logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Women Horoscope: ತವರುಮನೆಯಿಂದ ಹಣದ ಸಹಾಯ, ವಿವಾಹ ಯೋಗ, ಉದ್ಯೋಗದಲ್ಲಿ ಬಡ್ತಿ ; ಸ್ತ್ರೀ ವಾರ ಭವಿಷ್ಯ

Women horoscope: ತವರುಮನೆಯಿಂದ ಹಣದ ಸಹಾಯ, ವಿವಾಹ ಯೋಗ, ಉದ್ಯೋಗದಲ್ಲಿ ಬಡ್ತಿ ; ಸ್ತ್ರೀ ವಾರ ಭವಿಷ್ಯ

HT Kannada Desk HT Kannada

Jan 12, 2024 06:00 AM IST

google News

ಸ್ತ್ರೀ ವಾರ ಭವಿಷ್ಯ

    • Women horoscope: ಸ್ತ್ರೀ ವಾರ ಭವಿಷ್ಯ (ಜನವರಿ 12 ರಿಂದ 18ರವರೆಗೆ): ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ಈ ವಾರದ ಸ್ತ್ರೀ ಭವಿಷ್ಯ ಇಲ್ಲಿದೆ.
ಸ್ತ್ರೀ ವಾರ ಭವಿಷ್ಯ
ಸ್ತ್ರೀ ವಾರ ಭವಿಷ್ಯ

ಸ್ತ್ರೀ ರಾಶಿ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (12 January 2024 to 18 January 2024 Women Horoscope).

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ಮೇಷ

ಕೂಡಿಟ್ಟ ಹಣವನ್ನುಕುಟುಂಬಕ್ಕಾಗಿ ಖರ್ಚುಮಾಡುವಿರಿ. ಕುಟುಂಬದ ಸಂಪೂರ್ಣ ಜವಾಬ್ದಾರಿ ನಿಮ್ಮದಾಗುತ್ತದೆ. ವಿದ್ಯಾರ್ಥಿಗಳು ಹೆಚ್ಚಿನ ಅಭ್ಯಾಸಕ್ಕಾಗಿ ವಿದೇಶಕ್ಕೆ ತೆರಳುವಿರಿ. ವಿನಾಕಾರಣ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಉದ್ಯೋಗದಲ್ಲಿ ಸಹೋದ್ಯಗಿಗಳ ಸಹಕಾರ ದೊರೆತು ಅಧಿಕಾರಿಗಳ ಪ್ರಶಂಸೆ ಗಳಿಸುವಿರಿ. ಸ್ವಂತ ವಾಹನ ಕೊಳ್ಳುವಿರಿ. ಮನೆಯಲ್ಲಿನ ವಿವಾದವನ್ನು ಬಗೆಹರಿಸುವಿರಿ. ಅಲಂಕಾರದ ವಸ್ತುಗಳನ್ನು ಮಾರಾಟ ಮಾಡಿ ಹಣಗಳಿಸುವಿರಿ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ಅವಿವಾಹಿತರಿಗೆ ವಿವಾಹದ ಯೋಗವಿದೆ. ಪತಿಯೊಡನೆ ತವರುಮನೆಗೆ ತೆರಳುವಿರಿ. ಕುಟುಂಬದವರೊಡನೆ ಕಿರುಪ್ರವಾಸ ಕೈಗೊಳ್ಳುವಿರಿ.

ವೃಷಭ

ಸ್ಥಿರವಾದ ಮನಸ್ಸಿನ ಕುಟುಂಬದ ಕೆಲಸ ಕಾರ್ಯಗಳನ್ನು ನಿರ್ವಹಿಸುವಿರಿ. ಎದುರಾಗುವ ಸಂಧಿಗ್ದದ ಪರಿಸ್ಥಿತಿಯನ್ನು ಎದುರಿಸುವಿರಿ. ವಾದ ವಿವಾದಗಳನ್ನು ಗೆಲ್ಲುವಿರಿ. ಚಿಕ್ಕ ಪುಟ್ಟ ವಿಚಾರಗಳಿಗೂ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಆದಾಯದಲ್ಲಿ ಯಾವುದೇ ಕೊರತೆ ಉಂಟಾಗದು. ಕುಟುಂಬದ ಸದಸ್ಯರ ಸಹಾಯದಿಂದ ಹಣಕಾಸಿನ ಸಂಸ್ಥೆಯನ್ನು ಆರಂಭಿಸುವಿರಿ. ತವರುಮನೆಯಿಂದ ಹಣದ ಸಹಾಯ ದೊರೆಯುತ್ತದೆ. ಸಂತಾನ ಲಾಭವಿದೆ. ಕ್ರಮೇಣವಾಗಿ ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ. ಉದ್ಯೋಗಸ್ಥರಿಗೆ ಉನ್ನತ ಸ್ಥಾನದ ಬಡ್ತಿ ದೊರೆಯಬಹುದು. ಎಲ್ಲರೊಂದಿಗೆ ಧಾರ್ಮಿಕಕೇಂದ್ರಕ್ಕೆ ಪ್ರವಾಸ ಹೋಗುವಿರಿ.

ಮಿಥುನ

ಮಾನಸಿಕ ಒತ್ತಡದಿಂದ ಬೇಸರಗೊಳ್ಳುವಿರಿ. ದಿಟ್ಟ ನಿಲುವು ತೆಗೆದುಕೊಳ್ಳಲಾಗದೆ ಕುಟುಂಬದ ಮುಖ್ಯವಾದ ಕೆಲಸ ಮುಂದೆ ಹೋಗಲಿದೆ. ಅಧಿಕವಾದ ಆತ್ಮವಿಶ್ವಾಸ ಇರುತ್ತದೆ ಇದರೊಂದಿಗೆ ಜವಾಬ್ದಾರಿಯೂ ಹೆಚ್ಚುತ್ತದೆ. ಒಮ್ಮೆ ತೆಗೆದುಕೊಳ್ಳುವ ನಿರ್ಧಾರಗಳನ್ನು ಬದಲಿಸದಿರಿ. ಆದಾಯ ಮತ್ತು ಖರ್ಚು ಸರಿಸಮಾನಾಗಿ ಇರುತ್ತದೆ. ಮನ ಬಿಚ್ಚಿ ಮಾತನಾಡಿದರೆ ಎದುರಾಗುವ ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳನ್ನು ಕಂಡುಹಿಡಿಯಬಹುದು. ಮಕ್ಕಳ ಆರೋಗ್ಯದಲ್ಲಿ ತೊಂದರೆ ಎದುರಾಗಬಹುದು. ಅವಿವಾಹಿತರಿಗೆ ವಿವಾಹಯೋಗವಿದೆ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ವಹಿಸಿ. ಅನಾವಶ್ಯಕ ಓಡಾಟಗಳಿಂದ ಸಹನೆ ಕಳೆದುಕೊಳ್ಳುವಿರಿ.

ಕಟಕ

ಕ್ರಿಯಾಶೀಲ ಬುದ್ದಿಯಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುವಿರಿ. ಸಹನೆಯಿಂದ ಕುಟುಂಬದ ಸಧಸ್ಯರ ಪ್ರೀತಿ ವಿಶ್ವಾಸ ಗಳಿಸುವಿರಿ. ಗೆಲುವೇ ಹವ್ಯಾಸವಾದ ಕಾರಣ ಸದಾ ಒಂದಿಲ್ಲೊಂದು ಕೆಲಸದಲ್ಲಿ ತೊಡಗುವಿರಿ. ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ದಂಪತಿಗಳ ನಡುವೆ ಅನ್ಯೋನ್ಯತೆ ಇರುತ್ತದೆ. ಉದ್ಯೋಗದಲ್ಲಿ ಧನಾತ್ಮಕ ಬದಲಾವಣೆಯು ಎದುರಾಗುತ್ತದೆ. ಹೆಚ್ಚಿನ ನಿರೀಕ್ಷೆಯಿಂದ ಉದ್ಯೋಗ ಬದಲಾಯಿಸುವಿರಿ. ಬೇಸರ ಮರೆಯಲು ಕುಟುಂಬದ ಸದಸ್ಯರ ಜೊತೆಯಲ್ಲಿ ಪ್ರವಾಸಕ್ಕೆ ತೆರಳುವಿರಿ. ಶೀತದ ತೊಂದರೆ ಇರುತ್ತದೆ. ಮಕ್ಕಳ ಭವಿಷ್ಯತ್ತಿಗಾಗಿ ಹೆಚ್ಚಿನ ಹಣದ ಅವಶ್ಯಕತೆ ಕಂಡುಬರುತ್ತದೆ. ನೀರಿನೊಂದಿಗೆ ಚೆಲ್ಲಾಟಬೇಡ.

ಸಿಂಹ

ಧೈರ್ಯ ಸಾಹಸದ ಗುಣ ಎಲ್ಲರ ಗಮನ ಸೆಳೆಯುತ್ತದೆ. ಆತ್ಮವಿಶ್ವಾಸದಿಂದ ಜೀವನದಲ್ಲಿ ಮುಂದುವರಿಯುವಿರಿ. ಕುಟುಂಬದಲ್ಲಿನ ಸಮಸ್ಯೆಗಳನ್ನು ಸುಲಭವಾಗಿ ಬಗೆ ಹರಿಸುವಿರಿ. ಸಮಾಜಸೇವೆಯಲ್ಲಿ ನಾಯಕತ್ವ ವಹಿಸುವಿರಿ. ಗುರು ಹಿರಿಯರ ಸೇವೆಯಲ್ಲಿ ಸದಾ ಮುಂದಿರುತ್ತಾರೆ. ಗಣ್ಯವ್ಯಕ್ತಿಗಳ ಸಹಾಯ ಸಹಕಾರ ಇರುತ್ತದೆ. ಉದ್ಯೋಗದಲ್ಲಿ ಉನ್ನತ ಸ್ಥಾನ ಮಾನ ದೊರೆಯುತ್ತದೆ. ಕುಟುಂಬದ ಶ್ರೇಯೋಬಿವೃದ್ದಿಗೆ ಶ್ರಮ ಶ್ರಮಪಡ್ಜುವಿರಿ. ದಂಪತಿಗಳಲ್ಲಿ ಪ್ರೀತಿ ವಿಶ್ವಾಸ ಹೆಚ್ಚುತ್ತದೆ. ಆರೋಗ್ಯದಲ್ಲಿ ಸ್ಥಿರತೆ ಲಭಿಸುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಯಶಸ್ಸನ್ನು ಗಳಿಸುವಿರಿ. ಪಾಲುಗಾರಿಕೆಯ ವ್ಯಾಪಾರವನ್ನು ಆರಂಭಿಸುವ ಸಾಧ್ಯತೆಗಳಿವೆ.

ಕನ್ಯಾ

ಕುಟುಂಬದಲ್ಲಿನ ಜವಾಬ್ದಾರಿ ನಿಮ್ಮದಾಗುತ್ತದೆ. ಶಾಂತಿ ಸಂಧಾನದಿಂದ ಕುಟುಂಬದ ವಿವಾದ ಬಗೆಹರಿಸುವಿರಿ. ನೇರ ನಿಷ್ಠುರದ ಗುಣದಿಂದ ಎಲ್ಲರ ಟಿಕೆಗೆ ಸಿಲುಕುವಿರಿ. ತಪ್ಪು ಮಾಡಿದವರನ್ನು ಟೀಕಿಸುವಿರಿ. ಪ್ರತಿಯೊಂದು ವಿಚಾರದಲ್ಲಿ ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳಲು ಪ್ರಯತ್ನಿಸುವಿರಿ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲು ಕಾರಣರಾಗುವಿರಿ. ಉದ್ಯೋಗದಲ್ಲಿ ತೊಂದರೆ ಬಾರದು. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ದೀರ್ಘ ಪ್ರವಾಸದ ಬಗ್ಗೆ ಯೋಜನೆ ರೂಪಿಸುವಿರಿ. ಗೃಹ ಬಳಕೆಗಾಗಿ ವಾಹನವನ್ನು ಕೊಳ್ಳುವಿರಿ. ವಾಸಸ್ಥಳ ಬದಲಾಯಿಸುವಿರಿ. ಹೆತ್ತವರ ಆರೋಗ್ಯದ ಜವಾಬ್ದಾರಿ ನಿಮ್ಮದಾಗುತ್ತದೆ.

ತುಲಾ

ಆತುರದಿಂದ ಕೆಲಸ ಕಾರ್ಯಗಳನ್ನು ಆರಂಭಿಸುವಿರಿ. ಮನಸ್ಸನ್ನು ಬದಲಿಸದೆ ಪತಿಯ ಸಹಕಾರದಿಂದ ವ್ಯಾಪಾರವೊಂದನ್ನು ಆರಂಭಿಸುವಿರಿ. ಜೀವನದಲ್ಲಿ ಯಾವುದೇ ತೊಂದರೆ ಕಾಣದು. ಕುಟುಂಬದ ಆದಾಯದವು ಹೆಚ್ಚಲು ಕಾರಣರಾಗುವಿರಿ. ಮಕ್ಕಳ ಖರ್ಚು ವೆಚ್ಚಗಳನ್ನು ಭರಿಸಲು ಪ್ರಯತ್ನ ಪಡುವಿರಿ. ಪ್ರಸಾದನ ಸಾಮಗ್ರಿಗಳ ಮಾರಾಟದಲ್ಲಿ ಲಾಭವಿದೆ. ಹೆಚ್ಚಿನ ಕಷ್ಟವಿಲ್ಲದೆ ಹಣವನ್ನು ಸಂಪಾದಿಸುವಿರಿ. ಯೋಗ ಪ್ರಾಣಾಯಾಮ ಕಲಿಕಾ ಕೇಂದ್ರವನ್ನು ಆರಂಭಿಸುವ ಸೂಚನೆಯಿದೆ. ಪತಿಯ ಜೊತೆಯಲ್ಲಿ ತವರುಮನೆಗೆ ತೆರಳುವಿರಿ. ವಿದೇಶಪ್ರಯಾಣ ಯೋಗವಿದೆ. ಕೂಡಿಟ್ಟ ಹಣ ಪತಿಯ ನೆರವಿಗೆ ಬರುತ್ತದೆ.

ವೃಶ್ಚಿಕ

ಸಹಬಾಳ್ವೆಯಿಂದ ಜೀವನದಲ್ಲಿ ನೆಮ್ಮದಿ ಶಾಂತಿಯನ್ನು ಕಾಣುವಿರಿ. ಹಠದ ಗುಣದಿಂದ ಕೈಹಿಡಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಗಳಿಸುವಿರಿ. ಕುಟುಂಬದ ವಿವಾದಗಳಿಗೆ ಪರಿಹಾರ ಕಂಡುಹಿಡಿಯುವಿರಿ. ಮಾನಸಿಕ ಒತ್ತಡದಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ಅನಾವಶ್ಯಕವಾಗಿ ಉದ್ಯೋಗವನ್ನು ಬದಲಿಸುವಿರಿ. ಪಶುಸಂಗೋಪನೆಯಲ್ಲಿ ಆಸಕ್ತಿ ಇರುತ್ತದೆ. ಬೇಸರ ಕಳೆಯಲು ಮನರಂಜನಾ ಕೂಟಕ್ಕೆ ತೆರಳುವಿರಿ. ಮಕ್ಕಳು ವಿಧ್ಯಾಭ್ಯಾಸದಲ್ಲಿ ಉನ್ನತ ಸ್ತ್ಥಾನವನ್ನು ಗಳಿಸುತ್ತಾರೆ. ಅವಿವಾಹಿತರಿಗೆ ವಿವಾಹ ಯೋಗವಿದೆ. ಮೌನದಿಂದ ಸಮಸ್ಯೆಗಳನ್ನು ಗೆಲ್ಲಲು ಪ್ರಯತ್ನಿಸುವಿರಿ.

ಧನಸ್ಸು

ಕುಟುಂಬದ ಸೌಖ್ಯಕ್ಕೆ ಯಾವುದೇ ತ್ಯಾಗಕ್ಕೆ ಸಿದ್ಧರಾಗುವಿರಿ. ಸಮಯಕ್ಕೆ ತಕ್ಕಂತಹ ತೀರ್ಮಾನಗಳನ್ನು ಕಾರಣ ಕೆಲಸ ಕಾರ್ಯಾಗಳಲ್ಲಿ ಜಯ ಲಭಿಸುತ್ತದೆ. ಸಾಮಾಜಿಕ ಕ್ಷೇತ್ರದಲ್ಲಿ ಹೆಚ್ಚಿನ ಜವಾಬ್ದಾರಿ ದೊರೆಯುತ್ತದೆ. ಎಡೆಬಿಡದ ಪ್ರಯತ್ನದಿಂದ ಆದಾಯವನ್ನು ಹೆಚ್ಚಿಸಿಕೊಳ್ಳುವಿರಿ. ವ್ಯಾಪಾರ ವ್ಯವಹಾರದಲ್ಲಿ ಲಾಭದಲ್ಲಿ ಹೆಚ್ಚಳ ಕಂಡುಬರುತ್ತದೆ. ಅವಿವಾಹಿತರಿಗೆ ವಿವಾಹವಾಗುತ್ತದೆ. ಸರಕಾರದ ಆಶ್ರಯದಲ್ಲಿ ಮಹಿಳೆಯರ ಶ್ರೇಯಸ್ಸಿಗೆ ಹೋರಾಡುವಿರಿ. ಹೆಣ್ಣು ಮಕ್ಕಳಿಗಾಗಿ ವಿಶೇಷ ಅನುಕೂಲತೆಗಳು ದೊರೆಯಲಿವೆ. ಉಧ್ಯೋಗಸ್ಥರಿಗೆ ವಿದೇಶಕ್ಕೆ ತೆರಳುವ ಅವಕಾಶವು ಸಂಸ್ಥೆಯ ಮೂಲಕ ದೊರೆಯಲಿದೆ. ತಾಯಿಯವರ ಆರೋಗ್ಯದಲ್ಲಿ ಏರಿಳಿತ ಇರುತ್ತದೆ.

ಮಕರ

ಗೆಲ್ಲುವವರೆಗೂ ಆರಂಭಿಸಿದ ಕಾರ್ಯಗಳನ್ನು ನಿಲ್ಲಿಸುವುದಿಲ್ಲ. ಕೇಳುಗರಿಗೆ ಬೇಸರ ಬರುವಷ್ಟು ಮಾತನಾಡುವಿರಿ. ಕಷ್ಟಪಟ್ಟು ಮನೆಯ ಕೆಲಸ ಕಾರ್ಯವನ್ನು ನಿರ್ವಹಿಸುವಿರಿ. ಎಲ್ಲರೊಂದಿಗೆ ಹೊಂದಿಕೊಂಡುಬಾಳುವಿರಿ. ತಾಂತ್ರಿಕ ಪರಿಣತಿ ಪಡೆದವರು ವಿದೇಶಕ್ಕೆ ತೆರಳುವರು. ಆರೋಗ್ಯದಲ್ಲಿ ಸ್ಥಿರತೆ ಇರುವುದಿಲ್ಲ. ಸ್ವಂತ ಪರಿಶ್ರಮದಿಂದ ವ್ಯಾಪಾರವೊಂದನ್ನು ಆರಂಭಿಸುವಿರಿ. ಮಾತು ಕಡಿಮೆ ಮಾಡಿದರೆ ವಿವಾದ ಉಂಟಾಗದು. ತವರಿನಿಂದ ಹಣದ ಸಹಾಯ ದೊರೆಯುತ್ತದೆ. ತಾಯಿಯ ಉಡುಗೊರೆಯೊಂದನ್ನು ನೀಡುವಿರಿ. ಸ್ವಗೃಹ-ಭೂಲಾಭವಿದೆ. ಗಳಿಸಿದ ಹಣ ಉಳಿಸಲು ಪತಿಗೆ ಸಹಾಯ ಮಾಡುವಿರಿ.

ಕುಂಭ

ಮಾತನ್ನು ಕಡಿಮೆ ಮಾಡಿ ಕೆಲಸ ಕಾರ್ಯಗಳನ್ನು ಸಂಪೂರ್ಣಗೊಳಿಸುವಿರಿ. ತಡವಾದರೂ ಹಣದ ಗಳಿಕೆಯಲ್ಲಿ ಉನ್ನತ ಸ್ಥಾನ ಗಳಿಸುವಿರಿ. ಆರೋಗ್ಯದಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಕೇವಲ ದೈಹಿಕ ವ್ಯಾಯಾಮದಿಂದ ಆರೋಗ್ಯವನ್ನು ಸರಿಪಡಿಸಿಕೊಳ್ಳಬಲ್ಲಿರಿ. ಕಿರಿಯ ಸೋದರಿಯ ವಿವಾಹಕ್ಕೆ ನೆರವಾಗುವಿರಿ. ಉದ್ಯೋಗದಲ್ಲಿ ಅನಿರೀಕ್ಷಿತ ಉನ್ನತಿ ಕಂಡುಬರುತ್ತದೆ. ವಾದಿಸುವ ಬದಲು ಸಹನೆಯಿಂದ ಇರುವುದು ಒಳ್ಳೆಯದು. ನಿಮ್ಮ ಮನಸ್ಸನ್ನು ತಿಳಿಗಲು ಯಾರಿಂದಲೂ ಸಾಧ್ಯವಿಲ್ಲ. ಗುಡಿ ಕೈಗಾರಿಕೆಯಲ್ಲಿ ಲಾಭ ದೊರೆಯುತ್ತದೆ. ಮನಸ್ಸು ಒಳ್ಳೆಯದಾದರು ದುಡುಕುಮಾತಿನಿಂದ ತೊಂದರೆ ಅನುಭವಿಸುವಿರಿ.

ಮೀನ

ನಯವಾದ ಮಾತಿನಲ್ಲಿ ಎಲ್ಲರ ಮನಸನ್ನುಗೆಲ್ಲುವಿರಿ. ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ಕುಟುಂಬಕ್ಕೆ ಸೇರಿದ ವ್ಯಾಪಾರವನ್ನು ಮುಂದುವರಿಸುವಿರಿ. ಹಣಕಾಸಿನ ವ್ಯವಹಾರದ ಪೂರ್ಣ ಜವಾಬ್ದಾರಿ ಹೊರುವಿರಿ. ಉದ್ಯೋಗವನ್ನು ಮಾಡಲು ಇಚ್ಚಿಸದೆ ಸ್ವಂತ ವ್ಯಾಪಾರವನ್ನು ಯಶಸ್ವಿಯಾಗಿ ನಿರ್ವಹಿಸುವಿರಿ. ತಂದೆಯವರು ನಡೆಸುವ ವ್ಯಾಪಾರ ವ್ಯವಹಾರದಲ್ಲಿ ಪಾಲುದಾರರಾಗುವಿರಿ. ಭೂವಿವಾದವೊಂದನ್ನು ಎದುರಿಸಬೇಕಾಗುತ್ತದೆ. ಅವಿವಾಹಿತರಿಗೆ ವಿವಾಹವಾಗುತ್ತದೆ. ಹಣದ ತೊಂದರೆ ಬಾರದು. ಪತಿ ಮತ್ತು ಮಕ್ಕಳೊಂದಿಗೆ ಕಿರುಪ್ರವಾಸಕ್ಕೆ ತೆರಳುವ ಸಾಧ್ಯತೆಗಳು ಇವೆ. ಅತಿಯಾದ ತಲೆನೋವು ಕಾಡಬಹುದು.

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ