ಆರ್ಸಿಬಿ ಆಟಗಾರ್ತಿಯರ ಅಬ್ಬರ; ಸೌತ್ ಆಫ್ರಿಕಾ ವಿರುದ್ಧ ಮೊದಲ ಏಕದಿನ ಗೆದ್ದ ಭಾರತೀಯ ಮಹಿಳಾ ತಂಡ
Jun 16, 2024 10:22 PM IST
ಆರ್ಸಿಬಿ ಆಟಗಾರ್ತಿಯರ ಅಬ್ಬರ; ಸೌತ್ ಆಫ್ರಿಕಾ ವಿರುದ್ಧ ಮೊದಲ ಏಕದಿನ ಗೆದ್ದ ಭಾರತೀಯ ಮಹಿಳಾ ತಂಡ
- India Women vs South Africa Women : ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ 143 ರನ್ಗಳ ಭರ್ಜರಿ ಗೆಲುವು ಸಾಧಿಸಿತು.
ಆರ್ಸಿಬಿ ಆಟಗಾರ್ತಿಯರಾದ ಸ್ಮೃತಿ ಮಂಧಾನ ಶತಕ (117) ಮತ್ತು ಆಶಾ ಶೋಭನಾ (4/21) ಅವರ ಭರ್ಜರಿ ಬೌಲಿಂಗ್ ಪ್ರದರ್ಶನದ ಕಾರಣ ಸೌತ್ ಆಫ್ರಿಕಾ ತಂಡವನ್ನು ಭಾರತೀಯ ಕ್ರಿಕೆಟ್ ತಂಡವನ್ನು ಮಣಿಸಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮೊದಲ ಒಡಿಐ ಪಂದ್ಯದಲ್ಲಿ 143 ರನ್ಗಳಿಂದ ಗೆದ್ದು ಬೀಗಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 1-0ರಲ್ಲಿ ಮುನ್ನಡೆ ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ, ಸ್ಮೃತಿ ಮಂಧಾನ ಅವರ ಭರ್ಜರಿ ಬ್ಯಾಟಿಂಗ್ ಸಹಾಯದಿಂದ ತನ್ನ ಪಾಲಿನ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 265 ರನ್ ಗಳಿಸಿತು. ಆ ಬಳಿಕ ಅಯಾಬೊಂಗ ಕಾಕಾ ಅವರು 3 ವಿಕೆಟ್ ಉರುಳಿಸಿದರು. ಈ ಗುರಿ ಬೆನ್ನಟ್ಟಿದ ಸೌತ್ ಆಫ್ರಿಕಾ ತಂಡವು ಆಶಾ ಶೋಭನಾ ಅವರ ದಾಳಿಗೆ ತತ್ತರಿಸಿತು. ಕೇವಲ 37.4 ಓವರ್ಗಳಲ್ಲಿ 122 ರನ್ಗಳಿಗೆ ಆಲೌಟ್ ಆಯಿತು.
ಆಶಾ ಶೋಭನಾ ಶಿಸ್ತಿನ ದಾಳಿ
266 ರನ್ಗಳ ಗುರಿ ಹಿಂಬಾಲಿಸಿದ ದಕ್ಷಿಣ ಆಫ್ರಿಕಾ, ತೀರಾ ಕಳಪೆ ಪ್ರದರ್ಶನ ನೀಡಿತು. ಲಾರಾ ವೊಲ್ವಾರ್ಡ್ಟ್ 4 ರನ್, ತಜ್ಮಿನ್ ಬ್ರಿಟ್ಸ್ 18 ರನ್, ಅನ್ನೆಕೆ ಬಾಷ್ 5 ರನ್ ಗಳಿಸಿ ಬೇಗನೇ ಔಟಾದರು. ಆ ಬಳಿಕ ಸುನಿ ಲೂಸ್ 33 ಮತ್ತು ಮರಿಜಾನ್ ಕಾಪ್ 24 ರನ್ ಗಳಿಸಿ ತಂಡಕ್ಕೆ ಚೇತರಿಕೆ ನೀಡಲು ಯತ್ನಿಸಿದರು. ಆದರೆ, ಈ ಇಬ್ಬರಿಗೂ ಆಶಾ ಶೋಭನಾ ಬ್ರೇಕ್ ನೀಡಿದರು. ಅನ್ನೇರಿ ಡೆರ್ಕ್ಸೆನ್ 1, ನೊಂದುಮಿಸೋ ಶಂಗಾಸೆ 8 ರನ್ ಮತ್ತು ಶಿನಾಲೊ ಜಫ್ನಾ 27 ರನ್ ಗಳಿಸಿದರು.
ಮಸಾಬಟಾ ಕ್ಲಾಸ್ 1, ನಾನ್ಕುಲುಲೇಕೋ ಮ್ಲಾಬಾ 0, ಅಯಬೊಂಗ ಖಾಕಾ ಶೂನ್ಯಕ್ಕೆ ಔಟಾದರು. ಆಶಾ ಶೋಭನಾ 8.4 ಓವರ್ಗಳಲ್ಲಿ 21 ರನ್ ಬಿಟ್ಟುಕೊಟ್ಟು 4 ವಿಕೆಟ್ ಉರುಳಿಸಿದರೆ, ದೀಪ್ತಿ ಶರ್ಮಾ 2 ವಿಕೆಟ್, ರಾಧಾ ಯಾದವ್, ಪೂಜಾ ವಸ್ತ್ರಾಕರ್ ಮತ್ತು ರೇಣುಕಾ ಸಿಂಗ್ ಠಾಕೂರ್ ತಲಾ ಒಂದೊಂದು ವಿಕೆಟ್ ಪಡೆದರು. ಇದರೊಂದಿಗೆ ಅಲ್ಪಮೊತ್ತಕ್ಕೆ ಆಫ್ರಿಕಾ ಕುಸಿತು. ಅಲ್ಲದೆ, 143 ರನ್ಗಳಿಂದ ಮಣಿಸಿತು.
ಸ್ಮೃತಿ ಮಂಧಾನ ಏಕಾಂಗಿ ಹೋರಾಟ
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡದ ಆರಂಭಿಕ ವಿಘ್ನ ಎದುರಿಸಿತು. ಶಫಾಲಿ ವರ್ಮಾ 7 ರನ್ ಗಳಿಸಿ ಔಟಾದರೆ, ದಯಾಲನ್ ಹೇಮಲತಾ 12 ರನ್ ಗಳಿಸಿ ಪೆವಿಲಿಯನ್ ಸೇರಿದರು. ಹರ್ಮನ್ಪ್ರೀತ್ ಕೌರ್ (10) ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಜೆಮಿಮಾ ರೋಡ್ರಿಗಸ್ 17 ರನ್ ಗಳಿಸಿದರೆ, ರಿಚಾ ಘೋಷ್ 31 ರನ್ ಗಳಿಸಿದರು. ಆದರೆ ಸ್ಮೃತಿ ಮಂಧಾನ ಮಾತ್ರ ಏಕಾಂಗಿ ಹೋರಾಟ ನಡೆಸಿದರು.
ದೀಪ್ತಿ ಶರ್ಮಾ ಅವರೊಂದಿಗೆ ಕೂಡಿ 6ನೇ ವಿಕೆಟ್ಗೆ ಅಮೋಘ 81 ರನ್ಗಳ ಪಾಲುದಾರಿಕೆ ಒದಗಿಸಿದರು. ಆದರೆ ದೀಪ್ತಿ ಅವರು 37 ರನ್ ಸಿಡಿಸಿ ಔಟಾದರು. ಇದರ ನಡುವೆ ಮಂಧಾನ ತಮ್ಮ ವೃತ್ತಿಜೀವನದ ಆರನೇ ಶತಕವನ್ನೂ ಪೂರೈಸಿದರು. 116ನೇ ಎಸೆತದಲ್ಲಿ ನೂರರ ಗಡಿ ದಾಟಿದ ಸ್ಮೃತಿ, ಹಲವು ದಾಖಲೆ ನಿರ್ಮಿಸಿದರು. ಪೂಜಾ ವಸ್ತ್ರಾಕರ್ ಸಹ ಕೊನೆಯಲ್ಲಿ ಉಪಯುಕ್ತ 31 ರನ್ಗಳ ಕಾಣಿಕೆ ನೀಡಿದರು.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ