ನಮ್ಮ ಎಲ್ಲಾ ಸ್ಪಿನ್ ಅಸ್ತ್ರ ಪ್ರಯೋಗಿಸಲು ಹಿಂಜರಿಯಲ್ಲ; 2ನೇ ಟೆಸ್ಟ್‌ಗೂ ಮುನ್ನ ಭಾರತಕ್ಕೆ ಬ್ರೆಂಡನ್ ಮೆಕಲಮ್ ಎಚ್ಚರಿಕೆ
Jan 31, 2024 02:57 PM IST
2ನೇ ಟೆಸ್ಟ್‌ಗೂ ಮುನ್ನ ಭಾರತಕ್ಕೆ ಬ್ರೆಂಡನ್ ಮೆಕಲಮ್ ಎಚ್ಚರಿಕೆ
- Brendon McCullum: ಭಾರತ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ, ವಿಶಾಖಪಟ್ಟಣ ಪಿಚ್ ಸ್ಪಿನ್‌ಗ ನೆರವಾದರೆ, ಇಂಗ್ಲೆಂಡ್ ಕ್ರಿಕೆಟ್ ತಂಡವು ತನ್ನ ಎಲ್ಲಾ ಸ್ಪಿನ್ನರ್‌ಗಳನ್ನು ಆಡಿಸಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ಕೋಚ್ ಬ್ರೆಂಡಬ್ ಮೆಕಲಮ್ ಹೇಳಿದ್ದಾರೆ.
ಹೈದರಾಬಾದ್‌ನಲ್ಲಿ ನಡೆದ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ (India vs England) ಅಚ್ಚರಿಯ ಸೋಲು ಕಂಡಿತು. ಸೋಲಿನ ಬಳಿಕ ಭಾರತ ತಂಡಕ್ಕೆ ಗಾಯದ ಹೊಡೆತ ಕೂಡಾ ಬಿದ್ದಿದ್ದು, ಮುಂದಿನ ಪಂದ್ಯಕ್ಕೂ ಮುನ್ನ ಆಡುವ ಬಳಗದ ಕುರಿತು ಚಿಂತೆ ಮಾಡುವಂತಾಗಿದೆ. ವಿಶಾಖಪಟ್ಟಣದಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿಯೂ ಪಿಚ್ ಸ್ಪಿನ್ನರ್‌ಗಳಿಗೆ ನೆರವಾಗುವ ಸಾಧ್ಯತೆ ಇದ್ದು, ಆಂಗ್ಲ ಬಳಗವು ಧೈರ್ಯದಿಂದಿದೆ. ಈ ನಡುವೆ ಇಂಗ್ಲೆಂಡ್ ಕೋಚ್ ಬ್ರೆಂಡನ್ ಮೆಕಲಮ್ (Brendon McCullum) ಅವರು, ತಮ್ಮ ತಂಡವು ಭಾರತದ ಸವಾಲನ್ನು ಸ್ವೀಕರಿಸಲು ಹಿಂಜರಿಯುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಪಿಚ್ ಸ್ಪಿನ್ನರ್‌ಗಳಿಗೆ ನೆರವಾಗಿತ್ತು. ಇದೀಗ ವಿಶಾಖಪಟ್ಟಣದಲ್ಲಿ ನಡೆಯಲಿರುವ ಮುಂಬರುವ ಪಂದ್ಯಕ್ಕೆ ಸಿದ್ಧವಾಗಲಿರುವ ಪಿಚ್‌ನ ಸ್ವರೂಪದ ಬಗ್ಗೆಯೂ ಊಹಾಪೋಹಗಳಿವೆ. ವಿಶಾಖಪಟ್ಟಣದ ಪಿಚ್ ಹೈದರಾಬಾದ್ ಪಿಚ್‌ಹಿಂತಲೂ ಹೆಚ್ಚಾಗಿ ಸ್ಪಿನ್ನರ್‌ಗಳಿಗೆ ನೆರವಾಗಲಿದೆ ಎಂದು ಹೇಳಲಾಗಿದೆ. ಹೀಗಾಗಿ ಉಭಯ ತಂಡಗಳು ಕೂಡಾ ತಮ್ಮ ಆಡುವ ಬಳಗದಲ್ಲಿ ಸ್ಪಿನ್ನರ್‌ಗಳ ಸಂಖೆಯ ಹೆಚ್ಚಿಸಲು ಮುಂದಾಗಿವೆ.
ಇದನ್ನೂ ಓದಿ | IND vs ENG: ಭಾರತ ತಂಡಕ್ಕೆ ಗಾಯದ ಮೇಲೆ ಬರೆ; 2ನೇ ಟೆಸ್ಟ್‌ನಿಂದ ಜಡೇಜಾ ಜೊತೆ ರಾಹುಲ್ ಕೂಡಾ ಹೊರಕ್ಕೆ; ತಂಡ ಸೇರಿಕೊಂಡ ಮೂವರು
ಸದ್ಯ ಭಾರತ ತಂಡದಿಂದ ಗಾಯಗೊಂಡಿರುವ ರವೀಂದ್ರ ಜಡೇಜಾ ಮತ್ತು ಕೆಎಲ್ ರಾಹುಲ್ ತಂಡದಿಂದ ಹೊರಬಿದ್ದಿದ್ದಾರೆ. ಅವರು ಬದಲಿಗೆ ಸರ್ಫರಾಜ್ ಖಾನ್, ಸೌರಭ್ ಕುಮಾರ್ (ಎಡಗೈ ಬ್ಯಾಟರ್) ಹಾಗೂ ವಾಷಿಂಗ್ಟನ್ ಸುಂದರ್ (ಆಲ್‌ರೌಂಡರ್) ತಂಡಕ್ಕೆ ಆಯ್ಕೆಯಾಗಿದ್ದಾರೆ.
ತಂಡಕ್ಕೆ ಶೋಯೆಬ್ ಬಶೀರ್
ಈ ನಡುವೆ ಇಂಗ್ಲೆಂಡ್ ಕೋಚ್ ಬ್ರೆಂಡನ್ ಮೆಕಲಮ್, ತಂಡದ ಸ್ಪಿನ್ ದಾಳಿ ಗಟ್ಟಿಗೊಳಿಸುವ ಸುಳಿವು ನೀಡಿದ್ದಾರೆ. ಶೋಯೆಬ್ ಬಶೀರ್ ತಂಡ ಸೇರಿಕೊಳ್ಳಲಿದ್ದಾರೆ ಎಂದು ಮೆಕಲಮ್ ನ್ಯೂಜಿಲ್ಯಾಂಡ್‌ನ ಸೆನ್ಜ್ ರೇಡಿಯೋಗೆ ತಿಳಿಸಿದ್ದಾರೆ. ವೀಸಾ ವಿಳಂಬದಿಂದಾಗಿ ಮೊದಲ ಟೆಸ್ಟ್‌ನಿಂದ ಹೊರಗುಳಿದಿದ್ದದ ಶೋಯೆಬ್ ಬಶೀರ್, ಈಗಾಗಲೇ ತಂಡವನ್ನು ಸೇರಿಕೊಂಡಿದ್ದಾರೆ. ವಿಶಾಖಪಟ್ಟಣ ಪಿಚ್ ಪರಿಸ್ಥಿತಿ ಸ್ಪಿನ್ನರ್‌ಗಳಿಗೆ ಅನುಕೂಲಕರವಾಗಿದ್ದರೆ ಅವರು ಆಡುವ ಬಳಗ ಸೇರಿಕೊಳ್ಳಬಹುದು ಎಂದು ಮೆಕಲಮ್ ಹೇಳಿದ್ದಾರೆ.
ಇದನ್ನೂ ಓದಿ | ಸರ್ಫರಾಜ್ vs ಪಾಟೀದಾರ್ vs ಸುಂದರ್; ಕೊಹ್ಲಿ-ಜಡೇಜಾ ಸ್ಥಾನಕ್ಕೆ ಯಾರು? ಎರಡನೇ ಟೆಸ್ಟ್‌ಗೆ 4 ಗೊಂದಲ
“ಬಶೀರ್ ಅವರು ಟಾಮ್ ಹಾರ್ಟ್ಲಿಯಂತೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಹೆಚ್ಚು ಅನುಭವ ಹೊಂದಿಲ್ಲ. ಆದರೆ ಅವರ ಸ್ಪಿನ್ ಕೌಶಲ್ಯವು ನಮಗೆ ಸಹಾಯ ಮಾಡಬಹುದೆಂದು ನಾವು ಭಾವಿಸಿದ್ದೇವೆ. ಆಟಗಾರರು ಯುವ ಆಟಗಾರರಿಗೆ ಹುರಿದುಂಬಿಸಿ ಮೊದಲ ಟೆಸ್ಟ್ ಗೆಲುವಿಗೆ ಸಾಕ್ಷಿಯಾದರು. ಮುಂದಿನ ಟೆಸ್ಟ್‌ನಲ್ಲಿ ಮೊದಲ ಟೆಸ್ಟ್‌ನಂತೆ ವಿಕೆಟ್‌ಗಳು ಸ್ಪಿನ್‌ಗ ನೆರವಾದರೆ, ನಾವು ಎಲ್ಲಾ ಸ್ಪಿನ್ನರ್‌ಗಳನ್ನು ಕೂಡಾ ಆಡಿಸಲು ಹೆದರುವುದಿಲ್ಲ. ನಾವು ಈಗಾಗಲೇ ಪಡೆದಿರುವ ಸಮತೋಲನವನ್ನು ಮತ್ತೆ ಪಡೆಯಲು ಹಿಂದೆಮುಂದೆ ನೋಡುವುದಿಲ್ಲ,” ಎಂದು ಮೆಕಲಮ್ ಹೇಳಿದ್ದಾರೆ.
ಇದನ್ನೂ ಓದಿ | ಎನ್ಸಿಎ ತಲುಪಿದ ರವೀಂದ್ರ ಜಡೇಜಾ; ಮುಂದಿನ ಪಂದ್ಯಕ್ಕಲ್ಲ, ಉಳಿದ ಟೆಸ್ಟ್ ಸರಣಿಗೂ ಆಲ್‌ರೌಂಡರ್ ಅನುಮಾನ
“ನಾವು ಮೈದಾನದ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳುತ್ತೇವೆ. ಇಲ್ಲಿ ಕೆಲವು ಪಿಚ್‌ಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಆದರೆ ನಾವು ಸೂಕ್ತ ನಿರ್ಧಾರ ತೆಗೆದುಕೊಂಡು ಅದಕ್ಕೆ ಬದ್ಧರಾಗಲು ಪ್ರಯತ್ನಿಸುತ್ತೇವೆ,” ಎಂದು ಅವರು ಹೇಳಿದ್ದಾರೆ.
(This copy first appeared in Hindustan Times Kannada website. To read more like this please logon to kannada.hindustantime.com )