logo
ಕನ್ನಡ ಸುದ್ದಿ  /  ಕ್ರಿಕೆಟ್  /  ಬಲಿಷ್ಠ ತಂಡಗಳೆದುರು ತಾಕತ್ತು ತೋರಿಸಿ, ದೊಡ್ಡ ಆಟಗಾರನೆಂಬ ಹಣೆಪಟ್ಟಿಗೆ ನ್ಯಾಯ ಕೊಡಿ; ಬಾಬರ್​​ಗೆ ಅಖ್ತರ್ ತರಾಟೆ

ಬಲಿಷ್ಠ ತಂಡಗಳೆದುರು ತಾಕತ್ತು ತೋರಿಸಿ, ದೊಡ್ಡ ಆಟಗಾರನೆಂಬ ಹಣೆಪಟ್ಟಿಗೆ ನ್ಯಾಯ ಕೊಡಿ; ಬಾಬರ್​​ಗೆ ಅಖ್ತರ್ ತರಾಟೆ

Prasanna Kumar P N HT Kannada

Oct 23, 2023 07:00 AM IST

google News

ಬಾಬರ್​​ ಅಜಮ್​​ಗೆ ಶೋಯೆಬ್ ಅಖ್ತರ್ ತರಾಟೆ.

    • Babar Azam - Shoaib Akhtar: ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡಗಳ ವಿರುದ್ಧ ತೊಡೆ ತಟ್ಟಿ ನಿಲ್ಲುವ ಮೂಲಕ ತನಗೆ ಸಿಕ್ಕಿರುವ ದೊಡ್ಡ ಆಟಗಾರ ಎಂಬ ಹಣೆಪಟ್ಟಿಯನ್ನು ಸಮರ್ಥಿಸಿಕೊಳ್ಳಕೊಳ್ಳಬೇಕು ಎಂದು ಪಾಕ್ ತಂಡದ ನಾಯಕ ಬಾಬರ್ ಅಜಮ್​ಗೆ ಶೋಯೆಬ್ ಅಖ್ತರ್ ಸಲಹೆ ನೀಡಿದ್ದಾರೆ.
ಬಾಬರ್​​ ಅಜಮ್​​ಗೆ ಶೋಯೆಬ್ ಅಖ್ತರ್ ತರಾಟೆ.
ಬಾಬರ್​​ ಅಜಮ್​​ಗೆ ಶೋಯೆಬ್ ಅಖ್ತರ್ ತರಾಟೆ.

ಏಕದಿನ ಕ್ರಿಕೆಟ್​​ನ ನಂಬರ್​​ 1 ಬ್ಯಾಟ್ಸ್​​ಮನ್​, ಪಾಕಿಸ್ತಾನ ತಂಡದ (Pakistan Cricket Team) ನಾಯಕ ಬಾಬರ್ ಅಜಮ್ (Babar Azam) ಅವರು 2023ರ ಐಸಿಸಿ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ (ICC World Cup 2023) ಸದ್ದೇ ಮಾಡುತ್ತಿಲ್ಲ. ರನ್​ ಗಳಿಸಲು ಪರದಾಟ ನಡೆಸುತ್ತಿದ್ದಾರೆ. ಇದೀಗ ಸತತ ವೈಫಲ್ಯ ಅನುಭವಿಸುತ್ತಿರುವ ಬಾಬರ್​ ವಿರುದ್ಧ ತಮ್ಮದೇ ದೇಶದ ಮಾಜಿ ವೇಗಿ ಶೋಯೆಬ್ ಅಖ್ತರ್ (Shoaib Akhtar), ಕಿಡಿಕಾರಿದ್ದಾರೆ. ತಮ್ಮ ಆಟಕ್ಕೆ ನ್ಯಾಯ ಕೊಡುವಂತೆ ಮನವಿ ಮಾಡಿದ್ದಾರೆ.

ಆಧುನಿಕ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಆಟಗಾರರಲ್ಲಿ ಒಬ್ಬರೆಂದು ಬಾಬರ್​ ಹೆಸರಾಗಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ ವಿಶ್ವ ನಂಬರ್​ 1 ಆಗಿದ್ದರೂ ಬಾಬರ್ ಕಳಪೆ ಫಾರ್ಮ್​​ಗೆ ಸಿಲುಕಿ ಟೀಕೆಗೆ ಗುರಿಯಾಗಿದ್ದಾರೆ. ಒಂದು ದೊಡ್ಡ ಇನ್ನಿಂಗ್ಸ್​​ಗಾಗಿ ಕಾಯುತ್ತಿದ್ದಾರೆ. ಸದ್ಯ ಈವರೆಗೂ ಆಡಿರುವ 4 ಪಂದ್ಯಗಳಲ್ಲಿ ಕೇವಲ 83 ರನ್ ಗಳಿಸಿದರು. ಸರಾಸರಿ 20.75. ಟೀಮ್ ಇಂಡಿಯಾ ವಿರುದ್ಧ 50 ರನ್ ಗಳಿಸಿದರೂ ಅದು ಪರಿಣಾಮಕಾರಿಯಾಗಿರಲಿಲ್ಲ. ಇದರ ನಡುವೆ ಅಖ್ತರ್ ತರಾಟೆಗೆ ತೆಗೆದುಕೊಂಡಿದ್ದಾರೆ.

‘ಸಿಕ್ಕ ಖ್ಯಾತಿಗೆ ತಕ್ಕಂತೆ ಆಡಬೇಕು’

ಅಕ್ಟೋಬರ್ 20ರಂದು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಬಾಬರ್ ವಿಫಲರಾದರು. 18 ರನ್ ಗಳಿಸಿ ಔಟಾದರು. ಅವರ ಈ ಆಟವು ಪಂದ್ಯದ ಸೋಲಿಗೆ ಪ್ರಮುಖ ಕಾರಣವಾಯಿತು. ಈ ಕಳಪೆ ಆಟಕ್ಕೆ ಬೇಸರ ವ್ಯಕ್ತಪಡಿಸಿದ ಅಖ್ತರ್, ದೊಡ್ಡ ಆಟಗಾರ ಎಂಬ ಹಣೆಪಟ್ಟಿಗೆ ತಕ್ಕಂತೆ ಬ್ಯಾಟ್​ ಬೀಸಿ ಅದನ್ನು ಸಮರ್ಥಿಸಿಕೊಳ್ಳಬೇಕಿದೆ. ನಿಮಗೆ ಸಿಕ್ಕಿರುವ ಖ್ಯಾತಿಗೆ ಬಲ ಪ್ರದರ್ಶನ ನೀಡಬೇಕಿದೆ. ರಾಜಿಯಾಗಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಅಬ್ಬರಿಸಿ ಬಾಯಿ ಮುಚ್ಚಿಸಿ’

ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅಖ್ತರ್, ಆಸೀಸ್​ನಂತಹ ಬಲಿಷ್ಠ ತಂಡಗಳ ವಿರುದ್ಧ ತೊಡೆ ತಟ್ಟಿ ನಿಲ್ಲುವ ಮೂಲಕ ತನಗೆ ಸಿಕ್ಕಿರುವ ದೊಡ್ಡ ಆಟಗಾರ ಎಂಬ ಹಣೆಪಟ್ಟಿಯನ್ನು ಸಮರ್ಥಿಸಿಕೊಳ್ಳಕೊಳ್ಳಬೇಕು. ಬಾಬರ್ ಅಜಮ್ ಒಬ್ಬ ಶ್ರೇಷ್ಠ ಆಟಗಾರ. ಆದರೆ ಬಲಿಷ್ಠ ತಂಡಗಳ ಎದುರು ಅದ್ಭುತ ಪ್ರದರ್ಶನ ನೀಡಿದಾಗ ಮಾತ್ರ, ಶ್ರೇಷ್ಠನೆಂದು ಕರೆಯಲು ಸಾಧ್ಯ. ಟೀಕಿಸಿದವರ ಬಾಯ್ಮುಚ್ಚಿಸಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಬೇಕು. ಇದು ಸಾಧ್ಯವಾಗಬೇಕೆಂದರೆ ಬಲಿಷ್ಠ ತಂಡಗಳ ಎದುರು ರನ್ ಗಳಿಸಲೇಬೇಕು ಎಂದು ಅಖ್ತರ್​, ಬಾಬರ್​​ಗೆ ಸಲಹೆ ನೀಡಿದ್ದಾರೆ.

‘ಹೆಸರನ್ನು ಉಳಿಸಿಕೊಳ್ಳಿ’

ದೊಡ್ಡ ಆಟಗಾರ ಎಂದು ಕರೆಸಿಕೊಂಡು ಸತತ ವೈಫಲ್ಯ ಅನುಭವಿಸಿದರೆ ನಿಮ್ಮನ್ನು ದೊಡ್ಡ ಆಟಗಾರ ಎನ್ನಲು ಹೇಗೆ ಸಾಧ್ಯ. ಅದಕ್ಕೆ ತಕ್ಕಂತೆ ಪ್ರದರ್ಶನ ನೀಡಬೇಕು. ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಬಲಿಷ್ಠ ತಂಡಗಳ ವಿರುದ್ಧ ಅಬ್ಬರಿಸಿ, ತಮಗೆ ಸಿಕ್ಕ ಶ್ರೇಷ್ಠ ಹಾಗೂ ದೊಡ್ಡ ಆಟಗಾರ ಎಂಬ ಹೆಸರನ್ನು ಉಳಿಸಿಕೊಳ್ಳಿ ಎಂದು ಹೇಳಿದ್ದಾರೆ. ಇದರ ನಡುವೆ ತಂಡದ ನಿರ್ವಹಣೆ ಕುರಿತು ನಿರಾಸೆ ವ್ಯಕ್ತಪಡಿಸಿದ ಅಖ್ತರ್​, ಪಾಕ್ ಸೆಮಿಫೈನಲ್‌ನಲ್ಲಿ ಆಡಲು ಅರ್ಹವಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.

ಸೆಮೀಸ್ ಪ್ರವೇಶಿಸುತ್ತೀರಾ?

ಇನ್ನು ಪಾಕ್​ ತಂಡದ ಮ್ಯಾನೇಜ್​ಮೆಂಟ್​ ಕುರಿತು ಮಾತನಾಡಿದ ಅಖ್ತರ್, ಪಾಕ್ ಟೀಮ್ ಮ್ಯಾನೇಜ್‌ಮೆಂಟ್ ಏನು ಯೋಚಿಸುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ. ಸಿಕ್ಕ ಅವಕಾಶಗಳನ್ನು ಕಳೆದುಕೊಂಡು, ಕಠೋರ ಸ್ಥಿತಿಗೆ ತಲುಪಿಸುತ್ತಿದೆ. ತಂಡದಲ್ಲಿ ಸಾಕಷ್ಟ ಬದಲಾವಣೆಗಳನ್ನು ತರುತ್ತಿದೆ. ಇದು ಎಡವಟ್ಟಿಗೂ ಕಾರಣವಾಗಬಹುದು. ನೀವು ಸೌತ್ ಆಫ್ರಿಕಾ, ನ್ಯೂಜಿಲೆಂಡ್, ಇಂಗ್ಲೆಂಡ್ ತಂಡಗಳ ಎದುರು ಆಡಬೇಕಿದೆ. ಆಸೀಸ್ ವಿರುದ್ಧ ನೀಡಿದ ಪ್ರದರ್ಶನ ನೀಡಿದರೆ ಸೆಮೀಸ್​ಗೆ ಅರ್ಹರಾಗುತ್ತೀರಾ ಎಂದು ಕಿಡಿಕಾರಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ