logo
ಕನ್ನಡ ಸುದ್ದಿ  /  ಕ್ರಿಕೆಟ್  /  Rcb Vs Rr Eliminator: ಇಂದು ಆರ್‌ಸಿಬಿ-ಆರ್‌ಆರ್ ಐಪಿಎಲ್ ಎಲಿಮಿನೇಟರ್ ಪಂದ್ಯ; ಇಲ್ಲಿದೆ ನರೇಂದ್ರ ಮೋದಿ ಸ್ಟೇಡಿಯಂ ಪಿಚ್, ವೆದರ್ ರಿಪೋರ್ಟ್

RCB vs RR Eliminator: ಇಂದು ಆರ್‌ಸಿಬಿ-ಆರ್‌ಆರ್ ಐಪಿಎಲ್ ಎಲಿಮಿನೇಟರ್ ಪಂದ್ಯ; ಇಲ್ಲಿದೆ ನರೇಂದ್ರ ಮೋದಿ ಸ್ಟೇಡಿಯಂ ಪಿಚ್, ವೆದರ್ ರಿಪೋರ್ಟ್

Raghavendra M Y HT Kannada

May 22, 2024 06:13 AM IST

google News

ಆರ್‌ಸಿಬಿ-ಆರ್‌ಆರ್ ನಡುವಿನ ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ಮೇ 22ರ ಬುಧವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂಯಲ್ಲಿ ನಡೆಯಲಿದೆ. ಪಿಚ್ ಹಾಗೂ ವೆದರ್ ರಿಪೋರ್ಟ್ ಇಲ್ಲಿದೆ.

    • ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗಲಿರುವ ನರೇಂದ್ರ ಮೋದಿ ಸ್ಟೇಡಿಯಂ ಪಿಚ್, ಅಹಮದಾಬಾದ್ ಹವಾಮಾನ ಹೇಗಿದೆ ಅನ್ನೋದರ ವಿವರ ಇಲ್ಲಿದೆ.
ಆರ್‌ಸಿಬಿ-ಆರ್‌ಆರ್ ನಡುವಿನ ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ಮೇ 22ರ ಬುಧವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂಯಲ್ಲಿ ನಡೆಯಲಿದೆ. ಪಿಚ್ ಹಾಗೂ ವೆದರ್ ರಿಪೋರ್ಟ್ ಇಲ್ಲಿದೆ.
ಆರ್‌ಸಿಬಿ-ಆರ್‌ಆರ್ ನಡುವಿನ ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ಮೇ 22ರ ಬುಧವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂಯಲ್ಲಿ ನಡೆಯಲಿದೆ. ಪಿಚ್ ಹಾಗೂ ವೆದರ್ ರಿಪೋರ್ಟ್ ಇಲ್ಲಿದೆ.

ಅಹಮದಾಬಾದ್ (ಗುಜರಾತ್): ಇಂಡಿಯನ್ ಪ್ರೀಮಿಯರ್ ಲೀಗ್ (IPL)ನ 17ನೇ ಆವೃತ್ತಿಯ ಲೀಗ್ ಹಂತದ ಪಂದ್ಯಗಳು ಮುಗಿದಿದ್ದು, ಟೂರ್ನಿ ಇದೀಗ ಪ್ರಮುಖ ಘಟ್ಟವನ್ನು ತಲುಪಿದೆ. ಲೀಗ್ ಹಂತದಲ್ಲಿ ಸತತ ಆರು ಪಂದ್ಯಗಳನ್ನು ಗೆದ್ದು ಅತಿ ರೋಚಕವಾಗಿ ಪ್ಲೇ-ಆಫ್‌ಗೆ ಬಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ಮೊದಲ ಎಲಿಮಿನೇಟರ್‌ನಲ್ಲಿ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡವನ್ನು ಎದುರಿಸಲಿದೆ. ಈ ಮಹತ್ವದ ಪಂದ್ಯ ಇಂದು (ಮೇ 22, ಬುಧವಾರ) ಸಂಜೆ 7.30ಕ್ಕೆ ಅಹಮದಾಬಾದ್‌ನ (Ahmedabad) ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ನಡೆದಿದೆ. ಆರ್‌ಸಿಬಿ (RCB) ಕಪ್ ಗೆಲ್ಲೋಕೆ ಇನ್ನ ಮೂರೇ ಮೆಟ್ಟಿಲು ಬಾಕಿ ಇದ್ದು, ಆರ್‌ಆರ್‌ (RR) ವಿರುದ್ಧದ ಎಲಿಮಿನೇಟರ್-1 (RCB vs RR Eliminator 2024) ನಲ್ಲಿ ಗೆಲ್ಲಲೇಬೇಕಿದೆ.

ರಾಜಸ್ಥಾನ್ ರಾಯಲ್ಸ್ ಸತತ 4 ಲೀಗ್ ಪಂದ್ಯಗಳನ್ನು ಸೋಲುವ ಮೂಲ ಎದ್ದು ಬಿದ್ದು ಪ್ಲೇ ಆಫ್‌ಗೆ ಬಂದಿದೆ. ಫಾಫ್ ಡು ಪ್ಲೆಸಿಸ್ ನೇತೃತ್ವದ ಬಲಿಷ್ಠ ಆರ್‌ಸಿಬಿ ಮತ್ತು ಸಂಜು ಸ್ಯಾಮ್ಸನ್ ಸಾರಥ್ಯದ ತಂಡಗಳ ಹೈವೋಲ್ಟೇಜ್ ಕಂದನಕ್ಕೆ ಸಾಕ್ಷಿಯಾಗಲಿರುವ ನರೇಂದ್ರ ಮೋದಿ ಪಿಚ್ ಹೇಗಿದೆ? ಬ್ಯಾಟರ್ ಗಳಿಗೆ ನೆರವಾಗುತ್ತಾ ಇಲ್ಲ ಬೌಲರ್‌ಗಳು ಮಿಂಚು ಹರಿಸುತ್ತಾರಾ, ಅಹಮದಾಬಾದ್‌ನ ಹವಾಮಾನ ಹೇಗಿದೆ? ಪಂದ್ಯಕ್ಕೆ ವರುಣ ಕೃಪೆ ತೋರುತ್ತಾನಾ ಇಲ್ಲವೇ ಅಡ್ಡಿ ಮಾಡ್ತಾನಾ ವೆದರ್ ರಿಪೋರ್ಟ್ ಏನು ಹೇಳುತ್ತೆ ಅನ್ನೋದರ ಸಂಪೂರ್ಣ ವಿವರವನ್ನು ಇಲ್ಲಿ ತಿಳಿಯೋಣ.

ಆರ್‌ಸಿಬಿ-ಆರ್‌ಆರ್ ಎಲಿಮಿನೇಟರ್ ಪಂದ್ಯಕ್ಕೆ ಹವಾಮಾನ ರಿಪೋರ್ಟ್

ಅಹಮಾದಾಬಾದ್‌ನಲ್ಲಿಂದು (ಮೇ 22, ಬುಧವಾರ) ತಾಪಮಾನ 45 ಡಿಗ್ರಿ ಸೆಲ್ಸಿಯಸ್ ವರೆಗೆ ಹೆಚ್ಚಾಗುವ ಸಾಧ್ಯತೆ ಇದೆ. ಆದರೆ ಶೇಕಡಾ 0 ರಷ್ಟು ಮಳೆಯ ಸಾಧ್ಯತೆ ಇದೆ. ಆರ್‌ಸಿಬಿ-ಆರ್‌ಆರ್ ನಡುವಿನ ಎಲಿಮಿನೇಟರ್-1 ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಯಾವುದೇ ಮುನ್ಸೂಚನೆ ಇಲ್ಲ. ರಾತ್ರಿ 8 ಗಂಟೆಗೆ ತಾಪಮಾನ 42 ಡಿಗ್ರಿ ಸೆಲ್ಸಿಯಸ್, ರಾತ್ರಿ 10 ಗಂಟೆಗೆ 30 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ನಿರೀಕ್ಷೆ ಇದೆ. ಪಂದ್ಯದ ಸಮಯದಲ್ಲಿ ಆರ್ದ್ರತೆ ಸುಮಾರು ಶೇಕಡಾ 16 ರಿಂದ 21 ರಷ್ಟು ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಒಂದು ವೇಳೆ ಪಂದ್ಯಕ್ಕೆ ಮಳೆ ಅಡ್ಡಿಯಾದರೆ ಪೂರ್ಣ ಪ್ರಮಾಣದಲ್ಲಿ ಪಂದ್ಯವನ್ನು ಮುಗಿಸಲು ಹೆಚ್ಚುವರಿಯಾಗಿ 2 ಗಂಟೆಯನ್ನು ನೀಡಲಾಗಿದೆ.ೃ

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಪಿಚ್ ವರದಿ

ಜಗತ್ತಿನ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂಗಳಲ್ಲಿ ಒಂದಾಗಿರುವ ನರೇಂದ್ರ ಮೋದಿ ಮೈದಾನದಲ್ಲಿ 2024ರ ಐಪಿಎಲ್‌ನಲ್ಲಿ 7 ಪಂದ್ಯಗಳು ನಡೆದಿವೆ. ಆದರೆ ಇವುಗಳಲ್ಲಿ ಒಂದು ಮಳೆಗೆ ವಾಶ್‌ಔಟ್ ಆಗಿದೆ. ಪಿಚ್ ಇದುವರೆಗೆ ಬ್ಯಾಟರ್‌ಗಳು ಮತ್ತು ಬೌಲರ್‌ಗಳಿಗೆ ನೆರವಾಗಿದೆ. ಎರಡು ಬಾರಿ 200 ಪ್ಲಸ್ ಸ್ಕೋರ್‌ ಅನ್ನು ಬೆನ್ನಟ್ಟಲಾಗಿದೆ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ಕೇವಲ 89ಕ್ಕೆ ಆಲೌಟ್‌ಗೆ ನರೇಂದ್ರ ಮೋದಿ ಸ್ಟೇಡಿಯಂನ ಪಿಚ್ ಸಾಕ್ಷಿಯಾಗಿದೆ. ಹೀಗಾಗಿ ಬ್ಯಾಟರ್‌ಗಳು ಮತ್ತು ಬೌಲರ್‌ಗಳಿಗೆ ಪಿಚ್ ಸಮಾನವಾಗಿ ಸಹಕರಿಸುವ ಬಹಳಷ್ಟು ಸಾಧ್ಯತೆ ಇದೆ.

ಇನ್ನು 2008 ರಿಂದ ಈವರೆಗೆ ಆರ್‌ಸಿಬಿ ಮತ್ತು ಆರ್‌ಆರ್ ಒಟ್ಟು 31 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 15 ಬಾರಿ ಗೆಲುವು ಸಾಧಿಸಿದ್ದರೆ, ರಾಜಸ್ಥಾನ್ ರಾಯಲ್ಸ್ 13 ಬಾರಿ ಗೆದ್ದುಕೊಂಡಿದೆ. 3 ಪಂದ್ಯಗಳಲ್ಲಿ ಯಾವುದೇ ರೀತಿಯ ಫಲಿತಾಂಶ ಬಂದಿಲ್ಲ. ಮೊದಲು ಬ್ಯಾಟಿಂಗ್ ಮಾಡಿದಾಗ ಇತ್ತಂಡಗಳು ತಲಾ 5 ಪಂದ್ಯಗಳಲ್ಲಿ ಕೆಲುವು ಕಂಡಿವೆ. ಆರ್‌ಸಿಬಿ ವಿರುದ್ಧ ಆರ್‌ಆರ್‌ 217 ರನ್‌ಗಳ ಗರಿಷ್ಠ ಮೊತ್ತವನ್ನು ಪೇರಿಸಿದೆ. ಆರ್‌ಸಿಬಿ ಗರಿಷ್ಠ 200 ರನ್ ಗಳಿಸಿದೆ. ಆರ್‌ಸಿಬಿ ವಿರುದ್ಧ ಆರ್‌ಆರ್‌ ಅಧಿಕ ರನ್ ಚೇಸಿಂಗ್ 191. ಅದೇ ರೀತಿಯಾಗಿ ಆರ್‌ಆರ್‌ ವಿರುದ್ಧ ಆರ್‌ಸಿಬಿ ಗರಿಷ್ಠ 179 ರನ್‌ಗಳನ್ನು ಯಶಸ್ವಿಯಾಗಿ ಚೇಸ್ ಮಾಡಿ ಗೆದ್ದಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ