logo
ಕನ್ನಡ ಸುದ್ದಿ  /  ಕ್ರಿಕೆಟ್  /  Bcci: ಮಹಿಳಾ ಪ್ರೀಮಿಯರ್ ಲೀಗ್‌ನಿಂದಲೂ ಬಿಸಿಸಿಐಗೆ ಕೋಟಿ ಕೋಟಿ ಹಣ; 2023ರ Wplನಿಂದ ಬಂದ ಆದಾಯವೆಷ್ಟು?

BCCI: ಮಹಿಳಾ ಪ್ರೀಮಿಯರ್ ಲೀಗ್‌ನಿಂದಲೂ ಬಿಸಿಸಿಐಗೆ ಕೋಟಿ ಕೋಟಿ ಹಣ; 2023ರ WPLನಿಂದ ಬಂದ ಆದಾಯವೆಷ್ಟು?

Raghavendra M Y HT Kannada

Sep 26, 2023 02:26 PM IST

google News

2023ರ ಮಾರ್ಚ್‌ನಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್‌ನಿಂದ ಬಿಸಿಸಿಐ 377 ಕೋಟಿ ಆದಾಯ ಗಳಿಸಿದೆ ಎಂದು ವರದಿಯಾಗಿದೆ.

  • 2023ರ ಮಾರ್ಚ್‌ನಲ್ಲಿ ನಡೆದಿದ್ದ ಮಹಿಳಾ ಪ್ರೀಮಿಯರ್ ಲೀಗ್‌ನಿಂದ ಬಿಸಿಸಿಐ 377.49 ಕೋಟಿ  ರೂಪಾಯಿಗಳ ಆದಾಯ ಗಳಿಸಿದೆ ಎಂದು ವರದಿಯಾಗಿದೆ.

2023ರ ಮಾರ್ಚ್‌ನಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್‌ನಿಂದ ಬಿಸಿಸಿಐ 377 ಕೋಟಿ ಆದಾಯ ಗಳಿಸಿದೆ ಎಂದು ವರದಿಯಾಗಿದೆ.
2023ರ ಮಾರ್ಚ್‌ನಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್‌ನಿಂದ ಬಿಸಿಸಿಐ 377 ಕೋಟಿ ಆದಾಯ ಗಳಿಸಿದೆ ಎಂದು ವರದಿಯಾಗಿದೆ.

ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ-BCCI ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಅನ್ನೋದ ಎಲ್ಲರಿಗೂ ಗೊತ್ತು. ಆದರೆ ಬಿಸಿಸಿಐ ಹೊಸದಾಗಿ ಏನೇ ಮಾಡಿದರೂ, ಯಾವ ಮಾದರಿಯ ಆಟವನ್ನು ಪರಿಚಯಿಸಿದರೂ ಅದರಿಂದ ಕೋಟಿ ಕೋಟಿ ಹಣವನ್ನು ಸಂಪಾದನೆ ಮಾಡುತ್ತದೆ.

2023ರ ಮಾರ್ಚ್ 4 ರಿಂದ 26 ರವರೆಗೆ ಮುಂಬೈನ ಎರಡು ಸ್ಥಳಗಳಲ್ಲಿ ನಡೆದಿದ್ದ ಮಹಿಳಾ ಪ್ರೀಮಿಯರ್ ಲೀಗ್‌ನ (WPL) ಮೊದಲ ಆವೃತ್ತಿಯಲ್ಲೇ ಬಿಸಿಸಿಐ ಬರೋಬ್ಬರಿ 377.49 ಕೋಟಿ ರೂಪಾಯಿ ಆದಾಯ ಗಳಿಸಿದೆ.

2022-23ನೇ ಸಾಲಿನ ಆರ್ಥಿಕ ವರ್ಷದ ವರದಿ ಮಂಡನೆ

ಗೋವಾದಲ್ಲಿ ನಿನ್ನೆ ಸೋಮವಾರ (ಸೆಪ್ಟೆಂಬರ್ 25) ಭಾರತೀಯ ಕ್ರಿಕೆಟ್ ಮಂಡಳಿಯ ವಾರ್ಷಿಕ ಸಾಮಾನ್ಯ ಸಭೆ ನಡೆಸಲಾಗಿದೆ. ಈ ವೇಳೆ ಬಿಸಿಸಿಐನ ಖಜಾಂಚಿ ಆಶಿಶ್ ಶೇಲಾರ್ ಅವರು 2022-23ನೇ ಸಾಲಿನ ಆರ್ಥಿಕ ವರ್ಷದ ವರದಿಯನ್ನು ಮಂಡಿಸಿದ್ದಾರೆ. ವರದಿ ಪ್ರಕಾರ ಐದು ತಂಡಗಳನ್ನು ಒಳಗೊಂಡಿದ್ದ ಮಹಿಳಾ ಪ್ರೀಮಿಯರ್ ಲೀಗ್‌ನಿಂದ 377.49 ಕೋಟಿ ರೂಪಾಯಿ ಆದಾಯ ಬಂದಿದೆ ಎಂದು ಹೇಳಿದ್ದಾರೆ. ಇದು ಬಿಸಿಸಿಐನ ವಾರ್ಷಿಕ ಆದಾಯದ ಶೇಕಡಾ 6 ರಷ್ಟು ಇದೆ ಎಂದು ವರದಿ ಮಾಡಿದೆ.

2021-22ರ ಆರ್ಥಿಕ ವರ್ಷದಲ್ಲಿ ಬಿಸಿಸಿಐ ಒಟ್ಟು 4,360.57 ಕೋಟಿ ರೂಪಾಯಿಗಳ ಆದಾಯ ಗಳಿಸಿತ್ತು. ಇದು 2022-23ರಲ್ಲಿ 6,558.80 ಕೋಟಿ ರೂಪಾಯಿ ಏರಿಕೆಯಾಗಿದೆ. ಕೋವಿಡ್‌ನಿಂದಾಗಿ 2020-21ನೇ ಸಾಲಿನಲ್ಲಿ ಕೇವಲ ಮೂರು ಪಂದ್ಯಗಳನ್ನು ಮಾತ್ರ ನಡೆದಿದ್ದವು. ಇದರಿಂದ ಆ ವರ್ಷ ಆದಾಯದಲ್ಲಿ ಭಾರಿ ಕಡಿತವಾಗಿತ್ತು ಎಂದು ಶೇಲಾರ್ ವಿವರಿಸಿದ್ದಾರೆ.

ಸಮಪರ್ಕವಾದ ನಿರ್ವಹಣೆ ಮತ್ತು ದೃಢಸಂಕಲ್ಪವನ್ನು ಹೊಂದಿರುವುದರಿಂದ ಬಿಸಿಸಿಐ ಎಲ್ಲಾ ಸಮಯದಲ್ಲಿ ನೈತಿಕವಾಗಿ ಮತ್ತು ಆರ್ಥಿಕವಾಗಿ ಬಲಿಷ್ಟವಾಗಿದೆ. ಜೊತೆಗೆ ಗುಣಮಟ್ಟವನ್ನು ಹೇಗೆ ಕಾಪಾಪಿಡಿಕೊಳ್ಳೂಹುದು ಎಂಬುದನ್ನು ಐಸಿಸಿಐ ಕ್ರೀಡಾ ಜಗತ್ತಿಗೆ ಸಾಬೀತುಪಡಿಸಿದೆ ಎಂದು ಆಶಿಶ್ ಶೇಲಾರ್ ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಬಿಸಿಸಿಐನ ಆದಾಯ ಮೂಲಗಳು ಇವೇ

ಅಂತಾರಾಷ್ಟ್ರೀಯ ಪಂದ್ಯಗಳು, ಇಂಡಿಯನ್ ಪ್ರೀಮಿಯರ್ ಲೀಗ್, ಈ ವರ್ಷದಿಂದ ಆರಂಭವಾಗಿರುವ ಮಹಿಳಾ ಪ್ರೀಮಿಯರ್ ಲೀಗ್, ಜಾಹೀರಾತುಗಳು, ಮಾಧ್ಯಮ ಹಕ್ಕುಗಳ ಮಾರಾಟ, ಪ್ರಾಯೋಜಕತ್ವ ಸೇರಿದಂತೆ ವಿವಿಧ ಮೂಲಗಳಿಂದ ವಾರ್ಷಿಕವಾಗಿ ಬಿಸಿಸಿಐ ಸಾವಿರಾರು ಕೋಟಿ ರೂಪಾಯಿ ಆದಾಯ ಗಳಿಸುತ್ತದೆ. ಇದರಲ್ಲಿ ಐಪಿಎಲ್‌ನದ್ದೇ ಸಿಂಹಪಾಲು. ಹಾಗೆಯೇ ತೆರಿಗೆ ಪಾವತಿಯಲ್ಲೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ದಾಖಲೆ ಬರೆದಿತ್ತು.

ತೆರಿಗೆ ಪಾವತಿಯಲ್ಲೂ ಬಸಿಸಿಐ ಹೊಸ ದಾಖಲೆ

2021-22ನೇ ಆರ್ಥಿಕ ವರ್ಷದಲ್ಲಿ ಬಿಸಿಸಿಐ ಬರೋಬ್ಬರಿ 1,159 ಕೋಟಿ ರೂಪಾಯಿಗಳ ಆದಾಯ ತೆರಿಗೆ ಪಾವತಿಸಿ ದಾಖಲೆ ಬೆರೆದಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿಕೊಂಡರೆ ಒಂದೇ ವರ್ಷದಲ್ಲಿ ಬಿಸಿಸಿಐನ ಆದಾಯ ತೆರಿಗೆ ಮೊತ್ತ 300 ಕೋಟಿ ರೂಪಾಯಿ ಹೆಚ್ಚಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ