logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸ್ಕಾಟ್ಲೆಂಡ್ ಮಣಿಸಿ ಭಾರತ-ಇಂಗ್ಲೆಂಡ್ ನಿರ್ಮಿಸಿದ್ದ ವಿಶ್ವದಾಖಲೆ ಸರಿಗಟ್ಟಿದ ಆಸ್ಟ್ರೇಲಿಯಾ

ಸ್ಕಾಟ್ಲೆಂಡ್ ಮಣಿಸಿ ಭಾರತ-ಇಂಗ್ಲೆಂಡ್ ನಿರ್ಮಿಸಿದ್ದ ವಿಶ್ವದಾಖಲೆ ಸರಿಗಟ್ಟಿದ ಆಸ್ಟ್ರೇಲಿಯಾ

Jun 17, 2024 07:00 AM IST

Australia Record: ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್​ನಲ್ಲಿ ಸ್ಕಾಟ್ಲೆಂಡ್ ತಂಡವನ್ನು ಮಣಿಸಿದ ಆಸ್ಟ್ರೇಲಿಯಾ ತಂಡವು ವಿಶೇಷ ಮೈಲಿಗಲ್ಲಿ ನಿರ್ಮಿಸಿದೆ.

ಸ್ಕಾಟ್ಲೆಂಡ್​​ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಆಸ್ಟ್ರೇಲಿಯಾ, ಟಿ20 ವಿಶ್ವಕಪ್​​​ ಟೂರ್ನಿಯಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿತು. ಸ್ಕಾಟಿಷ್ ತಂಡದ ವಿರುದ್ಧ 5 ವಿಕೆಟ್​ಗಳಿಂದ ಜಯ ಗಳಿಸಿದ ಆಸೀಸ್, ಟೀಮ್ ಇಂಡಿಯಾ ನಿರ್ಮಿಸಿದ್ದ ಐತಿಹಾಸಿಕ ದಾಖಲೆಯನ್ನು ಸರಿಗಟ್ಟಿದೆ.
(1 / 6)

2022ರ ಟಿ20 ವಿಶ್ವಕಪ್​​ನಲ್ಲಿ ಆರಂಭಿಕ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತಿದ್ದ ಆಸೀಸ್​ ನಂತರ ಸತತ 3 ಗೆಲುವು ದಾಖಲಿಸಿತ್ತು. 2024ರ ಆವೃತ್ತಿಯಲ್ಲೂ ಸತತ 4 ಗೆಲುವು ಸಾಧಿಸಿದೆ. ಒಟ್ಟಾರೆ ಸತತ 7 ಪಂದ್ಯಗಳನ್ನು ಗೆದ್ದು ಇಂಗ್ಲೆಂಡ್ ಮತ್ತು ಭಾರತ ದಾಖಲೆ ಸರಿಗಟ್ಟಿದೆ.
(2 / 6)

2010 ಮತ್ತು 2012ರ ಆವೃತ್ತಿಗಳಲ್ಲಿ ಇಂಗ್ಲೆಂಡ್ ಸತತ ಏಳು ಪಂದ್ಯಗಳನ್ನು ಗೆದ್ದರೆ, ಭಾರತ 2012 ಮತ್ತು 2014ರ ಟಿ20 ವಿಶ್ವಕಪ್ನಲ್ಲಿ ಸತತ ಏಳು ಪಂದ್ಯಗಳನ್ನು ಗೆದ್ದಿತ್ತು. ಈ ಬಾರಿ ಆಸ್ಟ್ರೇಲಿಯಾ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
(3 / 6)

2010ರ ಟಿ20 ವಿಶ್ವಕಪ್​​​ನಲ್ಲಿ ಆಸ್ಟ್ರೇಲಿಯಾ ಮತ್ತೆ ಸತತ 6 ಪಂದ್ಯಗಳನ್ನು ಗೆದ್ದಿತ್ತು. 2009ರಲ್ಲಿ ಶ್ರೀಲಂಕಾ ಸತತ ಅರ್ಧ ಡಜನ್ ಪಂದ್ಯ ಗೆದ್ದಿತ್ತು. 2007 ಮತ್ತು 2009ರ ಆವೃತ್ತಿಗಳಲ್ಲಿ ಟೀಮ್ ಇಂಡಿಯಾ ಸತತ 6 ಪಂದ್ಯಗಳನ್ನು ಗೆದ್ದು ದಾಖಲೆ ನಿರ್ಮಿಸಿತ್ತು.
(4 / 6)

ಆಸ್ಟ್ರೇಲಿಯಾ ಮತ್ತು ಸ್ಕಾಟ್ಲೆಂಡ್ ನಡುವಿನ ಪಂದ್ಯವು ಇಂಗ್ಲೆಂಡ್ ಭವಿಷ್ಯ ಈ ಪಂದ್ಯದ ಮೇಲೆ ಅವಲಂಬಿತವಾಗಿತ್ತು. ಜೋಸ್ ಬಟ್ಲರ್ ಪಡೆ ಸೂಪರ್​​-8 ಪ್ರವೇಶಿಸಲು ಆಸೀಸ್ ಗೆಲುವು ಅನಿವಾರ್ಯ ಆಗಿತ್ತು. ಸ್ಕಾಟ್ಲೆಂಡ್ ಮತ್ತು ಇಂಗ್ಲೆಂಡ್ ಸಮಾನ ಅಂಕಗಳನ್ನು ಹೊಂದಿದ್ದರೂ ರನ್ ರೇಟ್ ವಿಷಯದಲ್ಲಿ ಆಂಗ್ಲರು ಮುಂದಿದ್ದಾರೆ.
(5 / 6)

ಸ್ಕಾಟ್ಲೆಂಡ್ ಭಾನುವಾರ ಗೆದ್ದಿದ್ದರೆ, ಇಂಗ್ಲೆಂಡ್ ಅಧಿಕೃತವಾಗಿ ವಿಶ್ವಕಪ್​ನಿಂದ ಹೊರಬೀಳುತ್ತಿತ್ತು. ಕಳೆದ ವರ್ಷ ಇಂಗ್ಲೆಂಡ್ ಚಾಂಪಿಯನ್ ಆಗಿತ್ತು. ಇದೀಗ ಸೂಪರ್​-8 ಪ್ರವೇಶಿಸಿದ್ದು, ಮತ್ತೊಂದು ಟ್ರೋಫಿ ಮೇಲೆ ಕಣ್ಣಿಟ್ಟಿದೆ.
(6 / 6)

    ಹಂಚಿಕೊಳ್ಳಲು ಲೇಖನಗಳು