logo
ಕನ್ನಡ ಸುದ್ದಿ  /  ಕ್ರಿಕೆಟ್  /  ವಿದೇಶಿ ಮಂಡಳಿಗಳೊಂದಿಗೆ ನೇರವಾಗಿ ಕ್ರಿಕೆಟ್ ಒಪ್ಪಂದ ಮಾಡಿಕೊಳ್ಳುವಂತಿಲ್ಲ; ರಾಜ್ಯ ಘಟಕಗಳಿಗೆ ಬಿಸಿಸಿಐ ನಿಷೇಧ

ವಿದೇಶಿ ಮಂಡಳಿಗಳೊಂದಿಗೆ ನೇರವಾಗಿ ಕ್ರಿಕೆಟ್ ಒಪ್ಪಂದ ಮಾಡಿಕೊಳ್ಳುವಂತಿಲ್ಲ; ರಾಜ್ಯ ಘಟಕಗಳಿಗೆ ಬಿಸಿಸಿಐ ನಿಷೇಧ

Jayaraj HT Kannada

Mar 13, 2024 03:22 PM IST

google News

ರಾಜ್ಯ ಘಟಕಗಳಿಗೆ ಬಿಸಿಸಿಐ ನಿಷೇಧ

    • ವಿದೇಶಿ ಕ್ರಿಕೆಟ್‌ ಮಂಡಳಿಗಳೊಂದಿಗೆ ನೇರವಾಗಿ ಕ್ರಿಕೆಟ್ ಸಂಬಂಧ ಒಪ್ಪಂದ ಮಾಡಿಕೊಳ್ಳದಂತೆ ರಾಜ್ಯ ಘಟಕಗಳಿಗೆ ಬಿಸಿಸಿಐ ನಿಷೇಧ ಹೇರಲು ಮುಂದಾಗಿದೆ.
ರಾಜ್ಯ ಘಟಕಗಳಿಗೆ ಬಿಸಿಸಿಐ ನಿಷೇಧ
ರಾಜ್ಯ ಘಟಕಗಳಿಗೆ ಬಿಸಿಸಿಐ ನಿಷೇಧ (PTI)

ಭಾರತದ ರಾಜ್ಯ ಕ್ರಿಕೆಟ್‌ ಸಂಸ್ಥೆಗಳು ಕ್ರಿಕೆಟ್‌ಗೆ ಸಂಬಂಧಿಸಿದಂತೆ ವಿದೇಶಿ ಮಂಡಳಿಗಳೊಂದಿಗೆ ನೇರವಾಗಿ ಸಂಪರ್ಕ ಸಾಧಿಸುವುದನ್ನು ನಿರ್ಬಂಧಿಸಲು ಬಿಸಿಸಿಐ ನಿರ್ಧರಿಸಿದೆ. ದೆಹಲಿ, ಪಾಂಡಿಚೇರಿ ಸೇರಿದಂತೆ ಹಲವಾರು ರಾಜ್ಯ ಘಟಕಗಳು ವಿದೇಶಿ ಮಂಡಳಿಗಳೊಂದಿಗೆ ಮಾತುಕತೆ ನಡೆಸಿರುವುದು ಬಿಸಿಸಿಐ ಇಷ್ಟವಾಗಿಲ್ಲ. ಮುಖ್ಯವಾಗಿ ಅಸೋಸಿಯೇಟ್ ರಾಷ್ಟ್ರಗಳೊಂದಿಗೆ ಸಂಪರ್ಕ ಸಾಧಿಸಿದ ಕಾಣದಿಂದಾಗಿ ಬಿಸಿಸಿಐ ಈ ನಿರ್ಧಾರಕ್ಕೆ ಬಂದಿದೆ. ಮಾರ್ಚ್ 18ರಂದು ನಡೆಯಲಿರುವ ಮಂಡಳಿಯ ಕೌನ್ಸಿಲ್ ಸಭೆಯಲ್ಲಿ ಈ ನಿರ್ಧಾರಕ್ಕೆ ಅಂತಿಮ ರೂಪುರೇಷೆ ಸಿಗಲಿದೆ.

ನೇಪಾಳ ಮಂಡಳಿಯಿಂದ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ಪ್ರಸ್ತಾಪ ಸ್ವೀಕರಿಸಿದೆ ಎಂದು ವರದಿಯಾಗಿದೆ. “ರಾಜ್ಯ ಘಟಕಗಳು ಖಂಡಿತವಾಗಿಯೂ ಕ್ರಿಕೆಟ್ ಸಂಬಂಧಿತ ಚಟುವಟಿಕೆಗಳ ವಿಚಾರವಾಗಿ ವಿದೇಶಿ ಮಂಡಳಿಗಳೊಂದಿಗೆ ಪಾಲುದಾರರಾಗಬಹುದು. ಆದರೆ ಭಾರತದಲ್ಲಿ ಬಿಸಿಸಿಐ ಮಾತೃ ಸಂಸ್ಥೆಯಾಗಿರುವುದರಿಂದ ಆ ಒಪ್ಪಂದಗಳನ್ನು ಸುಗಮಗೊಳಿಸಬೇಕಾಗಿದೆ. ಹೀಗಾಗಿ ಯಾವುದೇ ಪ್ರಸ್ತಾಪಗಳಿದ್ದರೂ ಅದನ್ನು ಬಿಸಿಸಿಐ ಮೂಲಕವೇ ಮಾಡಬೇಕು” ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಮುಂಬರುವ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಈ ವಿಚಾರವಾಗಿ ಚರ್ಚೆ ನಡೆಯಲಿದೆ. ಕ್ರಿಕೆಟ್ ಆಯೋಜನೆ ಸಂಬಂಧ ರಾಜ್ಯ ಕ್ರಿಕೆಟ್ ಸಂಸ್ಥೆಗಳು ವಿದೇಶಿ ಮಂಡಳಿಗಳೊಂದಿಗೆ ಪಾಲುದಾರಿಕೆ ನಡೆಸುವ ಬಗ್ಗೆ ಚರ್ಚೆ ನಡೆಯಲಿದೆ. ನಂತರ ಬಿಸಿಸಿಐ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ತಿಳಿಸಿದೆ.

ಇದನ್ನೂ ಓದಿ | ಮುಂಬೈ ವಿರುದ್ಧ ದಾಖಲೆಯ 6 ವಿಕೆಟ್‌ ಕಬಳಿಸಿದ ಎಲ್ಲಿಸ್‌ ಪೆರ್ರಿ; ಡಬ್ಲ್ಯೂಪಿಎಲ್‌ನಲ್ಲಿ ಇತಿಹಾಸ ನಿರ್ಮಿಸಿದ ಆರ್‌ಸಿಬಿ ಕ್ವೀನ್‌

ನೇಪಾಳ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳು ಕಳೆದ ತಿಂಗಳು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರೊಂದಿಗೆ ಸಭೆ ನಡೆಸಿದ್ದರು. ಭಾರತವು ಈ ಹಿಂದೆಯೇ ಹಲವು ಕ್ರಿಕೆಟ್‌ ಸಂಸ್ಥೆಗಳಿಗೆ ನೆರವಾಗಿದೆ. ಮುಂದಿನ ಜೂನ್‌ ತಿಂಗಳಲ್ಲಿ ಅಮೆರಿಕ ಮತ್ತು ವೆಸ್ಟ್‌ ಇಂಡೀಸ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಪಂದ್ಯಾವಳಿಗೂ ಮುನ್ನ ನೇಪಾಳ ಕ್ರಿಕೆಟ್‌ ತಂಡವು ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.

ಬಿಸಿಸಿಐ ಈ ಹಿಂದೆಯೂ ಅಸೋಸಿಯೇಟ್ ರಾಷ್ಟ್ರಗಳಿಗೆ ಕ್ರಿಕೆಟ್‌ ಸಂಬಂದ ನೆರವಾಗಿದೆ. ಅಫ್ಘಾನಿಸ್ತಾನವು ಕೋವಿಡ್ ಪೂರ್ವ ಯುಗದಲ್ಲಿ ಹಲವು ಸಮಯದವರೆಗೆ ಭಾರತವನ್ನು ತನ್ನ ತವರು ನೆಲವಾಗಿ ಮಾಡಿಕೊಂಡಿತ್ತು.‌ ಡೆಹ್ರಾಡೂನ್ ಮತ್ತು ಗ್ರೇಟರ್ ನೋಯ್ಡಾದಲ್ಲಿನ ಸೌಲಭ್ಯಗಳನ್ನು ಬಳಸಿಕೊಂಡು ತರಬೇತಿ ಪಡೆದಿತ್ತು.

ಇದನ್ನೂ ಓದಿ | ಇದು ನಿಜವಾಗಲು ಸಾಧ್ಯವಿಲ್ಲ; ಟಿ20 ವಿಶ್ವಕಪ್ ತಂಡದಿಂದ ವಿರಾಟ್‌ ಡ್ರಾಪ್‌ ವರದಿಗೆ ಸ್ಟುವರ್ಟ್‌ ಬ್ರಾಡ್ ಅಚ್ಚರಿ

ಕ್ರಿಕೆಟ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com)

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ