೆ. ಆದರೆ ವಿದ್ಯಾಭ್ಯಾಸದಲ್ಲಿ ಮಾತ್ರ ಸಹಾಯ ಅಥವಾ ಸಹಕಾರ ಬೇಕಾಗಬಹುದು. ಉತ್ತಮ ಮಾರ್ಗದರ್ಶನ ದೊರೆತಲ್ಲಿ ಮಕ್ಕಳು ವಿಶೇಷವಾದಂತಹ ಸಾಧನೆ ಮಾಡಲಿದ್ದಾರೆ. ಸಂತಾನ ಲಾಭವಿದೆ. ಮಕ್ಕಳಿಗೆ ವಿವಾಹ ಯೋಗ ಇರುತ್ತದೆ. ಒಟ್ಟಾರೆ ಮಕ್ಕಳ ಬಗ್ಗೆ ಯೋಚನೆ ಇಲ್ಲದೆ ನಿರಾಳವಾಗಿ ಇರಬಹುದು.

ವಿವಾಹ ಮತ್ತು ದಾಂಪತ್ಯ; ಅವಿವಾಹಿತರಿಗೆ ಮದುವೆಯ ಭಾಗ್ಯವಿದೆ

ಅವಿವಾಹಿತರಾಗಿರುವ ವೃಶ್ಚಿಕ ರಾಶಿಯವರಿಗೆ ಈ ಬಾರಿ ವಿವಾಹ ಯೋಗವಿದೆ. ಆರಂಭದಲ್ಲಿ ದಂಪತಿಗಳ ನಡುವೆ ಅನಾವಶ್ಯಕ ವಾದ ವಿವಾದಗಳು ಉಂಟಾಗುತ್ತದೆ. ಅನಿವಾರ್ಯವಾಗಿ ನಿಂತಿದ್ದ ವಿವಾಹವು ಈಗ ನೆರವೇರುತ್ತದೆ. ದಂಪತಿಗಳಿಗೆ ಕುಟುಂಬದ ಎಲ್ಲರ ಸಹಕಾರ ದೊರೆಯಲಿದೆ. ಪರಸ್ಪರ ಪ್ರೀತಿ ವಿಶ್ವಾಸವು ಹೆಚ್ಚಾಗುತ್ತದೆ. ಅವಿರತ ದುಡಿಮೆಯ ನಡುವೆ ಸಂಗಾತಿಗೆ ವೇಳೆಯನ್ನು ಸಮಯವನ್ನು ಮೀಸಲಿರುವುದು ಮರೆಯದಿರಿ. ಸಂಗಾತಿಯೊಂದಿಗೆ ಕಿರು ಪ್ರವಾಸಗಳನ್ನು ಸತತವಾಗಿ ಕೈಗೊಳ್ಳುವಿರಿ. ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಮುಂದುವರೆದರೆ ಯಾವುದೇ ತೊಂದರೆ ಉಂಟಾಗುವುದಿಲ್ಲ.

ವ್ಯಾಪಾರ ವ್ಯವಹಾರ; ಸ್ವಂತ ಉದ್ಯೋಗದಿಂದ ಲಾಭ

ವೃಶ್ಚಿಕ ರಾಶಿಗೆ ಸೇರಿದವರು ವ್ಯಾಪಾರದಲ್ಲಿ ನಿರತರಾಗಿದ್ದಲ್ಲಿ ಉತ್ತಮ ಆದಾಯ ದೊರೆಯಲಿದೆ. ಆತ್ಮೀಯರ ಸಹಕಾರ ಸದಾ ದೊರೆಯಲಿದೆ. ಕ್ರಮೇಣ ಆದಾಯದಲ್ಲಿ ಹೆಚ್ಚಳ ಕಂಡುಬರಲಿದೆ. ವಿದೇಶಿ ಸಂಸ್ಥೆಯಲ್ಲಿ ಉದ್ಯೋಗ ದೊರೆಯಲಿದೆ. ಹಣಕಾಸಿನ ವಿಚಾರದಲ್ಲಿ ಯಾರ ಮಾತನ್ನು ಸುಲಭವಾಗಿ ನಂಬುವುದಿಲ್ಲ. ಸಮಾಜದಲ್ಲಿ ಪ್ರತಿಷ್ಠೆ, ಸ್ಥಾನಮಾನ ಗಳಿಸುವಿರಿ. ಸಮಾಜದ ಒಳಿತಿಗಾಗಿ ಸೇವಾಧಾರಿತ ವ್ಯಾಪಾರವನ್ನು ಆರಭಿಸುವಿರಿ. ಬೇರೆಯವರಿಂದ ಪಡೆದಿದ್ದ ಹಣವನ್ನು ಮರಳಿಸುವಿರಿ. ಕಾನೂನಿನ ಪ್ರಕಾರ ನಡೆಸುವ ಹಣದ ವ್ಯವಹಾರಗಳಲ್ಲಿ ಉತ್ತಮ ಲಾಭ ಗಳಿಸುವಿರಿ. ಸ್ವಂತ ಉದ್ದಿಮೆ ಇದ್ದಲ್ಲಿ ಹಣದ ಕೊರತೆ ಕಾಣುವುದಿಲ್ಲ.

ವಾಹನ ವಿಚಾರ; ವಾಹನ ಚಾಲನೆ ವೇಳೆ ಎಚ್ಚರ ಅಗತ್ಯ

ವೃಶ್ಚಿಕ ರಾಶಿಯವರು ಈ ವರ್ಷ ಬಹುದಿನದಿಂದ ಕನಸು ಕಾಣುತ್ತಿದ್ದ ಹೊಸ ವಾಹನವೊಂದನ್ನು ಕೊಳ್ಳುವಿರಿ. ಏಪ್ರಿಲ್ ತಿಂಗಳ ಅಂತ್ಯದವರೆಗೆ ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ವಹಿಸಬೇಕು. ಅನಂತರ ಯಾವುದೇ ತೊಂದರೆ ಎದುರಾಗುವುದಿಲ್ಲ. ಮಕ್ಕಳಿಗೆ ವಾಹನವನ್ನು ಉಡುಗೊರೆಯಾಗಿ ನೀಡುವಿರಿ. ಕೆಂಪು ಅಥವಾ ಬಿಳಿ ಬಣ್ಣದ ವಾಹನ ಕೊಳ್ಳುವಿರಿ. ಬೇರೆಯವರಿಗೆ ನಿಮ್ಮ ವಾಹನವನ್ನು ನೀಡಿದಲ್ಲಿ ಕಾನೂನಿನ ವಿಚಾರದಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ. ವಾಹನ ಚಾಲನೆ ಮಾಡುವ ವೇಳೆ ಮನರಂಜನೆಗೆ ಓಗೊಡದಿರಿ.

ಆರೋಗ್ಯದ ವಿಚಾರ; ಆರೋಗ್ಯ ಸಮಸ್ಯೆಗಳಿಗೆ ಸಿಗಲಿದೆ ಮುಕ್ತಿ

ವೃಶ್ಚಿಕ ರಾಶಿಯವರ ದೈಹಿಕ ಶಕ್ತಿಯು ಈ ವರ್ಷ ಉತ್ತಮಗೊಳ್ಳುತ್ತದೆ. ಯೋಗ ವ್ಯಾಯಾಮದಂತಹ ಅಭ್ಯಾಸದಿಂದ ಮನಸ್ಸು ಸದಾ ಉಲ್ಲಾಸದಿಂದ ಕೂಡಿರುತ್ತದೆ. ಆರೋಗ್ಯದಲ್ಲಿ ಯಾವುದೇ ತೊಂದರೆ ಕಂಡುಬರುವುದಿಲ್ಲ. ಬಹುದಿನಗಳಿಂದ ಕಾಡುತ್ತಿದ್ದ ಅನಾರೋಗ್ಯದಿಂದ ಪಾರಾಗುವಿರಿ. ಸ್ತ್ರೀಯರ ತೊಂದರೆಗಳು ನಿವಾರಣೆಯಾಗಿ ಉತ್ತಮ ಆರೋಗ್ಯ ಲಭಿಸುತ್ತದೆ. ಆಹಾರ ಕ್ರಮದಲ್ಲಿ ಕಠಿಣವಾದ ಬದಲಾವಣೆಗಳನ್ನು ತಂದು ಉತ್ತಮ ಆರೋಗ್ಯ ಗಳಿಸುವಿರಿ. ನೀವಾಗಿಯೇ ಯಾವುದೇ ತಪ್ಪು ಮಾಡದೆ ಹೋದಲ್ಲಿ ಆರೋಗ್ಯದಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ.

ಪರಿಹಾರಗಳು

1. ಪ್ರತಿದಿನ ಹನುಮಾನ್ ಛಾಲಿಸಾ ಪಠಿಸುವುದರಿಂದ ಅಥವ ಕೇಳುವುದರಿಂದ ಕೈಹಿಡಿದ ಕೆಲಸ-ಕಾರ್ಯಗಳು ಯಶಸ್ವಿಯಾಗಲಿದೆ.

2. ಉದ್ದಿನಬೇಳೆ ಮತ್ತು ಕಪ್ಪುಬಟ್ಟೆ ದಾನ ನೀಡುವುದರಿಂದ ವಿದ್ಯಾರ್ಥಿಗಳಿಗೆ ಶುಭವಾಗಲಿದೆ.

3. ಶ್ರೀ ಶನೇಶ್ವರನ ದೇವಾಲಯಕ್ಕೆ ಪೂಜಾ ಸಾಮಗ್ರಿಗಳನ್ನು ನೀಡುವುದರಿಂದ ಕುಟುಂಬದಲ್ಲಿ ಧನಾತ್ಮಕ ಪ್ರಗತಿ ದೊರೆಯುತ್ತದೆ.

4. ಶ್ರೀ ಗುರುಪೂಜೆ ಮಾಡುವುದರಿಂದ ಭೂ ವಿವಾದಗಳು ದೂರವಾಗಲಿದೆ.

5. ಕೆಂಪು, ಕೇಸರಿ ಮತ್ತು ಹಾಲಿನ ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.

ಬರಹ: ಎಚ್‌.ಸತೀಶ್, ಜ್ಯೋತಿಷಿ, ಬೆಂಗಳೂರು.ಇಮೇಲ್: sathishaapr23@gmail.com

ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು.

(ಈ ಬರಹವು ಮೊದಲ ಬಾರಿಗೆ 'ಹಿಂದೂಸ್ತಾನ್‌ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಪ್ರಕಟವಾಗಿದೆ. ಯುಗಾದಿ ಹಬ್ಬ, ಜ್ಯೋತಿಷ್ಯ, ಅಧ್ಯಾತ್ಮ ಕುರಿತ ಮತ್ತಷ್ಟು ಮಾಹಿತಿಗೆ kannada.hindustantimes.com ವೆಬ್‌ಸೈಟ್‌ಗೆ ಭೇಟಿ ನೀಡಿ. To read more on Ugadi festival and culture related stories, please visit 'HT Kannada' website)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ