logo
ಕನ್ನಡ ಸುದ್ದಿ  /  ಕ್ರಿಕೆಟ್  /  Bangladesh Team: ಏಷ್ಯಾಕಪ್​ಗೆ ಶಕೀಬ್ ನಾಯಕತ್ವದಲ್ಲಿ ಬಲಿಷ್ಠ ತಂಡ ಪ್ರಕಟಿಸಿದ ಬಾಂಗ್ಲಾದೇಶ; ಅನುಭವಿ ಮಹಮ್ಮದುಲ್ಲಾಗೆ ಕೊಕ್, ಹೊಸಬರಿಗೆ ಮಣೆ

Bangladesh Team: ಏಷ್ಯಾಕಪ್​ಗೆ ಶಕೀಬ್ ನಾಯಕತ್ವದಲ್ಲಿ ಬಲಿಷ್ಠ ತಂಡ ಪ್ರಕಟಿಸಿದ ಬಾಂಗ್ಲಾದೇಶ; ಅನುಭವಿ ಮಹಮ್ಮದುಲ್ಲಾಗೆ ಕೊಕ್, ಹೊಸಬರಿಗೆ ಮಣೆ

Prasanna Kumar P N HT Kannada

Aug 12, 2023 12:01 PM IST

google News

ಏಷ್ಯಾಕಪ್​ಗೆ ಶಕೀಬ್ ನಾಯಕತ್ವದಲ್ಲಿ ಬಲಿಷ್ಠ ತಂಡ ಪ್ರಕಟಿಸಿದ ಬಾಂಗ್ಲಾದೇಶ.

    • Bangladesh Team: ಏಷ್ಯಾಕಪ್​ ಟೂರ್ನಿಗೆ ಪಾಕಿಸ್ತಾನ ತಂಡವನ್ನು ಪ್ರಕಟಿಸಿದ ಬೆನ್ನಲ್ಲೇ ಬಾಂಗ್ಲಾದೇಶವು ತನ್ನ 17 ಸದಸ್ಯರ ತಂಡವನ್ನು ಘೋಷಿಸಿದೆ. ಶಕೀಬ್​ ಅಲ್ ಹಸನ್​ ತಂಡದ ನಾಯಕತ್ವದ ಜವಾಬ್ದಾರಿ ಹೊತ್ತಿದ್ದಾರೆ.
ಏಷ್ಯಾಕಪ್​ಗೆ ಶಕೀಬ್ ನಾಯಕತ್ವದಲ್ಲಿ ಬಲಿಷ್ಠ ತಂಡ ಪ್ರಕಟಿಸಿದ ಬಾಂಗ್ಲಾದೇಶ.
ಏಷ್ಯಾಕಪ್​ಗೆ ಶಕೀಬ್ ನಾಯಕತ್ವದಲ್ಲಿ ಬಲಿಷ್ಠ ತಂಡ ಪ್ರಕಟಿಸಿದ ಬಾಂಗ್ಲಾದೇಶ.

ಆಗಸ್ಟ್​ 30ರಿಂದ ಶುರುವಾಗುವ ಪ್ರಸಕ್ತ ಸಾಲಿನ ಏಕದಿನ ಏಷ್ಯಾಕಪ್ ಟೂರ್ನಿಗೆ (Asia Cup 2023) ಬಾಂಗ್ಲಾದೇಶ ತಂಡವನ್ನು (Bangladesh Team) ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (Bangladesh Cricket Board) ಘೋಷಿಸಿದೆ. ಅನುಭವಿ ಆಲ್​ರೌಂಡರ್ ಶಕೀಬ್ ಅಲ್​ ಹಸನ್ (Shakib Al Hasan) ನೇತೃತ್ವದಲ್ಲಿ 17 ಸದಸ್ಯರ ಬಲಿಷ್ಠ ತಂಡವನ್ನು ಪ್ರಕಟಿಸಿರುವ ಬಾಂಗ್ಲಾದೇಶ, ಹಲವು ಹೊಸ ಮುಖಗಳಿಗೆ ಮಣೆ ಹಾಕಿದೆ. ಹಾಗೆಯೇ ಕೆಲವರು ತಂಡಕ್ಕೆ ವಾಪಸ್ ಆಗಿದ್ದಾರೆ.

ಹೊಸ ಮುಖಗಳಿಗೆ ಮಣೆ

ಅನ್‌ಕ್ಯಾಪ್ಡ್ ಓಪನರ್ ತಂಝಿದ್ ತಮೀಮ್ (Tanzid Tamim)​, ಶಮೀಮ್ ಹೊಸೈನ್​ಗೆ (Shamim Hossain) ಚೊಚ್ಚಲ ಅವಕಾಶ ನೀಡಿದೆ. ಹಾಗೆ ಟಿ20 ಕ್ರಿಕೆಟ್​ನಲ್ಲಿ ಪರಿಣಾಮಕಾರಿ ಆಟದ ಮೂಲಕ ಗಮನ ಸೆಳೆದಿದ್ದ ಯುವ ಬ್ಯಾಟರ್​ ಶಮೀಮ್ ಪಟೋವಾರಿ ಅವರಿಗೆ ಇದೇ ಮೊದಲ ಬಾರಿಗೆ ಏಕದಿನ ತಂಡದಲ್ಲಿ ಅವಕಾಶ ನೀಡಿದೆ. ಇನ್ನು 2021ರಲ್ಲಿ ವೆಲ್ಲಿಂಗ್ಟನ್‌ನಲ್ಲಿ ಕೊನೆಯದಾಗಿ ನ್ಯೂಜಿಲೆಂಡ್ ವಿರುದ್ಧ ಆಡಿದ್ದ ಮಹೇದಿ ಹಸನ್ ತಂಡಕ್ಕೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ.

ಆಗಸ್ಟ್ 12ರಂದು ಶನಿವಾರ ತಂಡ ಪ್ರಕಟವಾಗುವುದಕ್ಕೂ ಮುನ್ನಾ ದಿನ ಅಂದರೆ ಆಗಸ್ಟ್ 11ರಂದು ಬಾಂಗ್ಲಾದೇಶ ನೂತನ ಕ್ಯಾಪ್ಟನ್​ ಅನ್ನು ಘೋಷಿಸಿತ್ತು. ಶಕೀಬ್ ಅಲ್ ಹಸನ್ ಅವರನ್ನು ಏಕದಿನ ತಂಡದ ನಾಯಕನಾಗಿ ನೇಮಿಸಲಾಗಿತ್ತು. ಅದಕ್ಕೂ ಮುನ್ನ ತಮೀಮ್ ಇಕ್ಬಾಲ್ ಏಕದಿನ ತಂಡದ ಕ್ಯಾಪ್ಟನ್​ ಆಗಿದ್ದರು. ಆದರೆ, ಅವರು ಗಾಯದಿಂದ ಹೊರಬಿದ್ದ ಕಾರಣ, ಶಕೀಬ್​ಗೆ ಮತ್ತೆ ಪಟ್ಟ ಕಟ್ಟಲಾಗಿದೆ.

ಬಿಸಿಬಿ ಮುಖ್ಯ ಆಯ್ಕೆಗಾರ ಮಿನ್ಹಾಜುಲ್ ಅಬೆದಿನ್ ಏಷ್ಯಾಕಪ್​ಗೆ ಬಾಂಗ್ಲಾ ತಂಡವನ್ನು ಪ್ರಕಟಿಸಿದ್ದಾರೆ. ಉದಯೋನ್ಮುಖ ಏಷ್ಯಾಕಪ್‌ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ತಂಝಿದ್ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಈ ಟೂರ್ನಿಯಲ್ಲಿ 3 ಅರ್ಧ ಶತಕ ಸಿಡಿಸಿ ಗಮನ ಸೆಳೆದಿದ್ದರು. ಗಾಯದಿಂದ ಚೇತರಿಸಿಕೊಳ್ಳುತ್ತಿರುವ ತಮೀಮ್ ಇಕ್ಬಾಲ್ ಅಲಭ್ಯತೆಯ ನಂತರ ತೆರವಾದ ಆರಂಭಿಕ ಸ್ಥಾನವನ್ನು ತಂಝಿದ್ ತುಂಬಲಿದ್ದಾರೆ.

ಮಹಮ್ಮದುಲ್ಲಾಗೆ ಅವಕಾಶ ನೀಡಿಲ್ಲ!

ಹಾಗೆಯೇ ಕಳೆದ ತಿಂಗಳು ಅಫ್ಘಾನಿಸ್ತಾನ ಎದುರಿನ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ನೀಡಿದ್ದ ಮೊಹಮ್ಮದ್ ನಯಿಮ್ ಬಾಂಗ್ಲಾ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ಸು ಕಂಡಿದ್ದಾರೆ. ಇದೇ ತಂಡದ ವಿರುದ್ಧ ಟಿ20 ಸರಣಿಯಲ್ಲಿ ಮಿಂಚಿದ್ದ ಶಮಿಮ್ ಕೂಡ ಏಕದಿನ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ಸು ಕಂಡಿದ್ದಾರೆ. ಆದರೆ ಪ್ರಮುಖ ಆಟಗಾರ ಮಹಮ್ಮದುಲ್ಲಾ ಅವರಿಗೆ ಅವಕಾಶ ನೀಡಿಲ್ಲ. ಈ ಮಾರ್ಚ್​ ನಂತರ ಕಣಕ್ಕಿಳಿಯದ ಅವರನ್ನು, ಏಷ್ಯಾಕಪ್ ತಂಡದಿಂದ ಹೊರಗಿಡಲಾಗಿದೆ. ಆದರೆ, ಇದರಿಂದ ತಂಡಕ್ಕೆ ನಷ್ಟವಾಗಲಿದೆ ಎನ್ನುತ್ತಿದ್ದಾರೆ ಕ್ರಿಕೆಟ್​ ತಜ್ಞರು.

ಏಷ್ಯಾಕಪ್ ಟೂರ್ನಿಗೆ ಬಾಂಗ್ಲಾದೇಶ ತಂಡ ಪ್ರಕಟ

ಶಕೀಬ್ ಅಲ್ ಹಸನ್ (ನಾಯಕ), ಲಿಟನ್ ದಾಸ್, ತಂಝಿದ್ ತಮೀಮ್, ನಜ್ಮುಲ್ ಹೊಸೈನ್ ಶಾಂಟೊ, ತೌಹಿದ್ ಹ್ರಿದಯ್, ಮುಶ್ಫಿಕರ್ ರಹೀಮ್, ಮೆಹಿದಿ ಹಸನ್ ಮಿರಾಜ್, ತಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್, ಹಸನ್ ಮಹ್ಮದ್, ಶೇಖ್ ಹೋಮ್ ಅಹ್ಮದ್, ಶಮ್ ಹೋಮ್ ಅಹ್ಮದ್, ನಸ್ಮಿ ಅಹ್ಮದ್ , ಶೋರಿಫುಲ್ ಇಸ್ಲಾಂ, ಎಬಾಡೋತ್ ಹೊಸೈನ್, ಮೊಹಮ್ಮದ್ ನಯಿಮ್.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ