logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸ್ತ್ರೀ ವಾರ ಭವಿಷ್ಯ: ಧನು ರಾಶಿಯರಿಗೆ ಹಣದ ಬಗ್ಗೆ ಅತಿಯಾದ ಆಸೆ ಇರಲ್ಲ, ಮಕರ ರಾಶಿಯವರು ಯಾರನ್ನೂ ಸುಲಭವಾಗಿ ನಂಬಲ್ಲ

ಸ್ತ್ರೀ ವಾರ ಭವಿಷ್ಯ: ಧನು ರಾಶಿಯರಿಗೆ ಹಣದ ಬಗ್ಗೆ ಅತಿಯಾದ ಆಸೆ ಇರಲ್ಲ, ಮಕರ ರಾಶಿಯವರು ಯಾರನ್ನೂ ಸುಲಭವಾಗಿ ನಂಬಲ್ಲ

Raghavendra M Y HT Kannada

Published May 15, 2025 04:49 PM IST

google News

ಧನು, ಮಕರ, ಕುಂಭ ಹಾಗೂ ಮೀನ ರಾಶಿಯವರ ಸ್ತ್ರೀ ವಾರ ಭವಿಷ್ಯ

  • ಸ್ತ್ರೀ ವಾರ ಭವಿಷ್ಯ: ಪ್ರತಿ ರಾಶಿಗೂ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಗಳನ್ನು ನೀಡುತ್ತವೆ. ಈ ವಾರ ಯಾವ ಮಹಿಳಾ ರಾಶಿಯವರಿಗೆ ಏನು ಫಲ? 1 ವಾರ ಭವಿಷ್ಯದ ವಿವರ ಇಲ್ಲಿದೆ.
ಧನು, ಮಕರ, ಕುಂಭ ಹಾಗೂ ಮೀನ ರಾಶಿಯವರ ಸ್ತ್ರೀ ವಾರ ಭವಿಷ್ಯ
ಧನು, ಮಕರ, ಕುಂಭ ಹಾಗೂ ಮೀನ ರಾಶಿಯವರ ಸ್ತ್ರೀ ವಾರ ಭವಿಷ್ಯ

ನಾಳೆ ಏನಾಗುವುದೋ ಬಲ್ಲವರು ಯಾರು ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಕೆಲ ಮಹಿಳೆಯರು ಕೂಡ ತಮ್ಮ ಭವಿಷ್ಯವನ್ನು ನೋಡಿಕೊಳ್ಳುತ್ತಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. 2025ರ ಮೇ 16 ರ ಶುಕ್ರವಾರದಿಂದ 22ರ ಗುರುವಾರದವರೆಗೆ ಧನು, ಮಕರ, ಕುಂಭ ಹಾಗೂ ಮೀನ ರಾಶಿಯವರ ಸ್ತ್ರೀ ವಾರ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಮಿಥುನ ರಾಶಿಯವರಿಗೆ ಹಠಾತ್ ಆರ್ಥಿಕ ಲಾಭಗಳಿವೆ, ಧನು ರಾಶಿಯವರ ಒತ್ತಡ ಹೆಚ್ಚಾಗುತ್ತದೆ

May 29, 2025 04:21 PM

ನಾಳಿನ ದಿನ ಭವಿಷ್ಯ: ಕಟಕ ರಾಶಿಯವರ ಪ್ರಯತ್ನಗಳು ಯಶಸ್ವಿಯಾಗುತ್ತವೆ, ಧನು ರಾಶಿಯವರಿಗೆ ತೊಂದರೆಗಳು ದೂರಾಗಲಿವೆ

May 28, 2025 04:33 PM

ಹಿರಿಯರ ಜೊತೆ ವಾಗ್ವಾದ ತಪ್ಪಿಸಿ, ಅದೃಷ್ಟದ ದಿನ, ಆರೋಗ್ಯದ ಮೇಲೆ ಗಮನವಿರಲಿ; ನಾಳಿನ ದಿನಭವಿಷ್ಯ

May 27, 2025 04:09 PM

18 ವರ್ಷಗಳ ನಂತರ ಸೂರ್ಯ–ಕೇತುವಿನ ಸಂಯೋಗ, ಈ ರಾಶಿಯವರಿಗೆ ಆರ್ಥಿಕ ಲಾಭ, ಬಾಕಿ ಇರುವ ಎಲ್ಲಾ ಕೆಲಸಗಳು ಪೂರ್ಣಗೊಳ್ಳಲಿವೆ

May 27, 2025 12:56 PM

ಸಹೋದ್ಯೋಗಿಗಳೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು, ಅಡುಗೆಮನೆಯಲ್ಲಿ ಕೆಲಸ ಮಾಡುವಾಗ ಎಚ್ಚರ ವಹಿಸಿ; ನಾಳಿನ ದಿನಭವಿಷ್ಯ

May 26, 2025 03:50 PM

ನಾಳಿನ ದಿನ ಭವಿಷ್ಯ: ಮೀನ ರಾಶಿಯವರಿಗೆ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತೆ, ವೃಶ್ಚಿಕ ರಾಶಿಯವರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು

May 25, 2025 02:00 PM

ಧನು ರಾಶಿ

ಬೇರೆಯವರಿಗೆ ತೊಂದರೆ ನೀಡುವುದಿಲ್ಲ. ಎಲ್ಲರ ಜೊತೆ ಪ್ರೀತಿ ವಿಶ್ವಾಸ ಗಳಿಸುವಿರಿ. ನೀವು ತೆಗೆದುಕೊಳ್ಳುವ ತೀರ್ಮಾನಗಳು ಎಲ್ಲರ ಮನ ಗೆಲ್ಲುತ್ತದೆ. ಸಿಡುಕಿನ ಬುದ್ಧಿ ಇದ್ದರೂ ಅದರಿಂದ ಬೇರೆಯವರಿಗೆ ತೊಂದರೆ ಉಂಟಾಗುವುದಿಲ್ಲ. ನಿಮ್ಮ ತಪ್ಪನ್ನು ಮನ್ನಿಸುವ ಪತಿ ಇರುತ್ತಾರೆ. ಹಣದ ಬಗ್ಗೆ ಅತಿಯಾದ ಆಸೆ ಇರುವುದಿಲ್ಲ. ಆದರೆ ದೊರೆಯುವ ಅವಕಾಶವನ್ನು ಬಳಸಿಕೊಂಡು ಆದಾಯ ಹೆಚ್ಚಿಸಿಕೊಳ್ಳುವಿರಿ. ಧಾರ್ಮಿಕತೆಯ ಕಾರ್ಯಕ್ರಮಗಳಲ್ಲಿ ನೇತೃತ್ವ ವಹಿಸುವಿರಿ. ಉದ್ಯೋಗದಲ್ಲಿ ನಿರೀಕ್ಷಿತ ಯಶಸ್ಸು ದೊರೆಯುತ್ತದೆ. ಗುರು ಹಿರಿಯರ ಜೊತೆಯಲ್ಲಿ ವಿನಯದಿಂದ ವರ್ತಿಸುವಿರಿ. ಮನೆತನದ ಗೌರವವನ್ನು ಉಳಿಸುವ ಸಲುವಾಗಿ ವಿಶ್ರಾಂತಿ ಇಲ್ಲದೆ ದುಡಿಯುವಿರಿ. ಸಮಾಜಸೇವೆ ಮಾಡುವ ಆಸೆ ಈಡೇರಲಿದೆ. ಆಯ್ದ ವ್ಯಕ್ತಿಗಳ ಜೊತೆ ಸ್ನೇಹ ಪ್ರೀತಿ ಬೆಳೆಸುವಿರಿ. ವಿದ್ಯಾರ್ಥಿಗಳು ಉನ್ನತ ಅಧ್ಯಾಯನದ ಅವಕಾಶ ಪಡೆಯುತ್ತಾರೆ.

ಪರಿಹಾರ: ಮನೆ ಮುಂದಿನ ಒಣಗಿದ ಗಿಡಗಳನ್ನು ವಿಲೇವಾರಿ ಮಾಡಿ ದಿನದ ಕೆಲಸವನ್ನು ಆರಂಭಿಸಿ.
ಅದೃಷ್ಟದ ಸಂಖ್ಯೆ: 6
ಅದೃಷ್ಟದ ದಿಕ್ಕು: ದಕ್ಷಿಣ
ಅದೃಷ್ಟದ ಬಣ್ಣ: ಬಿಳಿ ಬಣ್ಣ

ಮಕರ ರಾಶಿ

ಶೀತ ಅಥವಾ ಕಫದ ತೊಂದರೆ ನಿಮ್ಮನ್ನು ಕಾಡುತ್ತದೆ. ವಿದ್ಯಾಭ್ಯಾಸದಲ್ಲಿ ಎದುರಾಗುವ ಸಮಸ್ಯೆಯನ್ನು ಬಗೆಹರಿಸುವಿರಿ. ಯಾರನ್ನೂ ಸುಲಭವಾಗಿ ನಂಬುವುದಿಲ್ಲ. ಹಣ ಕಾಸಿನ ವ್ಯವಹಾರದಲ್ಲಿ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಸಮಯ ಸಂದರ್ಭವನ್ನು ನಿಮಗೆ ಅನುಕೂಲವಾಗುವಂತೆ ಬದಲಾಯಿಸಬಲ್ಲಿರಿ. ಸುಖ ಸಂತೋಷದ ಜೀವನವನ್ನು ನಡೆಸುವಿರಿ. ಸಹನೆಯ ಬುದ್ದಿ ಇರುವುದಿಲ್ಲ. ಆತುರದಲ್ಲಿ ಆತ್ಮೀಯರ ಬಗ್ಗೆ ತಪ್ಪು ಅಭಿಪ್ರಾಯ ತಾಳುವಿರಿ. ಉದ್ಯೋಗದಲ್ಲಿ ಅನಿರೀಕ್ಷಿತವಾದ ಅನುಕೂಲಗಳು ಉಂಟಾಗಲಿವೆ. ಜೀವನದ ಸವಾಲುಗಳನ್ನು ದಿಟ್ಟತನದಿಂದ ಎದುರಿಸುವಿರಿ. ಕುಟುಂಬದಲ್ಲಿ ನಡೆಯಬೇಕಿದ್ದ ಮಂಗಳ ಕಾರ್ಯವೊಂದು ಮುಂದೆ ಹೋಗಲಿದೆ. ಮಕ್ಕಳ ವಿಚಾರದಲ್ಲಿ ಯೋಚನೆ ಇರುತ್ತದೆ. ಉದ್ಯೋಗದ ವಿಚಾರದಲ್ಲಿ ಸಹನೆಯಿಂದ ವರ್ತಿಸುವುದು ಒಳ್ಳೆಯದು. ಹೆಚ್ಚಿನ ವಿಶ್ರಾಂತಿಯನ್ನು ಬಯಸುವಿರಿ.

ಪರಿಹಾರ: ಕುಟುಂಬದ ಹಿರಿಯರಿಗೆ ಬೆಳ್ಳಿಯ ವಸ್ತುವನ್ನು ಉಡುಗೊರೆಯಾಗಿ ನೀಡಿ ದಿನದ ಕೆಲಸವನ್ನು ಆರಂಭಿಸಿ.
ಅದೃಷ್ಟದ ಸಂಖ್ಯೆ: 10
ಅದೃಷ್ಟದ ದಿಕ್ಕು: ಪಶ್ಚಿಮ
ಅದೃಷ್ಟದ ಬಣ್ಣ: ಬೂದು ಬಣ್ಣ

ಕುಂಭ ರಾಶಿ

ಅತಿಯಾದ ಬುದ್ಧಿ ಇರುತ್ತದೆ. ಪ್ರತಿಯೊಂದು ವಿಚಾರವನ್ನು ಮನಸ್ಸಿಟ್ಟು ಅರ್ಥ ಮಾಡಿಕೊಳ್ಳುವಿರಿ. ಕೆಲಸ ಕಾರ್ಯಗಳಲ್ಲಿ ನಿಧಾನವಾದರೂ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ಪ್ರಾಣಿ ಪಕ್ಷಿಗಳ ಬಗ್ಗೆ ಕರುಣೆ ಇರುತ್ತದೆ. ಕಷ್ಟ ನಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವಿರಿ. ಕುಟುಂಬದ ಸದಸ್ಯರ ಜೊತೆಯಲ್ಲಿ ಹೊಂದಿಕೊಂಡು ಬಾಳುವಿರಿ. ಯಾರೊಂದಿಗೂ ಅನಗತ್ಯವಾಗಿ ಮಾತನಾಡುವುದಿಲ್ಲ. ಬರವಣಿಗೆಯಲ್ಲಿ ಹೆಚ್ಚಿನ ಆಸಕ್ತಿ ಉಂಟಾಗುತ್ತದೆ. ಮಕ್ಕಳಿಂದ ನಿರಾಸೆ ಇರುತ್ತದೆ. ಅತಿಯಾದ ನಿರೀಕ್ಷೆ ಇದ್ದಲ್ಲಿ ಹೊಂದಿಕೊಂಡು ಬಾಳಲೇಬೇಕಾಗುತ್ತದೆ. ಜೀವನದಲ್ಲಿನ ಬದಲಾವಣೆಗಳಿಗೆ ಹೊಂದಿಕೊಂಡು ಬಾಳಲು ಸಾಧ್ಯವಾಗದು. ಪತಿಯ ಮನಸ್ಸಿಗೆ ಬೇಸರ ಉಂಟಾಗುವ ಸನ್ನಿವೇಶ ಉಂಟಾಗಲಿದೆ. ಉದ್ಯೋಗಸ್ಥರದಲ್ಲಿ ಸಾಧಾರಣ ಪ್ರಗತಿ ಇರಲಿದೆ. ಸ್ವಂತ ವ್ಯಾಪಾರ ವ್ಯವಹಾರವಿದ್ದಲ್ಲಿ ಆತ್ಮೀಯರ ಸಲಹೆ ಮತ್ತು ಸಹಾಯ ದೊರೆಯುತ್ತದೆ.

ಪರಿಹಾರ: ಜೇನು ಸೇವಿಸಿ ನೀರನ್ನು ಕುಡಿದ ನಂತರ ದಿನದ ಕೆಲಸವನ್ನು ಆರಂಭಿಸಿ
ಅದೃಷ್ಟದ ಸಂಖ್ಯೆ: 3
ಅದೃಷ್ಟದ ದಿಕ್ಕು: ಉತ್ತರ
ಅದೃಷ್ಟದ ಬಣ್ಣ: ಕಂದು ಬಣ್ಣ

ಮೀನ ರಾಶಿ

ಸದಾ ಕಾಲ ಯಾವುದಾದರೂ ಒಂದು ಕೆಲಸ ಕಾರ್ಯಗಳಲ್ಲಿ ನಿರತರಾಗುವಿರಿ. ಕುಟುಂಬದ ಸದಸ್ಯರು ತೆಗೆದುಕೊಳ್ಳುವ ತಪ್ಪು ತೀರ್ಮಾನಗಳನ್ನು ಸರಿಪಡಿಸುವಿರಿ. ಸಮಯ ಸಂದರ್ಭಕ್ಕೆ ಹೊಂದಿಕೊಂಡು ಬಾಳುವಿರಿ. ಕುಟುಂಬದ ಶಾಂತಿ ನೆಮ್ಮದಿ ಉಳಿಯಲು ಕಾರಣರಾಗುವಿರಿ. ಮಕ್ಕಳ ಜೀವನದಲ್ಲಿನ ಕಷ್ಟ ನಷ್ಟಗಳಿಗೆ ಪರಿಹಾರ ಸೂಚಿಸುವಿರಿ. ನಿಮ್ಮಲ್ಲಿ ಧೈರ್ಯ ಸಾಹಸದ ಗುಣವಿದ್ದರೂ ಸರಳವಾದ ಕೆಲಸ ಕಾರ್ಯಗಳಿಗೂ ಬೇರೊಬ್ಬರ ಸಹಾಯವನ್ನು ಬಯಸುವಿರಿ. ಸತತ ಪ್ರಯತ್ನದ ನಡುವೆಯೂ ಆರಂಭಿಸಿದ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಸಾಗಲಿವೆ. ಮಕ್ಕಳ ಜೊತೆಯಲ್ಲಿ ಸ್ನೇಹಿತರಂತೆ ಬಾಳುವಿರಿ. ವಿದ್ಯಾರ್ಥಿಗಳು ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳುವ ಅವಶ್ಯಕತೆ ಇದೆ. ನಿಮ್ಮ ಹೆಸರಿನಲ್ಲಿ ಇರುವ ಆಸ್ತಿಯನ್ನು ಮಾರಾಟ ಮಾಡಿ ವ್ಯಾಪಾರವೊಂದನ್ನು ಆರಂಭಿಸುವ ಸಾಧ್ಯತೆ ಇದೆ. ಅನಾವಶ್ಯಕವಾಗಿ ತೆಗೆದುಕೊಂಡ ತೀರ್ಮಾನಗಳನ್ನು ಬದಲಾಯಿಸುವಿರಿ.

ಪರಿಹಾರ: ಬಡ ರೋಗಿಗಳಿಗೆ ಹಣದ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿ
ಅದೃಷ್ಟದ ಸಂಖ್ಯೆ: 7
ಅದೃಷ್ಟದ ದಿಕ್ಕು: ಪೂರ್ವ
ಅದೃಷ್ಟದ ಬಣ್ಣ: ಕಪ್ಪು ಬಣ್ಣ

ಬರಹ: ಹೆಚ್‌. ಸತೀಶ್‌, ಜ್ಯೋತಿಷಿ, ಬೆಂಗಳೂರು

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ಸ್ತ್ರೀ ವಾರ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು