ಟಿ20 ವಿಶ್ವಕಪ್ಗೆ ಹಾರ್ದಿಕ್-ದುಬೆ ಇಬ್ಬರೂ ಬೇಕು; ಈತನ ಆಟ ಯುವಿಯನ್ನು ನೆನಪಿಸಿದೆ ಎಂದ ಆಕಾಶ್ ಚೋಪ್ರಾ
Jan 20, 2024 10:39 AM IST
ಶಿವಂ ದುಬೆ, ಆಕಾಶ್ ಚೋಪ್ರಾ, ಹಾರ್ದಿಕ್ ಪಾಂಡ್ಯ.
- Aakash Chopra on Shivam Dube: ಅಫ್ಘಾನಿಸ್ತಾನ ವಿರುದ್ಧದ ಟಿ20 ಕ್ರಿಕೆಟ್ ಸರಣಿಯಲ್ಲಿ ಶಿವಂ ದುಬೆ ಅವರ ಹಾರ್ಡ್ ಹಿಟ್ಟಿಂಗ್ ಪರಾಕ್ರಮ ಭಾರತದ ಶ್ರೇಷ್ಠ ಆಲ್ರೌಂಡರ್ ಯುವರಾಜ್ ಸಿಂಗ್ ಅವರನ್ನು ನೆನಪಿಸುತ್ತದೆ ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಹೇಳಿದ್ದಾರೆ.
ಶಿವಂ ದುಬೆ ಮತ್ತು ಹಾರ್ದಿಕ್ ಪಾಂಡ್ಯ (Shivam Dube and Hardik Pandya) ಇಬ್ಬರನ್ನೂ ಭಾರತದ ಟಿ20 ವಿಶ್ವಕಪ್ ತಂಡಕ್ಕೆ (T20 World Cup 2024) ಪರಿಗಣಿಸಬೇಕು ಎಂದು ಭಾರತದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ (Aakash Chopra) ಅಭಿಪ್ರಾಯಪಟ್ಟಿದ್ದಾರೆ. ಕಳೆದ ವರ್ಷ ಬಾಂಗ್ಲಾದೇಶ ವಿರುದ್ಧದ ಏಕದಿನ ವಿಶ್ವಕಪ್ ಪಂದ್ಯದ ವೇಳೆ ಪಾದದ ಗಾಯದಿಂದ ಹೊರಗುಳಿದಿದ್ದ ಹಾರ್ದಿಕ್, ಐಪಿಎಲ್ 2024 ರಲ್ಲಿ ಮುಂಬೈ ಇಂಡಿಯನ್ಸ್ ನಾಯಕನಾಗಿ ಕ್ರಿಕೆಟ್ಗೆ ಮರಳುವ ಸಾಧ್ಯತೆೆ ಹೆಚ್ಚಿದೆ.
ಹಾರ್ದಿಕ್ ಸಂಪೂರ್ಣ ಫಿಟ್ ಆದರೆ ಜೂನ್ 1ರಿಂದ ಯುಎಸ್ಎ ಮತ್ತು ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ನಡೆಯುವ ಐಸಿಸಿ ಈವೆಂಟ್ನಲ್ಲಿ ಟೀಮ್ ಇಂಡಿಯಾದ ಮೊದಲ ಆಯ್ಕೆಯ ಸೀಮ್-ಬೌಲಿಂಗ್ ಆಲ್ರೌಂಡರ್ ಆಗುವುದು ಖಚಿತ. ಆದರೀಗ ಹಾರ್ದಿಕ್ ಅನುಪಸ್ಥಿತಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ಶಿವಂ ದುಬೆ ಮಿಂಚಿನ ಮತ್ತು ಗಮನಾರ್ಹ ಪ್ರದರ್ಶನ ನೀಡಿದ್ದು, ಕಠಿಣ ಪೈಪೋಟಿ ನೀಡುತ್ತಿದ್ದಾರೆ.
ವಿಶ್ವಕಪ್ ಸ್ಪರ್ಧೆಗಳಿದ ದುಬೆ
ಕಳೆದ ವರ್ಷದ ಮಧ್ಯದಲ್ಲಿ ಭಾರತ ತಂಡಕ್ಕೆ ಮರಳಿದ ಆಲ್ರೌಂಡರ್, ಅಫ್ಘಾನಿಸ್ತಾನ ವಿರುದ್ಧದ 3 ಪಂದ್ಯಗಳ ಟಿ20ಐ ಸರಣಿಯಲ್ಲಿ ಕೊನೆಗೂ ಆಡುವ 11ರ ಬಳಗದಲ್ಲಿ ಅವಕಾಶ ಪಡೆದರು. ಅದಕ್ಕೂ ಹಿಂದಿನ ಸರಣಿಗಳಲ್ಲಿ ಬೆಂಚ್ಗೆ ಸೀಮಿತವಾಗಿದ್ದ ದುಬೆ, ಸಿಕ್ಕ ಅವಕಾಶದಲ್ಲಿ ಸಿಡಿದೆದ್ದು ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಅಲ್ಲದೆ, ಟಿ20 ವಿಶ್ವಕಪ್ಗೆ ಆಯ್ಕೆಯಾಗಲು ಸ್ಪರ್ಧೆಗಿಳಿದಿದ್ದಾರೆ.
ಮೊಹಾಲಿ ಮತ್ತು ಇಂದೋರ್ನಲ್ಲಿ ಬ್ಯಾಕ್ ಟು ಬ್ಯಾಕ್ ಅರ್ಧಶತಕಗಳನ್ನು ಸಿಡಿಸಿದ್ದ, ಚೆಂಡಿನೊಂದಿಗೆ 2 ವಿಕೆಟ್ ಕೂಡ ಪಡೆದಿರುವುದು, ಮೂರು ಪಂದ್ಯಗಳ ಸರಣಿಯಲ್ಲಿ ಅವರ 124 ರನ್ ಗಳಿಸಿದ್ದಾರೆ. ಮೂರನೇ ಪಂದ್ಯದಲ್ಲಿ ಬ್ಯಾಟ್ ಮಾಡುವ ಅವಕಾಶ ಸಿಗಲಿಲ್ಲ. ದುಬೆ ಬ್ಯಾಟಿಂಗ್ ಪರಾಕ್ರಮವನ್ನು ಕೊಂಡಾಡಿದ ಆಕಾಶ್ ಚೋಪ್ರಾ, ಅವರ ಬ್ಯಾಟಿಂಗ್ ಯುವರಾಜ್ ಸಿಂಗ್ ಅವರನ್ನು ನೆನಪಿಸಿದೆ ಎಂದು ಹೇಳಿದ್ದಾರೆ.
ಯುವಿ ಆಟವನ್ನು ನೆನಪಿಸಿದೆ ಎಂದ ಚೋಪ್ರಾ
ದುಬೆ ಅವರ ಹಾರ್ಡ್ ಹಿಟ್ಟಿಂಗ್ ಪರಾಕ್ರಮ ಭಾರತದ ಶ್ರೇಷ್ಠ ಆಲ್ರೌಂಡರ್ ಯುವರಾಜ್ ಅವರನ್ನು ನೆನಪಿಸುತ್ತದೆ. ಶಿವಂ ದುಬೆ ಅವರ ಶಕ್ತಿ ಜೋರಾಗಿ ಕೇಳಿ ಬರುತ್ತಿದೆ. 3ನೇ ಪಂದ್ಯದಲ್ಲಿ ಅವರನ್ನು ಸ್ವಲ್ಪ ಮುಂಚಿತವಾಗಿ ಕಳುಹಿಸಬಾರದಿತ್ತು ಎಂದು ಎಂಬು ಭಾವಿಸುತ್ತೇನೆ. ಬದಲಿಗೆ ಸಂಜು ಸ್ಯಾಮ್ಸನ್ ಅಥವಾ ರಿಂಕು ಸಿಂಗ್ ಅವರನ್ನು ಕಳುಹಿಸಬಹುದಿತ್ತು. ಏಕೆಂದರೆ ಅವರು ಆಕ್ರಮಣಕಾರಿ ಎಂದಿದ್ದಾರೆ.
ನಿಜವಾಗಲೂ ಅವರ (ದುಬೆ) ಆಟ ಯುವಿ (ಯುವರಾಜ್ ಸಿಂಗ್) ಅವರನ್ನು ನೆನಪಿಸಿತು. ಹಾರ್ದಿಕ್ ಮತ್ತು ದುಬೆ ಇಬ್ಬರೂ ಟಿ20 ವಿಶ್ವಕಪ್ ತಂಡದಲ್ಲಿ ಇರಬೇಕು ಎಂದು ಮಾಜಿ ಬ್ಯಾಟ್ಸ್ಮನ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದ್ದಾರೆ. ಆದರೆ, ಮೊದಲ ಎರಡು ಪಂದ್ಯಗಳಲ್ಲಿ ಅವರು ಸಿಕ್ಸರ್ ಬಾರಿಸಿದ ರೀತಿ, ಶಕ್ತಿ ಅವರೊಬ್ಬ ಫಿನಿಷರ್ ಎಂಬುದನ್ನು ಸ್ಪಷ್ಟಪಡಿಸಿತು ಎಂದು ತಿಳಿಸಿದ್ದಾರೆ.
ಇಬ್ಬರನ್ನೂ ಆಯ್ಕೆ ಮಾಡಿ ಎಂದ ಮಾಜಿ ಕ್ರಿಕೆಟರ್
ಕೆಲವರು ಹಾರ್ದಿಕ್ ಅವರನ್ನು ಕೈಬಿಟ್ಟು ದುಬೆಗೆ ಅವಕಾಶ ಕೊಡಬೇಕು ಎಂದು ಹೇಳಿದ್ದಾರೆ. ಇಬ್ಬರನ್ನೂ ಆಯ್ಕೆ ಮಾಡಿ ಎಂದು ನಾನು ಹೇಳುತ್ತಿದ್ದೇನೆ. ಈ ಮೂರು ಪಂದ್ಯಗಳ ಆಧಾರದ ಮೇಲೆ ಶಿವಂ ದುಬೆ ನಿಜವಾದ ಸ್ಪರ್ಧಿಯಾಗಿದ್ದಾರೆ. ಒಂದೊಮ್ಮೆ ದುಬೆ ಐಪಿಎಲ್ನಲ್ಲೂ ಉತ್ತಮ ಪ್ರದರ್ಶನ ನೀಡಿದರೆ, ಅವರು ಟಿ20 ವಿಶ್ವಕಪ್ಗೆ ಬಹುತೇಕ ಆಯ್ಕೆ ಆಗುವುದು ಖಚಿತ ಎಂದು ಮಾಜಿ ಆರಂಭಿಕ ಆಟಗಾರ ಹೇಳಿದ್ದಾರೆ.