logo
ಕನ್ನಡ ಸುದ್ದಿ  /  ಕ್ರಿಕೆಟ್  /  Ind Vs Eng: ಯಶಸ್ವಿ ಜೈಸ್ವಾಲ್ ಪ್ರಸ್ತುತ ಭಾರತದ ಅತ್ಯಂತ ಅಪಾಯಕಾರಿ ಬ್ಯಾಟರ್; ಇಂಗ್ಲೆಂಡ್ ಮಾಜಿ ಕ್ರಿಕೆಟಿಗ

IND vs ENG: ಯಶಸ್ವಿ ಜೈಸ್ವಾಲ್ ಪ್ರಸ್ತುತ ಭಾರತದ ಅತ್ಯಂತ ಅಪಾಯಕಾರಿ ಬ್ಯಾಟರ್; ಇಂಗ್ಲೆಂಡ್ ಮಾಜಿ ಕ್ರಿಕೆಟಿಗ

Jayaraj HT Kannada

Feb 02, 2024 03:21 PM IST

google News

ಯಶಸ್ವಿ ಜೈಸ್ವಾಲ್ ಭಾರತದ ಅತ್ಯಂತ ಅಪಾಯಕಾರಿ ಬ್ಯಾಟರ್ ಎಂದ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ

    • Yashasvi Jaiswal: ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಯಶಸ್ವಿ ಜೈಸ್ವಾಲ್‌, ಚೊಚ್ಚಲ ಟೆಸ್ಟ್‌ನಲ್ಲಿಯೇ ಶತಕ ಸಾಧನೆ ಮಾಡಿದ್ದರು. ಇಂಗ್ಲೆಂಡ್‌ ವಿರುದ್ಧದ ಎರಡನೇ ಟೆಸ್ಟ್‌ ಮೂಲಕ ತಮ್ಮ ಆರನೇ ಟೆಸ್ಟ್‌ ಪಂದ್ಯ ಆಡುತ್ತಿರುವ ಅವರು, ಟೆಸ್ಟ್‌ ವೃತ್ತಿಜೀವನದ ಎರಡನೇ ಶತಕ ಸಿಡಿಸಿದ್ದಾರೆ.
ಯಶಸ್ವಿ ಜೈಸ್ವಾಲ್ ಭಾರತದ ಅತ್ಯಂತ ಅಪಾಯಕಾರಿ ಬ್ಯಾಟರ್ ಎಂದ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ
ಯಶಸ್ವಿ ಜೈಸ್ವಾಲ್ ಭಾರತದ ಅತ್ಯಂತ ಅಪಾಯಕಾರಿ ಬ್ಯಾಟರ್ ಎಂದ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ (AFP)

ಯಶಸ್ವಿ ಜೈಸ್ವಾಲ್ (Yashasvi Jaiswal) ಅತ್ಯಂತ ಅಪಾಯಕಾರಿ ಭಾರತೀಯ ಬ್ಯಾಟರ್‌ ಎಂದು ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಓವೈಸ್ ಶಾ (Owais Shah) ಹೇಳಿದ್ದಾರೆ. ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ (India vs England 2nd Test) ಪಂದ್ಯದ ಮೊದಲ ದಿನದಾಟದಲ್ಲಿ, ಟೀಮ್‌ ಇಂಡಿಯಾ ಆರಂಭಿಕ ಆಟಗಾರ ಜೈಸ್ವಾಲ್, ಮೊದಲ ದಿನದಾಟದಲ್ಲಿ ಶತಕ ಸಿಡಿಸಿ ಅಬ್ಬರಿಸಿದರು. ಈ ನಡುವೆ ಮಾತನಾಡಿದ ಓವೈಸ್ ಶಾ, ಪ್ರಸ್ತುತ ಜೈಸ್ವಾಲ್‌ ಅವರ ಫಾರ್ಮ್‌ ನೋಡಿದರೆ, ಅವರು ಟೀಮ್‌ ಇಂಡಿಯಾದ ಅಪಾಯಕಾರಿ ಬ್ಯಾಟರ್‌ ಎಂದು ಉದ್ಘರಿಸಿದ್ದಾರೆ.

ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ, ಜೈಸ್ವಾಲ್ ಆಕ್ರಮಣಕಾರಿ ಆಟವಾಡಿ 80 ರನ್ ಗಳಿಸಿದ್ದರು. ಈ ಮೊತ್ತವು ಪ್ರವಾಸಿ ಇಂಗ್ಲೆಂಡ್‌ ತಂಡದ ವಿರುದ್ಧ ಬೃಹತ್‌ ಮೊತ್ತ ಕಲೆ ಹಾಕಲು ಆತಿಥೇಯ ಭಾರತಕ್ಕೆ ನೆರವಾಗಿತ್ತು. ಆದರೆ, ಎರಡನೇ ಇನ್ನಿಂಗ್ಸ್‌ನಲಿ 231 ರನ್‌ಗಳ ಗುರಿ ಬೆನ್ನಟ್ಟಿದ ಭಾರತದ ಪರ ಜೈಸ್ವಾಲ್‌ ಸೇರಿದಂತೆ ಯಾವ ಬ್ಯಾಟರ್‌ ಕೂಡಾ ಅಬ್ಬರಿಸಲಿಲ್ಲ.

ಇದನ್ನೂ ಒದಿ | ರಿಂಕು ಮತ್ತೆ ಸೊನ್ನೆ, ಪಡಿಕ್ಕಲ್ ಅರ್ಧಶತಕ; ಇಂಗ್ಲೆಂಡ್ ಲಯನ್ಸ್ ವಿರುದ್ಧ ಭಾರತ ಎ ತಂಡ ಕಳಪೆ ಪ್ರದರ್ಶನ

ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ದಿನದಾಟದಲ್ಲಿ ರೋಹಿತ್ ಶರ್ಮಾ 41 ಎಸೆತಗಳಲ್ಲಿ ಕೇವಲ 14 ರನ್ ಗಳಿಸಿ ಔಟಾದರು. ಮೂರನೇ ಕ್ರಮಾಂಕದಲ್ಲಿ ಆಡಿದ ಶುಭ್ಮನ್ ಗಿಲ್ 46 ಎಸೆತಗಳಲ್ಲಿ 34 ರನ್ ಗಳಿಸಿ ನಿರ್ಗಮಿಸಿದರು. ಈ ನಡುವೆ ಜೈಸ್ವಾಲ್ 92 ಎಸೆತಗಳಲ್ಲಿ 51 ರನ್ ಗಳಿಸಿದರು. ಆ ಬಳಿಕ 151 ಎಸೆತಗಳಲ್ಲಿ ತಮ್ಮ ಎರಡನೇ ಟೆಸ್ಟ್ ಶತಕ ಸಿಡಿಸಿದರು.

ಯಶಸ್ವಿ ಜೈಸ್ವಾಲ್ ಬಗ್ಗೆ ಜಾಗರೂಕರಾಗಿರಿ

ಜೈಸ್ವಾಲ್ ಒಬ್ಬ ಆಕ್ರಮಣಕಾರಿ ಕ್ರಿಕೆಟಿಗ. ಸಡಿಲ ಎಸೆತಗಳನ್ನು ಎದುರಿಸಲು ಸಮಯ ಕೊಡಲು ಆತ ಸಿದ್ಧನಿದ್ದರೆ, ಅದು ಇಂಗ್ಲೆಂಡ್‌ಗೆ ಅಪಾಯಕಾರಿಯಾಗಲಿದೆ ಎಂದು ಶಾ ಹೇಳಿದರು.

“ಆತನಲ್ಲಿ ಪ್ರತಿಭೆ ಇದೆ. ದೇಶೀಯ ಕ್ರಿಕೆಟ್‌ನಲ್ಲಿ ಕೂಡಾ ಇದೇ ಆಕ್ರಮಣಕಾರಿ ಆಟವನ್ನು ಅನುಸರಿಸುತ್ತಾನೆ. ಐಪಿಎಲ್‌ನಲ್ಲಿ ಆತ ಹೇಗೆ ಬ್ಯಾಟಿಂಗ್ ಮಾಡಿದ್ದಾನೆ ಎಂಬುದನ್ನು ನಾವು ನೋಡಿದ್ದೇವೆ. ಅದೇ ಕಾರಣಕ್ಕೆ ಆತನಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವಕಾಶ ಸಿಕ್ಕಿತು. ಆತ ಎಷ್ಟು ಆಕ್ರಮಣಕಾರಿಯಾಗಬಲ್ಲ ಎಂಬುದನ್ನು ನಾವು ಮೊದಲ ಟೆಸ್ಟ್‌ನಲ್ಲಿಯೇ ನೋಡಿದ್ದೇವೆ. ಟಾಮ್ ಹಾರ್ಟ್ಲೆ ಅವರ ಮೊದಲ ಓವರ್‌ನಲ್ಲಿ ಆತ ಎರಡು ಸಿಕ್ಸರ್‌ ಸಿಡಿಸಿದ. ಎರಡನೇ ಟೆಸ್ಟ್‌ನಲ್ಲೂ ಅಂತಹುದೇ ಆಟಕ್ಕೆ ಪ್ರಯತ್ನಿಸಿದ. ಆಧುನಿಕ ಯುಗದ ಬ್ಯಾಟರ್‌ಗಳು ಈ ರೀತಿ ಆಡುತ್ತಾರೆ. ಈ ಸಮಯದಲ್ಲಿ ಆತ ಅತ್ಯಂತ ಅಪಾಯಕಾರಿ ಭಾರತೀಯ ಬ್ಯಾಟರ್‌ ಎಂದು ನಾನು ಭಾವಿಸುತ್ತೇನೆ,” ಎಂದು ಜಿಯೋ ಸಿನಿಮಾದಲ್ಲಿನ ಕಾರ್ಯಕ್ರಮದ ವೇಳೆ ಶಾ ಹೇಳಿದ್ದಾರೆ.

ಇದನ್ನೂ ಓದಿ | 6ನೇ ಟೆಸ್ಟ್ ಪಂದ್ಯದಲ್ಲಿ 2ನೇ ಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್; ಇಂಗ್ಲೆಂಡ್ ವಿರುದ್ಧ ಸ್ಫೋಟಕ ಬ್ಯಾಟಿಂಗ್

ಕಳೆದ ವರ್ಷದ ಜುಲೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಜೈಸ್ವಾಲ್‌, 171 ರನ್ ಗಳಿಸುವ ಮೂಲಕ ಚೊಚ್ಚಲ ಟೆಸ್ಟ್‌ನಲ್ಲಿಯೇ ಶತಕ ಸಾಧನೆ ಮಾಡಿದ್ದರು. ಇಂಗ್ಲೆಂಡ್‌ ವಿರುದ್ಧದ ಎರಡನೇ ಟೆಸ್ಟ್‌ ಮೂಲಕ ತಮ್ಮ ಆರನೇ ಟೆಸ್ಟ್‌ ಪಂದ್ಯ ಆಡುತ್ತಿರುವ ಅವರು, ಟೆಸ್ಟ್‌ ವೃತ್ತಿಜೀವನದ ಎರಡನೇ ಶತಕ ಸಿಡಿಸಿದ್ದಾರೆ. 94 ರನ್‌ ಗಳಿಸಿದ್ದಾಗ ಚೆಂಡನ್ನು ನೇರವಾಗಿ ಸಿಕ್ಸರ್‌ಗಟ್ಟಿ ಮೂರಂಕಿ ತಲುಪಿದ್ದಾರೆ.

ಇದನ್ನೂ ಓದಿ | ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಉತ್ತಮ ನಾಯಕ ಯಾರು; ಪೂನಂ ಪಾಂಡೆ ಕೊಟ್ಟಿದ್ದರು ಅದ್ಭುತ ಉತ್ತರ

ಎರಡನೇ ಟೆಸ್ಟ್‌ ಪಂದ್ಯಕ್ಕೆ ಭಾರತ ತಂಡದಲ್ಲಿ ಮೂರು ಬದಲಾವಣೆ ಮಾಡಲಾಗಿದೆ. ಕೆಎಲ್ ರಾಹುಲ್, ರವೀಂದ್ರ ಜಡೇಜಾ ಹಾಗೂ ಮೊಹಮ್ಮದ್ ಸಿರಾಜ್ ಬದಲಿಗೆ ರಜತ್ ಪಾಟೀದಾರ್, ಕುಲ್ದೀಪ್ ಯಾದವ್ ಹಾಗೂ ಮುಕೇಶ್ ಕುಮಾರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ