Pakistan vs Nepal: ನೇಪಾಳದ ಈ ಸ್ಪಿನ್ನರ್ ಎದುರಿಸುವುದು ಪಾಕಿಸ್ತಾನಕ್ಕೆ ಅಷ್ಟು ಸುಲಭವಲ್ಲ
Aug 30, 2023 01:55 PM IST
ಏಷ್ಯಾಕಪ್‌ನಲ್ಲಿಂದು ನೇಪಾಳ vs ಪಾಕಿಸ್ತಾನ ಮೊದಲ ಪಂದ್ಯ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ.
ಏಷ್ಯಾಕಪ್ ಇಂದಿನಿಂದ ಆರಂಭವಾಗುತ್ತಿದ್ದು, ಎ ಗುಂಪಿನಲ್ಲಿ ಪಾಕಿಸ್ತಾನ ಮತ್ತು ನೇಪಾಳ ತಂಡಗಳು ಉದ್ಘಾಟನಾ ಪಂದ್ಯವನ್ನು ಆಡಲಿವೆ. ಪಂದ್ಯ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಬಲ್ಲ ಸ್ಪಿನ್ನರ್ ಒಬ್ಬರು ನೇಪಾಳ ತಂಡದಲ್ಲಿದ್ದಾರೆ.
ಇಂದಿನಿಂದ ಕ್ರಿಕೆಟ್ ಹಬ್ಬ ಆರಂಭವಾಗಲಿದೆ. ಏಷ್ಯಾಕಪ್ 2023 (Asia Cup 2023) ನಲ್ಲಿ ಇವತ್ತು (ಆಗಸ್ಟ್ 30, ಬುಧವಾರ) ಪಾಕಿಸ್ತಾನ ಮತ್ತು ನೇಪಾಳ (Pakistan vs Nepal) ತಂಡಗಳು ಆರಂಭಿಕ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಪಾಕಿಸ್ತಾನವೇ (Pakistan) ಗೆಲ್ಲಲಿದೆ ಎಂದು ಭವಿಷ್ಯ ನಡುವಿದರೂ ನೇಪಾಳ ತಂಡದ (Nepal Spinner) ಈ ಸ್ಪಿನ್ನರ್ ಮುಂದೆ ಪಾಕ್ ಆಟ ನಡೆಯಲ್ಲ ಎಂದು ಹೇಳಲಾಗುತ್ತಿದೆ.
ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ಪಾಕಿಸ್ತಾನ ಅಗ್ರ ತಂಡವಾಗಿದ್ದರೆ, ಇತ್ತ ನೇಪಾಳ ಇದೇ ಮೊದಲ ಬಾರಿಗೆ ಏಷ್ಯಾಕಪ್‌ನಲ್ಲಿ ಆಟಡಲು ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ತಂಡವನ್ನು ಅಷ್ಚು ದುರ್ಬಲ ಎಂದು ಪರಿಗಣಿಸಬಾರದು. ಈ ತಂಡದಲ್ಲಿ ಪಾಕಿಸ್ತಾನಕ್ಕೆ ತಲೆನೋವಾಗಿ ಪರಿಣಮಿಸಬಲ್ಲ ಒಟ್ಟ ಸ್ಟಾರ್ ಆಟಗಾರನಿದ್ದಾನೆ. ಆತನ ಹೆಸರು ಸಂದೀಪ್ ಲಮಿಚಾನೆ (Sandeep Lamichhane). ಲೆಗ್ ಸ್ಪಿನ್ನರ್ ಸಂದೀಪ್ ನೇಪಾಳ ತಂಡದ ಸ್ಟಾರ್ ಆಟಗಾರರಾಗಿದ್ದಾರೆ. ಈತ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದಾನೆ.
ಪಾಕಿಸ್ತಾನಕ್ಕೆ ಕಂಠಕವಾಗ್ತಾರಾ ಸಂದೀಪ್ ಲಮಿಚಾನೆ?
23 ವರ್ಷದ ಸಂದೀಪ್ ಲಮಿಚಾನೆ ಏಕದಿನ ಕ್ರಿಕೆಟ್‌ನಲ್ಲಿ ಉತ್ತಮ ದಾಖಲೆಗಳನ್ನು ಹೊಂದಿದ್ದಾರೆ. ಮತ್ತೊಂದೆಡೆ ಸ್ಪಿನ್ನರ್‌ಗಳ ಎದುರು ಪಾಕಿಸ್ತಾನದ ಆಟ ತುಂಬಾ ದುರ್ಬಲವಾದಂತೆ ಕಾಣುತ್ತಿದೆ. ಇತ್ತೀಚೆಗಷ್ಟೇ ನಡೆದ ಅಫ್ಘಾನಿಸ್ತಾನ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಸ್ಪಿನ್ನರ್‌ಗಳ ಮುಂದೆ ಪಾಕಿಸ್ತಾನದ ಬ್ಯಾಟರ್‌ಗಳು ಪತರಗುಟ್ಟಿ ಹೋಗಿದ್ದರು. ಅವರ ಬ್ಯಾಟಿಂಗ್ ತೀರಾ ಕೆಟ್ಟದಾಗಿತ್ತು.
ಸ್ಪಿನ್ನರ್‌ಗಳ ಎದುರು ಪಾಕಿಸ್ತಾನ 28 ವಿಕೆಟ್‌ಗಳ ಪೈಕಿ 13 ವಿಕೆಟ್‌ಗಳನ್ನು ಇವರಿಗೆ ಬಿಟ್ಟುಕೊಟ್ಟಿತ್ತು. ಹೀಗಿರುವಾಗ ಸಂದೀಪ್ ಪಾಕ್ ಬ್ಯಾಟ್ಸಮನ್‌ಗಳನ್ನು ತಮ್ಮ ಸ್ಪಿನ್ ಬಲೆಗೆ ಸಿಲುಕಿರುವುದು ಕಷ್ಟವೇನಲ್ಲ. ಅವರು ಪಾಕಿಸ್ತಾನ ತಂಡಕ್ಕೆ ಅಪಾಯಕಾರಿಯಾಬಹುದು.
2018ರಲ್ಲಿ ಸಂದೀಪ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟರು.ಈವರೆಗೆ ಅವರು 49 ಏಕದಿನ ಪಂದ್ಯಗಳನ್ನು ಆಡಿದ್ದು, 111 ವಿಕೆಟ್‌ಗಳನ್ನು ಪಡೆದಿದ್ದಾರೆ. ಜೊತೆಗೆ 367 ರನ್ ಕೂಡ ಗಳಿಸಿದ್ದಾರೆ. ಸಂದೀಪ್ ಟಿ20 ಕ್ರಿಕೆಟ್‌ನಲ್ಲೂ ಮಿಂಚಿದ್ದಾರೆ. ಈ ಮಾದರಿಯಲ್ಲಿ ಅವರು 44 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 85 ವಿಕೆಟ್‌ಗಳನ್ನು ಪಡೆದಿದ್ದಾರೆ. ಸಂದೀಪ್ ಲಮಿಚಾನೆ ಅವರ ಬೌಲಿಂಗ್‌ನಲ್ಲಿ ಉತ್ತರ ಸರಾಸರಿಯನ್ನು ಹೊಂದಿದ್ದಾರೆ. ಇವರು ಏಕದಿನ ಕ್ರಿಕೆಟ್‌ನಲ್ಲಿ 17.25 ಸರಾಸರಿಯ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದಾರೆ.
ಹಲವು ದಾಖಲೆಗಳ ಸರದಾರ ಸಂದೀಪ್
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ 50 ವಿಕೆಟ್ ಪಡೆದವರ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. 50 ವಿಕೆಟ್ ಗಳಿಸಲು ಅವರು ಕೇವಲ 29 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದಾರೆ. ಸರಣಣಿಯಲ್ಲಿ ಅತೆ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪೈಕಿ ಸಂದೀಪ್ ಎರಡನೇ ಸ್ಥಾನದಲ್ಲಿದ್ದಾರೆ. ವಿಶ್ವಕಪ್ ಲೀಗ್-2 (2019-2023) ನಲ್ಲಿ 31 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 72 ವಿಕೆಟ್‌ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇಂದು (ಆಗಸ್ಟ್ 30, ಬುಧವಾರ) ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿರುವ ಏಷ್ಯಾಕಪ್‌ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ನೇಪಾಳದ ಸಂದೀಪ್ ಲಮಿಚಾನೆ ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.