logo
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ ತಂಡಕ್ಕೆ ಬಿಟ್ಟೂ ಬಿಡದೆ ಕಾಡುತ್ತಿದೆ ಗಾಯದ ಸಮಸ್ಯೆ; ಹಾರ್ದಿಕ್ ಬೆನ್ನಲ್ಲೇ ಮತ್ತೆ ಮೂವರಿಗೆ ಇಂಜುರಿ!

ಭಾರತ ತಂಡಕ್ಕೆ ಬಿಟ್ಟೂ ಬಿಡದೆ ಕಾಡುತ್ತಿದೆ ಗಾಯದ ಸಮಸ್ಯೆ; ಹಾರ್ದಿಕ್ ಬೆನ್ನಲ್ಲೇ ಮತ್ತೆ ಮೂವರಿಗೆ ಇಂಜುರಿ!

Prasanna Kumar P N HT Kannada

Oct 21, 2023 11:02 PM IST

google News

ಹಾರ್ದಿಕ್ ಬೆನ್ನಲ್ಲೇ ಮತ್ತೆ ಮೂವರಿಗೆ ಇಂಜುರಿ.

    • India vs New Zealand, ICC ODI Cricket World Cup 2023: ನ್ಯೂಜಿಲೆಂಡ್ ಎದುರಿನ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾಗೆ ಗಾಯದ ಸಮಸ್ಯೆ ಕಾಡುತ್ತಿದೆ. ಹಾರ್ದಿಕ್ ಬೆನ್ನಲ್ಲೇ ಜಡೇಜಾ, ಸೂರ್ಯ ಗಾಯಗೊಂಡಿದ್ದರೆ, ಇಶಾನ್​ಗೆ ಜೇನುನೊಣ ಕಚ್ಚಿದೆ.
ಹಾರ್ದಿಕ್ ಬೆನ್ನಲ್ಲೇ ಮತ್ತೆ ಮೂವರಿಗೆ ಇಂಜುರಿ.
ಹಾರ್ದಿಕ್ ಬೆನ್ನಲ್ಲೇ ಮತ್ತೆ ಮೂವರಿಗೆ ಇಂಜುರಿ.

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ (ICC ODI World Cup 2023) ಟೀಮ್ ಇಂಡಿಯಾ, ಸೈಲೆಂಟ್ ಕಿಲ್ಲರ್ ನ್ಯೂಜಿಲೆಂಡ್ (India vs New Zealand) ಸವಾಲಿಗೆ ಸಜ್ಜಾಗಿದೆ. ಧರ್ಮಶಾಲಾದ ಹಿಮಾಚಲ‌ ಪ್ರದೇಶ ಕ್ರಿಕೆಟ್‌ ‌ಅಸೋಸಿಯೇಷನ್ ಮೈದಾನದಲ್ಲಿ ಉಭಯ ತಂಡಗಳು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಕಾದಾಟ ನಡೆಸಲಿವೆ. ಆದರೆ ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ಗಾಯದ ಸಮಸ್ಯೆ ಬಿಟ್ಟೂ ಬಿಡದೆ ಕಾಡುತ್ತಿದೆ. ಹಾರ್ದಿಕ್ ಪಾಂಡ್ಯ (Hardik Pandya) ಬೆನ್ನಲ್ಲೇ ಇನ್ನೂ ಮೂವರು ಆಟಗಾರರು ಗಾಯದ ಬಲೆಗೆ ಸಿಲುಕಿದ್ದಾರೆ.

ಹಾರ್ದಿಕ್ ಪಾಂಡ್ಯ ಕಿವೀಸ್ ಪಂದ್ಯಕ್ಕೆ ಅಲಭ್ಯ

ಅಕ್ಟೋಬರ್ 19ರಂದು ನಡೆದ ಬಾಂಗ್ಲಾದೇಶ (India vs Bangladesh) ಎದುರಿನ ಪಂದ್ಯದಲ್ಲಿ ಹಾರ್ದಿಕ್ ಕಾಲಿನ ಪಾದದ ಗಾಯದ (Hardik Pandya Injury) ಸಮಸ್ಯೆಗೆ ತುತ್ತಾದರು. ಪಂದ್ಯದಲ್ಲಿ ತಾನೆಸೆದ ಮೊದಲ ಓವರ್‌ನ ಮೂರನೇ ಎಸೆತದಲ್ಲಿ ಲಿಟ್ಟನ್ ದಾಸ್ ಮಾಡಿದ ಸ್ಟ್ರೈಟ್ ಡ್ರೈವ್ ಚೆಂಡನ್ನು ಕಾಲಿನಿಂದ ತಡೆಯಲು ಯತ್ನಿಸಿದರು. ಈ ವೇಳೆ ಕಾಲು ಜಾರಿತು. ಇದೀಗ ಅವರ ಸ್ಕ್ಯಾನಿಂಗ್ ಗೆ ಒಳಪಡಿಸಲಾಗಿದ್ದು, ಬೆಂಗಳೂರಿನ ಎನ್​ಸಿಎಗೆ ಬಂದಿದ್ದಾರೆ. ಈ ಬಗ್ಗೆ ಬಿಸಿಸಿಐ ಅಪ್ಡೇಟ್ ನೀಡಿದೆ. ಇದೀಗ ಇವರ ಸಾಲಿಗೆ ಮತ್ತೆ ಮೂವರು ಸೇರಿದ್ದಾರೆ ಎಂಬುದು ಆತಂಕದ ಸಂಗತಿ.

ರವೀಂದ್ರ ಜಡೇಜಾಗೂ ಗಾಯ

ಭಾರತದ ಆಲ್​ರೌಂಡರ್ ರವೀಂದ್ರ ಜಡೇಜಾ ಕೂಡ ಗಾಯದ ಸಮಸ್ಯೆಗೆ (Ravindra Jadeja Injury) ಸಿಲುಕಿದ್ದಾರೆ. ಮತ್ತೆ ಮೊಣಕಾಲಿನ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ. ಆದರೆ ಆತಂಕಪಡುವ ಅಗತ್ಯ ಇಲ್ಲ ಎನ್ನಲಾಗಿದೆ. ಇದೇ ಗಾಯವು 2022ರ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಗಿಡುವಂತೆ ಮಾಡಿತ್ತು. ಸದ್ಯ ಉತ್ತಮ ಫಿಟ್ನೆಸ್ ತೋರುತ್ತಿದ್ದರೂ, ಹಳೆ ಗಾಯ ಮತ್ತೆ ತೊಂದರೆಗೊಳಿಸುತ್ತಿದೆ ಎನ್ನಲಾಗಿದೆ. ಈ ಗಾಯ ಬಾಂಗ್ಲಾ ಎದುರಿನ ಪಂದ್ಯದಲ್ಲಾಗಿತ್ತು. ಅವರು ಕಾಲಿಗೆ ಐಸ್ ಪ್ಯಾಕ್ ಇಟ್ಟುಕೊಂಡಿದ್ದರು. ಆದರೆ ಗಾಯ ಗಂಭೀರವಾಗಿಲ್ಲ ಎಂದು ತಿಳಿದು ಬಂದಿದೆ.

ಸೂರ್ಯಕುಮಾರ್ ಯಾದವ್ ಕೈಗೆ ಗಾಯ‌

ನ್ಯೂಜಿಲೆಂಡ್ ಎದುರಿನ ಪಂದ್ಯಕ್ಕೂ ಮುನ್ನ ಮತ್ತೊಂದು ಹಿನ್ನಡೆ ಅಂದರೆ ಸೂರ್ಯಕುಮಾರ್ ಯಾದವ್ (Suryakumar Yadav Injury) ಗಾಯದ ಸಮಸ್ಯೆಗೆ ಸಿಲುಕಿರುವುದು. ಥ್ರೋಡೌನ್ ಸ್ಪೆಷಲಿಸ್ಟ್ ನೆಟ್ ಸೆಷನ್ ಅವಧಿಯಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುವಾಗ ರೈಟ್ ರೆಸ್ಟ್​ಗೆ (ಬಲ ಮಣಿಕಟ್ಟಿಗೆ ಗಾಯ) ಬಲವಾದ ಪೆಟ್ಟು ಬಿದ್ದಿದೆ. ಸದ್ಯ ಅವರನ್ನು ಹಾರ್ದಿಕ್ ಪಾಂಡ್ಯ ಸ್ಥಾನಕ್ಕೆ ಕಣಕ್ಕಿಳಿಸಲು ಚಿಂತನೆ ನಡೆಸಲಾಗಿತ್ತು. ಆದರೀಗ ಕಣಕ್ಕಿಳಿಸುವುದು ಅನುಮಾನ ಎನ್ನಲಾಗಿದೆ.

ಇಶಾನ್ ಕಿಶನ್​ಗೆ ಜೇನುನೊಣ ಕಚ್ಚಿದೆ

ನೆಟ್ಸ್​​​ನಲ್ಲಿ ಬ್ಯಾಟಿಂಗ್ ಪ್ರಾಕ್ಟೀಸ್ ನಡೆಸುತ್ತಿದ್ದ ಅವಧಿಯಲ್ಲಿ ಇಶಾನ್ ಕಿಶನ್​ಗೆ ಜೇನುನೊಣ (Ishan Kishan got bit by a honeybee) ಕಚ್ಚಿದೆ. ಧರ್ಮಶಾಲಾ ಮೈದಾನದಲ್ಲಿ ಅಭ್ಯಾಸದ ವೇಳೆ ವಿಕೆಟ್ ಕೀಪರ್ ಇಶಾನ್​ಗೆ ಜೇನುನೊಣ ಕಚ್ಚಿದೆ. ತಕ್ಷಣವೇ ವೈದ್ಯಕೀಯ ಸಿಬ್ಬಂದಿ ಚಿಕಿತ್ಸೆ ನೀಡಿದ್ದು, ಮತ್ತೆ ಅವರು ಅಭ್ಯಾಸ ನಡೆಸಲಿಲ್ಲ. ಹಾರ್ದಿಕ್ ಚೇತರಿಸಿಕೊಳ್ಳುವ ಮೊದಲೇ ಪ್ರಮುಖ ಆಟಗಾರರು ಗಾಯಗೊಂಡಿದ್ದು, ಟೀಮ್ ಮ್ಯಾನೇಜ್ಮೆಂಟ್ ಆತಂಕಕ್ಕೆ ಸಿಲುಕುವಂತೆ ಮಾಡಿದೆ.

ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ