logo
ಕನ್ನಡ ಸುದ್ದಿ  /  ಕ್ರಿಕೆಟ್  /  Eng Vs Pak Highlights: ಇಂಗ್ಲೆಂಡ್​ಗೆ 93 ರನ್​ಗಳ ಭರ್ಜರಿ ಗೆಲುವು, ಪಾಕಿಸ್ತಾನಕ್ಕೆ ಮುಖಭಂಗ

ENG vs PAK Highlights: ಇಂಗ್ಲೆಂಡ್​ಗೆ 93 ರನ್​ಗಳ ಭರ್ಜರಿ ಗೆಲುವು, ಪಾಕಿಸ್ತಾನಕ್ಕೆ ಮುಖಭಂಗ

Prasanna Kumar P N HT Kannada

Nov 11, 2023 10:01 PM IST

google News

ಇಂಗ್ಲೆಂಡ್‌-ಪಾಕಿಸ್ತಾನ ವಿಶ್ವಕಪ್‌ ಪಂದ್ಯದ ಲೈವ್‌ ಅಪ್ಡೇಟ್ಸ್.

    • England vs Pakistan Cricket World Cup 2023 Highlights: ಏಕದಿನ ವಿಶ್ವಕಪ್‌ 2023ರ‌ 44ನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ ಭರ್ಜರಿ ಗೆಲುವು ದಾಖಲಿಸಿದೆ. ಈ ಜಯದೊಂದಿಗೆ ವಿಶ್ವಕಪ್​ ಅಭಿಯಾನವನ್ನು ಮುಗಿಸಿದೆ.
ಇಂಗ್ಲೆಂಡ್‌-ಪಾಕಿಸ್ತಾನ ವಿಶ್ವಕಪ್‌ ಪಂದ್ಯದ ಲೈವ್‌ ಅಪ್ಡೇಟ್ಸ್.
ಇಂಗ್ಲೆಂಡ್‌-ಪಾಕಿಸ್ತಾನ ವಿಶ್ವಕಪ್‌ ಪಂದ್ಯದ ಲೈವ್‌ ಅಪ್ಡೇಟ್ಸ್.

England vs Pakistan Cricket World Cup 2023 Highlights: ಏಕದಿನ ವಿಶ್ವಕಪ್‌ 2023ರ‌ 44ನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ ಭರ್ಜರಿ ಗೆಲುವು ದಾಖಲಿಸಿದೆ. 93 ರನ್​ಗಳೊಂದಿಗೆ ಜಯ ಸಾಧಿಸಿದ ಜೋಸ್ ಬಟ್ಲರ್ ಪಡೆ, ವಿಶ್ವಕಪ್​ ಅಭಿಯಾನವನ್ನು ಮುಗಿಸಿದೆ. ಅಲ್ಲದೆ, 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಅಧಿಕೃತವಾಗಿ ಅರ್ಹತೆ ಪಡೆದಿದೆ. ಆದೆರೆ ಪಾಕಿಸ್ತಾನ ಸೋಲಿನೊಂದಿಗೆ ಅಭಿಯಾನ ಮುಗಿಸಿದೆ. ಉಭಯ ತಂಡಗಳಿಗೂ ಇದು ಕೊನೆಯ ಲೀಗ್ ಪಂದ್ಯವಾಗಿತ್ತು. ಕೋಲ್ಕತ್ತಾದ ಈಡನ್ ಗಾರ್ಡನ್ಸ್​ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್​, 50 ಓವರ್​​​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 337 ರನ್​ಗಳ ಬೃಹತ್ ಮೊತ್ತ ಪೇರಿಸಿತು. ಬೆನ್​ ಸ್ಟೋಕ್ಸ್​ 84 ರನ್, ಜೋ ರೂಟ್ 60 ರನ್ ಸಿಡಿಸಿ ಮಿಂಚಿದರು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ 44.3 ಓವರ್​​ಗಳಲ್ಲಿ 244 ರನ್​ಗಳಿಗೆ ಆಲೌಟ್​ ಆಯಿತು.

ಇಂಗ್ಲೆಂಡ್​ಗೆ ಭರ್ಜರಿ ಗೆಲುವು

09.34 PM: ENG vs PAK ODI World Cup 2023 Live Score, PAK 244/10 (43.3): ಕೊನೆಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸುತ್ತಿದ್ದ ಹ್ಯಾರಿಸ್ ರೌಫ್ 35 ರನ್ ಗಳಿಸಿ ಔಟಾದರು. ಇದರೊಂದಿಗೆ ಪಾಕಿಸ್ತಾನ 244 ರನ್​ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್​​ 93 ರನ್​ಗಳ ಭರ್ಜರಿ ಗೆಲುವು ಸಾಧಿಸಿತು.

ಶಾಹೀನ್ ಅಫ್ರಿದಿ ಔಟ್

09.04 PM: ENG vs PAK ODI World Cup 2023 Live Score, PAK 191-9 (37.4): 25 ರನ್ ಗಳಿಸಿದ ಶಾಹೀನ್ ಅಫ್ರಿದಿ ಔಟಾದರು. ಇದರೊಂದಿಗೆ ಪಾಕ್ 9ನೇ ವಿಕೆಟ್​ ಕಳೆದುಕೊಂಡಿತು. 

ಅರ್ಧಶತಕ ಸಿಡಿಸಿ ಸಲ್ಮಾನ್ ಔಟ್

08.58 PM: ENG vs PAK ODI World Cup 2023 Live Score, PAK 186-8 (36.4): ಹಾಫ್ ಸೆಂಚುರಿ ಬಾರಿಸಿ ತಂಡಕ್ಕೆ ಆಸರೆಯಾಗುತ್ತಿದ್ದ ಆಘಾ ಸಲ್ಮಾನ್, ವಿಕೆಟ್ ಒಪ್ಪಿಸಿದರು. 51 ರನ್ ಸಿಡಿಸಿದ ಸಲ್ಮಾನ್, ಡೇವಿಡ್ ವಿಲ್ಲಿ ಬೌಲಿಂಗ್​ನಲ್ಲಿ ಔಟಾದರು.

ಶಾದಾಬ್ ಔಟ್

08.39 PM: ENG vs PAK ODI World Cup 2023 Live Score, PAK 150/7(31.4): ಶಾದಾಬ್ ಖಾನ್ ಔಟಾಗಿ ನಿರಾಸೆ ಮೂಡಿಸಿದ್ದಾರೆ. ಆದಿಲ್ ರಶೀದ್ ಮತ್ತೊಂದು ವಿಕೆಟ್​ ಪಡೆದಿದ್ದಾರೆ. ಸೋಲಿನತ್ತ ಪಾಕಿಸ್ತಾನ ಮುಖ ಮಾಡಿದೆ.

ಇಫ್ತಿಕಾರ್ ಅಹ್ಮದ್ ಔಟ್

08.35 PM: ENG vs PAK ODI World Cup 2023 Live Score, PAK 149/6 (31): ಪಾಕಿಸ್ತಾನ ತನ್ನ ಆರನೇ ವಿಕೆಟ್ ಕಳೆದುಕೊಂಡಿದೆ. ಸ್ಪೋಟಕ ಆಟಗಾರ ಇಫ್ತಿಕಾರ ಅಹ್ಮದ್ 3 ರನ್ ಸಿಡಿಸಿ ಮೊಯಿನ್ ಅಲಿ ಬೌಲಿಂಗ್​​ನಲ್ಲಿ ಔಟಾದರು.

ಸೌದ್ ಶಕೀಲ್ ಔಟ್

08.25 PM: ENG vs PAK ODI World Cup 2023 Live Score, PAK 135/5 (29): ಸೌದ್ ಶಕೀಲ್ ವಿಕೆಟ್ ಪತನಗೊಂಡಿದೆ. 37 ಎಸೆತಗಳಲ್ಲಿ 29 ರನ್ ಗಳಿಸಿ ಆದಿಲ್ ರಶೀದ್ ಬೌಲಿಂಗ್​​ನಲ್ಲಿ ಔಟಾದರು. ಪಾಕ್ ಗೆಲ್ಲಲು 203 ರನ್ ಬೇಕಿದೆ.

ರಿಜ್ವಾನ್ ಔಟ್

08.01 PM: ENG vs PAK ODI World Cup 2023 Live Score, PAK 100/4 (22.3): ತಂಡಕ್ಕೆ ಆಸರೆಯಾಗುತ್ತಿದ್ದ ಮೊಹಮ್ಮದ್ ರಿಜ್ವಾನ್ ಔಟಾದರು. 51 ಎಸೆತಗಳಲ್ಲಿ 36 ರನ್ ಸಿಡಿಸಿ ಮೊಯಿನ್ ಅಲಿ ಬೌಲಿಂಗ್​​ನಲ್ಲಿ ವಿಕೆಟ್ ಒಪ್ಪಿಸಿದರು.

ಬಾಬರ್ ಔಟ್

07.26 PM: ENG vs PAK ODI World Cup 2023 Live Score, PAK 61/3 (14): ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಮತ್ತೊಮ್ಮೆ ನಿರಾಸೆ ಮೂಡಿಸಿದ್ದಾರೆ. ಗಸ್ ಆಟ್ಕಿನ್​ಸನ್​ ಬೌಲಿಂಗ್​​ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದ ಬಾಬರ್, 45 ಎಸೆತಗಳಲ್ಲಿ 38 ರನ್ ಗಳಿಸಿದರು. ಅವರ ಇನ್ನಿಂಗ್ಸ್​ನಲ್ಲಿ 6 ಬೌಂಡರಿಗಳಿವೆ.

ಅಧಿಕೃತವಾಗಿ ಹೊರಬಿದ್ದ ಪಾಕ್

06.38 PM: ENG vs PAK ODI World Cup 2023 Live Score, PAK 30/2 (6.4): ಪಾಕಿಸ್ತಾನ ಅಧಿಕೃತವಾಗಿ ಏಕದಿನ ವಿಶ್ವಕಪ್ ಟೂರ್ನಿಯಿಂದ ಹೊರ ಬಿದ್ದಿದೆ. 6.4 ಓವರ್​​​ಗಳಲ್ಲಿ ಬೃಹತ್ ಮೊತ್ತವನ್ನು ಬೆನ್ನಟ್ಟಬೇಕಿತ್ತು. ಆದರೆ, ಅದು ಸಾಧ್ಯವಾಗದ ಕಾರಣ ಸೆಮೀಸ್ ಪ್ರವೇಶಿಸಲು ಪಾಕ್ ವಿಫಲವಾಯಿತು. ಇದರೊಂದಿಗೆ ನ್ಯೂಜಿಲೆಂಡ್ 4ನೇ ತಂಡವಾಗಿ ಸೆಮಿಫೈನಲ್​ಗೆ ಎಂಟ್ರಿಕೊಟ್ಟಿದೆ.

ಫಕಾರ್ ಜಮಾನ್ ಔಟ್

06.38 PM: ENG vs PAK ODI World Cup 2023 Live Score, PAK 11/2 (3): ಪಾಕ್ ಮತ್ತೊಂದು ವಿಕೆಟ್ ಕಳೆದುಕೊಂಡಿದೆ. ಫಕರ್ ಜಮಾನ್ 1 ರನ್ ಗಳಿಸಿ ನಿರಾಸೆ ಮೂಡಿಸಿದರು. 10 ರನ್​ಗೆ 2 ವಿಕೆಟ್ ಕಳೆದುಕೊಂಡಿರುವ ಪಾಕ್ ಸಂಕಷ್ಟಕ್ಕೆ ಸಿಲುಕಿದೆ.

ಆರಂಭಿಕ ಆಘಾತ

06.28 PM: ENG vs PAK ODI World Cup 2023 Live Score, PAK 9/1 (1): ಇನ್ನಿಂಗ್ಸ್ ಆರಂಭದ 2ನೇ ಎಸೆತದಲ್ಲೇ ಪಾಕಿಸ್ತಾನ ವಿಕೆಟ್ ಕಳೆದುಕೊಂಡಿದೆ. ಅಬ್ದುಲ್ಲಾ ಶಫೀಕ್ ಡಕೌಟ್ ಆಗಿ ಹೊರ ನಡೆದರು. ಡೇವಿಡ್ ವಿಲ್ಲಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಬಳಿಕ ಕಣಕ್ಕಿಳಿದ ಬಾಬರ್ ಎರಡು ಬೌಂಡರಿ ಸಿಡಿಸಿದರು.

ಬೃಹತ್ ಮೊತ್ತ ಕಲೆ ಹಾಕಿದ ಇಂಗ್ಲೆಂಡ್

05.58 PM: ENG vs PAK ODI World Cup 2023 Live Score, ENG 337/9 (50): ಇಂಗ್ಲೆಂಡ್ ಇನ್ನಿಂಗ್ಸ್​ ಮುಕ್ತಾಯಗೊಂಡಿದೆ. 50 ಓವರ್​​​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 337 ರನ್ ಕಲೆ ಹಾಕಿದೆ. ಕೊನೆಯ ಓವರ್​​ನಲ್ಲಿ ಇಂಗ್ಲೆಂಡ್ 15 ರನ್ ಕಲೆ ಹಾಕಿತು. ಪಾಕ್ ಗೆಲ್ಲಲು 338 ರನ್ ಬೇಕಿದೆ. 6.2 ಓವರ್​​​ಗಳಲ್ಲಿ ಈ ಗುರಿಯನ್ನು ಬೆನ್ನಟ್ಟಿದರೆ ಪಾಕ್ ಸೆಮಿಫೈನಲ್​​ಗೆ ಪ್ರವೇಶಿಸಲಿದೆ.

ಮೊಯಿನ್ ಅಲಿ ಔಟ್

05.42 PM: ENG vs PAK ODI World Cup 2023 Live Score, ENG 317/5 (48.4): ಮೊಯಿನ್ ಅಲಿ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಕೇವಲ 8 ರನ್ ಗಳಿಸಿ ಔಟಾದರು.

ಬಟ್ಲರ್ ಔಟ್

05.35 PM: ENG vs PAK ODI World Cup 2023 Live Score, ENG 302/5 (46.4): ಬ್ರೂಕ್ ಬೆನ್ನಲ್ಲೇ ಜೋಸ್ ಬಟ್ಲರ್​ ಕೂಡ ನಿರ್ಗಮಿಸಿದರು. ಅವರು ರನೌಟ್​ ಆಗಿ ಹೊರ ನಡೆದರು. ಆ ಮೂಲಕ ಬಟ್ಲರ್ ಮತ್ತೊಮ್ಮೆ ನಿರಾಸೆ ಮೂಡಿಸಿದರು.

ಬ್ರೂಕ್ ಔಟ್

05.30 PM: ENG vs PAK ODI World Cup 2023 Live Score, ENG 302/5 (46.4): ಕೊನೆಯ ಹಂತದಲ್ಲಿ ಸಿಡಿಯುತ್ತಿದ್ದ ಹ್ಯಾರಿ ಬ್ರೂಕ್, ವಿಕೆಟ್ ಒಪ್ಪಿಸಿದರು. 17 ಎಸೆತಗಳಲ್ಲಿ 30 ಸಿಡಿಸಿ ಹ್ಯಾರಿಸ್ ರೌಫ್ ಬೌಲಿಂಗ್​​ನಲ್ಲಿ ಔಟಾದರು.

ಕೊನೆಯಲ್ಲಿ ಬ್ರೂಕ್ಸ್​-ಬಟ್ಲರ್ ಅಬ್ಬರ

05.25 PM: ENG vs PAK ODI World Cup 2023 Live Score, ENG 300/4 (46.2): ರೂಟ್​ ಔಟಾದ ಬಳಿಕ ಜೊತೆಯಾದ ಹ್ಯಾರಿ ಬ್ರೂಕ್ ಮತ್ತು ಜೋಸ್ ಬಟ್ಲರ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. ವೇಗದ ಬ್ಯಾಟಿಂಗ್ ನಡೆಸಿದ ಈ ಜೋಡಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು.

ರೂಟ್ ಔಟ್

05.10 PM: ENG vs PAK ODI World Cup 2023 Live Score, ENG 257/4 (42.2): ಬೆನ್ ಸ್ಟೋಕ್ಸ್​ ಬೆನ್ನಲ್ಲೇ ಅರ್ಧಶತಕ ಸಿಡಿಸಿದ್ದ ಜೋ ರೂಟ್ ಕೂಡ ವಿಕೆಟ್ ಒಪ್ಪಿಸಿದರು. 72 ಎಸೆತಗಳಲ್ಲಿ 60 ಸಿಡಿಸಿದರು. ಅಲ್ಲದೆ, ವಿಶ್ವಕಪ್​​​ನಲ್ಲಿ ಇಂಗ್ಲೆಂಡ್ ಪರ 1000 ರನ್ ಪೂರೈಸಿದ ಮೊದಲ ಆಟಗಾರ ಎನಿಸಿದರು.

ಸ್ಟೋಕ್ಸ್​ ಔಟ್

04.55 PM: ENG vs PAK ODI World Cup 2023 Live Score, ENG 240/3 (40.1): ಅದ್ಭುತ ಇನ್ನಿಂಗ್ಸ್​ ಕಟ್ಟುತ್ತಿದ್ದ ಬೆನ್ ಸ್ಟೋಕ್ಸ್ ವಿಕೆಟ್ ಒಪ್ಪಿಸಿದರು. 76 ಎಸೆತಗಳಲ್ಲಿ 11 ಬೌಂಡರಿ, 2 ಸಿಕ್ಸರ್ ನೆರವಿನಿಂದ 84 ರನ್ ಗಳಿಸಿ ಶತಕದ ಅಂಚಿನಲ್ಲಿ ವಿಕೆಟ್ ಒಪ್ಪಿಸಿದರು.

ಸ್ಟೋಕ್ಸ್​ - ರೂಟ್ ಆಸರೆ

04.08 PM: ENG vs PAK ODI World Cup 2023 Live Score, ENG 166/2 (29): ಬೈರ್​ಸ್ಟೋ ಔಟಾದ ಬಳಿಕ ತಂಡಕ್ಕೆ ಬೆನ್​ ಸ್ಟೋಕ್ಸ್ ಮತ್ತು ಜೋ ರೂಟ್​ ಆಸರೆಯಾಗುತ್ತಿದ್ದಾರೆ. ಈ ಜೋಡಿ 3ನೇ ವಿಕೆಟ್​​ಗೆ ಅರ್ಧಶತಕದ ಜೊತೆಯಾಟವಾಡಿ4ದೆ. ರೂಟ್ 29 ರನ್ ಗಳಿಸಿದ್ದರೆ, ಸ್ಟೋಕ್ಸ್ 32 ರನ್ ಗಳಿಸಿದ್ದಾರೆ.

ಬೈರ್​ಸ್ಟೋ ಔಟ್

03.26 PM: ENG vs PAK ODI World Cup 2023 Live Score, ENG 108/2 (18.2): ಅರ್ಧಶತಕ ಸಿಡಿಸಿದ ಬೆನ್ನಲ್ಲೇ ಜಾನಿ ಬೈರ್​​​ಸ್ಟೋ ವಿಕೆಟ್ ಒಪ್ಪಿಸಿದ್ದಾರೆ. 61 ಎಸೆತಗಳಲ್ಲಿ 59 ರನ್ ಸಿಡಿಸಿ ಔಟಾದರು. ಅವರ ಇನ್ನಿಂಗ್ಸ್​​​​​​ನಲ್ಲಿ 7 ಬೌಂಡರಿ, 1 ಸಿಕ್ಸರ್​ ಅವರ ಇನ್ನಿಂಗ್ಸ್​ನಲ್ಲಿವೆ. ಹ್ಯಾರಿಸ್ ರೌಫ್ ಬೌಲಿಂಗ್​ನಲ್ಲಿ ನಿರ್ಗಮಿಸಿದರು.

ಬೈರ್​ಸ್ಟೋ ಅರ್ಧಶತಕ

03.10 PM: ENG vs PAK ODI World Cup 2023 Live Score, ENG 96/1 (16):‌ ಆರಂಭಿಕ ಆಟಗಾರ ಜಾನಿ ಬೈರ್​ಸ್ಟೋ ಅರ್ಧಶತಕ ಸಿಡಿಸಿ ಮಿಂಚಿದರು. 52 ಎಸೆತಗಳಲ್ಲಿ 50ರ ಗಡಿ ದಾಟಿದರು. ಅವರ ಇನ್ನಿಂಗ್ಸ್​​ನಲ್ಲಿ 6 ಬೌಂಡರಿ, 1 ಸಿಕ್ಸರ್​​ ಇದೆ. ಸದ್ಯ ಜೋ ರೂಟ್​, ಬೈರ್​​ಸ್ಟೋಗೆ ಸಾಥ್ ನೀಡುತ್ತಿದ್ದಾರೆ.

ಇಂಗ್ಲೆಂಡ್ ಮೊದಲ ವಿಕೆಟ್ ಪತನ

03.00 PM: ENG vs PAK ODI World Cup 2023 Live Score ENG 82/1 (13.3):‌ ಇಂಗ್ಲೆಂಡ್ ಮೊದಲ ವಿಕೆಟ್ ಪತನಗೊಂಡಿದೆ. ಡೇವಿಡ್ ಮಲಾನ್ 39 ಎಸೆತಗಳಲ್ಲಿ 31 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇಫ್ತಿಕಾರ್ ಅಹ್ಮದ್ ಪಾಕಿಸ್ತಾನ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟಿದ್ದಾರೆ.

ಇಂಗ್ಲೆಂಡ್ ಅರ್ಧಶತಕ

02.34 PM: ENG vs PAK ODI World Cup 2023 Live Score ENG 53/0 (7.1):‌ ಇಂಗ್ಲೆಂಡ್ 50 ರನ್ ಪೂರೈಸಿದೆ. ಆರಂಭಿಕ ಎರಡು ಓವರ್​​​ಗಳಲ್ಲಿ ಒಂದೂ ರನ್ ಗಳಿಸದ ಜಾನಿ ಬೈರ್​ಸ್ಟೋ ಮತ್ತು ಡೇವಿಡ್ ಮಲಾನ್ ಬಳಿಕ ಅಬ್ಬರಿಸಿದರು. ಬೈರ್​​ಸ್ಟೋ 31, ಮಲಾನ್ 11 ರನ್ ಗಳಿಸಿ ಬ್ಯಾಟಿಂಗ್ ನಡೆಸುತ್ತಿದ್ದಾರೆ.

2 ಓವರ್​ ಮುಕ್ತಾಯ

02.10 PM: ENG vs PAK ODI World Cup 2023 Live Score ENG 6/0 (2):‌ ಎರಡು ಓವರ್​ ಮುಕ್ತಾಯಕ್ಕೆ ಇಂಗ್ಲೆಂಡ್ 6 ರನ್ ಗಳಿಸಿದೆ. ಆದರೆ ಈ 6 ರನ್​ಗಳು ಸಹ ವೈಡ್ ಮೂಲಕ ಬಂದವು. ಎರಡೂ ಓವರ್​​ಗಳಲ್ಲಿ ಬ್ಯಾಟ್ಸ್​​ಮನ್​​ಗಳು ರನ್ ಗಳಿಸಿಲ್ಲ.

ಇಂಗ್ಲೆಂಡ್ ಬ್ಯಾಟಿಂಗ್ ಆರಂಭ

02.00 PM: ENG vs PAK ODI World Cup 2023 Live Score ENG 0/0 (0):‌ ಇಂಗ್ಲೆಂಡ್ ಬ್ಯಾಟಿಂಗ್ ಆರಂಭಿಸಿದೆ. ಜಾನಿ ಬೈರ್​​ಸ್ಟೋ ಮತ್ತು ಡೇವಿಡ್ ಮಲಾನ್ ಇನ್ನಿಂಗ್ಸ್​ ಆರಂಭಿಸಿದ್ದಾರೆ.

ಇಂಗ್ಲೆಂಡ್‌ ಆಡುವ ಬಳಗ

ಜಾನಿ ಬೈರ್‌ಸ್ಟೋ, ಡೇವಿಡ್ ಮಲನ್, ಜೋ ರೂಟ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ (ನಾಯಕ/ವಿಕೆಟ್ ಕೀಪರ್), ಮೊಯಿನ್ ಅಲಿ, ಕ್ರಿಸ್ ವೋಕ್ಸ್, ಡೇವಿಡ್ ವಿಲ್ಲಿ, ಗುಸ್ ಅಟ್ಕಿನ್ಸನ್, ಆದಿಲ್ ರಶೀದ್.

ಪಾಕಿಸ್ತಾನ ಆಡುವ ಬಳಗ

ಫಖರ್ ಜಮಾನ್, ಅಬ್ದುಲ್ಲಾ ಶಫೀಕ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್, ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಅಘಾ ಸಲ್ಮಾನ್, ಶಾದಾಬ್ ಖಾನ್, ಶಾಹೀನ್ ಅಫ್ರಿದಿ, ಮೊಹಮ್ಮದ್ ವಾಸಿಂ ಜೂನಿಯರ್, ಹಾರಿಸ್ ರೌಫ್.

ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ

1.30 PM: ENG vs PAK ODI World Cup 2023 Live Score:‌ ಮಹತ್ವದ ಪಂದ್ಯದಲ್ಲಿ ಪಾಕಿಸ್ತಾನ ಟಾಸ್ ಸೋತಿದೆ. ಇಂಗ್ಲೆಂಡ್ ಟಾಸ್ ಗೆದ್ದಿದ್ದು, ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಇಂಗ್ಲೆಂಡ್ ತಂಡವನ್ನು ಕಡಿಮೆ ರನ್​​ಗಳಿಗೆ ಆಲೌಟ್​ ಮಾಡಿ ಕಡಿಮೆ ಓವರ್​​​ಗಳಲ್ಲಿ ಮಾತ್ರ ಗೆಲ್ಲಬೇಕು. ಆದರೆ ಇದು ಅಸಾಧ್ಯ.

ENG vs PAK ODI World Cup 2023 Live Updates:‌ ಪಾಕಿಸ್ತಾನವು ಈ ಪಂದ್ಯವನ್ನು ಭರ್ಜರಿಯಾಗಿ ಗೆದ್ದರೆ ಮಾತ್ರ ಸೆಮಿಫೈನಲ್‌ ಲಗ್ಗೆ ಇಡುತ್ತದೆ. ಇಲ್ಲವಾದಲ್ಲಿ ಕಿವೀಸ್‌ ನಾಕೌಟ್‌ ತಲುಪುತ್ತದೆ. ಸೆಮೀಸ್ ಲೆಕ್ಕಾಚಾರ ಹೀಗಿದೆ.

ENG vs PAK ODI World Cup 2023 Live Updates:‌ ಇಂಗ್ಲೆಂಡ್‌ ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಕಾರಣ, ಪಾಕಿಸ್ತಾನಕ್ಕೆ ಲೆಕ್ಕಾಚಾರ ಭಾರಿ ಕಷ್ಟವಾಗಲಿದೆ.

  • ಇಂಗ್ಲೆಂಡ್ 50 ರನ್‌ ಗಳಿಸಿದರೆ- ಪಾಕಿಸ್ತಾನ 2 ಓವರ್‌ ಒಳಗೆ ಚೇಸಿಂಗ್‌ ಮಾಡಬೇಕು
  • 100 ರನ್‌ ಗಳಿಸಿದರೆ- 2.5 ಓವರ್‌ ಒಳಗೆ ಚೇಸ್‌ ಮಾಡಬೇಕು
  • 150 ರನ್‌ ಗಳಿಸಿದರೆ- 3.4 ಓವರ್‌ ಒಳಗಡೆ ಚೇಸ್‌ ಮಾಡಬೇಕು
  • 200 ರನ್‌ ಗಳಿಸಿದರೆ- 4.3 ಓವರ್‌ಗಳ ಒಳಗೆ ಚೇಸ್‌ ಮಾಡಬೇಕು
  • 300 ರನ್‌ ಗಳಿಸಿದರೆ- 6.1 ಓವರ್‌ಗಳ ಒಳಗೆ ಚೇಸ್‌ ಮಾಡಬೇಕು

ಇಂಗ್ಲೆಂಡ್‌ ತಂಡ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯಲು ಏನು ಮಾಡಬೇಕು?

ENG vs PAK ODI World Cup 2023 Live Updates:‌ ಪಾಕಿಸ್ತಾನವನ್ನು ಇಂಗ್ಲೆಂಡ್‌ ಸೋಲಿಸಿದರೆ ಒಟ್ಟು 6 ಅಂಕ ಪಡೆಯಲಿದೆ. ಅಲ್ಲಿಗೆ ಆಂಗ್ಲರ ಲೆಕ್ಕಾಚಾರ ಕೈಹಿಡಿಯುವುದಿಲ್ಲ. ಅತ್ತ ಬಾಂಗ್ಲಾದೇಶ ಅಥವಾ ನೆದರ್ಲೆಂಡ್ಸ್ ತಂಡಗಳಲ್ಲಿ ಕನಿಷ್ಠ ಒಂದು ತಂಡ ತಮ್ಮ ಅಂತಿಮ ಪಂದ್ಯವನ್ನು ಸೋಲಬೇಕು. ಒಂದು ವೇಳೆ ಪಾಕ್ ವಿರುದ್ಧ ಸೋತರೂ, ಬಾಂಗ್ಲಾದೇಶ ಅಥವಾ ನೆದರ್ಲೆಂಡ್ಸ್ ತನ್ನ ಅಂತಿಮ ಪಂದ್ಯವನ್ನು ಸೋಲಬೇಕು. ಇಂಗ್ಲೆಂಡ್‌ ತಂಡ ಪಾಕಿಸ್ತಾನದ ವಿರುದ್ಧ ಸೋತ ಬಳಿಕ ಬಾಂಗ್ಲಾದೇಶ ಮತ್ತು ನೆದರ್ಲ್ಯಾಂಡ್ಸ್ ಎರಡೂ ತಮ್ಮ ಅಂತಿಮ ಪಂದ್ಯಗಳಲ್ಲಿ ಗೆದ್ದರೆ, ಇಂಗ್ಲೆಂಡ್ ಚಾಂಪಿಯನ್ಸ್‌ ಟ್ರೋಫಿಯಿಂದ ಹೊರಬೀಳಲಿದೆ.

ಮುಖಾಮುಖಿ ದಾಖಲೆ

ENG vs PAK ODI World Cup 2023 Live Updates:‌ ಪಾಕಿಸ್ತಾನ ಮತ್ತು ಇಂಗ್ಲೆಂಡ್‌ ತಂಡಗಳು ಏಕದಿನ ಪಂದ್ಯಗಳಲ್ಲಿ ಈವರೆಗೆ ಒಟ್ಟು 88 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಇದರಲ್ಲಿ ಇಂಗ್ಲೆಂಡ್ ತಂಡವು ಒಟ್ಟು 56 ಪಂದ್ಯಗಳಲ್ಲಿ ಗೆದ್ದು ಮೇಲುಗೈ ಸಾಧಿಸಿದರೆ, ಪಾಕಿಸ್ತಾನವು 32 ಪಂದ್ಯಗಳಲ್ಲಿ ಮಾತ್ರ ಗೆಲುವು ಪಡೆದಿದೆ.

ಕೋಲ್ಕತ್ತಾ ಪಿಚ್‌ ಮತ್ತು ಹವಾಮಾನ ವರದಿ

ENG vs PAK ODI World Cup 2023 Live Updates: ಕೋಲ್ಕತ್ತಾ ಪಿಚ್‌ ಬ್ಯಾಟರ್‌ಗಳಿಗೆ ಸವಾಲಿನ ಪಿಚ್. ಇಲ್ಲಿಯವರೆಗೆ ನಡೆದ ವಿಶ್ವಕಪ್‌ ಪಂದ್ಯಗಳಲ್ಲಿ ಇಲ್ಲಿನ ಪಿಚ್‌ಗಳು ನಿಧಾನವಾಗಿದ್ದು, ಚೇಸಿಂಗ್‌ ಮಾಡುವ ತಂಡಗಳಿಗೆ ಹೆಚ್ಚು ರನ್‌ ಕಲೆ ಹಾಕುವುದು ಕಷ್ಟಕರವಾಗಿದೆ. ಮೈದಾನದಲ್ಲಿ ಸ್ಪಿನ್ನರ್‌ಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಟಾಸ್‌ ಗೆದ್ದ ತಂಡ ಬ್ಯಾಟಿಂಗ್‌ ಮಾಡುವುದೇ ಉತ್ತಮ ಆಯ್ಕೆ. ಕೋಲ್ಕತ್ತಾದಲ್ಲಿ ಇಂದು ಮಳೆಯ ಮುನ್ಸೂಚನೆ ಇಲ್ಲ.

ಪಾಕಿಸ್ತಾನ ಸಂಭಾವ್ಯ ಆಡುವ ಬಳಗ

ENG vs PAK ODI World Cup 2023 Live Updates: ಫಖರ್ ಜಮಾನ್, ಅಬ್ದುಲ್ಲಾ ಶಫೀಕ್, ಬಾಬರ್ ಅಜಾಮ್, ಮೊಹಮ್ಮದ್ ರಿಜ್ವಾನ್, ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಅಘಾ ಸಲ್ಮಾನ್, ಉಸಾಮಾ ಮಿರ್/ಹಸನ್ ಅಲಿ, ಶಾಹೀನ್ ಅಫ್ರಿದಿ, ಮೊಹಮ್ಮದ್ ವಾಸಿಂ ಜೂನಿಯರ್, ಹಾರಿಸ್ ರೌಫ್.

ಇಂಗ್ಲೆಂಡ್‌ ಸಂಭಾವ್ಯ ಆಡುವ ಬಳಗ

ENG vs PAK ODI World Cup 2023 Live Updates: ಜಾನಿ ಬೇರ್‌ಸ್ಟೋ, ಡೇವಿಡ್ ಮಲನ್, ಜೋ ರೂಟ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್, ಮೊಯಿನ್ ಅಲಿ, ಕ್ರಿಸ್ ವೋಕ್ಸ್, ಡೇವಿಡ್ ವಿಲ್ಲಿ, ಆದಿಲ್ ರಶೀದ್, ಗಸ್ ಅಟ್ಕಿನ್ಸನ್.

ಏಕದಿನ ವಿಶ್ವಕಪ್‌ನ ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ