ನಮಗೆ ಲಡ್ಡು ತಿನ್ನಿಸಿದ್ದಾರೆ; ಪಾಕಿಸ್ತಾನ ಕ್ರಿಕೆಟ್ ತಂಡವನ್ನ ವಿದೇಶಿ ಕೋಚ್‌ಗಳು ದಾರಿತಪ್ಪಿಸುತ್ತಿದ್ದಾರೆಂದು ವಾಸಿಂ ಅಕ್ರಮ್ ಆಕ್ರೋಶ
Dec 03, 2023 12:18 PM IST
ಪಾಕಿಸ್ತಾನ ಮಾಜಿ ಕ್ರಿಕೆಟರ್ ವಾಸಿಂ ಅಕ್ರಮ್
ವಿದೇಶಿ ಕೋಚ್‌ಗಳು ಪಾಕಿಸ್ತಾನ ಕ್ರಿಕೆಟ್ ತಂಡವನ್ನು ದಾರಿ ತಪ್ಪಿಸಿದ್ದಾರೆ ಎಂದು ಮಾಜಿ ಕ್ರಿಕೆಟರ್ ವಾಸಿಂ ಅಕ್ರಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮಗೆ ಲಡ್ಡು ತನ್ನಿಸಿದ್ದಾರೆಂದು ವ್ಯಂಗ್ಯ ಮಾಡಿದ್ದಾರೆ.
ಬೆಂಗಳೂರು: ಭಾರತದಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ (ICC ODI World Cup 2023) ಪಾಕಿಸ್ತಾನ ಕ್ರಿಕೆಟ್ ತಂಡ (Pakistan Cricket Team) ಕಳಪೆ ಆಟವನ್ನು ಪ್ರದರ್ಶಿಸುವ ಮೂಲಕ 5ನೇ ಸ್ಥಾನದೊಂದಿಗೆ ಅಭಿಯಾನವನ್ನು ಮುಗಿಸಿತ್ತು. ವಿಶ್ವಕಪ್ ಆರಂಭಕ್ಕೆ ಕೆಲ ವಾರಗಳು ಇದ್ದಾಗ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಅಗ್ರ ಸ್ಥಾನದಲ್ಲಿ ಪಾಕಿಸ್ತಾನ ವಿಶ್ವಕಪ್‌ನಲ್ಲಿ ತೋರಿದ ಪ್ರದರ್ಶನ ಆ ದೇಶದ ಮಾಜಿ ಕ್ರಿಕೆಟರ್‌ಗಳನ್ನು ಸಿಡಿದೇಳುವಂತೆ ಮಾಡಿದೆ.
ಇದೇ ವಿಚಾರವಾಗಿ ಸ್ಪೋರ್ಟ್ಸ್‌ಕೀಡಾದೊಂದಿಗೆ ಮಾತನಾಡಿರುವ ಮಾಜಿ ಕ್ರಿಕೆಟರ್ ವಾಸಿಂ ಅಕ್ರಂ (Wasim Akram), ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿನ ಕೋಚ್‌ಗಳನ್ನು ದೂರಿದ್ದಾರೆ. ವಿಶ್ವಕಪ್ ಸಮಯದಲ್ಲಿ ಪಾಕ್ ತಂಡಕ್ಕೆ ವಿದೇಶಿ ತುರಬೇತುದಾರರು ಮಾರ್ಗದರ್ಶನ ನೀಡಿದ್ದಾರೆ.
‘ನಾವು ಮೂರ್ಖರಾಗುತ್ತಿದ್ದೇವೆ’
ನಮ್ಮ ವಿದೇಶಿ ಕೋಚ್‌ಗಳು ಪಾಕಿಸ್ತಾನದಲ್ಲಿ ಎಲ್ಲಾ ಸಮಯದಲ್ಲೂ ಇರೋದಿಲ್ಲ. ಅವರು ಪ್ರವಾಸಗಳಿಗೆ ಮಾತ್ರ ಬರುತ್ತಾರೆ. ಎನ್‌ಸಿಎಗೆ ಭೇಟಿ ಕೊಡೋದಿಲ್ಲ. ಯುವಕರು ಅಥವಾ ಇತರೆ ಕೋಚ್‌ಗಳಿಗೂ ಇವರು ಮಾರ್ಗದರ್ಶನ ನೀಡಲು ಪ್ರಯತ್ನಿಸುವುದಿಲ್ಲ. ನಮಗೆ ಲಡ್ಡುವನ್ನು ತಿನ್ನಿಸಿದ್ದಾರೆ. ನಾವು ಮೂರ್ಖರಾಗುತ್ತಿದ್ದೇವೆ ಎಂದು ಟೀಕಿಸಿದ್ದಾರೆ.
ಐಸಿಸಿ ಏಕದಿನ ವಿಶ್ವಕಪ್ ಸಮಯದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಕೋಚ್ ಗ್ರಾಟ್ ಬ್ರಾಡ್‌ಬರ್ನ್, ತಂಡದ ನಿರ್ದೇಶಕರಾದ ಮಿಕ್ಕಿ ಆರ್ಥರ್ ಹಾಗೂ ಬೌಲಿಂಗ್ ಕೋಚ್ ಮೊರ್ನೆ ಮಾರ್ಕೆಲ್ ಇದ್ದರು. ಈ ವಿದೇಶಿ ಸಿಬ್ಬಂದಿಯನ್ನು ಗುರಿಯಾಗಿ ಅಕ್ರಮ್ ಕಿಡಿಕಾರಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಬದಲಾವಣೆ
ವಿಶ್ವಕಪ್‌ನಿಂದ ಪಾಕಿಸ್ತಾನ ಹೊರ ಬಿದ್ದ ಬೆನ್ನಲ್ಲೇ ಬೌಲಿಂಗ್ ಕೋಚ್ ಹುದ್ದೆ ಮಾರ್ನೆ ಮಾರ್ಕೆಲ್ ರಾಜೀನಾಮೆ ನೀಡಿದ್ದರು. ಅವರ ಸ್ಥಾನಕ್ಕೆ ಉಮರ್ ಗುಲ್ ಅವರನ್ನು ನೇಮಕ ಮಾಡಲಾಗಿತ್ತು. ಉಮರ್ ಗುಲ್ ವೇಗದ ಬೌಲಿಂಗ್ ಕೋಚ್ ಆದರೆ, ಸ್ಪಿನ್ ವಿಭಾಗದ ಕೋಚ್ ಆಗಿ ಸಯೀದ್ ಅಜ್ಮಲ್ ಅವರನ್ನು ನೇಮಕ ಮಾಡಲಾಗಿದೆ.
ಪಾಕಿಸ್ತಾನ ವಿಶ್ವಕಪ್‌ನಲ್ಲಿ ಗ್ರೂಪ್ ಹಂತದಿಂದಲೇ ಹೊರಬರುತ್ತಿದ್ದಂತೆ ಅಲ್ಲಿನ ಆಡಳಿತ ಮಂಡಳಿ ಬಾರಿ ಬದಲಾವಣೆಗಳನ್ನು ಮಾಡಲಾಗಿದೆ. ಪಾಕ್ ಟೆಸ್ಟ್ ತಂಡದ ನಾಯಕರಾಗಿ ಶಾನ್ ಮಸೂದ್ ಹಾಗೂ ಟಿ20 ತಂಡಕ್ಕೆ ಶಾಹೀನ್ ಅಫ್ರಿದಿ ಅವರನ್ನು ನಾಯಕರನ್ನಾಗಿ ನೇಮಕ ಮಾಡಲಾಗಿದೆ. ಶಾನ್ ಮಸೂದ್ ನೇತೃತ್ವದ ಪರಿಷ್ಕೃತ ಹೊಸ ತಂಡ ಆಸ್ಟ್ರೇಲಿಯಾದಲ್ಲಿ ಡಿಸೆಂಬರ್ 14 ರಿಂದ ಮೂರು ಟೆಸ್ಟ್ ಪಂದ್ಯಗಳನ್ನು ಆಡಲಿದೆ.
ತ್ಯಾಗದ ಕುರಿಮರಿಯಲ್ಲ ಒಂದು ಅವಕಾಶವಷ್ಟೇ
ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ ಟೆಸ್ಟ್ ಪಂದ್ಯದಲ್ಲಿ ಸರಿಯಾದ ಪ್ರದರ್ಶನ ನೀಡದಿದ್ದರೆ ನಿಮ್ಮನ್ನು ತ್ಯಾಗದ ಕುರಿಮರಿ ಮಾಡುತ್ತಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಶಾನ್ ಮಸೂದ್, ನಾವು ಇದನ್ನು ಒಂದು ಅವಕಾಶವಾಗಿ ನೋಡುತ್ತಿದ್ದೇವೆ. ಹಿಂದೆ ಏನೇ ಆಗಿದ್ದರೂ ನಾವು ಅಲ್ಲಿಗೆ ಹೋಗಿ ಗೆಲುವಿಗಾಗಿ ಪ್ರಯತ್ನಿಸಲು ನಮಗೆ ಅವಕಾಶ ಇದೆ. ಪಾಕಿಸ್ತಾನಕ್ಕೆ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್ ಶಿಫ್‌ನಲ್ಲಿ ಸಕರಾತ್ಮಕ ಫಲಿತಾಂಶವನ್ನು ಪಡೆಯಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ.