logo
ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20 ವಿಶ್ವಕಪ್​ಗೆ ಇಂಗ್ಲೆಂಡ್ ತಂಡ ಪ್ರಕಟ; ಜೋಫ್ರಾ ಆರ್ಚರ್ ಕಂಬ್ಯಾಕ್, ಇಬ್ಬರು ಆರ್​ಸಿಬಿ ಆಟಗಾರರಿಗೆ ಅವಕಾಶ

ಟಿ20 ವಿಶ್ವಕಪ್​ಗೆ ಇಂಗ್ಲೆಂಡ್ ತಂಡ ಪ್ರಕಟ; ಜೋಫ್ರಾ ಆರ್ಚರ್ ಕಂಬ್ಯಾಕ್, ಇಬ್ಬರು ಆರ್​ಸಿಬಿ ಆಟಗಾರರಿಗೆ ಅವಕಾಶ

Prasanna Kumar P N HT Kannada

Apr 30, 2024 03:49 PM IST

google News

ಟಿ20 ವಿಶ್ವಕಪ್​ಗೆ ಇಂಗ್ಲೆಂಡ್ ತಂಡ ಪ್ರಕಟ; ಜೋಫ್ರಾ ಆರ್ಚರ್ ಕಂಬ್ಯಾಕ್, ಇಬ್ಬರು ಆರ್​ಸಿಬಿ ಆಟಗಾರರಿಗೆ ಅವಕಾಶ

    • England T20 World Cup Squad Announced: ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಹಾಲಿ ಚಾಂಪಿಯನ್ ಇಂಗ್ಲೆಂಡ್ ಬಲಿಷ್ಠ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಜೋಫ್ರಾ ಆರ್ಚರ್ ಕಂಬ್ಯಾಕ್ ಮಾಡಿದ್ದರೆ, ಆರ್​ಸಿಬಿ ತಂಡದ ಇಬ್ಬರು ಆಟಗಾರರು ಸಹ ತಂಡದಲ್ಲಿ ಅವಕಾಶ ಪಡೆದಿದ್ದಾರೆ.
ಟಿ20 ವಿಶ್ವಕಪ್​ಗೆ ಇಂಗ್ಲೆಂಡ್ ತಂಡ ಪ್ರಕಟ; ಜೋಫ್ರಾ ಆರ್ಚರ್ ಕಂಬ್ಯಾಕ್, ಇಬ್ಬರು ಆರ್​ಸಿಬಿ ಆಟಗಾರರಿಗೆ ಅವಕಾಶ
ಟಿ20 ವಿಶ್ವಕಪ್​ಗೆ ಇಂಗ್ಲೆಂಡ್ ತಂಡ ಪ್ರಕಟ; ಜೋಫ್ರಾ ಆರ್ಚರ್ ಕಂಬ್ಯಾಕ್, ಇಬ್ಬರು ಆರ್​ಸಿಬಿ ಆಟಗಾರರಿಗೆ ಅವಕಾಶ

ಹಾಲಿ ಚಾಂಪಿಯನ್ ಇಂಗ್ಲೆಂಡ್ (England Cricket Team) 2024ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಟೂರ್ನಿಗೆ (T20 World Cup 2024) ತಮ್ಮ 15 ಸದಸ್ಯರ ತಂಡವನ್ನು ಏಪ್ರಿಲ್ 30ರ ಮಂಗಳವಾರ ಪ್ರಕಟಿಸಿದೆ. ಜೋಫ್ರಾ ಆರ್ಚರ್ ಮುಂಬರುವ ಟಿ20 ವಿಶ್ವಕಪ್ 2024 ಗಾಗಿ ಇಂಗ್ಲೆಂಡ್ ತಂಡಕ್ಕೆ ಸೇರ್ಪಡೆ ಆಗಿದ್ದಾರೆ. ಒಂದು ವರ್ಷದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ ಆರ್ಚರ್, ಇಂಗ್ಲೆಂಡ್‌ ಪರ ಕೊನೆಯದಾಗಿ 2023ರ ಮಾರ್ಚ್​​​ನಲ್ಲಿ ಕಾಣಿಸಿಕೊಂಡಿದ್ದರು. ಮೊಣಕೈ ಗಾಯದಿಂದ ಬಳಲುತ್ತಿದ್ದ ಅವರು, 12 ತಿಂಗಳ ಕಾಲ ವಿಶ್ರಾಂತಿ ಪಡೆದಿದ್ದರು.

2021ರಿಂದ ಅವರು ಹಲವು ಬಾರಿ ಗಾಯದ ಸಮಸ್ಯೆಗೆ ಒಳಗಾಗಿದ್ದ ವೇಗಿ, ನಿರಂತರ ಮೊಣಕೈ ಸಮಸ್ಯೆ ಎದುರಿಸಿದ್ದರು. ಹಲವು ಬಾರಿ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದ ಆರ್ಚರ್‌ ಕಂಬ್ಯಾಕ್ ಮಾಡಿದ್ದೇ ರೋಚಕ. 2023ರಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಗೂ ಅವರು ಅಲಭ್ಯರಾಗಿದ್ದರು. ಇನ್ನು ತಂಡದಲ್ಲಿ ಆರ್​ಸಿಬಿ ಆಟಗಾರರಾದ ವಿಲ್ ಜಾಕ್ಸ್ ಮತ್ತು ರೀಸ್ ಟೊಪ್ಲಿ ಕೂಡ ಅವಕಾಶ ಪಡೆದಿದ್ದಾರೆ. ಇಂಗ್ಲೆಂಡ್ ಲೈನ್-ಅಪ್‌ನಲ್ಲಿ ಇತ್ತೀಚಿನ ಅನುಪಸ್ಥಿತಿ ಹೊರತಾಗಿಯೂ ಅನುಭವಿ ಆಲ್‌ರೌಂಡರ್ ಕ್ರಿಸ್ ಜೋರ್ಡಾನ್ ಸಹ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಬ್ಯಾಟರ್‌ಗಳಲ್ಲಿ ಜೋಸ್ ಬಟ್ಲರ್, ವಿಲ್ ಜಾಕ್ಸ್, ಫಿಲ್ ಸಾಲ್ಟ್ ಮತ್ತು ಜಾನಿ ಬೈರ್‌ಸ್ಟೋ ಅವರು ಅಗ್ರ ಕ್ರಮಾಂಕದ ಸ್ಪರ್ಧಿಗಳಾಗಿದ್ದಾರೆ. ಬೆನ್ ಡಕೆಟ್, ಅನುಭವಿ ಆಲ್ ರೌಂಡರ್ ಮೊಯಿನ್ ಅಲಿ ಕೂಡ ತಂಡದ ಭಾಗವಾಗಿದ್ದಾರೆ. ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಸ್ಯಾಮ್ ಕರನ್ ತಂಡಕ್ಕೆ ಕೆಳ ಕ್ರಮಾಂಕದ ಶಕ್ತಿ ತುಂಬಲಿದ್ದಾರೆ. ಆದಿಲ್ ರಶೀದ್ ಮತ್ತು ಟಾಮ್ ಹಾರ್ಟ್ಲಿ ಸ್ಪಿನ್ ದಾಳಿ ಮುನ್ನಡೆಸಲಿದ್ದಾರೆ.

ಟಿ20 ವಿಶ್ವಕಪ್​ ಟೂರ್ನಿಗೆ ಇಂಗ್ಲೆಂಡ್ ತಂಡ

ಜೋಸ್ ಬಟ್ಲರ್ (ನಾಯಕ), ಮೊಯಿನ್ ಅಲಿ, ಜೋಫ್ರಾ ಆರ್ಚರ್, ಜಾನಿ ಬೈರ್‌ಸ್ಟೋ, ಹ್ಯಾರಿ ಬ್ರೂಕ್, ಸ್ಯಾಮ್ ಕರನ್, ಬೆನ್ ಡಕೆಟ್, ಟಾಮ್ ಹಾರ್ಟ್ಲಿ, ವಿಲ್ ಜಾಕ್ಸ್, ಕ್ರಿಸ್ ಜೋರ್ಡಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಆದಿಲ್ ರಶೀದ್, ಫಿಲ್ ಸಾಲ್ಟ್, ರೀಸ್ ಟೋಪ್ಲಿ, ಮಾರ್ಕ್ ವುಡ್.

ಇಂಗ್ಲೆಂಡ್​-ಪಾಕಿಸ್ತಾನ ಟಿ20 ಸರಣಿ

ಇದೇ ತಂಡವನ್ನು ಪಾಕಿಸ್ತಾನ ವಿರುದ್ಧದ 4 ಪಂದ್ಯಗಳ ಟಿ20ಐ ಸರಣಿಗೂ ಆಯ್ಕೆ ಮಾಡಲಾಗಿದೆ. ಇಂಗ್ಲೆಂಡ್ ಮತ್ತು ಪಾಕ್ ನಡುವಿನ ಟಿ20 ಸರಣಿಯು ಮೇ 22 ರಂದು ಆರಂಭವಾಗಲಿದೆ. ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್‌ನ ಭಾಗವಾಗಿರುವ ಎಲ್ಲಾ ಇಂಗ್ಲೆಂಡ್​ ಆಟಗಾರರು ಬಾಬರ್ ಅಜಮ್ ನೇತೃತ್ವದ ತಂಡದ ವಿರುದ್ಧದ ಟಿ20ಐ ಸರಣಿಗೆ ಮರಳಲಿದ್ದಾರೆ. ಹೀಗಾಗಿ ಐಪಿಎಲ್​ ಪ್ಲೇಆಫ್​ ಪಂದ್ಯಗಳಿಗೆ ಇಂಗ್ಲೆಂಡ್​ ಆಟಗಾರರು ಅಲಭ್ಯರಾಗಲಿದ್ದಾರೆ.

ಮೇ 1ರೊಳಗೆ ತಂಡಗಳನ್ನು ಪ್ರಕಟಿಸಲು ಡೆಡ್​ಲೈನ್ ನೀಡಲಾಗಿದೆ. ಎಲ್ಲಾ ತಂಡಗಳು ಮೇ 25ರವರೆಗೆ ತಮ್ಮ ತಂಡದಲ್ಲಿ ಬದಲಾವಣೆ ಮಾಡಲು ಅವಕಾಶ ನೀಡಲಾಗಿದೆ. ಜೂನ್ 4ರಂದು ಬಾರ್ಬಡೋಸ್​ನಲ್ಲಿ ಸ್ಕಾಟ್ಲೆಂಡ್ ವಿರುದ್ಧದ ಮೊದಲ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ಮೇ 31 ರಂದು ಕೆರಿಬಿಯನ್‌ಗೆ ಹಾರಲಿದೆ. ಟಿ20 ವಿಶ್ವಕಪ್‌ನಲ್ಲಿ ಬಿ ಗುಂಪಿನಲ್ಲಿರುವ ಇಂಗ್ಲೆಂಡ್, ಆಸ್ಟ್ರೇಲಿಯಾ, ನಮೀಬಿಯಾ, ಸ್ಕಾಟ್ಲೆಂಡ್ ಮತ್ತು ಓಮನ್‌ ತಂಡಗಳ ವಿರುದ್ಧ ಸೆಣಸಾಟ ನಡೆಸಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ