logo
ಕನ್ನಡ ಸುದ್ದಿ  /  ಕ್ರಿಕೆಟ್  /  ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಬುಮ್ರಾ, ರೋಹಿತ್, ವಿರಾಟ್ ದಾಖಲೆ ನಿರ್ಮಿಸುವ ಅವಕಾಶ

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಬುಮ್ರಾ, ರೋಹಿತ್, ವಿರಾಟ್ ದಾಖಲೆ ನಿರ್ಮಿಸುವ ಅವಕಾಶ

Raghavendra M Y HT Kannada

Aug 31, 2023 10:09 PM IST

google News

ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಬುಮ್ರಾ ಮತ್ತು ನಾಯಕ ರೋಹಿತ್ ಶರ್ಮಾ ದಾಖಲೆ ಬರೆಯಲಿದ್ದಾರೆ.

  • ಏಷ್ಯಾಕಪ್‌ನಲ್ಲಿ ಸೆಪ್ಟೆಂಬರ್ 2 ರಂದು ಇಂಡೋ-ಪಾಕ್ ಸಮರ ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯಲಿದೆ. ಈ ಹೈವೋಲ್ಟೇಜ್ ಫೈಟ್‌ನಲ್ಲಿ ಟೀಂ ಇಂಡಿಯಾದ ಆಟಗಾರರು ಪ್ರಮುಖ 3 ದಾಖಲೆಗಳನ್ನು ಬರೆಯುವ ಅವಕಾಶವಿದೆ.

ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಬುಮ್ರಾ ಮತ್ತು ನಾಯಕ ರೋಹಿತ್ ಶರ್ಮಾ ದಾಖಲೆ ಬರೆಯಲಿದ್ದಾರೆ.
ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಬುಮ್ರಾ ಮತ್ತು ನಾಯಕ ರೋಹಿತ್ ಶರ್ಮಾ ದಾಖಲೆ ಬರೆಯಲಿದ್ದಾರೆ.

ಪಲ್ಲೆಕೆಲೆ (ಶ್ರೀಲಂಕಾ): ಏಷ್ಯಾಕಪ್ 2023ನ (Asia Cup 2023) ಆರಂಭವಾಗಿದ್ದು, ನೇಪಾಳ (Nepal) ವಿರುದ್ಧದ ದೊಡ್ಡ ಗೆಲುವಿನೊಂದಿಗೆ ಆತಿಥೇಯ ಪಾಕಿಸ್ತಾನ (Pakistan) ಶುಭಾರಂಭ ಮಾಡಿದೆ. ಟೀಂ ಇಂಡಿಯಾ (Team India) ವಿರುದ್ಧದ ಪಂದ್ಯಕ್ಕೆ ಸಜ್ಜಾಗುತ್ತಿದೆ.

ಮುಲ್ತಾನ್‌ನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ 238 ರ್‌ಗಳ ದೊಡ್ಡ ಅಂತರದ ಜಯ ಸಾಧಿಸಿ, ಟೂರ್ನಿಯಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ತವರಿನಲ್ಲಿ ಪಾಕಿಸ್ತಾನಕ್ಕೆ ಅತಿ ದೊಡ್ಡ ಗೆಲುವಾಗಿದೆ. ಇದೀಗ ಪಾಕಿಸ್ತಾನ ಎರಡನೇ ಪಂದ್ಯವನ್ನು ಟೀಂ ಇಂಡಿಯಾ ವಿರುದ್ಧ ಆಡಬೇಕಿದೆ.

ಶ್ರೀಲಂಕಾದ (Sri Lanka) ಕ್ಯಾಂಡಿಯಲ್ಲಿರುವ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೆಪ್ಟೆಂಬರ್ 2 ರಂದು ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯ ಪಾಕಿಸ್ತಾನಕ್ಕೆ ಅಷ್ಟು ಸುಲಭವಲ್ಲ. ಈ ನಡುವೆ ಟೀಂ ಇಂಡಿಯಾ ಪಾಕಿಸ್ತಾನ ವಿರುದ್ಧದ ಈ ಮಹತ್ವದ ಪಂದ್ಯದಲ್ಲಿ 3 ದೊಡ್ಡ ದಾಖಲೆಗಳನ್ನು ಮಾಡುವ ಅವಕಾಶವಿದೆ. ಹೀಗಾಗಿ ಕ್ರಿಕೆಟ್ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

ಸಚಿನ್ ನಂತರದ ಸ್ಥಾನಕ್ಕೆ ಬರ್ತಾರಾ ರೋಹಿತ್-ವಿರಾಟ್?

ಭಾರತ ಮತ್ತು ಪಾಕಿಸ್ತಾನ ನಡುವೆ ಇದರುವರೆಗೆ ಒಟ್ಟು 132 ಏಕದಿನ ಪಂದ್ಯಗಳು ನಡೆದಿವೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) ಟೀಂ ಇಂಡಿಯಾ ಪರ ಅತಿ ಹೆಚ್ಚು ಶತಕಗಳನ್ನು ಬಾರಿಸಿದ್ದರೆ, ಪಾಕಿಸ್ತಾನ ಪರ ಸಲ್ಮಾನ್ ಬಟ್ ಹೆಚ್ಚು ಶತಕಗಳನ್ನು ಗಳಿಸಿದ್ದಾರೆ. ಈ ಇಬ್ಬರೂ ಆಟಗಾರರು ತಲಾ 5 ಶತಕಗಳನ್ನು ಸಿಡಿಸಿದ್ದಾರೆ.

ನವಜೋತ್ ಸಿಂಗ್ ಸಿಧು, ಮಹೇಂದ್ರ ಸಿಂಗ್ ಧೋನಿ, ಸೌರವ್ ಗಂಗೂಲಿ, ವೀರೇಂದ್ರ ಸೆಹ್ವಾನ್, ರಾಹುಲ್ ದ್ರಾವಿಡ್, ಮೊಹಮ್ಮದ್ ಅಜರುದ್ದೀನ್ ಅವರು ಪಾಕಿಸ್ತಾನ ವಿರುದ್ಧ ಭಾರತ ತಂಡದ ಪರ ತಲಾ 2 ಶತಗಳನ್ನು ಗಳಿಸಿದ್ದಾರೆ.

ಸದ್ಯ ಸಕ್ರಿಯವಾಗಿರುವ ಆಟಗಾರರ ಪೈಕಿ ವಿರಾಟ್ ಕೊಹ್ಲಿ (Virat Kohli) ಮತ್ತು ರೋಹಿತ್ ಶರ್ಮಾ (Rohit Sharma) ಪಾಕಿಸ್ತಾನ ವಿರುದ್ಧ ತಲಾ 2 ಶತಕಗಳನ್ನು ಸಿಡಿಸಿದ್ದಾರೆ. ಟೀಂ ಇಂಡಿಯಾದಿಂದ ಸಚಿನ್ ತೆಂಡ್ಯೂಲ್ಕರ್ ಮಾತ್ರ ಪಾಕಿಸ್ತಾನ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಎರಡಕ್ಕೂ ಅಧಿಕ ಶತಕಗಳನ್ನು ಗಳಿಸಿದ್ದಾರೆ. ಹೀಗಾಗಿ ಪಾಕಿಸ್ತಾನ ವಿರುದ್ಧ ವಿರಾಟ್ ಕೊಹ್ಲಿ ಅಥವಾ ರೋಹಿತ್ ಶರ್ಮಾ ಶತಕ ಸಿಡಿಸಿದರೆ ಸಚಿನ್ ಅವರ ನಂತರದ ಸ್ಥಾನಕ್ಕೇರಲಿದ್ದಾರೆ.

ಅನಿಲ್ ಕುಂಬ್ಳೆ ದಾಖಲೆ ಮುರೀತಾರಾ ಬುಮ್ರಾ?

ಏಷ್ಯಾಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾದ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಅವರಿಗೂ ದೊಡ್ಡ ದಾಖಲೆ ಬರೆಯುವ ಅವಕಾಶವಿದೆ. ವಾಸ್ತವವಾಗಿ ಕನ್ನಡಿಗರಾದ ಅನಿಲ್ ಕುಂಬ್ಳೆ ಅವರು ಏಷ್ಯಾಕಪ್ ಏಕದಿನ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತದ ಪರ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ದಾಖಲೆಯನ್ನು ಹೊಂದಿದ್ದಾರೆ. ಕುಂಬ್ಳೆ ಅವರು ಪಾಕ್ ವಿರುದ್ಧ ಏಷ್ಯಾಕಪ್‌ನಲ್ಲಿ 7 ವಿಕೆಟ್‌ಗಳನ್ನು ಗಳಿಸಿದ ದಾಖಲೆ ಹೊಂದಿದ್ದಾರೆ.

ಪ್ರಸ್ತುತ ಆಟಗಾರರಲ್ಲಿ ಬುಮ್ರಾ ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ 2 ಪಂದ್ಯಗಳಲ್ಲಿ 4 ವಿಕೆಟ್ ಪಡೆದಿದ್ದಾರೆ. ಮುಂದಿನ ಪಂದ್ಯದಲ್ಲಿ ಬುಮ್ರಾ ಅವರು ಇನ್ನೂ 4 ವಿಕೆಟ್ ಕಿತ್ತರೆ ಕುಂಬ್ಳೆ ಅವರ ದಾಖಲೆಯನ್ನು ಮುರಿಯುವ ಸಾಧ್ಯತೆ ಇದೆ.

ನಾಯಕ ರೋಹಿತ್‌ಗೆ ಸೌರವ್ ಗಂಗೂಲಿ ರೆಕಾರ್ಡ್ ಬ್ರೇಕ್ ಅವಕಾಶ

ಶ್ರೀಲಂಕಾದ ಮಾಜಿ ನಾಯಕ ಅರ್ಜನ್ ರಣತುಂಬಾ ಅವರು ಏಷ್ಯಾಕಪ್ ಏಕದಿನ ಕ್ರಿಕೆಟ್‌ನಲ್ಲಿ ನಾಯಕನಾಗಿ ಅತಿ ಹೆಚ್ಚು ರನ್‌ ಗಳಿಸಿದ ದಾಖಲೆ ಹೊಂದಿದ್ದಾರೆ. ರಣತುಂಬಾ ಅವರು 13 ಪಂದ್ಯಗಳಲ್ಲಿ 594 ರನ್‌ ಗಳಿಸಿದ್ದಾರೆ. ಅವರ ನಂತರದ ಸ್ಥಾನದಲ್ಲಿ ಮಹೇಂದ್ರ ಸಿಂಗ್ ಧೋನಿ ಮತ್ತು ಮೂರನೇ ಸ್ಥಾನದಲ್ಲಿ ಸೌರವ್ ಗಂಗೂಲಿ ಅವರು ಇದ್ದಾರೆ.

ಕೂಲ್ ಕ್ಯಾಪ್ಟನ್ ಧೋನಿ ನಾಯಕನಾಗಿ ಏಷ್ಯಾಕಪ್‌ನಲ್ಲಿ 14 ಪಂದ್ಯಗಳಲ್ಲಿ 579 ರನ್‌ ಗಳಿಸಿದ್ದಾರೆ. ಗಂಗೂಲಿ ನಾಯಕನಾಗಿ ಏಷ್ಯಾಕಪ್‌ನಲ್ಲಿ 9 ಪಂದ್ಯಗಳಿಂದ 400 ರನ್‌ ಪೇರಿಸಿದ್ದಾರೆ. ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಇರುವ ರೋಹಿತ್ ಶರ್ಮಾ ಅವರು ನಾಯಕನಾಗಿ ಏಷ್ಯಾಕಪ್‌ನಲ್ಲಿ ಇದವರೆಗೆ 5 ಪಂದ್ಯಗಳಲ್ಲಿ 317 ರನ್‌ ಗಳಿಸಿದ್ದಾರೆ. ರೋಹಿತ್ ಈ ಟೂರ್ನಿಯಲ್ಲಿ 83 ರನ್ ಗಳಿಸಿದರೆ ಗಂಗೂಲಿ ಅವರ ದಾಖಲೆಯನ್ನು ಮುರಿಯಲಿದ್ದಾರೆ. ಹೀಗಾಗಿ ಏಷ್ಯಾಕಪ್‌ನಲ್ಲಿ ನಾಯಕನಾಗಿ ಅತಿ ಹೆಚ್ಚು ರನ್‌ ಗಳಿಸಿದ ಟೀಂ ಇಂಡಿಯಾದ ಎರಡನೇ ಹಾಗೂ ಒಟ್ಟಾರೆಯಾಗಿ ಮೂರನೇ ಆಟಗಾರ ಎನಿಸಿಕೊಳ್ಳಲಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ