logo
ಕನ್ನಡ ಸುದ್ದಿ  /  ಕ್ರಿಕೆಟ್  /  Ind Vs Pak: ಏಷ್ಯಾಕಪ್ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ; ಹೇಗಿದೆ ಹವಾಮಾನ

Ind vs Pak: ಏಷ್ಯಾಕಪ್ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ; ಹೇಗಿದೆ ಹವಾಮಾನ

Raghavendra M Y HT Kannada

Aug 31, 2023 01:58 PM IST

google News

ಏಷ್ಯಾಕಪ್‌ನಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ.

  • ಏಷ್ಯಾಕಪ್ 2023ರ ಟೂರ್ನಿಯಲ್ಲಿ ಸೆಪ್ಟೆಂಬರ್ 2 ರಂದು ಭಾರತ-ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಆದರೆ ಈ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ. ಹಾಗಾದರೆ ಶ್ರೀಲಂಕಾದ ಪಲ್ಲೆಕೆಲೆಯ ಹವಾಮಾನ ಅಂದು ಹೇಗಿರಲಿದೆ ಅನ್ನೋದರ ವರದಿ ಇಲ್ಲಿದೆ.

ಏಷ್ಯಾಕಪ್‌ನಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ.
ಏಷ್ಯಾಕಪ್‌ನಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ.

ಪಲ್ಲೆಕೆಲೆ(ಶ್ರೀಲಂಕಾ): ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ (India vs Pakistan) ಕ್ರಿಕೆಟ್ ತಂಡಗಳು ಬಹು ದಿನಗಳ ಬಳಿಕ ಏಷ್ಯಾಕಪ್‌ನಲ್ಲಿ (Asia cup 2023) ಪೈಪೋಟಿಗೆ ಇಳಿಯಲಿದ್ದು, ಹೈವೋಲ್ಟೇಜ್ ಪಂದ್ಯವನ್ನು ಕಣ್ತುಂಬಿಕೊಳ್ಳು ಪ್ರಪಂಚದ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಸೆಪ್ಟೆಂಬರ್ 2 (ಶನಿವಾರ) ಶ್ರೀಲಂಕಾದ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ (Pallekele International Stadium) ಬದ್ಧ ವೈರಿಗಳ ಕಾದಾಟ ನಡೆಯಲಿದೆ. ಆದರೆ ಈ ಬಹು ನಿರೀಕ್ಷಿತ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಗುಡುಗು ಮಿಂಚು ಸಹಿತ ಭಾರಿ ಮಳೆ ಸಾಧ್ಯತೆ

ಹವಾಮಾನ ಇಲಾಖೆಯ ವರದಿಯ ಪ್ರಕಾರ, ಭಾರತ-ಪಾಕಿಸ್ತಾನ ಪಂದ್ಯದ ದಿನದಂದು ಕ್ಯಾಂಡಿಯಲ್ಲಿ ಶೇಕಡಾ 90 ರಷ್ಟು ಮಳೆಯಾಗುವ ಮುನ್ಸೂಚನೆ ಇದೆ. ಇದಲ್ಲದೆ, ಭಾರಿ ಸಿಡಿಲು, ಗುಡುಗು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ. ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಮಾಹಿತಿ ನೀಡಿದೆ.

2023ರ ಏಷ್ಯಾಕಪ್‌ನಲ್ಲಿ ಭಾರತಕ್ಕೆ ಮೊದಲ ಸವಾಲು

ಏಷ್ಯಾಕಪ್‌ನಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಆಡಲಿದೆ. ಆದರೆ ಪಾಕಿಸ್ತಾನ ತನ್ನ ಮೊದಲ ಪಂದ್ಯದಲ್ಲಿ ನೇಪಾಳ ವಿರುದ್ಧ ದೊಡ್ಡ ಅಂತರದ ಜಯವನ್ನು ಗಳಿಸಿದೆ.

ಮುಲ್ತಾನ್‌ನಲ್ಲಿ ನಡೆದ ಪಾಕಿಸ್ತಾನ ಮತ್ತು ನೇಪಾಳ ನಡುವಿನ ಪಂದ್ಯದಲ್ಲಿ ಪಾಕಿಸ್ತಾನ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್‌ನಷ್ಟಕ್ಕೆ 342 ರನ್‌ಗಳಿಸಿತ್ತು. ಇದಕ್ಕೆ ಉತ್ತರವಾಗಿ ನೇಪಾಳ 23.4 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 104 ರನ್ ಗಳಿಸಲಷ್ಟೇ ಶಕ್ತವಾಯ್ತು. ಪಾಕಿಸ್ತಾನ 238 ರನ್‌ಗಳ ದೊಡ್ಡ ಜಯವನ್ನು ಪಡೆಯಿತು.

ಭಾರತ, ಪಾಕಿಸ್ತಾನ ಮತ್ತು ನೇಪಾಳ ಎ ಗುಂಪಿನಲ್ಲಿದ್ದು, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನ ಬಿ ಗುಂಪಿನಲ್ಲಿವೆ. ಗುಂಪು ಪಂದ್ಯಗಳ ನಂತರ ಸೂಪರ್-4 ಹಂತದ ಪಂದ್ಯಗಳು ನಡೆಯಲಿವೆ. ಎರಡೂ ಗುಂಪುಗಳಿಂದ ಅಗ್ರ 2 ತಂಡಗಳು ಮುಂದಿನ ಸುತ್ತಿಗೆ ಅಂದರೆ ಸೂಪರ್-4ಗೆ ಅರ್ಹತೆ ಪಡೆಯಲಿವೆ. ಇದಾದ ಬಳಿಕ ಈ ಟೂರ್ನಿಯ ಫೈನಲ್ ಪಂದ್ಯ ಸೆಪ್ಟೆಂಬರ್ 17 ರಂದು ನಡೆಯಲಿದೆ. ಗುಂಪು ಹಂತದಲ್ಲಿ ಪಾಕಿಸ್ತಾನ ಬಳಿಕ ನೇಪಾಳ ತಂಡವನ್ನು ಟೀಂ ಇಂಡಿಯಾ ಎದುರಿಸಲಿದೆ.

ಪಂದ್ಯ: ಭಾರತ vs ಪಾಕಿಸ್ತಾನ, ಏಷ್ಯಾಕಪ್ 2023ರ 3ನೇ ಪಂದ್ಯ, ಗ್ರೂಪ್ ಎ,

ದಿನಾಂಕ: 2023ರ ಸೆಪ್ಟೆಂಬರ್ 2, ಶನಿವಾರ

ಸಮಯ: ಮಧ್ಯಾಹ್ನ 2.30

ಸ್ಥಳ: ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ಪಲ್ಲೆಕೆಲೆ

ನಗರ: ಪಲ್ಲೆಕೆಲೆ (ಶ್ರೀಲಂಕಾ)

ಕ್ರೀಡಾಂಗಣದ ಸಾಮರ್ಥ್ಯ: 35,000

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ