logo
ಕನ್ನಡ ಸುದ್ದಿ  /  ಕ್ರಿಕೆಟ್  /  ಅವರಲ್ಲಿ ವಿಶ್ವಕಪ್ ಆಡುವ ಹಸಿವಿದೆ; ರೋಹಿತ್, ವಿರಾಟ್ ಟಿ20 ವಿಶ್ವಕಪ್‌ ಆಡಬೇಕೆಂದ ಎಬಿ ಡಿವಿಲಿಯರ್ಸ್

ಅವರಲ್ಲಿ ವಿಶ್ವಕಪ್ ಆಡುವ ಹಸಿವಿದೆ; ರೋಹಿತ್, ವಿರಾಟ್ ಟಿ20 ವಿಶ್ವಕಪ್‌ ಆಡಬೇಕೆಂದ ಎಬಿ ಡಿವಿಲಿಯರ್ಸ್

Jayaraj HT Kannada

Dec 15, 2023 10:03 PM IST

google News

ವಿಶ್ವಕಪ್‌ ಸೋಲಿನ ಬಳಿಕ ರೋಹಿತ್‌ ಹಾಗೂ ವಿರಾಟ್‌ ಸಂತೈಸುತ್ತಿರುವ ಪ್ರಧಾನಿ ಮೋದಿ

    • AB De Villiers: ಮುಂದಿನ ವಿಶ್ವಕಪ್‌ ಪಂದ್ಯಾವಳಿಯಲ್ಲಿ ರೋಹಿತ್‌ ಶರ್ಮಾ ಮತ್ತು ವಿರಾಟ್‌ ಕೊಹ್ಲಿ ಆಡಬೇಕು ಎಂದು ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್‌ ಹೇಳಿದ್ದಾರೆ.
ವಿಶ್ವಕಪ್‌ ಸೋಲಿನ ಬಳಿಕ ರೋಹಿತ್‌ ಹಾಗೂ ವಿರಾಟ್‌ ಸಂತೈಸುತ್ತಿರುವ ಪ್ರಧಾನಿ ಮೋದಿ
ವಿಶ್ವಕಪ್‌ ಸೋಲಿನ ಬಳಿಕ ರೋಹಿತ್‌ ಹಾಗೂ ವಿರಾಟ್‌ ಸಂತೈಸುತ್ತಿರುವ ಪ್ರಧಾನಿ ಮೋದಿ

ಏಕದಿನ ವಿಶ್ವಕಪ್‌ ಬಳಿಕ ಭಾರತ ಕ್ರಿಕೆಟ್‌ನಲ್ಲಿ ಹಲವಾರು ಬದಲಾವಣೆಗಳಾಗುತ್ತಿವೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಕ್ರಿಕೆಟ್‌ ಭವಿಷ್ಯವು ಸದ್ಯ ಕ್ರಿಕೆಟ್‌ ತಜ್ಞರು ಹಾಗೂ ಅಭಿಮಾನಿಗಳ ನಡುವೆ ಚರ್ಚೆಯ ವಿಷಯವಾಗಿದೆ. ವಿಶ್ವಕಪ್‌ಗೂ ಮುಂಚೆಯೇ ಚುಟುಕು ಸ್ವರೂಪದ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಅನುಭವಿ ಜೋಡಿಯು, ಮುಂದೆ ಸಂಪೂರ್ಣವಾಗಿ ಟಿ20 ಕ್ರಿಕೆಟ್‌ನಿಂದ ದೂರ ಸರಿಯುವ ಸುಳಿವು ಸಿಗುತ್ತಿದೆ. ಅದರಲ್ಲೂ ಏಕದಿನ ವಿಶ್ವಕಪ್ 2023ರ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತ ಬಳಿಕ, ಅನುಭವಿ ಆಟಗಾರರು ಚುಟುಕು ಸ್ವರೂಪದಿಂದ ದೂರ ಉಳಿಯಲು ಬಯಸುತ್ತಿದೆ ಎಂಬ ವರದಿಗಳು ಹೊರಬರುತ್ತಿವೆ.

ಸದ್ಯ ದಕ್ಷಿಣದ ವಿರುದ್ಧದ ವೈಟ್ ಬಾಲ್ ಸರಣಿಯಿಂದಲೂ ವಿಶ್ರಾಂತಿ ಪಡೆದಿರುವ ಜೋಡಿ, ಮುಂದೆ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡ ಸೇರಿಕೊಳ್ಳಲಿದ್ದಾರೆ.

ಸದ್ಯ ದಕ್ಷಿಣ ಆಫ್ರಿಕಾದ ದಿಗ್ಗಜ ಕ್ರಿಕೆಟಿಗ ಹಾಗೂ ಆರ್‌ಸಿಬಿಯ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್, ಉಭಯ ಆಟಗಾರರು 2024ರ ಟಿ20 ವಿಶ್ವಕಪ್‌ನಲ್ಲಿ ಆಡಬೇಕು ಎಂಬುದಾಗಿ ಹೇಳಿದ್ದಾರೆ. ಇಬ್ಬರಿಗೂ ವಿಶ್ವಕಪ್‌ ಆಡುವ ಹಸಿವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ | ಸೂರ್ಯ ಅನಭಿಷಿಕ್ತ ದೊರೆ, ರಿಂಕು ಇನ್ನೂ ಬೇಕು; ದಕ್ಷಿಣ ಆಫ್ರಿಕಾ ಟಿ20 ಸರಣಿಯ ಪ್ರಮುಖಾಂಶಗಳಿವು

“ನಾವು ರೋಹಿತ್ ಮತ್ತು ವಿರಾಟ್ ಅವರನ್ನು ವಿಶ್ವಕಪ್‌ನಲ್ಲಿ ನೋಡಬೇಕು. ಇದು ವಿಶ್ವಕಪ್‌ ಆಡಲು ಅವರಿಗಿರುವ ಹಸಿವಿಗೆ ಸಂಬಂಧಿಸಿದ್ದು. ಅವರಿಗೆ ಟಿ20 ವಿಶ್ವಕಪ್ ಆಡಿ ಟ್ರೋಫಿ ಗೆಲ್ಲುವ ಹಸಿವು ಇದೆಯೇ? ನನಗಂತೂ ಇದೆ ಅನಿಸುತ್ತಿದೆ. ನಾನು ಅವರ ಪರವಾಗಿ ಮಾತನಾಡಲು ಸಾಧ್ಯವಿಲ್ಲ. ಆದರೆ ಅವರು ವಿಶ್ವಕಪ್‌ ಆಡಿ ಕಪ್‌ ಗೆಲ್ಲಲು ಬಯಸುತ್ತಾರೆ ಎಂಬುದು ನನ್ನ ಅಭಿಪ್ರಾಯ. ಟಿ20 ವಿಶ್ವಕಪ್ ಒಂದು ಸಣ್ಣ ಪಂದ್ಯಾವಳಿ. ವಿಶ್ವಕಪ್ ಗೆಲ್ಲಲು ಅದು ಮತ್ತೊಂದು ಅವಕಾಶ ಕಲ್ಪಿಸುತ್ತದೆ. ಹೀಗಾಗಿ ಅವರು ವಿಶ್ವಕಪ್‌ ಆಡುವುದನ್ನು ನಾನು ನೋಡಲು ಇಚ್ಛಿಸುತ್ತೇನೆ” ಎಂದು ಡಿವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

ಸದ್ಯ ರೋಹಿತ್ ಅನುಪಸ್ಥಿತಿಯಲ್ಲಿ ಸೂರ್ಯಕುಮಾರ್ ನಾಯಕತ್ವವನ್ನು ಡಿವಿಲಿಯರ್ಸ್ ಶ್ಲಾಘಿಸಿದ್ದಾರೆ. ಇದನ್ನು ತಂಡದ ಮ್ಯಾನೇಜ್‌ಮೆಂಟ್‌ನ 'ಉತ್ತಮ ಕ್ರಮ' ಎಂದು ಬಣ್ಣಿಸಿದ್ದಾರೆ. ಸೂರ್ಯ ಅವರ ಸೃಜನಶೀಲತೆ ಮತ್ತು '360 ಡಿಗ್ರಿ' ಬ್ಯಾಟಿಂಗ್ ವಿಧಾನವು ಭಾರತ ಕ್ರಿಕೆಟ್ ತಂಡಕ್ಕೆ ಪ್ರಯೋಜನಕಾರಿಯಾಗಬಹುದು ಎಂದು ಅವರು ಹೇಳಿದರು.

ಇದನ್ನೂ ಓದಿ | ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದ ನೂತನ ನಾಯಕ; ರೋಹಿತ್ 10 ವರ್ಷಗಳ ಕ್ಯಾಪ್ಟನ್ಸಿ ಅಂತ್ಯ

“ಸೂರ್ಯಕುಮಾರ್ ಯಾದವ್‌ಗೆ ನಾಯಕತ್ವ ನೀಡಿರುವುದು ಭಾರತದ ಉತ್ತಮ ನಡೆ. ನನಗದು ಇಷ್ಟವಾಯ್ತು. ಅವರು ಸ್ವಲ್ಪಮಟ್ಟಿಗೆ 360 ಡಿಗ್ರಿ ಆಟಗಾರ. ಅವರು ವಿಭಿನ್ನವಾಗಿ ಯೋಚಿಸುತ್ತಾರೆ. ಅಲ್ಲದೆ ಸೃಜನಶೀಲ ಬ್ಯಾಟರ್‌ ಕೂಡಾ. ದಕ್ಷಿಣ ಆಫ್ರಿಕಾದಲ್ಲಿ ಭಾರತವನ್ನು ಅವರು ಮುನ್ನಡೆಸುತ್ತಿರುವುದನ್ನು ವೀಕ್ಷಿಸಲು ಸಂತೋಷವಾಗುತ್ತದೆ,” ಎಂದು ಎಬಿಡಿ ಹೇಳಿಕೊಂಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ