logo
ಕನ್ನಡ ಸುದ್ದಿ  /  ಕ್ರಿಕೆಟ್  /  ಎಚ್ಚರ.. ಎಚ್ಚರ..; ಆರ್​ಸಿಬಿ Vs ಸಿಎಸ್​ಕೆ ಟಿಕೆಟ್ ಖರೀದಿಗೆ ಮುಂದಾಗಿ 3 ಲಕ್ಷ ಕಳ್ಕೊಂಡ ಬೆಂಗಳೂರಿನ ಯುವಕ

ಎಚ್ಚರ.. ಎಚ್ಚರ..; ಆರ್​ಸಿಬಿ vs ಸಿಎಸ್​ಕೆ ಟಿಕೆಟ್ ಖರೀದಿಗೆ ಮುಂದಾಗಿ 3 ಲಕ್ಷ ಕಳ್ಕೊಂಡ ಬೆಂಗಳೂರಿನ ಯುವಕ

Prasanna Kumar P N HT Kannada

May 17, 2024 05:33 PM IST

google News

ಎಚ್ಚರ.. ಎಚ್ಚರ..; ಆರ್​ಸಿಬಿ vs ಸಿಎಸ್​ಕೆ ಟಿಕೆಟ್ ಖರೀದಿಗೆ ಮುಂದಾಗಿ 3 ಲಕ್ಷ ಕಳ್ಕೊಂಡ ಬೆಂಗಳೂರಿನ ಯುವಕ

    • IPL Ticket Scam : ಆರ್​ಸಿಬಿ vs ಸಿಎಸ್​ಕೆ ಪಂದ್ಯಕ್ಕಾಗಿ ಆನ್​ಲೈನ್ ಟಿಕೆಟ್ ಖರೀದಿಸಲು ಮುಂದಾದ ಬೆಂಗಳೂರಿನ ಯುವಕ ಆನ್​ಲೈನ್ ವಂಚಕರಿಂದ 3 ಲಕ್ಷ ಕಳೆದುಕೊಂಡಿದ್ದಾನೆ.
ಎಚ್ಚರ.. ಎಚ್ಚರ..; ಆರ್​ಸಿಬಿ vs ಸಿಎಸ್​ಕೆ ಟಿಕೆಟ್ ಖರೀದಿಗೆ ಮುಂದಾಗಿ 3 ಲಕ್ಷ ಕಳ್ಕೊಂಡ ಬೆಂಗಳೂರಿನ ಯುವಕ
ಎಚ್ಚರ.. ಎಚ್ಚರ..; ಆರ್​ಸಿಬಿ vs ಸಿಎಸ್​ಕೆ ಟಿಕೆಟ್ ಖರೀದಿಗೆ ಮುಂದಾಗಿ 3 ಲಕ್ಷ ಕಳ್ಕೊಂಡ ಬೆಂಗಳೂರಿನ ಯುವಕ

2024ರ ಇಂಡಿಯನ್ ಪ್ರೀಮಿಯರ್ ಲೀಗ್​ನ 68ನೇ ಪಂದ್ಯದಲ್ಲಿ ಮೇ 18ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು (RCB vs CSK) ಸೆಣಸಾಟ ನಡೆಸಲಿವೆ. ಫೈನಲ್ ಪಂದ್ಯ ಮೇ 26ರಂದು ನಡೆದರೂ ಆರ್​ಸಿಬಿ ಫ್ಯಾನ್ಸ್ ಪಾಲಿಗೆ ಇದೇ ಪ್ರಶಸ್ತಿ ಸುತ್ತಿನ ಪಂದ್ಯವಾಗಿ ಮಾರ್ಪಟ್ಟಿದೆ. ಈ ಹೈವೋಲ್ಟೇಜ್ ಕದನಕ್ಕೆ ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ. ಮೈದಾನದಲ್ಲಿ ಮದಗಜಗಳ ಕಾದಾಟವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಟಿಕೆಟ್​ಗಾಗಿ ಫ್ಯಾನ್ಸ್ ಮುಗಿಬೀಳುತ್ತಿದ್ದಾರೆ. ಕಾಳ ಸಂತೆಯಲ್ಲಿ ಈ ಪಂದ್ಯದ ಟಿಕೆಟ್​ಗಳಿಗೆ ಭಾರಿ ಬೇಡಿಕೆ ಉಂಟಾಗಿದೆ.

ಆದರೆ ಇದರ ಲಾಭವನ್ನು ಆನ್​ಲೈನ್ ಖದೀಮರು (IPL Ticket Scam) ಸರಿಯಾಗಿಯೇ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಟಿಕೆಟ್ ಖರೀದಿಸಲು ಆಮೀಷ ತೋರಿಸಿ ಲಕ್ಷ ಲಕ್ಷ ದೋಚುತ್ತಿದ್ದಾರೆ. ಇಂತಹದ ಮೋಸದ ಜಾಲಕ್ಕೆ ಬೆಂಗಳೂರಿನ ಕ್ರಿಕೆಟ್​ ಪ್ರೇಮಿಯೊಬ್ಬ ಸಿಲುಕಿ 3 ಲಕ್ಷ ಕಳೆದುಕೊಂಡಿದ್ದಾನೆ. ಬೆಂಗಳೂರಿನ ಸುಧಾಮನಗರದ ನಿವಾಸಿ ಟಿಕೆಟ್ ಆಸೆಗೆ ಬಿದ್ದು ಹಂತ ಹಂತವಾಗಿ 3 ಲಕ್ಷ ಕಳೆದುಕೊಂಡಿದ್ದಾನೆ. ಆನ್​ಲೈನ್​ ವಂಚಕರ ವಿರುದ್ಧ ಕ್ರಮ ಜರುಗಿಸಲು ಅಪರಾಧ ವಿಭಾಗದ ಪೊಲೀಸರ ಮೊರೆ ಹೋಗಿದ್ದಾನೆ. ಪೊಲೀಸರು ಈ ಕುರಿತು ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಯುವಕ ವಂಚನೆಗೊಳಗಾಗಿದ್ದೇಗೆ? ಇಲ್ಲಿದೆ ವಿವರ

ಮೇ 11ರಂದು ಬೆಳಿಗ್ಗೆ 10 ರಿಂದ 12ರ ನಂತರ ರಾತ್ರಿ 11 ಗಂಟೆಯ ನಡುವೆ ಆನ್​ಲೈನ್​ನಲ್ಲಿ ಸಿಎಸ್​ಕೆ ಮತ್ತು ಆರ್​ಸಿಬಿ ಪಂದ್ಯಕ್ಕೆ ಟಿಕೆಟ್ ಹುಡುಕಾಟ ನಡೆಸಿದ್ದಾರೆ. ಆದರೆ ಇಂತಹವರಿಗಾಗಿ ಕಾದು ಕುಳಿತಿದ್ದ ವಂಚಕರು ಈ ವ್ಯಕ್ತಿಯಿಂದ 3 ಲಕ್ಷ ಕಿತ್ತುಕೊಂಡು ಮೋಸ ಎಸಗಿದ್ದಾರೆ. ipl_2024_tickets__24 ಎಂಬ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಆರ್​ಸಿಬಿ-ಸಿಎಸ್​ಕೆ ಪಂದ್ಯದ ಟಿಕೆಟ್ ಸಿಗುವ ಜಾಹೀರಾತು ನೋಡಿ ಕ್ಲಿಕ್ ಮಾಡಿದ್ದಾರೆ. ನಂತರ ವಂಚಕನೊಂದಿಗೆ ಈ ವ್ಯಕ್ತಿ ಚಾಟಿಂಗ್ ನಡೆಸಿದ್ದಾನೆ. ಈ ವೇಳೆ ಪದ್ಮ ಸಿನ್ಹಾ ವಿಜಯ್ ಕುಮಾರ್ ಎಂಬ ಹೆಸರಿನಿಂದ ವಂಚಕ ಪರಿಚಯಿಸಿಕೊಂಡಿದ್ದಾನೆ.

ಆ ವ್ಯಕ್ತಿಯನ್ನು ನಂಬಿಸುವ ಸಲುವಾಗಿ ಆಧಾರ್ ಕಾರ್ಡ್‌ ಫೋಟೋ ಮತ್ತು ಮೊಬೈಲ್ ನಂಬರ್ 9155026674 ಅನ್ನು ಕಳುಹಿಸಿದ ವಂಚಕ, ಹಣವನ್ನು ಪಾವತಿಸಿದ ಬಳಿಕ ಟಿಕೆಟ್‌ ಕಳುಹಿಸಿಕೊಡುವುದಾಗಿ ಹೇಳಿದ್ದಾನೆ. ಟಿಕೆಟ್ ಸಿಗುತ್ತೆಂಬ ಉತ್ಸಾಹದಲ್ಲಿದ್ದ ವ್ಯಕ್ತಿ, ಮೂರು ಟಿಕೆಟ್​ಗಳಿಗಾಗಿ 2300 ರೂಪಾಯಿಯಂತೆ 7900 ರೂಪಾಯಿ ಕಳುಹಿಸಿದ್ದಾರೆ. ಇದರ ನಂತರವೂ ಟಿಕೆಟ್ ಕಳುಹಿಸಿಕೊಡದ ವಂಚಕ ಟಿಕೆಟ್ ಬೆಲೆಯನ್ನು 67000ಕ್ಕೆ ಏರಿಸಿದ್ದಾನೆ. ಆದರೆ ಟಿಕೆಟ್​ ಸಿಗುತ್ತೆಂಬ ಆಸೆಯಲ್ಲಿದ್ದ ವ್ಯಕ್ತಿ ಅಷ್ಟೂ ಹಣವನ್ನೂ ವರ್ಗಾವಣೆ ಮಾಡಿದ್ದಾನೆ. ಆದರೂ ಇ-ಟಿಕೆಟ್‌ ಕಳುಹಿಸಿಕೊಡಲಿಲ್ಲ.

ಇಷ್ಟಾದರೂ ಸುಮ್ಮನಿರದ ವ್ಯಕ್ತಿ, ವಂಚಕ ಹೇಳಿದಂತೆ ಕೇಳಿ 3 ಲಕ್ಷ ಕಳುಹಿಸಿಕೊಟ್ಟಿದ್ದಾನೆ. ಆದರೆ ಟಿಕೆಟ್ ಮಾತ್ರ ಕಳುಹಿಸಿಕೊಡಲೇ ಇಲ್ಲ. ವ್ಯಕ್ತಿ ಟಿಕೆಟ್​ಗೆ ಒತ್ತಾಯಿಸಿದರೂ ವಂಚಕ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಮೋಸ ಹೋಗಿರುವುದು ಗೊತ್ತಾಗ್ತಿದ್ದಂತೆ ವ್ಯಕ್ತಿ, ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ