logo
ಕನ್ನಡ ಸುದ್ದಿ  /  ಕ್ರಿಕೆಟ್  /  ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್‌ನಿಂದ ಕೆಎಲ್ ರಾಹುಲ್ ಔಟ್; ರಾಜ್‌ಕೋಟ್‌ ಪಂದ್ಯಕ್ಕೆ ಮತ್ತೋರ್ವ ಕನ್ನಡಿಗ ಆಯ್ಕೆ

ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್‌ನಿಂದ ಕೆಎಲ್ ರಾಹುಲ್ ಔಟ್; ರಾಜ್‌ಕೋಟ್‌ ಪಂದ್ಯಕ್ಕೆ ಮತ್ತೋರ್ವ ಕನ್ನಡಿಗ ಆಯ್ಕೆ

Jayaraj HT Kannada

Feb 13, 2024 09:29 AM IST

google News

ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಸ್ಟ್‌ನಿಂದ ಕೆಎಲ್ ರಾಹುಲ್ ಔಟ್

    • India vs England 3rd Test: ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಿಂದ ಕನ್ನಡಿಗ ಕೆಎಲ್ ರಾಹುಲ್ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ದೃಢಪಡಿಸಿದೆ. ಕನ್ನಡಿಗನ ಬದಲಿಗೆ ಮತ್ತೋರ್ವ ಕನ್ನಡಿಗ ದೇವದತ್‌ ಪಡಿಕ್ಕಲ್‌ ತಂಡಕ್ಕೆ ಆಯ್ಕೆಯಾಗಿದ್ದಾರೆ. ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್‌ ಮೈದಾನದಲ್ಲಿ ಮೂರನೇ ಟೆಸ್ಟ್‌ ಪಂದ್ಯ ನಡೆಯಲಿದೆ.
ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಸ್ಟ್‌ನಿಂದ ಕೆಎಲ್ ರಾಹುಲ್ ಔಟ್
ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಸ್ಟ್‌ನಿಂದ ಕೆಎಲ್ ರಾಹುಲ್ ಔಟ್ (ANI)

ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ (India vs England 3rd Test) ಪಂದ್ಯದಿಂದ ಕನ್ನಡಿಗ ಕೆಎಲ್ ರಾಹುಲ್ (KL Rahul) ಹೊರಬಿದ್ದಿದ್ದಾರೆ. ಐದು ಪಂದ್ಯಗಳ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳ ಬಳಿಕ, ಉಳಿದ ಪಂದ್ಯಗಳಿಗೆ ತಂಡವನ್ನು ಪ್ರಕಟಿಲಾಗಿದೆ. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ, ಗಾಯಾಳು ಬ್ಯಾಟರ್‌ ಶ್ರೇಯಸ್ ಅಯ್ಯರ್ ಕೂಡಾ ಹೊರಬಿದ್ದಿದ್ದಾರೆ. ಅತ್ತ ಫಿಟ್‌ನೆಸ್‌ ಆಧಾರದಲ್ಲಿ ಆಯ್ಕೆಗೆ ಲಭ್ಯವಾಗಿದ್ದ ರಾಹುಲ್‌, ಇದೀಗ ಮೂರನೇ ಟೆಸ್ಟ್‌ ಪಂದ್ಯದಿಂದ ಹೊರಗುಳಿದಿದ್ದಾರೆ.

ಇಂಗ್ಲೆಂಡ್ ವಿರುದ್ಧದ 3, 4 ಮತ್ತು 5 ನೇ ಟೆಸ್ಟ್‌ಗೆ ತಂಡವನ್ನು ಪ್ರಕಟಿಸಿದ್ದ ಬಿಸಿಸಿಐ‌, ರಾಹುಲ್ ಮತ್ತು ರವೀಂದ್ರ ಜಡೇಜಾ ಅವರ ಲಭ್ಯತೆಯು ಫಿಟ್ನೆಸ್ ಮೇಲೆ ಅವಲಂಬಿಸಿದೆ ಎಂದು ಹೇಳಿತ್ತು. ಗಾಯದ ಸಮಸ್ಯೆಯಿಂದಾಗಿ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದ ರಾಹುಲ್‌, ಇದೀಗ ಮುಂದಿನ ಪಂದ್ಯಕ್ಕೆ ಲಭ್ಯವಾಗುತ್ತಿಲ್ಲ.

ಇದನ್ನೂ ಓದಿ | ಸಹರಾನ್, ಮುಶೀರ್‌, ಲಿಂಬಾನಿ...; ಅಂಡರ್ 19 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾಗೆ ಸಿಕ್ಕ 5 ಸ್ಟಾರ್ ಆಟಗಾರರು

ಸದ್ಯ ರಾಹುಲ್‌ ಲಭ್ಯತೆಯ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲು, ಭಾರತೀಯ ವೈದ್ಯಕೀಯ ತಂಡವು ಅವರ ಫಿಟ್ನೆಸ್ ಕುರಿತು ಇನ್ನೂ ಒಂದು ವಾರ ಮೇಲ್ವಿಚಾರಣೆ ನಡೆಸಿಲಿದೆ. ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದ ವೇಳೆ ಗಾಯದಿಂದ ಹೊರಗುಳಿಯುವ ಮೊದಲು ಮಾಜಿ ಉಪನಾಯಕ, ಬಲಗಾಲಿನ ನೋವಿನ ಬಗ್ಗೆ ದೂರು ನೀಡಿದ್ದರು.

ಕನ್ನಡಿಗನ ಸ್ಥಾನಕ್ಕೆ ಕನ್ನಡಿಗ ಆಯ್ಕೆ

ರಾಹುಲ್ ಸಂಪೂರ್ಣ ಫಿಟ್ ಆಗಲು ಇನ್ನೂ ಸ್ವಲ್ಪ ಸಮಯ ತೆಗೆದುಕೊಳ್ಳುವುದರಿಂದ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಕರ್ನಾಟಕದ ಬ್ಯಾಟರ್ ದೇವದತ್ ಪಡಿಕ್ಕಲ್ ಅವರನ್ನು ಆಯ್ಕೆ ಮಾಡಲು ಆಯ್ಕೆ ಸಮಿತಿ ನಿರ್ಧರಿಸಿದೆ. ಐಪಿಎಲ್ 2023ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ಪಡಿಕ್ಕಲ್, ಮುಂದಿನ ಆವೃತ್ತಿಯಲ್ಲಿ ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೇರಿಕೊಂಡಿದ್ದಾರೆ.

ಇದನ್ನೂ ಓದಿ | ಮೊಹಮ್ಮದ್ ಕೈಫ್‌ರಿಂದ ಯಶ್ ದುಲ್‌ವರೆಗೆ; ಅಂಡರ್ 19 ಏಕದಿನ ವಿಶ್ವಕಪ್‌ನಲ್ಲಿ ಭಾರತಕ್ಕೆ ಟ್ರೋಫಿ ತಂದುಕೊಟ್ಟ ನಾಯಕರು ಇವರೇ

ಇತ್ತೀಚೆಗೆ ನಡೆದ ರಣಜಿ ಟ್ರೋಫಿ ಪಂದ್ಯದಲ್ಲಿ ಪಡಿಕ್ಕಲ್ 151 ರನ್ ಬಾರಿಸಿದ್ದರು. ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಅವರು ಕರ್ನಾಟಕ ಮತ್ತು ತಮಿಳುನಾಡು ನಡುವಿನ ರಣಜಿ ಪಂದ್ಯದಲ್ಲೂ ಭಾಗವಹಿಸಿದ್ದರು. ತಮ್ಮ ಅಮೋಘ ಪ್ರದರ್ಶನದ ಮೂಲಕ ಪಡಿಕ್ಕಲ್ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ರಣಜಿ ಆರಂಭಿಕ ಪಂದ್ಯದಲ್ಲಿ ಪಡಿಕ್ಕಲ್ ಪಂಜಾಬ್ ವಿರುದ್ಧ 193 ರನ್ ಗಳಿಸಿದ್ದರು. ಗೋವಾ ವಿರುದ್ಧವೂ ಶತಕ ದಾಖಲಿಸಿದ್ದರು. ಭಾರತ 'ಎ' ಪರ ಆಡಿದ ಕಳೆದ ಮೂರು ಇನ್ನಿಂಗ್ಸ್‌ಗಳಲ್ಲಿ ಪಡಿಕ್ಕಲ್ 105, 65 ಮತ್ತು 21 ರನ್ ಗಳಿಸಿದ್ದಾರೆ.

ಇದನ್ನೂ ಓದಿ | ಕೆಎಸ್ ಭರತ್ ಬದಲಿಗೆ ಯುವ ಆಟಗಾರನಿಗೆ ಅವಕಾಶ; ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್‌ಗೆ ಧ್ರುವ್ ಜುರೆಲ್ ಪದಾರ್ಪಣೆ ಸಾಧ್ಯತೆ

ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್‌ ಮೈದಾನದಲ್ಲಿ ನಡೆಯಲಿರುವ ಮೂರನೇ ಟೆಸ್ಟ್‌ ಪಂದ್ಯದ ಮೂಲಕ, ಟೆಸ್ಟ್‌ ಕ್ರಿಕೆಟ್‌ಗೆ ಧ್ರುವ್‌ ಪದಾರ್ಪಣೆ ಮಾಡುವ ಸಾಧ್ಯತೆಯಿದೆ. ಎರಡನೇ ಟೆಸ್ಟ್‌ನಲ್ಲಿ ಆಡಿದ್ದ ಶರೇಯಸ್‌ ಅಯ್ಯರ್‌ ಹೊರಬಿದ್ದಿದ್ದು, ಕೆಎಲ್‌ ರಾಹುಲ್‌ ಕೂಡಾ ಆಯ್ಕೆಗೆ ಲಭ್ಯರಿಲ್ಲ. ಅತ್ತ, ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ವಿಕೆಟ್‌ ಕೀಪರ್ ಕೆಎಸ್ ಭರತ್ ಬದಲಿಗೆ 23 ವರ್ಷದ ಕ್ರಿಕೆಟಿಗ ಭಾರತದ ಆಡುವ ಬಳಗದಲ್ಲಿ ಸ್ಥಾನ ಪಡೆಯಲಿದ್ದಾರೆ.

ಇಂಗ್ಲೆಂಡ್ ವಿರುದ್ಧ ಮೂರನೇ ಟೆಸ್ಟ್‌ಗೆ ಭಾರತ ಸಂಭಾವ್ಯ ತಂಡ

ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ಸರ್ಫರಾಜ್ ಖಾನ್, ರಜತ್ ಪಾಟೀದಾರ್, ಧ್ರುವ್ ಜುರೆಲ್ (ವಿಕೆಟ್‌ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.‌

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ