logo
ಕನ್ನಡ ಸುದ್ದಿ  /  ಕ್ರಿಕೆಟ್  /  Cricketers Retired: 2023ರಲ್ಲಿ ಕ್ರಿಕೆಟ್ ಲೋಕಕ್ಕೆ ವಿದಾಯ ಘೋಷಿಸಿದ ಟಾಪ್‌ ಸ್ಟಾರ್‌ ಕ್ರಿಕೆಟರ್ಸ್‌; ಇಲ್ಲಿದೆ ಪಟ್ಟಿ

Cricketers Retired: 2023ರಲ್ಲಿ ಕ್ರಿಕೆಟ್ ಲೋಕಕ್ಕೆ ವಿದಾಯ ಘೋಷಿಸಿದ ಟಾಪ್‌ ಸ್ಟಾರ್‌ ಕ್ರಿಕೆಟರ್ಸ್‌; ಇಲ್ಲಿದೆ ಪಟ್ಟಿ

Prasanna Kumar P N HT Kannada

Dec 27, 2023 08:28 AM IST

google News

ಕ್ರಿಕೆಟ್ ಲೋಕಕ್ಕೆ ವಿದಾಯ ಘೋಷಿಸಿದ ಟಾಪ್‌ ಸ್ಟಾರ್‌ ಕ್ರಿಕೆಟರ್ಸ್‌.

    • Cricketers Retired In 2023: ನೂತನ ವರ್ಷ 2024 ಅನ್ನು ಸ್ವಾಗತಿಸಲು ಇಡೀ ವಿಶ್ವವೇ ಸಿದ್ಧತೆ ನಡೆಸುತ್ತಿದೆ. ಈ ನಡುವೆ ಕ್ರಿಕೆಟ್ ಅಭಿಮಾನಿಗಳು ಈ ವರ್ಷದ ಸಿಹಿ-ಕಹಿ ನೆನಪುಗಳನ್ನು ಮೆಲುಕು ಹಾಕುತ್ತಿದ್ದಾರೆ. ಕಹಿ ಸುದ್ದಿಯ ಪೈಕಿ ಕ್ರಿಕೆಟಿಗರ ವಿದಾಯವೂ ಒಂದು. 2023ರಲ್ಲಿ ಕ್ರಿಕೆಟ್​​ ಲೋಕಕ್ಕೆ ಗುಡ್​ಬೈ ಹೇಳಿದ ಆಟಗಾರರ ಪಟ್ಟಿ ಇಂತಿದೆ.
ಕ್ರಿಕೆಟ್ ಲೋಕಕ್ಕೆ ವಿದಾಯ ಘೋಷಿಸಿದ ಟಾಪ್‌ ಸ್ಟಾರ್‌ ಕ್ರಿಕೆಟರ್ಸ್‌.
ಕ್ರಿಕೆಟ್ ಲೋಕಕ್ಕೆ ವಿದಾಯ ಘೋಷಿಸಿದ ಟಾಪ್‌ ಸ್ಟಾರ್‌ ಕ್ರಿಕೆಟರ್ಸ್‌.

2023ರ ಕ್ಯಾಲೆಂಡರ್ ವರ್ಷ ಮರೆಗೆ ಸರಿಯುತ್ತಿದೆ. ಕ್ರಿಕೆಟ್​ನಲ್ಲಿ ಹಲವು ಏಳು-ಬೀಳು ಕಂಡ 2023 ಹೆಚ್ಚು ಕಹಿ ಸುದ್ದಿಯನ್ನೇ ಹೊತ್ತು ಮರೆಗೆ ಸರಿಯುತ್ತಿದೆ. ಕ್ರಿಕೆಟ್​ ಲೋಕಕ್ಕೆ ಅಪಾರ ಕೊಡುಗೆ ನೀಡಿ ಅಭಿಮಾನಿಗಳ ಮನದಲ್ಲಿ ಶಾಶ್ವತವಾಗಿ ಉಳಿದಿರುವ ಆಟಗಾರರೇ ನಿವೃತ್ತಿ ಘೋಷಿಸಿ ಆಘಾತ ನೀಡಿದ್ದಾರೆ. 2023ರಲ್ಲಿ ಕ್ರಿಕೆಟ್ ಮೈದಾನದಿಂದ ಹಿಂದೆ ಸರಿದ ಆಟಗಾರರ ಯಾರು? ಇಲ್ಲಿದೆ ಪಟ್ಟಿ.

1. ಡ್ವೈನ್ ಪ್ರಿಟೋರಿಯಸ್

ಸೌತ್ ಆಫ್ರಿಕಾದ ಆಲ್​ರೌಂಡರ್ ಜನವರಿ 9, 2023ರಂದು ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದರು. 3 ಟೆಸ್ಟ್, 27 ಏಕದಿನ, 30 ಟಿ20ಐಗಳಲ್ಲಿ ಕಾಣಿಸಿಕೊಂಡಿದ್ದಾರೆ. ಟೆಸ್ಟ್​ನಲ್ಲಿ 83 ರನ್, 7 ವಿಕೆಟ್, ಏಕದಿನದಲ್ಲಿ 192 ರನ್, 35 ವಿಕೆಟ್, ಟಿ20ನಲ್ಲಿ 261 ರನ್, 35 ವಿಕೆಟ್ ಪಡೆದಿದ್ದಾರೆ.

2. ಮುರಳಿ ವಿಜಯ್

ಭಾರತದ ಆರಂಭಿಕ ಆಟಗಾರ 2023ರ ಜನವರಿ 30ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು. 61 ಟೆಸ್ಟ್‌, 17 ಏಕದಿನ, 9 ಟಿ20ಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯ್ ಟೆಸ್ಟ್​​ನಲ್ಲಿ 12 ಶತಕ, 15 ಅರ್ಧಶತಕ ಸಹಿತ 3982 ರನ್‌, ಏಕದಿನದಲ್ಲಿ 1 ಅರ್ಧಶತಕದೊಂದಿಗೆ 339 ರನ್, ಟಿ20ನಲ್ಲಿ 169 ರನ್ ಗಳಿಸಿದ್ದಾರೆ.

3. ಡೇನಿಯಲ್ ಕ್ರಿಶ್ಚಿಯನ್

ಆಸ್ಟ್ರೇಲಿಯಾದ ಆಲ್​ರೌಂಡರ್​ ಜನವರಿ 21ರಂದು ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದರು. 11 ವರ್ಷಗಳ ವೃತ್ತಿಜೀವನದಲ್ಲಿ 23 ಟಿ20ಐ ಪಂದ್ಯಗಳನ್ನಷ್ಟೇ ಆಡಿದ್ದಾರೆ. 118 ರನ್, 13 ವಿಕೆಟ್​ ಪಡೆದಿದ್ದಾರೆ. 20 ಏಕದಿನಗಳಲ್ಲಿ ಕಣಕ್ಕಿಳಿದಿದ್ದು, 273 ರನ್, 20 ವಿಕೆಟ್​​ ಕಿತ್ತಿದ್ದಾರೆ.

4. ಜೋಗಿಂದರ್ ಶರ್ಮಾ

2007ರಲ್ಲಿ ಟಿ20 ವಿಶ್ವಕಪ್​ ಗೆಲುವಿಗೆ ಕಾರಣವಾದ ಭಾರತದ ವೇಗಿ, ಇದೇ ವರ್ಷ ಫೆಬ್ರವರಿ 3ರಂದು ಎಲ್ಲಾ ಸ್ವರೂಪಗಳಿಂದ ನಿವೃತ್ತರಾದರು. ಪಾಕ್ ವಿರುದ್ಧದ ವಿಶ್ವಕಪ್‌ ಫೈನಲ್‌ನಲ್ಲಿ 13 ರನ್‌ ರಕ್ಷಿಸಿದ್ದ ಜೋಗಿಂದರ್, 2004-2007ರ ನಡುವೆ ತಲಾ 4 ಏಕದಿನ, ಟಿ20 ಪಂದ್ಯಗಳನ್ನಾಡಿದ್ದು 5 ವಿಕೆಟ್ ಪಡೆದಿದ್ದಾರೆ.

5. ಆ್ಯರೋನ್​ ಫಿಂಚ್

ಫೆಬ್ರವರಿ 7ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್​ಬೈ ಹೇಳಿದರು. 2011ರಲ್ಲಿ ಇಂಗ್ಲೆಂಡ್ ವಿರುದ್ಧ ಪದಾರ್ಪಣೆ ಮಾಡಿದ ಫಿಂಚ್, ಏಕದಿನದಲ್ಲಿ 5406 ರನ್, ಟಿ20ಯಲ್ಲಿ 3120 ರನ್ ಗಳಿಸಿದ್ದಾರೆ. ಸ್ಫೋಟಕ ಬ್ಯಾಟಿಂಗ್‌ಗೆ ಹೆಸರಾದ ಆಸ್ಟ್ರೇಲಿಯಾ ಬ್ಯಾಟರ್, 17 ಏಕದಿನ ಶತಕ, 2 ಟಿ20 ಶತಕ ಸಿಡಿಸಿದ್ದಾರೆ. 5 ಟೆಸ್ಟ್​ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಫಿಂಚ್, 2021ರಲ್ಲಿ ನಾಯಕನಾಗಿ ಟಿ20 ವಿಶ್ವಕಪ್ ಗೆದ್ದಿದ್ದಾರೆ.

6. ಸ್ಟುವರ್ಟ್ ಬ್ರಾಡ್

ಜುಲೈ 29ರಂದು ಇಂಗ್ಲೆಂಡ್​ ವೇಗಿ ಎಲ್ಲಾ ರೀತಿಯ ಕ್ರಿಕೆಟ್​ಗೆ ವಿದಾಯ ಘೋಷಿಸಿದರು. ಆ್ಯಶಸ್ ಸರಣಿಯ 5ನೇ ಟೆಸ್ಟ್​​ನಲ್ಲಿ ಗುಡ್​ಬೈ ಹೇಳಿದ ಬ್ರಾಡ್, ಇಂಗ್ಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ತಮ್ಮ ಕೊನೆಯ ಪಂದ್ಯದಲ್ಲಿ ಕೊನೆಯ ವಿಕೆಟ್ ಸ್ಮರಣೀಯ ವಿದಾಯ ಹೇಳಿದರು. 167 ಟೆಸ್ಟ್‌ಗಳಲ್ಲಿ 604 ವಿಕೆಟ್‌ ಪಡೆದು ದಾಖಲೆ ಬರೆದಿದ್ದಾರೆ. 121 ಏಕದಿನಗಳಲ್ಲಿ 178 ವಿಕೆಟ್, 56 ಟಿ20 ಪಂದ್ಯಗಳಲ್ಲಿ 65 ವಿಕೆಟ್​ ಉರುಳಿಸಿದ್ದಾರೆ. ಅವರು ಟೆಸ್ಟ್‌ಗಳಲ್ಲಿ ತಮ್ಮ ಬ್ಯಾಟಿಂಗ್ ಕೌಶಲ್ಯ ಪ್ರದರ್ಶಿಸಿದ್ದು 3662 ರನ್ ಗಳಿಸಿದ್ದಾರೆ.

7. ಮೊಯಿನ್ ಅಲಿ

ಟೆಸ್ಟ್​ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ್ದಾರೆ ಈ ಇಂಗ್ಲೆಂಡ್ ಆಲ್​ರೌಂಡರ್​. ಓವಲ್‌ನಲ್ಲಿ ಇಂಗ್ಲೆಂಡ್ 49 ರನ್‌ಗಳಿಂದ ಗೆದ್ದ ನಂತರ ಮೊಯಿನ್, 3094 ರನ್ ಮತ್ತು 204 ವಿಕೆಟ್‌ಗಳೊಂದಿಗೆ ತನ್ನ ಟೆಸ್ಟ್ ವೃತ್ತಿಜೀವನವನ್ನು ಮುಗಿಸಿದರು. ಆ್ಯಷಸ್​ ಸರಣಿಯಲ್ಲಿ 2-2ರಲ್ಲಿ ಸರಣಿಯನ್ನು ಸಮಗೊಳಿಸಲು ಪ್ರಮುಖ ಪಾತ್ರವಹಿಸಿದರು.

8. ಕ್ವಿಂಟನ್ ಡಿ ಕಾಕ್

2023ರ ಸೆಪ್ಟೆಂಬರ್ 5ರಂದು ದಕ್ಷಿಣ ಆಫ್ರಿಕಾದ ವಿಕೆಟ್-ಕೀಪರ್ ಬ್ಯಾಟರ್ ಏಕದಿನ ಕ್ರಿಕೆಟ್​ಗೆ ನಿವೃತ್ತಿ ಘೋಷಿಸುವ ಮೂಲಕ ಕ್ರಿಕೆಟ್ ಅಭಿಮಾನಿಗಳನ್ನು ಅಚ್ಚರಿಗೊಳಿಸಿದರು. ಈ ಹಿಂದೆ ಟೆಸ್ಟ್​​ಗೆ ಗುಡ್​ಬೈ ಹೇಳಿದ್ದ ಡಿ ಕಾಕ್, ಏಕದಿನ ವಿಶ್ವಕಪ್ ನಂತರ ಒಡಿಐಗೂ ವಿದಾಯ ಹೇಳಿದರು. 155 ಏಕದಿನಗಳಲ್ಲಿ 45.74ರ ಸರಾಸರಿ ಮತ್ತು 96.64ರ ಸ್ಟ್ರೈಕ್​​ರೇಟ್‌ನಲ್ಲಿ 6770 ರನ್ ಕಲೆ ಹಾಕಿದ್ದಾರೆ. 21 ಶತಕ, 30 ಅರ್ಧಶತಕಗಳನ್ನೂ ಸಿಡಿಸಿದ್ದಾರೆ.

9. ನವೀನ್ ಉಲ್ ಹಕ್

2023ರ ಸೆಪ್ಟೆಂಬರ್ 27ರಂದು ಅಫ್ಘಾನಿಸ್ತಾನದ ವೇಗದ ಬೌಲರ್​ ಟಿ20 ಕ್ರಿಕೆಟ್​ ಮೇಲೆ ಗಮನ ಹರಿಸುವ ಕಾರಣ, ಏಕದಿನ ಕ್ರಿಕೆಟ್​ನಿಂದ ಹಿಂದೆ ಸರಿಯುವುದಾಗಿ ಘೋಷಿಸಿದರು. ವಿಶ್ವಕಪ್​ ಬಳಿಕ ಅವರು ಏಕದಿನಗಳಲ್ಲಿ ಮತ್ತೆ ಕಾಣಿಸಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ. ಒಡಿಐನಲ್ಲಿ 15 ಪಂದ್ಯಗಳಲ್ಲಿ 22 ವಿಕೆಟ್​​ ಪಡೆದಿದ್ದಾರೆ. 42ಕ್ಕೆ 4 ವಿಕೆಟ್​ ಪಡೆದಿದ್ದು ಬೆಸ್ಟ್ ಬೌಲಿಂಗ್.

10. ಡೇವಿಡ್ ವಿಲ್ಲಿ

2023ರ ನವೆಂಬರ್ 1 ರಂದು ಇಂಗ್ಲೆಂಡ್​ ವೇಗಿ ಎಲ್ಲಾ ರೀತಿಯ ಕ್ರಿಕೆಟ್‌ನಿಂದ ಅಧಿಕೃತವಾಗಿ ನಿವೃತ್ತಿ ಘೋಷಿಸಿದರು. ವಿಶ್ವಕಪ್​​ ಆಡುತ್ತಿರುವಾಗಲೇ, ಇದು ನನ್ನ ಕೊನೆಯ ವಿಶ್ವಕಪ್ ಎಂದು ಪ್ರಕಟಿಸಿದ್ದರು. ವಿಲ್ಲಿ 73 ಏಕದಿನಗಳಲ್ಲಿ 100 ವಿಕೆಟ್, 43 ಟಿ20ಗಳಲ್ಲಿ 51 ವಿಕೆಟ್‌ ಪಡೆದಿದ್ದಾರೆ.

11. ಅಲೆಕ್ಸ್ ಹೇಲ್ಸ್

2023ರ ಆಗಸ್ಟ್ 4ರಂದು ಇಂಗ್ಲೆಂಡ್ ಆರಂಭಿಕ ಆಟಗಾರ ಮೂರು ಸ್ವರೂಪದ ಕ್ರಿಕೆಟ್​​ಗೆ ಅಂತ್ಯ ಹಾಡಿದರು. ಬಲಗೈ ಬ್ಯಾಟರ್ 11 ಟೆಸ್ಟ್​​ಗಳಲ್ಲಿ 573 ರನ್, 70 ಏಕದಿನ ಪಂದ್ಯಗಳಲ್ಲಿ 2419 (6 ಶತಕ, 14 ಅರ್ಧಶತಕ), 75 ಟಿ20ಗಳಲ್ಲಿ 2074 (1 ಶತಕ, 12 ಅರ್ಧಶತಕ) ರನ್ ಕಲೆ ಹಾಕುವ ಮೂಲಕ ಗಮನ ಸೆಳೆದಿದ್ದಾರೆ.

12. ಮನೋಜ್ ತಿವಾರಿ

2023ರ ಆಗಸ್ಟ್ 3ರಂದು ಭಾರತದ ಆಟಗಾರ ಎಲ್ಲಾ ರೀತಿಯ ಆಟಗಳಿಂದ ನಿವೃತ್ತಿ ಘೋಷಿಸಿದರು. ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಸಮಯದಲ್ಲಿ ತಿವಾರಿ 12 ಏಕದಿನಗಳು ಮತ್ತು 3 ಟಿ20ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಏಕದಿನ 1 ಶತಕ, 1 ಅರ್ಧ ಶತಕ ಸೇರಿದಂತೆ ಒಟ್ಟು 287 ರನ್ ಗಳಿಸಿದ್ದಾರೆ.

13. ಜ್ಞಾನೇಂದ್ರ ಮಲ್ಲಾ

ಆಗಸ್ಟ್ 4, 2023ರಂದು ನೇಪಾಳದ ಮಾಜಿ ನಾಯಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಮಲ್ಲಾ 37 ಏಕದಿನ, 45 ಟಿ20ಗಳಲ್ಲಿ ತಮ್ಮ ತಂಡವನ್ನು ಭಾಗವಹಿಸಿದ್ದಾರೆ. ಏಕದಿನದಲ್ಲಿ 7 ಅರ್ಧಶತಕ ಸೇರಿದಂತೆ 876 ರನ್‌, ಟಿ20ಯಲ್ಲಿ 883 ರನ್ ಗಳಿಸಿದ್ದಾರೆ. ಒಂದು ಶತಕ ಮತ್ತು ಎರಡು ಅರ್ಧಶತಕ ಕೂಡ ಸಿಡಿಸಿದ್ದಾರೆ.

14. ಡೀನ್ ಎಲ್ಗರ್

ಡಿಸೆಂಬರ್ 22, 2023ರಂದು, ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಡೀನ್ ಎಲ್ಗರ್ ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. ಸದ್ಯ ಭಾರತದ ವಿರುದ್ಧ ನಡೆಯುತ್ತಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ಕ್ರಿಕೆಟ್ ಮೈದಾನದಿಂದ ಹಿಂದೆ ಸರಿಯುವುದಾಗಿ ತಿಳಿಸಿದ್ದಾರೆ. ಟೆಸ್ಟ್​​ನಲ್ಲಿ ಕಣಕ್ಕಿಳಿದಿರುವ 84 ಪಂದ್ಯಗಳಲ್ಲಿ 37.3 ರ ಸರಾಸರಿಯಲ್ಲಿ 5146 ರನ್ ಗಳಿಸಿದ್ದಾರೆ. ಅವರು 13 ಶತಕ ಮತ್ತು 23 ಅರ್ಧ ಶತಕ ಬಾರಿಸಿದ್ದಾರೆ.

15. ಹಶೀಮ್ ಆಮ್ಲಾ: 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ