logo
ಕನ್ನಡ ಸುದ್ದಿ  /  ಕ್ರಿಕೆಟ್  /  Kuldeep Yadav: ಕುಲ್ದೀಪ್ ಯಾದವ್ ಜಗತ್ತಿನಲ್ಲೇ ಬೆಸ್ಟ್ ಸ್ಪಿನ್ ಬೌಲರ್; ಆಕಾಶ್ ಚೋಪ್ರಾ

Kuldeep Yadav: ಕುಲ್ದೀಪ್ ಯಾದವ್ ಜಗತ್ತಿನಲ್ಲೇ ಬೆಸ್ಟ್ ಸ್ಪಿನ್ ಬೌಲರ್; ಆಕಾಶ್ ಚೋಪ್ರಾ

Raghavendra M Y HT Kannada

Sep 14, 2023 07:45 PM IST

google News

ಕುಲ್ದೀಪ್ ಯಾದವ್ ಜಗತ್ತಿನಲ್ಲೇ ಬೆಸ್ಟ್ ಸ್ಪಿನ್ ಬೌಲರ್ ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ಆಕಾಶ್ ಚೋಪ್ರಾ ಹೇಳಿದ್ದಾರೆ.

  • ಕುಲ್ದೀಪ್ ಯಾದವ್ ಜಗತ್ತಿನಲ್ಲೇ ಬೆಸ್ಟ್ ಸ್ಪಿನ್ ಬೌಲರ್ ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ಆಕಾಶ್ ಚೋಪ್ರಾ ಹೇಳಿದ್ದಾರೆ.

ಕುಲ್ದೀಪ್ ಯಾದವ್ ಜಗತ್ತಿನಲ್ಲೇ ಬೆಸ್ಟ್ ಸ್ಪಿನ್ ಬೌಲರ್ ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ಆಕಾಶ್ ಚೋಪ್ರಾ ಹೇಳಿದ್ದಾರೆ.
ಕುಲ್ದೀಪ್ ಯಾದವ್ ಜಗತ್ತಿನಲ್ಲೇ ಬೆಸ್ಟ್ ಸ್ಪಿನ್ ಬೌಲರ್ ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ಆಕಾಶ್ ಚೋಪ್ರಾ ಹೇಳಿದ್ದಾರೆ.

ಕೊಲಂಬೊ (ಶ್ರೀಲಂಕಾ): ಏಷ್ಯಾಕಪ್ ಸೂಪರ್ 4 (Asia Cup Super 2023) ಸುತ್ತಿನ ಪಾಕಿಸ್ತಾನ (Pakistan) ಮತ್ತು ಶ್ರೀಲಂಕಾ (Sri Lanka) ವಿರುದ್ಧದ ಪಂದ್ಯಗಳಲ್ಲಿ ಟೀಂ ಇಂಡಿಯಾ (Team India) ಗೆಲುವಿನಲ್ಲಿ ಚೈನಾಮನ್ ಕುಲ್ದೀಪ್ ಯಾದವ್ (Kuldeep Yadav) ನಿರ್ಣಾಯಕ ಪಾತ್ರವಹಿಸಿದ್ದರು. ಪಾಕಿಸ್ತಾನ ವಿರುದ್ಧ 5 ವಿಕೆಟ್ ಕಬಳಿಸಿದರೆ, ಶ್ರೀಲಂಕಾ ವಿರುದ್ಧ 4 ವಿಕೆಟ್ ಪಡೆದು ಮಿಂಚಿದ್ದರು. ಕುಲ್ದೀಪ್ ಅವರ ಈ ಅತ್ಯುತ್ತಮ ಪ್ರದರ್ಶನಕ್ಕೆ ಮೆಚ್ಚುಗೆಯ ಸುರಿಮಳೆಯಾಗುತ್ತಿದೆ. ಕುಲ್ದೀಪ್ ವಿಶ್ವದ ಅತ್ಯುತ್ತಮ ಸ್ಪಿನ್ನರ್ ಎಂದು ಭಾರತ ತಂಡದ ಮಾಜಿ ಕ್ರಿಕೆಟರ್ ಆಕಾಶ್ ಚೋಪ್ರಾ ಹೇಳಿದ್ದಾರೆ.

ಕುಲ್ದೀಪ್ ಯಾದವ್ ನಿಜವಾದ ವಿಕೆಟ್ ಟೇಕರ್

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಆಕಾಶ್ ಚೋಪ್ರಾ, ಕುಲ್ದೀಪ್ ಯಾದವ್ ಅವರನ್ನು ಆಕಾಶಕ್ಕೆ ಹತ್ತಿಸಿದ್ದಾರೆ. ಸದ್ಯ ಕುಲ್ದೀಪ್ ವಿಶ್ವದ ಬೆಸ್ಟ್ ಸ್ಪಿನ್ನರ್ ಎಂದಿದ್ದಾರೆ. ಕುಲ್ದೀಪ್ ಅವರ ಅಂಕಿ ಅಂಶಗಳನ್ನು ನೋಡಿದರೆ ಅವರು ನಿಜವಾದ ವಿಕೆಟ್ ಟೇಕರ್ ಅಂತಲೇ ಹೇಳಬಹುದು. ಏಕದಿನ ಕ್ರಿಕೆಟ್‌ನಲ್ಲಿ 150 ವಿಕೆಟ್ ಪಡೆದ ಸ್ಪಿನ್ನರ್‌ಗಳ ಬಗ್ಗೆ ಮಾತನಾಡುತ್ತಿದ್ದೇವೆ. ಮೊದಲು ಎಲ್ಲಕ್ಕಿಂತ 150 ವಿಕೆಟ್‌ಗಳು ಬಹಳ ದೊಡ್ಡ ವಿಷಯ. ಇದು ಸಣ್ಣ ಸಂಖ್ಯೆಯೇನಲ್ಲ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

ಕುಲ್ದೀದ್ ಅವರು ಮಿಸ್ಟರಿ ಸ್ಪಿನ್ನರ್ ಅಲ್ಲ, ಸಾಂಪ್ರದಾಯಿಕ ಸ್ಪಿನ್ ಅವರ ವಿಶೇಷತೆಯಾಗಿದೆ. 150 ವಿಕೆಟ್‌ಗಳನ್ನು ಪಡೆಯಲು ಕುಲ್ದೀಪ್‌ಗೆ ಕೇವಲ 85 ಇನ್ನಿಂಗ್ಸ್‌ಗಲು ಬೇಕಾಗಿದ್ದವು. ಇದರಲ್ಲಿ ಯಾವುದೇ ರಹಸ್ಯ, ಮ್ಯಾಜಿಕ್ ಇಲ್ಲ. ಸರಳವಾದ ಲೆಗ್-ಸ್ಪಿನ್, ಗೂಗ್ಲಿಗಳನ್ನು ಅವರು ಎಸೆಯುತ್ತಾರೆ ಎಂದು ಚೋಪ್ರಾ ತಿಳಿಸಿದ್ದಾರೆ.

ಪಾಕಿಸ್ತಾನ, ಶ್ರೀಲಂಕಾ ವಿರುದ್ಧ ಅತ್ಯುತ್ತಮ ಪ್ರದರ್ಶನ

ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಸೆಪ್ಟೆಂಬರ್ 11 ರಂದು (ಸೋಮವಾರ) ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕುಲ್ದೀಪ್, ಬ್ಯಾಟಿಂಗ್‌ಗೆ ಯೋಗ್ಯವಾದ ಪಿಚ್‌ನಲ್ಲಿ 5 ವಿಕೆಟ್ ಪಡೆದರು. ಅವರ ಸ್ಪಿನ್ ಮಾಂತ್ರಿಕತೆ ಮುಂದೆ ಪಾಕಿಸ್ತಾನ ಪರದಾಡುವಂತೆ ಆಯಿತು. ಹೀಗಾಗಿ ಕೇವಲ 128 ರನ್‌ಗಳಿಗೆ ಆಲೌಟ್ ಆಗಿತ್ತು. ಮರುದಿನವೇ ಅಂದರೆ ಇದೇ ಮೈದಾನದಲ್ಲಿ ಸೆಪ್ಟೆಂಬರ್ 12 ರಂದು ನಡೆದಿದ್ದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ನಾಲ್ಕು ವಿಕೆಟ್ ಕಬಳಿಸಿದ್ದರು.

ಟೀಂ ಇಂಡಿಯಾಗೆ ಸೆಮಿ ಫೈನಲ್ ಆಗಿದ್ದ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ 49.1 ಓವರ್‌ನಲ್ಲಿ 213 ರನ್‌ ಗಳಿಸಿ ಆಲೌಟ್ ಆಗಿತ್ತು. 214 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ್ದ ಶ್ರೀಲಂಕಾ 172 ರನ್‌ಗಳಿಗೆ ಸರ್ವ ಪತನ ಕಂಡಿತ್ತು. ಈ ಪಂದ್ಯದಲ್ಲಿ ಕುಲ್ದೀಪ್ 9.3 ಓವರ್‌ಗಳಲ್ಲಿ 43 ರನ್ ನೀಡಿ 4 ವಿಕೆಟ್ ಕಬಳಿಸಿದ್ದರು. ಆ ಮೂಲಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 150 ವಿಕೆಟ್‌ಗಳ ಮೈಲುಗಲ್ಲು ಸಾಧಿಸಿದ್ದರು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ