logo
ಕನ್ನಡ ಸುದ್ದಿ  /  ಕ್ರಿಕೆಟ್  /  ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ರುಬಿಕ್ಸ್ ಕ್ಯೂಬ್ಸ್​​ನಲ್ಲಿ ಮೊಹಮ್ಮದ್ ಶಮಿ ಚಿತ್ರ ಬಿಡಿಸಿದ ಯುವಕ; ಬೆನ್ನುತಟ್ಟಿ ಶಹಬ್ಬಾಸ್ ಎಂದ ವೇಗಿ

ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ರುಬಿಕ್ಸ್ ಕ್ಯೂಬ್ಸ್​​ನಲ್ಲಿ ಮೊಹಮ್ಮದ್ ಶಮಿ ಚಿತ್ರ ಬಿಡಿಸಿದ ಯುವಕ; ಬೆನ್ನುತಟ್ಟಿ ಶಹಬ್ಬಾಸ್ ಎಂದ ವೇಗಿ

Prasanna Kumar P N HT Kannada

Feb 03, 2024 03:29 PM IST

google News

ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ರುಬಿಕ್ಸ್ ಕ್ಯೂಬ್ಸ್​​ನಲ್ಲಿ ಮೊಹಮ್ಮದ್ ಶಮಿ ಚಿತ್ರ ಬಿಡಿಸಿದ ಯುವಕ

    • Mohammed Shami : ಯುವಕನೊಬ್ಬ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ರುಬಿಕ್ಸ್ ಕ್ಯೂಬ್ಸ್​ನಲ್ಲಿ ಮೊಹಮ್ಮದ್ ಶಮಿ ಅವರ ಭಾವಚಿತ್ರವನ್ನು ಬಿಡಿಸಿದ ವಿಡಿಯೋ ವೈರಲ್ ಆಗುತ್ತಿದೆ.
ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ರುಬಿಕ್ಸ್ ಕ್ಯೂಬ್ಸ್​​ನಲ್ಲಿ ಮೊಹಮ್ಮದ್ ಶಮಿ ಚಿತ್ರ ಬಿಡಿಸಿದ ಯುವಕ
ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ರುಬಿಕ್ಸ್ ಕ್ಯೂಬ್ಸ್​​ನಲ್ಲಿ ಮೊಹಮ್ಮದ್ ಶಮಿ ಚಿತ್ರ ಬಿಡಿಸಿದ ಯುವಕ (Instagram/@masteraffankutty)

ರುಬಿಕ್ಸ್ ಕ್ಯೂಬ್ಸ್ (Rubiks Cubes) ಎಂಬ ಅಸಾಂಪ್ರದಾಯಿಕ ಸಾಧನವನ್ನು ಬಳಸಿಕೊಂಡು ಕ್ರಿಕೆಟಿಗ ಮೊಹಮ್ಮದ್ ಶಮಿ (Mohammed Shami) ಚಿತ್ರವನ್ನು ಯುವಕನೊಬ್ಬ ರಚಿಸಿದ್ದಾನೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಈ ಮಹಾನ್ ಸಾಧನೆ ಮಾಡಿರುವುದು ಅಚ್ಚರಿ ಮೂಡಿಸಿದೆ. ಆತನ ಪ್ರತಿಭೆಯನ್ನು ಕಣ್ಮುಂದೆಯೇ ಕಣ್ತುಂಬಿಕೊಂಡ ವೇಗಿ, ಯುವಕನ ಬೆನ್ನು ತಟ್ಟಿ ಶಹಬ್ಬಾಸ್​ಗಿರಿ ನೀಡಿದರು. ಈ ವಿಡಿಯೋ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ವಿಡಿಯೋ ಹಂಚಿಕೊಂಡ ಅಫಾನ್ ಕುಟ್ಟಿ

ಕಲಾಕೃತಿ ನಿರ್ಮಿಸಿದ ಯುವಕನ ಹೆಸರು ಅಫಾನ್ ಕುಟ್ಟಿ. ಕಲಾಕೃತಿ ರಚಿಸುವ ವಿಡಿಯೋ ಮತ್ತು ಶಮಿ ಮೆಚ್ಚುಗೆ ವ್ಯಕ್ತಪಡಿಸಿದ ಕ್ಷಣವನ್ನು ಅಫಾನ್ ಕುಟ್ಟಿ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಕಣ್ಣು ಮುಚ್ಚಿ ಮೊಹಮ್ಮದ್ ಶಮಿ ಸರ್ ಅವರ ಫೋಟೋವನ್ನು ರುಬಿಕ್ಸ್ ಕ್ಯೂಬ್ಸ್​ನಿಂದ ಬಿಡಿಲಾಗಿದೆ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ಏನಿದೆ?

ರುಬಿಕ್ಸ್ ಕ್ಯೂಬ್​​ಗಳನ್ನು ಮೇಜಿನ ಮೇಲಿಟ್ಟು ನಿಂತಿರುವ ಅಫಾನ್​, ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳುತ್ತಾರೆ. ವೇಗಿ ಮೊಹಮ್ಮದ್ ಶಮಿ ಅವರು ಸಹ ಆತನ ಎದುರು ಕುಳಿತಿರುತ್ತಾರೆ. ಅದರ ಮುಂದೆ ನಡೆದಿದ್ದೆಲ್ಲಾ ಅದ್ಭುತ. ಭಾವಚಿತ್ರವನ್ನು ರಚಿಸಲು ಕುಟ್ಟಿ ಕ್ಯೂಬ್​​ಗಳನ್ನು ವೇಗವಾಗಿ ಜೋಡಿಸುತ್ತಾರೆ. ಕ್ಷಣಾರ್ಧದಲ್ಲಿ ತಮ್ಮ ಕೆಲಸವನ್ನು ಮುಸಿಸಿದ ಯುವಕ, ಶಮಿ ಚಿತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ.

ಮೆಚ್ಚುಗೆ ವ್ಯಕ್ತಪಡಿಸಿದ ಮೊಹಮ್ಮದ್ ಶಮಿ

ಅಫಾನ್ ಕುಟ್ಟಿ ಅವರ ಪ್ರತಿಭೆಗೆ ದಿಗ್ಭ್ರಮೆ ವ್ಯಕ್ತಪಡಿಸಿದ ಶಮಿ, ಎದ್ದು ನಿಂತು ಅವರನ್ನು ಶ್ಲಾಘಿಸುತ್ತಾರೆ. ಕುಟ್ಟಿ ಅವರನ್ನು ಬಿಗಿದಪ್ಪಿಕೊಳ್ಳುವ ವೇಗಿ ಆತನ ಸಾಧನೆಯನ್ನು ಕೊಂಡಾಡುತ್ತಾರೆ. ನಂತರ ತನ್ನ ಫೋಟೋಗೆ ಶಮಿ ಆಟೋಗ್ರಾಫ್ ನೀಡುತ್ತಾರೆ. ಅಲ್ಲದೆ, ರುಬಿಕ್ಸ್ ಕ್ಯೂಬ್​ನಲ್ಲಿ ಬಿಡಿಸಿದ ಚಿತ್ರವನ್ನು ಶಮಿಗೆ ಉಡುಗೊರೆ ನೀಡಲಾಗುತ್ತದೆ. ಹಲವು ದಿನಗಳ ಹಿಂದೆ ಹಂಚಿಕೊಂಡಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಮೊಹಮ್ಮದ್ ಶಮಿ ಇಂಗ್ಲೆಂಡ್ ಸರಣಿಯಿಂದ ಔಟ್?

ವೇಗಿ ಮೊಹಮ್ಮದ್ ಶಮಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಅವರು ತಿಂಗಳು ಕಾಲ ವಿಶ್ರಾಂತಿ ಪಡೆಯಲಿದ್ದು ಇಂಗ್ಲೆಂಡ್​ ವಿರುದ್ಧದ ಕೊನೆಯ ಮೂರು ಪಂದ್ಯಗಳಿಗೂ ಅಲಭ್ಯ ಎಂದು ಹೇಳಲಾಗುತ್ತಿದೆ. ಈಗಾಗಲೇ ಮೊದಲ ಎರಡು ಪಂದ್ಯಗಳಿಂದ ಹೊರ ಬಿದ್ದ ಶಮಿ, ನೇರವಾಗಿ ಐಪಿಎಲ್​ಗೆ ಮರಳುವ ಸಾಧ್ಯತೆ ಇದೆ. ಗುಜರಾತ್ ಟೈಟಾನ್ಸ್ ತಂಡದ ಅಬ್ಬರಿಸುವ ಸಾಧ್ಯತೆ ಇದೆ.

ಏಕದಿನ ವಿಶ್ವಕಪ್ ನಂತರ ಆಡಲೇ ಇಲ್ಲ

ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ವಿಕೆಟ್ ಬೇಟೆಯಾಡಿದ ಮೊಹಮ್ಮದ್ ಶಮಿ, ಆ ಬಳಿಕ ತಂಡಕ್ಕೆ ಮರಳಲೇ ಇಲ್ಲ. ಟೂರ್ನಿಯಲ್ಲಿ ಗಾಯದ ನೋವಿದ್ದರೂ ಪೇನ್ ಕಿಲ್ಲರ್ ತೆಗದುಕೊಂಡು ಆಡಿದ್ದರು. ಆಡಿದ್ದ 7 ಪಂದ್ಯಗಳಲ್ಲಿ ಬರೊಬ್ಬರಿ 24 ವಿಕೆಟ್ ಉರುಳಿಸಿ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಆ ಬಳಿಕ ಫಿಟ್​ನೆಸ್ ಕಡೆ ಗಮನ ನೀಡಿದ ವೇಗಿ, ಈಗಲೂ ಚೇತರಿಸಿಕೊಳ್ಳುತ್ತಿದ್ದಾರೆ. ಇಂಗ್ಲೆಂಡ್ ಸರಣಿಗೂ ಮುನ್ನ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸಿರೀಸ್​ಗೂ ಆಯ್ಕೆಯಾಗಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ