logo
ಕನ್ನಡ ಸುದ್ದಿ  /  ಕ್ರಿಕೆಟ್  /  ಸೂಪರ್​ಸ್ಟಾರ್ಸ್​ನ ಹೊಂದಿರೋದಲ್ಲ ಮುಖ್ಯ, ಇದನ್ನೂ ಅನುಕರಿಸಬೇಕು; ಟ್ರೋಫಿ ಬರ ನೀಗಿಸಲು ಬ್ರಿಯಾನ್ ಲಾರಾ ಉಪಯುಕ್ತ ಸಲಹೆ

ಸೂಪರ್​ಸ್ಟಾರ್ಸ್​ನ ಹೊಂದಿರೋದಲ್ಲ ಮುಖ್ಯ, ಇದನ್ನೂ ಅನುಕರಿಸಬೇಕು; ಟ್ರೋಫಿ ಬರ ನೀಗಿಸಲು ಬ್ರಿಯಾನ್ ಲಾರಾ ಉಪಯುಕ್ತ ಸಲಹೆ

Prasanna Kumar P N HT Kannada

Jun 01, 2024 01:24 AM IST

google News

ಭಾರತ ಎಷ್ಟು ಸೂಪರ್​ಸ್ಟಾರ್ಸ್ ಹೊಂದಿದ್ರೇನು; ಟ್ರೋಫಿ ಬರ ನೀಗಿಸಲು ದ್ರಾವಿಡ್​ಗೆ ಬ್ರಿಯಾನ್ ಲಾರಾ ಉಪಯುಕ್ತ ಸಲಹೆ

    • Brian lara on Rahul Dravid: ಮುಂಬರುವ ಟಿ20 ವಿಶ್ವಕಪ್​ 2024 ಟೂರ್ನಿಯಲ್ಲಿ ಭಾರತ ತಂಡವು ತನ್ನ ದೀರ್ಘಕಾಲದ ಐಸಿಸಿ ಟ್ರೋಫಿ ಬರವನ್ನು ಹೇಗೆ ಕೊನೆಗೊಳಿಸಬಹುದು ಎಂದು ಬ್ರಿಯಾನ್ ಲಾರಾ ರಾಹುಲ್ ದ್ರಾವಿಡ್ ಅವರಿಗೆ ಸಲಹೆ ನೀಡಿದ್ದಾರೆ.
ಭಾರತ ಎಷ್ಟು ಸೂಪರ್​ಸ್ಟಾರ್ಸ್ ಹೊಂದಿದ್ರೇನು; ಟ್ರೋಫಿ ಬರ ನೀಗಿಸಲು ದ್ರಾವಿಡ್​ಗೆ ಬ್ರಿಯಾನ್ ಲಾರಾ ಉಪಯುಕ್ತ ಸಲಹೆ
ಭಾರತ ಎಷ್ಟು ಸೂಪರ್​ಸ್ಟಾರ್ಸ್ ಹೊಂದಿದ್ರೇನು; ಟ್ರೋಫಿ ಬರ ನೀಗಿಸಲು ದ್ರಾವಿಡ್​ಗೆ ಬ್ರಿಯಾನ್ ಲಾರಾ ಉಪಯುಕ್ತ ಸಲಹೆ

2024ರ ಟಿ20 ವಿಶ್ವಕಪ್ ಟೂರ್ನಿ ಬಳಿಕ ರಾಹುಲ್ ದ್ರಾವಿಡ್ (Rahul Dravid) ಅವರ ಅಧಿಕಾರಾವಧಿ ಕೊನೆಗೊಳ್ಳಲಿದೆ. ಅಂಡರ್-19 ತಂಡ ಅಥವಾ ಭಾರತ ಎ (India A) ತಂಡದೊಂದಿಗೆ ತಮ್ಮ ಅಧಿಕಾರಾವಧಿಯಲ್ಲಿ ಭಾರತದ ಲೆಜೆಂಡ್ ಯಶಸ್ಸನ್ನು ಗಳಿಸಿದ ಕಾರಣ 2022ರಲ್ಲಿ ರವಿ ಶಾಸ್ತ್ರಿ (Ravi Shastri) ಸ್ಥಾನ ತುಂಬಿದ್ದರು. ಆದರೆ ದ್ರಾವಿಡ್ ರಾಷ್ಟ್ರೀಯ ತಂಡವನ್ನು ಐಸಿಸಿ ಪ್ರಶಸ್ತಿ ವೈಭವಕ್ಕೆ ಮುನ್ನಡೆಸಲು ವಿಫಲರಾಗಿದ್ದಾರೆ. ಆದರೆ, ಜೂನ್ 1ರಿಂದ ಪ್ರಾರಂಭವಾಗುವ ಟಿ20 ವಿಶ್ವಕಪ್​ನಲ್ಲಿ ಭಾರತದ ದೀರ್ಘಕಾಲದ ಟ್ರೋಫಿ ಬರವನ್ನು ಕೊನೆಗೊಳಿಸಲು ಮತ್ತು ಅವರ ಅಧಿಕಾರಾವಧಿ ಉನ್ನತ ಮಟ್ಟದಲ್ಲಿ ಕೊನೆಗೊಳಿಸಲು ಅವರಿಗಿದು ಕೊನೆಯ ಅವಕಾಶ ಸಿಗಲಿದೆ.

ವೆಸ್ಟ್ ಇಂಡೀಸ್​ನ ಮಾಜಿ ಕ್ರಿಕೆಟಿಗ ಬ್ರಿಯಾನ್ ಲಾರಾ ಅವರು ದ್ರಾವಿಡ್​ ಅವರಿಗೆ ಸ್ಪಷ್ಟ ಸಂದೇಶವನ್ನು ಕಳುಹಿಸಿದ್ದು, ಟೂರ್ನಿಯ ಅಂತಿಮ ಹಂತಗಳಿಗೆ ಯೋಜನೆಯನ್ನು ರೂಪಿಸುವಂತೆ ಸಲಹೆ ನೀಡಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ವಿಂಡೀಸ್ ಲೆಜೆಂಡ್, ಭಾರತ ತಂಡದಲ್ಲಿ ದೊಡ್ಡ ಹೆಸರುಗಳಿದ್ದರೂ ವಿಶ್ವಕಪ್ ಗೆಲ್ಲುವ ಬಗ್ಗೆ ಸ್ಪಷ್ಟ ಕಾರ್ಯತಂತ್ರವನ್ನು ಹೊಂದುವತ್ತ ಗಮನ ಹರಿಸಬೇಕಾಗಿದೆ ಎಂದು ಹೇಳಿದ್ದಾರೆ.

ದ್ರಾವಿಡ್​ಗೆ ಸಲಹೆ ನೀಡಿದ ಲಾರಾ

‘ಹಿಂದಿನ ವಿಶ್ವಕಪ್​ಗಳಲ್ಲಿ ಭಾರತ ತಂಡವನ್ನು ಹೊರಗಿನಿಂದ ನೋಡಿದರೆ, ತಂಡದಲ್ಲಿ ಅಂತಿಮ ಯೋಜನೆಯ ಕೊರತೆ ಇರುವುದು ಕಂಡು ಬರುತ್ತಿದೆ ಎಂದು ಭಾವಿಸುತ್ತೇನೆ. ನೀವು ಎಷ್ಟು ಸೂಪರ್​ಸ್ಟಾರ್ಸ್​ ಹೊಂದಿದ್ದೀರಿ ಎಂಬುದು ಮುಖ್ಯವಲ್ಲ. ಈ ವಿಶ್ವಕಪ್ ಅನ್ನು ನೀವು ಹೇಗೆ ಗೆಲ್ಲುತ್ತೀರಿ, ನೀವು ಯಾವ ಯೋಜನೆಗಳನ್ನು ಹೊಂದಲಿದ್ದೀರಿ, ನಿಮ್ಮ ಇನ್ನಿಂಗ್ಸ್​ ಅಥವಾ ದಾಳಿ ಹೇಗೆ ರೂಪಿಸಲಿದ್ದೀರಿ ಎಂಬುದು ಮುಖ್ಯವಾಗಿದೆ. ತಮ್ಮ ಆಟಗಾರರನ್ನು ಒಟ್ಟುಗೂಡಿಸಬೇಕು’ ಎಂದು ದ್ರಾವಿಡ್​ಗೆ ಸಲಹೆ ನೀಡಿದ್ದಾರೆ.

ಭಾರತ ತಂಡ ಈ ಬಾರಿ ಟಿ20 ವಿಶ್ವಕಪ್ ಗೆಲ್ಲಲು ಸಾಕಷ್ಟು ಯೋಜನೆ ರೂಪಿಸಬಹುದು ಎಂದು ನಾನು ಭಾವಿಸುತ್ತೇನೆ ಎಂದು ಐಸಿಸಿ ಈವೆಂಟ್​ಗೆ ಮುನ್ನ ಮೆನಿನ್ ಬ್ಲೂ ಬಗ್ಗೆ ಲಾರಾ ಹೇಳಿದ್ದಾರೆ. ದ್ರಾವಿಡ್ ಮುಖ್ಯಕೋಚ್ ಆಗಿದ್ದ ಅವಧಿಯಲ್ಲಿ ಭಾರತ ಆಡಲಿರುವ ಎರಡನೇ ಟಿ20 ವಿಶ್ವಕಪ್ ಇದಾಗಿದೆ. 2022ರಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಸೆಮಿಫೈನಲ್ ತಲುಪಿತ್ತು. ಒಟ್ಟಾರೆಯಾಗಿ, ಈ ಟಿ20 ಟೂರ್ನಿ ಇತಿಹಾಸದಲ್ಲಿ ಭಾರತವು ಕೇವಲ ಒಂದು ಪ್ರಶಸ್ತಿಯನ್ನು ಹೊಂದಿದೆ.

ಎಂಎಸ್ ಧೋನಿ ನಾಯಕತ್ವದಲ್ಲಿ ಉದ್ಘಾಟನಾ ವರ್ಷದಲ್ಲಿ ಭಾರತ (2007) ಗೆದ್ದಿದೆ. ಅಂದಿನಿಂದ ಭಾರತವು ಎರಡು ಬಾರಿ ಸೆಮಿಫೈನಲ್ ತಲುಪಿದೆ. 1 ಬಾರಿ ರನ್ನರ್​ಅಪ್​ ಆಗಿದೆ.. ನಾಲ್ಕು ಸಲ ಲೀಗ್​ನಿಂದ ಹೊರಬಿದ್ದಿದೆ. ಜೂನ್ 5 ರಂದು ನ್ಯೂಯಾರ್ಕ್​​ನ ನಸ್ಸೌ ಕೌಂಟಿ ಇಂಟರ್​​ನ್ಯಾಷನಲ್​ ಕ್ರಿಕೆಟ್ ಸ್ಟೇಡಿಯಂನಲ್ಲಿ ಐರ್ಲೆಂಡ್ ವಿರುದ್ಧ ಭಾರತ ತನ್ನ ಟಿ20 ವಿಶ್ವಕಪ್ ಅಭಿಯಾನ ಪ್ರಾರಂಭಿಸಲಿದೆ. ನಂತರ ಜೂನ್ 9 ರಂದು ಅದೇ ಸ್ಥಳದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.

ಜೂನ್ 1ರಂದು ಭಾರತ vs ಬಾಂಗ್ಲಾದೇಶ ಅಭ್ಯಾಸ ಪಂದ್ಯ

ಭಾರತ, ಐರ್ಲೆಂಡ್ ಮತ್ತು ಪಾಕಿಸ್ತಾನ ನಂತರ ಸಹ-ಆತಿಥೇಯ ಯುಎಸ್ಎ ಮತ್ತು ಕೆನಡಾ ಎ ಗುಂಪಿನಲ್ಲಿ ಸ್ಥಾನ ಪಡೆದಿವೆ. ಜನವರಿಯಲ್ಲಿ ತವರಿನಲ್ಲಿ ಕೊನೆಯ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದ ಭಾರತ, ಜೂನ್ 1 ರಂದು ನ್ಯೂಯಾರ್ಕ್​ನಲ್ಲಿ ಬಾಂಗ್ಲಾದೇಶ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ