ಇದು ನಿಜವಾಗಲು ಸಾಧ್ಯವಿಲ್ಲ; ಟಿ20 ವಿಶ್ವಕಪ್ ತಂಡದಿಂದ ವಿರಾಟ್ ಡ್ರಾಪ್ ವರದಿಗೆ ಸ್ಟುವರ್ಟ್ ಬ್ರಾಡ್ ಅಚ್ಚರಿ
Mar 13, 2024 05:19 PM IST
ಟಿ20 ವಿಶ್ವಕಪ್ ತಂಡದಿಂದ ವಿರಾಟ್ ಡ್ರಾಪ್ ವರದಿಗೆ ಸ್ಟುವರ್ಟ್ ಬ್ರಾಡ್ ಅಚ್ಚರಿ
- Virat Kohli: ಟಿ20 ವಿಶ್ವಕಪ್ ಪಂದ್ಯಾವಳಿಗೆ ವಿರಾಟ್ ಕೊಹ್ಲಿ ಆಯ್ಕೆಯಾಗಲ್ಲ ಎಂಬ ವರದಿಗೆ ಪ್ರತಿಕ್ರಿಯಯೆ ನೀಡಿರುವ ಸ್ಟುವರ್ಟ್ ಬ್ರಾಡ್, ಇದು ನಿಜವಾಗಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರಮುಖ ಈವೆಂಟ್‌ನಲ್ಲಿ ವಿರಾಟ್ ಕೊಹ್ಲಿ ವಿಶ್ವದ ಅತ್ಯಂತ ಪ್ರಮುಖ ಆಟಗಾರ ಎಂದು ಅವರು ಹೇಳಿದ್ದಾರೆ.
ಐಪಿಎಲ್ ಪಂದ್ಯಾವಳಿ ಮುಗಿದ ಬೆನ್ನಲ್ಲೇ ಟಿ20 ವಿಶ್ವಕಪ್ ಪಂದ್ಯಾವಳಿ ನಡೆಯಲಿದೆ. ಪ್ರಮುಖ ಟೂರ್ನಿಗೆ ಭಾರತ ತಂಡದಿಂದ ಪ್ರಮುಖ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಅವರನ್ನು ಹೊರಗಿಡುವ ಸಾಧ್ಯತೆ ಇದೆ. ಈ ವರದಿಯು ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿದೆ. ಭಾರತದ ಸ್ಟಾರ್ ಆಟಗಾರನನ್ನೇ ಐಸಿಸಿಯ ಪ್ರಮುಖ ಟೂರ್ನಿಯಿಂದ ಹೊರಗಿಡುವ ಸಾಧ್ಯತೆಯು, ಎಲ್ಲೆಡೆಯಿಂದ ಅಸಮಾಧಾನಕ್ಕೆ ಕಾರಣವಾಗಿದೆ. ಕೊಹ್ಲಿ ಅನುಪಸ್ಥಿತಿ ಕುರಿತ ವರದಿ ನೋಡಿ ಇಂಗ್ಲೆಂಡ್ ತಂಡದ ಮಾಜಿ ವೇಗಿ ಸ್ಟುವರ್ಟ್ ಬ್ರಾಡ್ ಅಚ್ಚರಿಪಟ್ಟಿದ್ದಾರೆ. ಅಲ್ಲದೆ ಈ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಬ್ರಾಡ್, ಇದು ನಿಜವಾಗಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದಾರೆ.
ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯ ನಂತರ, ಕೊಹ್ಲಿ ಕ್ರಿಕೆಟ್ ಮೈದಾನಕ್ಕೆ ಇಳಿದಿಲ್ಲ. ಲಂಡನ್‌ನಲ್ಲಿ ಗಂಡು ಮಗು ಜನಿಸಿದ ಹಿನ್ನೆಲೆಯಲ್ಲಿ ಅವರು ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿದರು. ಸದ್ಯ ವಿರಾಟ್ ಮಾರ್ಚ್ 22ರಿಂದ ಆರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮೈದಾಕ್ಕಿಳಿಯುವ ಸಾಧ್ಯತೆ ಇದೆ. ಆದರೆ, ಆ ಬಳಿಕ ವೆಸ್ಟ್ ಇಂಡೀಸ್ ಮತ್ತು ಯುಎಸ್‌ಯಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡದಲ್ಲಿ ವಿರಾಟ್ ಕೊಹ್ಲಿ ಇಲ್ಲದಿರಬಹುದು ಎಂಬ ವರದಿಗಳು ಹೊರಬಂದಿವೆ.
ವಿರಾಟ್ ಕೊಹ್ಲಿ ಆಯ್ಕೆಯಾಗಲ್ಲ ಎಂಬ ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ಪ್ರತಿಕ್ರಿಯಯೆ ನೀಡಿರುವ ಬ್ರಾಡ್, ಈ ವರದಿಗಳು ನಿಜವಾಗಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರಮುಖ ಈವೆಂಟ್‌ನಲ್ಲಿ ವಿರಾಟ್ ಕೊಹ್ಲಿ ವಿಶ್ವದ ಅತ್ಯಂತ ಪ್ರಮುಖ ಆಟಗಾರ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ | ಟಿ20 ವಿಶ್ವಕಪ್‌ಗೆ ವಿರಾಟ್ ಕೊಹ್ಲಿ ಆಯ್ಕೆ ಅನುಮಾನ; ಕಠಿಣ ನಿರ್ಧಾರಕ್ಕೆ ಮುಂದಾದ ಬಿಸಿಸಿಐ
“ಇದು ನಿಜವಾಗಲು ಸಾಧ್ಯವಿಲ್ಲ. ಆಟದ ಬೆಳವಣಿಗೆಯ ದೃಷ್ಟಿಯಿಂದ ಅಭಿಮಾನಿಗಳ ದೃಷ್ಟಿಕೋನದಿಂದ, ಐಸಿಸಿ ಅಮೆರಿಕದಲ್ಲಿ ಪಂದ್ಯಗಳನ್ನು ನಡೆಸುತ್ತಿದೆ. ನ್ಯೂಯಾರ್ಕ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯ ನಡೆಯುತ್ತಿದೆ. ವಿರಾಟ್ ಕೊಹ್ಲಿ ವಿಶ್ವದ ಯಾವುದೇ ಆಟಗಾರ ನಡುವೆ ಅತ್ಯಂತ ಗಮನ ಸೆಳೆಯುವ ಆಟಗಾರ. ಅವರು ಆಯ್ಕೆಯಾಗುವುದು ಖಚಿತ” ಎಂದು ಬ್ರಾಡ್ ಎಕ್ಸ್‌ನಲ್ಲಿ (ಟ್ವಿಟ್ಟರ್) ಪೋಸ್ಟ್ ಮಾಡಿದ್ದಾರೆ.
ವೆಸ್ಟ್ ಇಂಡೀಸ್‌ನ ನಿಧಾನಗತಿಯ ವಿಕೆಟ್‌ಗಳು, ಕೊಹ್ಲಿಯ ಸಹಜ ಆಟಕ್ಕೆ ಹೊಂದಿಕೆಯಾಗುವುದಿಲ್ಲ ಎಂಬುದು ಬಿಸಿಸಿಐ ಆಯ್ಕೆದಾರರ ಅಭಿಪ್ರಾಯ. ಹೀಗಾಗಿ ಆಯ್ಕೆ ಸಮಿತಿಯು ಆಟಗಾರರ ಆಯ್ಕೆಯಲ್ಲಿ ಕೆಲವೊಂದು ಮಾನದಂಡಗಳನ್ನು ಅನುಸರಿಸುತ್ತಿದೆ. ಮುಖ್ಯ ಆಯ್ಕೆಗಾರ ಅಗರ್ಕರ್, ಕೊಹ್ಲಿ ಹೊರತುಪಡಿಸಿ ಯುವ ಆಟಗಾರರಿಗೆ ಚುಟುಕು ಸ್ವರೂಪದಲ್ಲಿ ಅವಕಾಶ ಮಾಡಿಕೊಡಬೇಕು ಎಂಬುದನ್ನು ಕೊಹ್ಲಿಗೆ ಮನವರಿಕೆ ಮಾಡಲು ಈ ನಿರ್ಧಾ ರ ಕೈಗೊಂಡಿದ್ದಾರೆ ಎಂದು ವರದಿ ಹೇಳಿದೆ.
ಸದ್ಯ ಟೀಮ್ ಇಂಡಿಯಾದಲ್ಲಿ ಯುವ ಆಟಗಾರರು ತುಂಬಿಕೊಂಡಿದ್ದಾರೆ. ಹೀಗಾಗಿ ಆಯ್ಕೆದಾರರು ಕೊಹ್ಲಿಯ ಸ್ಥಾನದ ಬಗ್ಗೆ ಸ್ವಲ್ಪ ಅನುಮಾನ ವ್ಯಕ್ತಪಡಿಸಿದ್ದಾರೆ. ಚುಟುಕು ಸ್ವರೂಪದಲ್ಲಿ ಕೊಹ್ಲಿ ತಂಡದ ಅಗತ್ಯಗಳನ್ನು ನಿಭಾಯಿಸಲು ಸಾಧ್ಯವಾಗಿಲ್ಲ ಎಂದು ದಿ ಟೆಲಿಗ್ರಾಫ್ ವರದಿ ತಿಳಿಸಿದೆ. ಹೀಗಾಗಿ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಉತ್ತಮ ಪ್ರದರ್ಶನ ನೀಡಿದರೆ ಮಾತ್ರ, ಕೊಹ್ಲಿಯನ್ನು ಚುಟುಕು ವಿಶ್ವಕಪ್ ಆಯ್ಕೆಗೆ ಪರಿಗಣಿಸಲಾಗುತ್ತದೆ.
ಇದನ್ನೂ ಓದಿ | ಮುಂಬೈ ವಿರುದ್ಧ ದಾಖಲೆಯ 6 ವಿಕೆಟ್ ಕಬಳಿಸಿದ ಎಲ್ಲಿಸ್ ಪೆರ್ರಿ; ಡಬ್ಲ್ಯೂಪಿಎಲ್‌ನಲ್ಲಿ ಇತಿಹಾಸ ನಿರ್ಮಿಸಿದ ಆರ್‌ಸಿಬಿ ಕ್ವೀನ್
ಕ್ರಿಕೆಟ್ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
(This copy first appeared in Hindustan Times Kannada website. To read more like this please logon to kannada.hindustantimes.com)