logo
ಕನ್ನಡ ಸುದ್ದಿ  /  ಕ್ರಿಕೆಟ್  /  ಅನಿಮಲ್ ಸ್ತ್ರೀದ್ವೇಷಿ ಮತ್ತು ಅವಮಾನಕರ ಸಿನಿಮಾ; ನಾನು 3 ಗಂಟೆ ವ್ಯರ್ಥ ಮಾಡಿದೆ ಎಂದ ಭಾರತದ ಕ್ರಿಕೆಟಿಗ, ಫ್ಯಾನ್ಸ್ ಗರಂ

ಅನಿಮಲ್ ಸ್ತ್ರೀದ್ವೇಷಿ ಮತ್ತು ಅವಮಾನಕರ ಸಿನಿಮಾ; ನಾನು 3 ಗಂಟೆ ವ್ಯರ್ಥ ಮಾಡಿದೆ ಎಂದ ಭಾರತದ ಕ್ರಿಕೆಟಿಗ, ಫ್ಯಾನ್ಸ್ ಗರಂ

Prasanna Kumar P N HT Kannada

Dec 05, 2023 01:24 PM IST

google News

ಅನಿಮಲ್ ಸ್ತ್ರೀದ್ವೇಷಿ ಮತ್ತು ಅವಮಾನಕರ ಸಿನಿಮಾ ಎಂದ ಭಾರತದ ಕ್ರಿಕೆಟಿಗ.

    • Animal Movie: ಅನಿಮಲ್ ಅವಮಾನಕರ ಸಿನಿಮಾ. 'ಕರುಣಾಜನಕವಾಗಿ ಈ ಸಿನಿಮಾವನ್ನು ನಿರ್ಮಿಸಲಾಗಿದೆ. ಚಿತ್ರ ನೋಡಿ, 3 ಗಂಟೆಗಳ ಕಾಲ ವ್ಯರ್ಥ ಮಾಡಲಾಯಿತು ಎಂದು ಭಾರತದ ಹಿರಿಯ ಕ್ರಿಕೆಟಿಗ ಹೇಳಿದ್ದಾರೆ.
ಅನಿಮಲ್ ಸ್ತ್ರೀದ್ವೇಷಿ ಮತ್ತು ಅವಮಾನಕರ ಸಿನಿಮಾ ಎಂದ ಭಾರತದ ಕ್ರಿಕೆಟಿಗ.
ಅನಿಮಲ್ ಸ್ತ್ರೀದ್ವೇಷಿ ಮತ್ತು ಅವಮಾನಕರ ಸಿನಿಮಾ ಎಂದ ಭಾರತದ ಕ್ರಿಕೆಟಿಗ.

ರಣಬೀರ್ ಕಪೂರ್ (Ranbir Kapoor) ಅಭಿನಯದ 'ಅನಿಮಲ್' (Animal) ಬಾಕ್ಸಾಫೀಸ್​ ಶೇಕ್ ಮಾಡುತ್ತಿದೆ. ಗಲ್ಲಾ ಪೆಟ್ಟಿಗೆಯಲ್ಲಿ ಕೋಟಿ ಕೋಟಿ ಬಾಚುತ್ತಾ ಅತ್ಯಂತ ಯಶಸ್ವಿಯಾಗಿ ಮುನ್ನಗ್ಗುತ್ತಿದೆ. ಡಿಸೆಂಬರ್​ 1ರಂದು ಭಾರತದ ಚಿತ್ರಮಂದಿರಗಳಿಗೆ ಅಪ್ಪಳಿಸಿದ 'ಅನಿಮಲ್'ಗೆ, ಪಾಸಿಟಿವ್ ರೆಸ್ಪಾನ್ಸ್​ ಸಿಕ್ಕಿದೆ. ಬಿಡುಗಡೆಯಾದ ನಾಲ್ಕೇ ದಿನಗಳಲ್ಲಿ ವಿಶ್ವದಾದ್ಯಂತ 425 ಕೋಟಿ ಗ್ರಾಸ್ ಬಾಚಿಕೊಂಡಿದ್ದು, ಸಾವಿರ ಕೋಟಿಯತ್ತ ಮುನ್ನಗ್ಗುತ್ತಿದೆ.

ಟಾಲಿವುಡ್​​ನ ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ಈ ಬ್ಲಾಕ್​ಬಸ್ಟರ್ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್, ಬಾಬಿ ಡಿಯೋಲ್, ತೃಪ್ತಿ ದಿಮ್ರಿ ಸೇರಿದಂತೆ ಬಹುತಾರಾಗಣದ ಹೊಂದಿರುವ 'ಅನಿಮಲ್', 3 ಗಂಟೆ 21 ನಿಮಿಷಗಳ ಅವಧಿಯನ್ನು ಹೊಂದಿದೆ. ಈ ಚಿತ್ರಕ್ಕೆ ಪ್ರೇಕ್ಷಕರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದು, ಹಲವೆಡೆ ಈಗಲೂ ಟಿಕೆಟ್​​ಗಳು ಸಿಗುತ್ತಿಲ್ಲ ಎಂಬುದು ವಿಶೇಷ.

ನಿರ್ದೇಶಕ, ಬ್ಯಾಕ್​ಗ್ರೌಂಡ್ ಸ್ಕೋರ್, ಮ್ಯೂಸಿಕ್, ರಣಬೀರ್-ರಶ್ಮಿಕಾ ಸೇರಿದಂತೆ ನಟ-ನಟಿಯರು ಅದ್ಭುತವಾಗಿ ಅಭಿನಯಿಸಿದ್ದಾರೆ. ಆದರೆ ಕೆಲವರಿಗೆ ಈ ಸಿನಿಮಾ ಇಷ್ಟವಾಗಲಿಲ್ಲ. ವಿವಿಧ ಅಭಿಪ್ರಾಯಗಳು ಸಹ ಕೇಳಿಬಂದಿದೆ. ಅದಕ್ಕೆ ಕಾರಣ ಕೌಟುಂಬಿಕ ಹಿಂಸಾಚಾರ ವೈಭವೀಕರಣ ಮತ್ತು ಸ್ತ್ರೀದ್ವೇಷಿ ಸಿನಿಮಾ ಎಂದು ದೂರುಗಳು ಬಂದಿವೆ. ಇದೀಗ ಆ ಸಾಲಿಗೆ ಭಾರತ ತಂಡದ ಕ್ರಿಕೆಟಿಗ ಜಯದೇವ್ ಉನದ್ಕತ್ ಸೇರಿದ್ದಾರೆ.

ಅವಮಾನಕರ ಸಿನಿಮಾ ಎಂದ ಜಯದೇವ್

ಅನಿಮಲ್ ಚಿತ್ರವನ್ನು ವೀಕ್ಷಿಸಿದ ಬಳಿಕ ಜಯದೇವ್ ಉನಾದ್ಕತ್, ಅವಮಾನಕರ ಸಿನಿಮಾ ರಂದು ಹೇಳಿದ್ದಾರೆ. ತನ್ನ ಅಧಿಕೃತ ಎಕ್ಸ್​ ಖಾತೆಯಲ್ಲಿ ಉನಾದ್ಕತ್​ ಪೋಸ್ಟ್ ಮಾಡಿದ ಬೆನ್ನಲ್ಲೇ ಡಿಲಿಟ್ ಮಾಡಿದ್ದಾರೆ. ಆದರೆ ಈ ಪೋಸ್ಟ್​ ಅನ್ನು ಸ್ಕ್ರೀನ್​ ಶಾಟ್ ಪಡೆದ ರಣಬೀರ್ ಅಭಿಮಾನಿಗಳು ಮತ್ತು ನೆಟ್ಟಿಗರು ವೈರಲ್ ಮಾಡಿದ್ದಾರೆ. ಕೆಲವರು ಜಯದೇವ್​ರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ.

ಸ್ತ್ರಿದ್ವೇಷ ವೈಭವಿಕರ ಎಂದ ಹಿರಿಯ ಕ್ರಿಕೆಟಿಗ

ಭಾರತೀಯ ವೇಗಿ ಈ ಚಿತ್ರವನ್ನು 'ಡಿಸಾಸ್ಟರ್, ಅವಮಾನಕರ' ಎಂದು ಕರೆದಿದ್ದಾರೆ. ಅವರು 'ಕರುಣಾಜನಕವಾಗಿ ಈ ಸಿನಿಮಾವನ್ನು ನಿರ್ಮಿಸಲಾಗಿದೆ. ಸಿನಿಮಾ ನೋಡಿ, 3 ಗಂಟೆಗಳ ಕಾಲ ವ್ಯರ್ಥ ಮಾಡಲಾಯಿತು ಎಂದು ಉನಾದ್ಕತ್ ಹೇಳಿದ್ದಾರೆ. ಅನಿಮನ್ ಎಂತಹ ಡಿಸಾಸ್ಟರ್ ಸಿನಿಮಾ. ಇಂದಿನ ಜಗತ್ತಿನಲ್ಲಿ ಸ್ತ್ರಿದ್ವೇಷ ವೈಭವಿಕರ ಮತ್ತು ಪುರುಷರನ್ನು ಪ್ರಬಲರನ್ನಾಗಿ ತೋರಿಸುವುದು ಅವಮಾನಕರ ಎಂದು ಪೋಸ್ಟ್​​ನಲ್ಲಿ ಬರೆದಿದ್ದಾರೆ.

ಸಾಮಾಜಿಕ ಜವಾಬ್ದಾರಿ ಇರಲಿ ಎಂದ ವೇಗಿ

ಅಷ್ಟೆ ಅಲ್ಲ, ನಾವು ಕಾಡಿನಲ್ಲಿ, ಅರಮನೆಗಳಲ್ಲಿ ವಾಸಿಸುತ್ತಿಲ್ಲ. ಯುದ್ಧಗಳನ್ನು ಮಾಡುತ್ತಿಲ್ಲ ಅಥವಾ ಬೇಟೆಯಾಡಲು ಹೋಗುತ್ತಿಲ್ಲ. ನಟನೆ ಎಷ್ಟು ಚೆನ್ನಾಗಿತ್ತು ಎಂಬುದು ಮುಖ್ಯವಲ್ಲ, ಲಕ್ಷಾಂತರ ಜನ ವೀಕ್ಷಿಸುವ ಸಿನಿಮಾದಲ್ಲಿ ಇಂತಹ ಕೃತ್ಯಗಳನ್ನು ವೈಭವೀಕರಿಸಿ ತೋರಿಸಬಾರದು. ಮನರಂಜನಾ ಉದ್ಯಮದಲ್ಲಿಯೂ ಸಾಮಾಜಿಕ ಜವಾಬ್ದಾರಿ ಎಂಬ ವಿಷಯವಿದೆ. ಅದನ್ನು ಎಂದಿಗೂ ಮರೆಯಬಾರದು ಎಂದು ಕಿಡಿಕಾರಿದ್ದಾರೆ.

‘3 ಗಂಟೆ ವ್ಯರ್ಥ ಮಾಡಿದೆ’

ಅಂತಹ ಕರುಣಾಜನಕವಾಗಿ ನಿರ್ಮಿಸಲಾದ ಚಲನಚಿತ್ರವನ್ನು ವೀಕ್ಷಿಸಲು ನಾನು ನನ್ನ 3 ಗಂಟೆಗಳನ್ನು ವ್ಯರ್ಥ ಮಾಡಿದ್ದೇನೆ ಎಂದು ಬೇಸರವಾಗಿದೆ ಎಂದು ಉನಾದ್ಕತ್ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. ಆದರೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಟ್ವೀಟ್‌ ಅನ್ನು ಅಳಿಸಿದ್ದಾರೆ. ಆದರೆ ಸ್ಟಾರ್ ವೇಗಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ