logo
ಕನ್ನಡ ಸುದ್ದಿ  /  ಕ್ರಿಕೆಟ್  /  3ನೇ ಕ್ರಮಾಂಕದಲ್ಲಿ ವಿರಾಟ್ ಅತ್ಯಂತ ಅಪಾಯಕಾರಿ; ಕೊಹ್ಲಿ ಟಿ20 ಬ್ಯಾಟಿಂಗ್ ಕ್ರಮಾಂಕ ಕುರಿತು ಎಬಿಡಿ ತೀರ್ಪು

3ನೇ ಕ್ರಮಾಂಕದಲ್ಲಿ ವಿರಾಟ್ ಅತ್ಯಂತ ಅಪಾಯಕಾರಿ; ಕೊಹ್ಲಿ ಟಿ20 ಬ್ಯಾಟಿಂಗ್ ಕ್ರಮಾಂಕ ಕುರಿತು ಎಬಿಡಿ ತೀರ್ಪು

Jayaraj HT Kannada

Jan 19, 2024 03:47 PM IST

google News

ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್

    • AB De Villiers: ಆರ್‌ಸಿಬಿ ತಂಡದಲ್ಲಿದ್ದಾಗ ವಿರಾಟ್ ಕೊಹ್ಲಿಗೆ ನೀಡಿದ ಸಲಹೆಯನ್ನು ಎಬಿ ಡಿವಿಲಿಯರ್ಸ್ ನೆನಪಿಸಿಕೊಂಡಿದ್ದಾರೆ. ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ 3ನೇ ಕ್ರಮಾಂಕದ ಬ್ಯಾಟರ್ ಆಗಿ ದಕ್ಷಿಣ ಆಫ್ರಿಕಾಗೆ ಅತಿ ದೊಡ್ಡ ಬೆದರಿಕೆಯಾಗಿದ್ದರು ಎಂದು ಮಿಸ್ಟರ್‌ ಅವರು ಅಭಿಪ್ರಾಯಪಟ್ಟಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್
ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ (BCCI Twitter)

ವಿರಾಟ್ ಕೊಹ್ಲಿ 3ನೇ ಕ್ರಮಾಂಕದಲ್ಲಿ ಹಲವು ವರ್ಷಗಳಿಂದ ಬ್ಯಾಟಿಂಗ್ ಮಾಡುತ್ತಿದ್ದಾರೆ. ಟಿ20 ಪಂದ್ಯಗಳಲ್ಲಿ ಅವರು ಇದೇ ಕ್ರಮಾಂಕದಲ್ಲಿ ಆಡಬೇಕೇ ಅಥವಾ ಅನುಭವಿ ಬ್ಯಾಟರ್ ರೋಹಿತ್ ಶರ್ಮಾ ಅವರೊಂದಿಗೆ ಇನ್ನಿಂಗ್ಸ್ ತೆರೆದೆರೆ ಉತ್ತಮವೇ ಎಂಬ ಕುರಿತು ಹಲವು ಬಾರಿ ಚರ್ಚೆಗಳು ನಡೆದಿವೆ. ಈ ಕುರಿತು ಆರ್‌ಸಿಬಿಯ ಮಾಜಿ ಆಟಗಾರ ಹಾಗೂ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ಅಲಭ್ಯರಾಗಿದ್ದ ಕೊಹ್ಲಿ, ಆ ಬಳಿಕ ನಡೆದ ಎರಡು ಹಾಗೂ ಮೂರನೇ ಪಂದ್ಯದಲ್ಲಿ ಕಣಕ್ಕಿಳಿದಿದ್ದರು. ಎರಡೂ ಪಂದ್ಯಗಳಲ್ಲಿಯೂ ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಿದ್ದರು.

ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮೂರನೇ ಚುಟುಕು ಪಂದ್ಯಕ್ಕೂ ಮುನ್ನ ಯೂಟ್ಯೂಬ್‌ನಲ್ಲಿ ಮಾತನಾಡಿದ ಎಬಿಡಿ, ಕೊಹ್ಲಿಯ ಬ್ಯಾಟಿಂಗ್ ಸ್ಥಾನದ ಕುರಿತು ತಮ್ಮ ಅಭಿಪ್ರಾಯ ತಿಳಿಸಿದರು. ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ 3ನೇ ಕ್ರಮಾಂಕದ ಬ್ಯಾಟರ್ ಆಗಿ ದಕ್ಷಿಣ ಆಫ್ರಿಕಾಗೆ ಅತಿ ದೊಡ್ಡ ಬೆದರಿಕೆಯಾಗಿದ್ದರು ಎಂದು ಮಿಸ್ಟರ್‌ 360 ಡಿಗ್ರಿ ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಎದುರಾಳಿ ತಂಡಕ್ಕೆ ಸದಾ ಅಪಾಯಕಾರಿಯಾಗಿರುವ ವಿರಾಟ್‌, ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಭಾರತದ 3ನೇ ಕ್ರಮಾಂಕದ ಬ್ಯಾಟರ್ ಆಗಿ ಮುಂದುವರಿಯಬೇಕು ಎಂದು ತಿಳಿಸಿದರು.

ಇದನ್ನೂ ಓದಿ | Virat Kohli: ವಿರಾಟ್ ಅತ್ಯಂತ ಕೆಟ್ಟ ದಾಖಲೆ; ಡಕೌಟ್​ನಲ್ಲೂ ಸಚಿನ್​ರನ್ನು ಹಿಂದಿಕ್ಕಿದ ಕೊಹ್ಲಿ

“ಕೊಹ್ಲಿ ಕುರಿತು ನನಗೆ ವಿಭಿನ್ನ ಅಭಿಪ್ರಾಯವಿದೆ. ನನ್ನ ಅಂತಾರಾಷ್ಟ್ರೀಯ ವೃತ್ತಿಜೀವನದ ಬಹುಪಾಲು ಭಾಗದಲ್ಲಿ ನಾವು ಭಾರತದ ವಿರುದ್ಧ ಆಡಿದಾಗ ವಿರಾಟ್ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಅದು ನಮ್ಮ ತಂಡಕ್ಕೆ ಬಲು ದೊಡ್ಡ ಬೆದರಿಕೆಯಾಗಿತ್ತು. ಅವರು ಮಧ್ಯಮ ಕ್ರಮಾಂಕದಲ್ಲಿ ತಂಡದ ಗಮ್‌ನಂತೆ (ಗ್ಲೂ) ಆಡುತ್ತಿದ್ದರು. ನಿಜ ಹೇಳಬೇಂಕೆಂದರೆ 3ನೇ ಕ್ರಮಾಂಕವು ಮಧ್ಯಮ ಕ್ರಮಾಂಕವಲ್ಲ, ಅದು ಅಗ್ರ ಕ್ರಮಾಂಕ. ಆದರೆ ಅವರು ಮಧ್ಯಮ ಕ್ರಮಾಂಕದೊಂದಿಗೆ ಸಂಯೋಜಿಸುವಷ್ಟು ಉತ್ತಮ ಬ್ಯಾಟರ್‌ ಆಗಿದ್ದಾರೆ. ಅವರ ವಿರುದ್ಧ ಆಡುವುದು ಅಸಾಧ್ಯ,” ಎಂದು ಡಿವಿಲಿಯರ್ಸ್ ಹೇಳಿದ್ದಾರೆ.

ಕೊಹ್ಲಿ ಬ್ಯಾಟರ್ ಆಗಿ 3ನೇ ಕ್ರಮಾಂಕದಲ್ಲಿ 79 ಪಂದ್ಯಗಳನ್ನು ಆಡಿದ್ದಾರೆ ಎಂದು ಡಿವಿಲಿಯರ್ಸ್ ಗಮನಸೆಳೆದಿದ್ದಾರೆ. ಭಾರತದ ಮಾಜಿ ನಾಯಕ 55ರ ಸರಾಸರಿಯಲ್ಲಿ ಬ್ಯಾಟ್‌ ಬೀಸುವುದರೊಂದಿಗೆ 135ರ ಸ್ಟ್ರೈಕ್ ರೇಟ್ ಕಾಯ್ದುಕೊಂಡಿದ್ದಾರೆ.

ಇದನ್ನೂ ಓದಿ | ವಿರಾಟ್ ಕೊಹ್ಲಿ ದಾಖಲೆಯನ್ನು ಚಿಂದಿ ಉಡಾಯಿಸಿದ ರೋಹಿತ್; ಹಿಟ್​ಮ್ಯಾನ್ ಇನ್ಮುಂದೆ ನಂ 1 ಕ್ಯಾಪ್ಟನ್

ಕೊಹ್ಲಿಯನ್ನು ಮನವೊಲಿಸಲು ಪ್ರಯತ್ನಿಸಿದ್ದ ಎಬಿಡಿ

“ನಾವು ಆರ್‌ಸಿಬಿ ತಂಡದಲ್ಲಿ ಹಲವು ವರ್ಷಗಳ ಕಾಲ ಒಟ್ಟಿಗೆ ಆಡಿದಾಗ, ನಾನು ಯಾವಾಗಲೂ ವಿರಾಟ್ ಕೊಹ್ಲಿ ಮನವೊಲಿಸಲು ಪ್ರಯತ್ನಿಸುತ್ತಿದ್ದೆ. ಇನ್ನಿಂಗ್ಸ್ ತೆರೆಯದಂತೆ ಸಲಹೆ ನೀಡುತ್ತಿದ್ದೆ. ಆದರೆ ಅವರಿಗೆ ಇನ್ನಿಂಗ್ಸ್‌ ಆರಂಭಿಸುವುದೆಂದರೆ ಭಾರಿ ಇಷ್ಟ. ಅದು ಅವರ ಆದ್ಯತೆ ಎಂದು ನಾನು ಭಾವಿಸುತ್ತೇನೆ. ಅವರು ಸಾಕಷ್ಟು ಸಮಯ ಕ್ರಿಕೆಟ್ ಆಡಿದ್ದಾರೆ. ಹೀಗಾಗಿ ಆ ನಿರ್ಧಾರಕ್ಕೆ ಅವರು ಬಂದಿರಬಹುದು. ಒಂದು ವೇಳೆ ಅವರು ಬ್ಯಾಟಿಂಗ್ ಆರಂಭಿಸಿಲು ಬಯಸಿದರೆ ಮತ್ತು ನಾನು ಅವರ ಕೋಚ್ ಆಗಿದ್ದರೆ, ನಾನು ಅದಕ್ಕೆ ಒಪ್ಪುತ್ತಿದ್ದೆ. ನೀವು ಏನು ಮಾಡುತ್ತಿದ್ದೀರಿ ಎಂದು ನಿಮಗೆ ತಿಳಿದಿದೆ. ಬ್ಯಾಟಿಂಗ್ ಆರಂಭಿಸು, ನೀನೊಬ್ಬ ಉತ್ತಮ ಆಟಗಾರ. ಹೋಗಿ ನಮಗಾಗಿ ವಿಶ್ವಕಪ್ ಗೆಲ್ಲು,” ಎಂದು ಹೇಳುತ್ತಿದ್ದೆ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.

'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ.

ಇಮೇಲ್: ht.kannada@htdigital.in

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ