logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಉದ್ಯೋಗದಲ್ಲಿ ಪ್ರಮುಖ ಸ್ಥಾನ ಅಲಂಕರಿಸುವಿರಿ, ಒಡಹುಟ್ಟಿದವರೊಂದಿಗೆ ಆಸ್ತಿ ವಿಚಾರವಾಗಿ ಕಲಹ; ಸ್ತ್ರೀ ವಾರ ಭವಿಷ್ಯ

ಉದ್ಯೋಗದಲ್ಲಿ ಪ್ರಮುಖ ಸ್ಥಾನ ಅಲಂಕರಿಸುವಿರಿ, ಒಡಹುಟ್ಟಿದವರೊಂದಿಗೆ ಆಸ್ತಿ ವಿಚಾರವಾಗಿ ಕಲಹ; ಸ್ತ್ರೀ ವಾರ ಭವಿಷ್ಯ

Rakshitha Sowmya HT Kannada

Jul 12, 2024 05:30 AM IST

google News

ಉದ್ಯೋಗದಲ್ಲಿ ಪ್ರಮುಖ ಸ್ಥಾನ ಅಲಂಕರಿಸುವಿರಿ, ಒಡಹುಟ್ಟಿದವರೊಂದಿಗೆ ಆಸ್ತಿ ವಿಚಾರವಾಗಿ ಕಲಹ; ಸ್ತ್ರೀ ವಾರ ಭವಿಷ್ಯ

  • Women horoscope: ಸ್ತ್ರೀ ವಾರ ಭವಿಷ್ಯ (ಜುಲೈ12 ರಿಂದ ಜುಲೈ 18ವರೆಗೆ) ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ಈ ವಾರದ ಸ್ತ್ರೀ ಭವಿಷ್ಯ ಇಲ್ಲಿದೆ. (ಬರಹ: ಎಚ್‌. ಸತೀಶ್, ಜ್ಯೋತಿಷಿ)

ಉದ್ಯೋಗದಲ್ಲಿ ಪ್ರಮುಖ ಸ್ಥಾನ ಅಲಂಕರಿಸುವಿರಿ, ಒಡಹುಟ್ಟಿದವರೊಂದಿಗೆ ಆಸ್ತಿ ವಿಚಾರವಾಗಿ ಕಲಹ; ಸ್ತ್ರೀ ವಾರ ಭವಿಷ್ಯ
ಉದ್ಯೋಗದಲ್ಲಿ ಪ್ರಮುಖ ಸ್ಥಾನ ಅಲಂಕರಿಸುವಿರಿ, ಒಡಹುಟ್ಟಿದವರೊಂದಿಗೆ ಆಸ್ತಿ ವಿಚಾರವಾಗಿ ಕಲಹ; ಸ್ತ್ರೀ ವಾರ ಭವಿಷ್ಯ

ಸ್ತ್ರೀ ವಾರ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (Women Horoscope 12th July to 18th July 2024).

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಮೇಷ

ನಿಮ್ಮ ಸ್ವಾರ್ಥ ರಹಿತ ಗುಣದಿಂದಾಗಿ ಕುಟುಂಬದಲ್ಲಿ ಶಾಂತಿ ನೆಮ್ಮದಿ ಇರುತ್ತದೆ. ನಿಮ್ಮ ಜೀವನಲ್ಲಿ ಶುಭ ಫಲಗಳು ಹೆಚ್ಚಾಗಲಿವೆ. ಮಕ್ಕಳಿಗೆ ಕೆಲಸ ಕಾರ್ಯಗಳನ್ನು ನೆರವೇರಿಸಲು ಉತ್ತೇಜನ ನೀಡುವಿರಿ. ಪತಿಯೊಡನೆ ಉತ್ತಮ ಹೊಂದಾಣಿಕೆ ಇರುತ್ತದೆ. ವೈವಾಹಿಕ ಜೀವನಲ್ಲಿ ನೋವು ನಲಿವು ಸಮನಾಗಿರುತ್ತದೆ. ಅನಾವಶ್ಯಕವಾದ ವಾದದಿಂದ ದೂರ ಉಳಿಯಲು ಬಯಸುವಿರಿ. ಆತಂಕದ ಸನ್ನಿವೇಶ ಉಂಟಾದಲ್ಲಿ ಜಾಗರೂಕತೆಯಿಂದ ವರ್ತಿಸುವಿರಿ. ಸ್ನಾಯುವಿನ ಸೆಳೆತದ ಸಮಸ್ಯೆ ಇರುತ್ತದೆ. ಆಕರ್ಷಕ ಒಡವೆ ವಸ್ತ್ರಗಳಿಗೆ ಹೆಚ್ಚಿನ ಹಣ ಖರ್ಚು ಮಾಡುವಿರಿ. ಉದ್ಯೋಗದಲ್ಲಿ ಯಾವುದೇ ಅಡಚಣೆ ಎದುರಾಗದು. ಪತಿ ಜೊತೆ ಕಿರು ಪ್ರವಾಸ ಕೈಗೊಳ್ಳುವಿರಿ.

ವೃಷಭ

ಕ್ಲಿಷ್ಟಕರ ಸನ್ನಿವೇಶದಲ್ಲಿ ನಿರ್ಭೀತಿಯಿಂದ ನಡೆದುಕೊಳ್ಳುವಿರಿ. ನಿಮ್ಮ ತಿಳುವಳಿಕೆಯ ನಡೆನುಡಿಯ ಕಾರಣ ಸಮಾಜದಲ್ಲಿ ವಿಶೇಷ ಸ್ಥಾನ ಮಾನ ದೊರೆಯುವುದು. ಬಂಧು ಮಿತ್ರರಿಂದ ದೂರ ಉಳಿಯಲು ತೀರ್ಮಾನಿಸುವಿರಿ. ಪತಿಯ ನಡುವೆ ಉತ್ತಮ ಬಾಂಧವ್ಯ ಏರ್ಪಡುತ್ತದೆ. ಕುಟುಂಬದಲ್ಲಿ ಅನಾವಶ್ಯಕ ಮಾನಸಿಕ ಒತ್ತಡ ಇರುತ್ತದೆ. ಹಟದ ಗುಣದಿಂದ ಆತ್ಮೀಯರಿಗೆ ಕಿರಿಕಿರಿ ಉಂಟಾಗುತ್ತದೆ. ಮಕ್ಕಳೊಂದಿಗೆ ವಾರಾಂತ್ಯದಲ್ಲಿ ತವರು ಮನೆಗೆ ತೆರಳುವಿರಿ. ಬೇಡದ ವಿಚಾರಗಳಿಗೆ ಹಣ ಖರ್ಚಾಗುತ್ತದೆ. ಹಳ್ಳಿಯ ಜೀವನಕ್ಕೆ ಮಾರು ಹೋಗುವಿರಿ. ಆರೋಗ್ಯದಲ್ಲಿ ಏರಿಳಿತ ಕಂಡುಬರುತ್ತದೆ. ಸ್ವಂತ ಹಣಕಾಸಿನ ಸಂಸ್ಥೆಯನ್ನು ಆರಂಭಿಸುವ ಸೂಚನೆ ಇದೆ.

ಮಿಥುನ

ಹೊಗಳಿಕೆಗೆ ಮರುಳಾಗದೆ ಗಂಭೀರದಿಂದ ವರ್ತಿಸುವಿರಿ. ಸಂಬಂಧದಲ್ಲಿ ಅಥವಾ ಮೆಚ್ಚಿದವರೊಂದಿಗೆ ವಿವಾಹವಾಗುತ್ತದೆ. ಎಲ್ಲರ ಬಗ್ಗೆ ಒಳ್ಳೆಯ ಭಾವನೆ ಇರುತ್ತದೆ. ಯಾರನ್ನೂ ಕೀಳರಿಮೆಯಿಂದ ನೋಡುವುದಿಲ್ಲ. ಕುಟುಂಬದ ಹಣಕಾಸಿನ ವಿಚಾರದಲ್ಲಿ ದಿಟ್ಟ ನಿಲುವು ತಾಳುವಿರಿ. ಭೂವಿವಾದವೊಂದನ್ನು ಮಾತುಕತೆಯಿಂದ ಬಗೆಹರಿಸುವಿರಿ. ಹಾರ್ಮೋನಿನ ಸ್ರವಿಕೆಯಲ್ಲಿ ಏರುಪೇರು ಉಂಟಾಗಬಹುದು. ವೇಳೆ ಕಳೆಯಲು ಉದ್ಯೋಗಕ್ಕೆ ಸೇರುವಿರಿ. ಪತಿಯ ಸಹಕಾರದಿಂದ ವ್ಯಾಪಾರವೊಂದನ್ನು ಆರಂಭಿಸಬಹುದು. ನಿಮಗೆ ಅಸಾಧ್ಯವೆನಿಸದ ಕೆಲಸ ಯಾವುದೂ ಇರುವುದಿಲ್ಲ. ತವರಿಂದ ಅನಿರೀಕ್ಷಿತ ಧನ ಸಹಾಯವಿದೆ. ಸರಳ ದೈಹಿಕ ವ್ಯಾಯಾಮದಿಂದ ಉತ್ತಮ ಆರೋಗ್ಯ ಗಳಿಸುವಿರಿ.

ಕಟಕ

ವೈವಾಹಿಕ ಜೀವನದಲ್ಲಿ ಸುಖ ಸಂತೋಷ ನೆಲೆಸಿರುತ್ತದೆ. ಮನದಲ್ಲಿ ಕಾಡುತ್ತಿದ್ದ ಚಿಂತೆಯೊಂದು ದೂರವಾಗಲಿದೆ. ಕುಟುಂಬದ ಅಭಿವೃದ್ಧಿಗಾಗಿ ಬಿಡುವಿಲ್ಲದೆ ಕೆಲಸ ಮಾಡುವಿರಿ. ಅತಿಯಾದ ಖರ್ಚು ವೆಚ್ಚಗಳನ್ನು ಕಡಿಮೆ ಮಾಡುವಿರಿ ಹಣಕಾಸಿನ ಹಣದ ಕೊರತೆ ಇರುವುದಿಲ್ಲ. ಅತಿಯಾದ ಆತ್ಮವಿಶ್ವಾಸದಿಂದ ಮುಂದುವರೆಯದಲ್ಲಿ ತೊಂದರೆ ಉಂಟಾಗಬಹುದು. ಮಕ್ಕಳ ವಿಧ್ಯಾಭ್ಯಾಸದಲ್ಲಿ ನಿಮ್ಮ ಪಾತ್ರ ಮುಖ್ಯವಾಗುತ್ತದೆ. ಕ್ರೀಯಾತ್ಮಕ ಚಟುವಟಿಕೆಗಳ ಮೂಲಕ ಎಲ್ಲರ ಮನ ಗೆಲ್ಲುವಿರಿ. ಸಮಾಜದ ಗಣ್ಯ ವ್ಯಕ್ತಿಯ ಸ್ಥಾನವನ್ನು ಅಲಂಕರಿಸುವಿರಿ. ಕೈ ಕಾಲುಗಳಲ್ಲಿ ನಿಶ್ಯಕ್ತಿ ಇರುತ್ತದೆ. ಪ್ರಯೋಜನವಲ್ಲದ ಕೆಲಸ ಕಾರ್ಯಗಳಿಂದ ಬೇಸರ ಉಂಟಾಗಲಿದೆ.

ಸಿಂಹ

ರಾಜಕೀಯದಲ್ಲಿ ಸೇವೆ ಸಲ್ಲಿಸಲು ಅವಕಾಶ ದೊರೆಯಲಿವೆ. ಮುಂಗೋಪವನ್ನು ತೊರೆದಲ್ಲಿ ಕೈಹಿಡಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ. ತವರು ಮನೆಗೆ ಹಣದ ಸಹಾಯ ಮಾಡುವಿರಿ. ರಕ್ತದ ದೋಷವಿದ್ದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಿರಿ. ಒತ್ತಡಕ್ಕೆ ಒಳಗಾಗಿ ಉದ್ಯೋಗ ಬದಲಾಯಿಸುವಿರಿ. ಸಮರ್ಪಣಾ ಮನೋಭಾವನೆಯಿಂದ ಜನ ಸಾಮಾನ್ಯರ ಗಮನ ಸೆಳೆಯುವಿರಿ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಉನ್ನತ ಮಟ್ಟಕ್ಕೆ ಏರುವರು. ಕುಟುಂಬದ ಮುಖ್ಯವಾದ ಕೆಲಸವನ್ನು ಆಯ್ದು ಪೂರ್ಣಗೊಳಿಸುವಿರಿ. ದಾಂಪತ್ಯ ಜೀವನದಲ್ಲಿ ಶಾಂತಿ ನೆಮ್ಮದಿ ನೆಲೆಸಲು ಕಾರಣರಾಗುವಿರಿ. ತವರು ಮನೆ ಮತ್ತು ಅತ್ತೆಯ ಮನೆಯಲ್ಲಿ ನಿಮ್ಮದೇ ಮೇಲುಗೈ ಆಗುತ್ತದೆ.

ಕನ್ಯಾ

ಆತುರದಿಂದ ತೆಗೆದುಕೊಳ್ಳುವ ತೀರ್ಮಾನಗಳನ್ನು ಬದಲಿಸುವಿರಿ. ಕುಟುಂಬದ ಒಳಿತಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ದರಾಗುವಿರಿ. ನಿಮ್ಮ ನಯವಾದ ಮಾತಿಗೆ ಎಲ್ಲರೂ ಮರುಳಾಗುತ್ತಾರೆ. ಸ್ವತಂತ್ರವಾಗಿ ಕುಟುಂಬದ ಕೆಲಸ ಕಾರ್ಯವನ್ನು ನಿರ್ವಹಿಸಬಲ್ಲಿರಿ. ಪತಿಯೊಂದಿಗೆ ಬೇಸರದಿಂದ ದೂರವಾಗಲು ಕಿರು ಪ್ರವಾಸಕ್ಕೆ ತೆರಳುವಿರಿ. ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು. ಕುಟುಂಬಕ್ಕೆ ಹಣದ ತೊಂದರೆ ಬಾರದಂತೆ ನೋಡಿಕೊಳ್ಳುವಿರಿ. ಬಹುದಿನದಿಂದ ನಿರೀಕ್ಷಿಸುತ್ತಿದ್ದ ವಸ್ತುವನ್ನು ನಿಮ್ಮ ಪತಿ ಉಡುಗೊರೆಯಾಗಿ ನೀಡಲಿದ್ದಾರೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಕಾಳಜಿ ತೋರುವಿರಿ. ಕುಟುಂಬದಲ್ಲಿ ಬಿಗುವಿನ ವಾತಾವರಣ ಉಂಟಾಗುತ್ತದೆ

ತುಲಾ

ಹಣದ ತೊಂದರೆ ಇರುವುದಿಲ್ಲ. ಐಷಾರಾಮಿ ಜೀವನ ನಡೆಸುವಿರಿ. ವಿದ್ಯಾರ್ಥಿಗಳು ಉನ್ನತ ವಿದ್ಯೆಗಾಗಿ ವಿದೇಶಕ್ಕೆ ತೆರಳುತ್ತಾರೆ. ಉದ್ಯೋಗದಲ್ಲಿ ಎದುರಾಗುವ ತೊಂದರೆಯು ಒತ್ತಡ ಉಂಟುಮಾಡುತ್ತದೆ. ತವರಿನ ಹಣಕಾಸಿನ ಕೊರತೆಯನ್ನು ಪರಿಹರಿಸುವಿರಿ. ನೆರೆಹೊರೆಯವರ ಜೊತೆಯಲ್ಲಿ ಸ್ನೇಹ ಸೌಹಾರ್ದತೆಯಿಂದ ನಡೆದುಕೊಳ್ಳುವಿರಿ. ಅನಿವಾರ್ಯವಾಗಿ ಸಂಬಂಧಿಕರಿಗೆ ಹಣದ ಸಹಾಯ ಮಾಡುವಿರಿ. ಸ್ವಂತ ವ್ಯಾಪಾರದಲ್ಲಿ ನಿರೀಕ್ಷಿಸಿದ ವರಮಾನ ದೊರೆಯುತ್ತವೆ . ಸೋದರ ಅಥವಾ ಸೋದರಿಯ ಜೊತೆಯಲ್ಲಿ ಆಸ್ತಿಗೆ ಸಂಬಂಧಿಸಿದಂತೆ ಕಲಹ ಉಂಟಾಗುತ್ತದೆ. ನಿಮ್ಮಲ್ಲಿರುವ ಹೋರಾಟದ ಮನೋಭಾವನೆಗೆ ಎಲ್ಲರೂ ಮಾರುಹೋಗುತ್ತಾರೆ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ವಹಿಸಿ.

ವೃಶ್ಚಿಕ

ಮನದಲ್ಲಿ ಆಸೆ ಇದ್ದರೂ ಹಟದಿಂದ ವರ್ತಿಸುವುದಿಲ್ಲ. ಆರೋಗ್ಯದಲ್ಲಿ ಸ್ಥಿರತೆ ಇರುವುದಿಲ್ಲ. ಎಲ್ಲರೊಂದಿಗೆ ಹೊಂದಿಕೊಳ್ಳುವ ಗುಣ ಇರುತ್ತದೆ. ಉದ್ಯೋಗದಲ್ಲಿ ಉತ್ತಮ ಅವಕಾಶಗಳ ಕೊರತೆ ಇರುತ್ತದೆ. ಹಣಕಾಸಿನ ಅನುಕೂಲತೆಯಿಂದ ಮನದ ಆತಂಕ ದೂರವಾಗುತ್ತದೆ. ಆರೋಗ್ಯದಲ್ಲಿ ಏರಿಳಿತ ಕಂಡುಬರುತ್ತದೆ. ಮಕ್ಕಳು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳುವರು. ಶಾಂತಿ ಸಂಯಮದಿಂದ ತುಂಬು ಜೀವನವನ್ನು ನಡೆಸುವಿರಿ. ಪತಿಯೊಂದಿಗೆ ಸಂತೋಷದಿಂದ ಸಮಯ ಕಳೆಯುವಿರಿ. ಅಶಕ್ತ ಜನರಿಗಾಗಿ ಕೊಂಚ ಸಮಯವನ್ನು ಮೀಸಲಿಡುವಿರಿ. ಖರ್ಚು ವೆಚ್ಚಗಳನ್ನು ನಿಯಂತ್ರಿಸಿ ಆಪತ್ಕಾಲಕ್ಕೆ ಹಣವನ್ನು ಉಳಿಸಲಿದ್ದೀರಿ.

ಧನಸ್ಸು

ಆತ್ಮವಿಶ್ವಾಸದಿಂದ ಕುಟುಂಬದ ತೊಂದರೆಯನ್ನು ದೂರ ಮಾಡುವಿರಿ. ಪತಿಯ ಜೊತೆ ಸಂತಸದ ಜೀವನವನ್ನು ನಡೆಸುವಿರಿ. ಕುಟುಂಬದ ಹಣಕಾಸಿನ ಜವಾಬ್ದಾರಿ ಒಪ್ಪಿಕೊಳ್ಳುವಿರಿ. ನಿಮ್ಮ ಸೇವಾ ಮನೋಭಾವನೆಗೆ ಎಲ್ಲರ ಪ್ರಶಂಸೆ ದೊರೆಯುತ್ತದೆ. ತಂದೆಯ ಆಮದು ರಫ್ತಿನ ವ್ಯಾಪಾರದಲ್ಲಿ ಪಾಲುದಾರಿಕೆ ಪಡೆಯುವಿರಿ. ಪತಿ ಮತ್ತು ಮಕ್ಕಳ ಜೊತೆ ಸಂತಸದಿಂದ ಜೀವನ ನಡೆಸುವಿರಿ. ಮನರಂಜನೆಗಾಗಿ ದೂರದ ಊರಿಗೆ ಪ್ರವಾಸಕ್ಕೆ ತೆರಳುವಿರಿ. ಉದ್ಯೋಗದಲ್ಲಿ ಅಧಿಕಾರಿಯಾಗಿ ಬಡ್ತಿ ದೊರೆಯುತ್ತದೆ. ಎರಡು ರೀತಿಯ ಆದಾಯ ಇರುತ್ತದೆ. ಚಾಡಿ ಮಾತನ್ನು ನಂಬುವುದಿಲ್ಲ. ಮಕ್ಕಳ ವಿದ್ಯೋಭ್ಯಾಸದ ಬಗ್ಗೆ ಗಮನ ಹರಿಸುವಿರಿ. ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಛಲದಿಂದ ಗೆಲುವು ಸಾಧಿಸುವಿರಿ.

ಮಕರ

ನಿಮ್ಮಲ್ಲಿನ ಸಮರ್ಪಣಾ ಮನೋಭಾವಕ್ಕೆ ಎಲ್ಲರ ಮೆಚ್ಚುಗೆ ದೊರೆಯುತ್ತದೆ. ಬೇರೆಯವರಲ್ಲಿ ಆತ್ಮೀಯವಾಗಿ ವರ್ತಿಸುವಿರಿ. ಕುಟುಂಬದ ನಿರ್ವಹಣೆ ನಿಮ್ಮದಾಗುತ್ತದೆ. ಉದ್ಯೋಗದಲ್ಲಿ ಮುಖ್ಯ ಸ್ಥಾನವನ್ನು ಅಲಂಕರಿಸುವಿರಿ. ಕುಟುಂಬದಲ್ಲಿ ಹಣಕಾಸಿನ ಸಮಸ್ಯೆಯನ್ನು ಬಗೆಹರಿಸುವಿರಿ. ಸಂಗೀತ ನಾಟ್ಯದಂತಹ ಸಾಂಪ್ರದಾಯಿಕ ಕಲೆಗಳಲ್ಲಿ ವಿಶೇಷ ಸಾಧನೆ ಮಾಡುವಿರಿ. ಸಮಾಜದ ಲೋಪದೋಷ ತಿದ್ದುವಲ್ಲಿ ವಿಶಿಷ್ಟ ಸ್ಥಾನಮಾನ ಗಳಿಸುತ್ತಾರೆ. ಸಂಸಾರದಲ್ಲಿ ಸುಖ ಶಾಂತಿ ನೆಲೆಸುತ್ತದೆ. ಆರೋಗ್ಯದಲ್ಲಿ ತೊಂದರೆ ಉಂಟಾಗಲಿದೆ. ಸ್ವಂತ ಬಳಕೆಗಾಗಿ ವಾಹನವೊಂದನ್ನು ಕೊಳ್ಳುವಿರಿ. ಸಾಲದ ವ್ಯವಹಾರದಿಂದ ದೂರವಿರಿ.

ಕುಂಭ

ಕುಟುಂಬದ ವಿರೋದದ ಮಧ್ಯೆಯು ರಾಜಕೀಯದಲ್ಲಿ ಆಸಕ್ತಿ ತೋರುವಿರಿ. ಉದ್ಯೋಗದಲ್ಲಿ ಉತ್ತಮ ಪ್ರಗತಿ ಗಳಿಸುವಿರಿ. ನಿತ್ಯ ಜೀವನದಲ್ಲಿ ಹೋರಾಟದ ಮನೋಭಾವನೆ ತೋರುವಿರಿ. ಪತಿಯ ವ್ಯಾಪಾರದಲ್ಲಿ ಸಹಾಯ ಮಾಡುವಿರಿ. ವದಂತಿಯ ಮಾತನ್ನು ಕೇಳಿದರೆ ದಂಪತಿಗಳಲ್ಲಿ ಮನಸ್ತಾಪ ಉಂಟಾಗುತ್ತದೆ. ಉದ್ಯೋಗದಲ್ಲಿನ ಯಾವುದೇ ತೊಂದರೆ ಬಾರದು. ಧಾರ್ಮಿಕ ಕಾರ್ಯಕ್ರಮವೊಂದನ್ನು ಯಶಸ್ವಿಯಾಗಿ ನಿರ್ವಹಿಸುವಿರಿ. ಸೇವಾ ಮನೋಭಾವನೆ ಸಾಮಾಜಿಕ ಗೌರವಕ್ಕೆ ಕಾರಣವಾಗಲಿದೆ. ಆರೋಗ್ಯವನ್ನು ಸ್ಥಿರವಾಗಿರಿಸಿಕೊಳ್ಳಲು ಕಠಿಣ ಪ್ರಯತ್ನ ಮಾಡುವಿರಿ. ಮಕ್ಕಳನ್ನು ಪ್ರೀತಿ ಮಮತೆಯಿಂದ ನೋಡುವಿರಿ. ವಿದ್ಯಾರ್ಥಿಗಳಿಗೆ ವಿಶೇಷ ಅಧ್ಯಯನದ ಅವಕಾಶ ದೊರೆಯಲಿದೆ.

ಮೀನ

ಅಸ್ಥಿರವಾದ ಮನಸ್ಸಿನ ಕಾರಣ ಕೆಲಸ ಕಾರ್ಯಗಳು ಅರ್ಧಕ್ಕೆ ನಿಲ್ಲಲಿದೆ. ಮೃದುವಾದ ಮಾತಿನಿಂದ ಕುಟುಂಬದವರ ಪ್ರೀತಿ ಗಳಿಸುವಿರಿ. ಆತ್ಮೀಯರಿಂದ ಅನಿರೀಕ್ಷಿತ ಧನ ಸಹಾಯ ದೊರೆಯಲಿದೆ. ಇದ್ದಕ್ಕಿದ್ದಂತೆ ಆರೋಗ್ಯದಲ್ಲಿ ತೊಂದರೆ ಉಂಟಾಗಬಹುದು. ಹೊಸ ವಾಹನ ಕೊಳ್ಳುವಿರಿ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಹಣದ ಅವಶ್ಯಕತೆ ಇರುತ್ತದೆ. ಪತಿಯು ನಿಮ್ಮ ಕೆಲಸ ಕಾರ್ಯದಲ್ಲಿ ಸಹಕಾರ ನೀಡುತ್ತಾರೆ. ವಾರಾಂತ್ಯದಲ್ಲಿ ಖ್ಯಾತ ಸಂಸ್ಥೆಯಲ್ಲಿ ಉದ್ಯೋಗ ಲಭಿಸುತ್ತದೆ. ತಾಯಿಯೊಂದಿಗೆ ಹಣಕಾಸಿನ ವಿಚಾರದಲ್ಲಿ ಮನಸ್ತಾಪ ಉಂಟಾಗಲಿದೆ. ಆಹಾರ ಪದ್ದತಿಯ ಬದಲಾವಣೆಯಿಂದ ಆರೋಗ್ಯ ಸುಧಾರಿಸಲಿದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ