logo
ಕನ್ನಡ ಸುದ್ದಿ  /  ಕ್ರಿಕೆಟ್  /  Afghanistan Team: ಏಷ್ಯಾಕಪ್​ಗೆ ಬಲಿಷ್ಠ ಅಫ್ಘಾನಿಸ್ತಾನ ತಂಡ ಪ್ರಕಟ; ಕೊಹ್ಲಿ ಜೊತೆ ಕಿರಿಕ್ ಮಾಡಿಕೊಂಡಿದ್ದ ನವೀನ್ ಉಲ್ ಹಕ್​​ಗೆ ಕೊಕ್

Afghanistan Team: ಏಷ್ಯಾಕಪ್​ಗೆ ಬಲಿಷ್ಠ ಅಫ್ಘಾನಿಸ್ತಾನ ತಂಡ ಪ್ರಕಟ; ಕೊಹ್ಲಿ ಜೊತೆ ಕಿರಿಕ್ ಮಾಡಿಕೊಂಡಿದ್ದ ನವೀನ್ ಉಲ್ ಹಕ್​​ಗೆ ಕೊಕ್

Prasanna Kumar P N HT Kannada

Aug 27, 2023 10:00 PM IST

google News

ಏಷ್ಯಾಕಪ್​ಗೆ ಬಲಿಷ್ಠ ಅಫ್ಘಾನಿಸ್ತಾನ ತಂಡ ಪ್ರಕಟ.

    • Afghanistan Names Asia Cup 2023 Squad: 50 ಓವರ್​ಗಳ ಮಾದರಿಯ ಏಷ್ಯಾಕಪ್​ ಟೂರ್ನಿಗೆ ಅಫ್ಘಾನಿಸ್ತಾನ ಕ್ರಿಕೆಟ್​ ಮಂಡಳಿ 17 ಸದಸ್ಯರ ಬಲಿಷ್ಠ ತಂಡವನ್ನು ಪ್ರಕಟಿಸಿದೆ
ಏಷ್ಯಾಕಪ್​ಗೆ ಬಲಿಷ್ಠ ಅಫ್ಘಾನಿಸ್ತಾನ ತಂಡ ಪ್ರಕಟ.
ಏಷ್ಯಾಕಪ್​ಗೆ ಬಲಿಷ್ಠ ಅಫ್ಘಾನಿಸ್ತಾನ ತಂಡ ಪ್ರಕಟ.

ಆಗಸ್ಟ್​ 30 ರಿಂದ ಶುರುವಾಗುವ ಏಷ್ಯಾಕಪ್​ ಟೂರ್ನಿಗೆ (Asia Cup 2023) ಅಫ್ಘಾನಿಸ್ತಾನ ತನ್ನ ಬಲಿಷ್ಠ ತಂಡವನ್ನು (Afghanistan Cricket Team) ಪ್ರಕಟಿಸಿದೆ. ಹಶ್ಮತುಲ್ಲಾ ಶಾಹಿದಿ ನೇತೃತ್ವದಲ್ಲಿ ಪ್ರಕಟಗೊಂಡ 17 ಸದಸ್ಯರ ತಂಡದಲ್ಲಿ ಐಪಿಎಲ್​​ನಲ್ಲಿ ವಿರಾಟ್ ಕೊಹ್ಲಿ (Virat Kohli) ಜೊತೆ ಕಿರಿಕ್ ಮಾಡಿಕೊಂಡಿದ್ದ ಯುವ ವೇಗಿ ನವೀನ್​ ಉಲ್​ ಹಕ್ (Naveen ul Hq) ಅವರು ಅವಕಾಶ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಇತ್ತೀಚೆಗಷ್ಟೇ ಮುಗಿದ ಪಾಕಿಸ್ತಾನ ಎದುರಿನ ಏಕದಿನ ಸರಣಿಗೂ (Afghanistan vs Pakistan) ನವೀನ್ ಆಯ್ಕೆಯಾಗಿರಲಿಲ್ಲ.

ಏಷ್ಯಾಕಪ್ ಟೂರ್ನಿಗೆ ನವೀನ್ ಉಲ್ ಹಕ್ ಆಯ್ಕೆಯಾಗುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಇದರಿಂದ ಕೊಹ್ಲಿ-ನವೀನ್​ ನಡುವೆ ಮುಖಾಮುಖಿ ಮತ್ತೊಮ್ಮೆ ಕಣ್ತುಂಬಿಕೊಳ್ಳಬಹುದು ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆದರೆ 17 ಸದಸ್ಯರ ತಂಡದಲ್ಲಿ ಅವಕಾಶ ಪಡೆಯುವಲ್ಲಿ ವಿಫಲರಾಗಿದ್ದಾರೆ. ನವೀನ್ ಉಲ್ ಹಕ್, ಐಪಿಎಲ್​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್​ ತಂಡದ ವೇಗದ ಬೌಲರ್​​ ಆಗಿದ್ದಾರೆ.

ಆಗಸ್ಟ್​ 26ರಂದು ಮುಕ್ತಾಯಗೊಂಡ ಪಾಕಿಸ್ತಾನ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಹೀನಾಯ ಪ್ರದರ್ಶನ ತೋರಿದ್ದ ಫರೀದ್ ಅಹ್ಮದ್ ಮತ್ತು ಶಾಹಿದುಲ್ಲಾ ಕಮಾಲ್ ಅವರಿಗೆ ಗೇಟ್​ಪಾಸ್ ನೀಡಲಾಗಿದೆ. ಜೊತೆಗೆ ಅಂತಿಮ ಏಕದಿನ ಪಂದ್ಯದಲ್ಲಿ ಇಂಜುರಿಯಾದ ಅಜ್ಮತುಲ್ಲಾ ಒಮರ್​ಜಾಯ್ ಕೂಡ ತಂಡದಿಂದ ಹೊರಬಿದ್ದಿದ್ದು, ಅವರ ಬದಲಿಗೆ ಗುಲ್ಬದಿನ್ ನೈಬ್​ಗೆ ಅವಕಾಶ ನೀಡಲಾಗಿದೆ.

6 ವರ್ಷಗಳ ಬಳಿಕ ಕರೀಮ್ ಜನತ್ ತಂಡಕ್ಕೆ

ಬರೋಬ್ಬರಿ 6 ವರ್ಷಗಳ ನಂತರ 25 ವರ್ಷದ ವೇಗಿ ಕರೀಮ್ ಜನತ್ ತಂಡಕ್ಕೆ ಮರಳಿದ್ದಾರೆ. ಅವರು ಕೊನೆಯದಾಗಿ 2017ರಲ್ಲಿ ಜಿಂಬಾಬ್ವೆ ವಿರುದ್ಧ ಕಾಣಿಸಿಕೊಂಡಿದ್ದರು. ಅದರಲ್ಲೂ ಮಹತ್ವದ ಟೂರ್ನಿಗೆ ಕಂಬ್ಯಾಕ್ ಮಾಡಿದ್ದು, ನಿರೀಕ್ಷೆ ಹುಟ್ಟು ಹಾಕಿದ್ದಾರೆ. ಹಿರಿಯ ಆಟಗಾರ ಮೊಹಮ್ಮದ್​ ನಬೀ, ರಹಮಾನುಲ್ಲಾ ಗುರ್ಬಾಜ್, ರಶೀದ್​ ಖಾನ್​, ಇಬ್ರಾಹಿಂ ಜರ್ದಾನ್​ ತಂಡದ ಸ್ಟಾರ್​ ಆಟಗಾರರಾಗಿದ್ದಾರೆ.

ಏಷ್ಯಾಕಪ್​ ಟೂರ್ನಿಯ ಎ ಗುಂಪಿನಲ್ಲಿ ಟೀಮ್ ಇಂಡಿಯಾ, ಪಾಕಿಸ್ತಾನ ಮತ್ತು ನೇಪಾಳ ಸ್ಥಾನ ಪಡೆದಿವೆ. ಅಫ್ಘಾನಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ತಂಡಗಳು ʼಬಿʼ ಗುಂಪಿನಲ್ಲಿ ಅವಕಾಶ ಪಡೆದಿವೆ. ಒಟ್ಟು 13 ಪಂದ್ಯಗಳು ನಡೆಯಲಿರುವ ಈ ಟೂರ್ನಿಯಲ್ಲಿ, 4 ಪಂದ್ಯಗಳು ಮಾತ್ರ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿವೆ. ಫೈನಲ್‌ ಸೇರಿ 9 ಪಂದ್ಯಗಳು ಶ್ರೀಲಂಕಾದ ಆತಿಥ್ಯದಲ್ಲಿ ನಡೆಯಲಿದೆ. ಭಾರತ ಮತ್ತು ಪಾಕಿಸ್ತಾನ ಸೆಪ್ಟೆಂಬರ್​ 2ರಂದು ಲಂಕಾದ ಕ್ಯಾಂಡಿಯಲ್ಲಿ ಕಾದಾಟ ನಡೆಸಲಿವೆ.

ಏಷ್ಯಾಕಪ್ ಟೂರ್ನಿಗೆ ಅಫ್ಘಾನಿಸ್ತಾನ ತಂಡ

ಹಶ್ಮತುಲ್ಲಾ ಶಾಹಿದಿ (ನಾಯಕ), ಇಬ್ರಾಹಿಂ ಝದ್ರಾನ್, ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ರಿಯಾಜ್ ಹಸನ್, ರಹಮತ್ ಶಾ, ರಶೀದ್ ಖಾನ್, ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಗುಲ್ಬದಿನ್ ನೈಬ್, ಇಕ್ರಮ್ ಅಲಿಖಿಲ್, ಕರೀಮ್ ಜನತ್, ಮುದ್ದೀನ್ ಅಶ್ರಫ್, ಅಬ್ದುಲ್ ರಹಮಾನ್, ಅಬ್ದುಲ್ ರೆಹಮಾನ್, ನೂರ್ ಅಹ್ಮದ್, ಫಜಲ್ಹಕ್ ಫಾರೂಕಿ, ಮೊಹಮ್ಮದ್ ಸಲೀಮ್ ಸಫಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ